Sudha Murthy: ಕನ್ನಡ ಮಾಧ್ಯಮ ನಮ್ಮ‌ ಹೆಮ್ಮೆ, ಯಾರು ಏನೇ ಅಂದ್ರೂ ಡೋಂಟ್ ವರಿ - ಮುನ್ನುಗ್ತಿರಿ!

ಸುಧಾ ಮೂರ್ತಿ

ಸುಧಾ ಮೂರ್ತಿ

ಎಷ್ಟೆಲ್ಲಾ ಆಸ್ತಿ, ಹಣ ಹೊಂದಿದ್ದರು, ಸಾಮನ್ಯರಲ್ಲಿ ಸಾಮನ್ಯರಂತೆ ಬದುಕು ಸಾಗಿಸಿ ಮತ್ತೊಬ್ಬರಿಗೆ ಸ್ಫೂರ್ತಿ (Inspiration) ತುಂಬುತ್ತಿರುವವರು ಸುಧಾ ಮೂರ್ತಿ ಅವರು. ಇದೀಗ ಅವರು ಕನ್ನಡ  ಮಾಧ್ಯಮ (Kannada Media) ಗಳ ಬಗ್ಗೆ ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.

  • Share this:

ಕೈಯಲ್ಲಿ ಸಾವಿರ ರೂಪಾಯಿ ( Money) ಇದ್ದರೆ ನೂರು ಶೋಕಿ ಮಾಡುವ ಕಾಲ ಇದು. ಆದರೆ, ಇವರು ಮಾತ್ರ ಕೈಯಲ್ಲಿ ಕೋಟಿ ಕೋಟಿ (Crore) ಇದ್ದರೂಯಾವತ್ತೂ ಹಿಗ್ಗಿದವರಲ್ಲ. ನೋಡೋಕೆ ತುಂಬಾ ಸಿಂಪಲ್ (Simple) , ಎಲ್ಲರಿಗೂ ಸಹಾಯ (Help) ಮಾಡಬೇಕೆಂಬ ಮನೋಭಾವ. ಮೈಸೂರಿ (Mysore)ನಲ್ಲಿ ದೇಶದ ದೊಡ್ಡ ಸಂಸ್ಥೆ ಕಟ್ಟಿ ಅದೆಷ್ಟೋ ಮಂದಿಗೆ ಕೆಲಸ (Work) ಕೊಟ್ಟು ಹೊಟ್ಟೆ ತುಂಬಿಸುತ್ತಿರುವ ಸಕ್ಸಸ್​ಫುಲ್ ಮಹಿಳೆ (Successful Women) ಇವರು. ಇಷ್ಟು ಹೇಳುತ್ತಿದ್ದ ಹಾಗೇ ನಿಮ್ಮ ತಲೆಯಲ್ಲಿ ಒಬ್ಬರ ಫೋಟೋ ಬಂದಿರುತ್ತೆ ಅಲ್ವಾ? ಹೌದು, ಇಲ್ಲಿ ನಾವು ಹೇಳುತ್ತಿರುವುದು ಶ್ರೀಮತಿ ಸುಧಾ ಮೂರ್ತಿ (Sudha Murthy) ಅವರ ಬಗ್ಗೆ. ಇವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವರ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಎಷ್ಟೆಲ್ಲಾ ಆಸ್ತಿ, ಹಣ ಹೊಂದಿದ್ದರು, ಸಾಮನ್ಯರಲ್ಲಿ ಸಾಮನ್ಯರಂತೆ ಬದುಕು ಸಾಗಿಸಿ ಮತ್ತೊಬ್ಬರಿಗೆ ಸ್ಫೂರ್ತಿ (Inspiration) ತುಂಬುತ್ತಿರುವವರು ಸುಧಾ ಮೂರ್ತಿ ಅವರು. ಇದೀಗ ಅವರು ಕನ್ನಡ  ಮಾಧ್ಯಮ (Kannada Media) ಗಳ ಬಗ್ಗೆ ಮೊದಲ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.


ಕನ್ನಡ ಮಾಧ್ಯಮವನ್ನು ಹೊಗಳಿದ ಸುಧಾ ಮೂರ್ತಿ!


ಹೌದು, ಕಾರ್ಯಕ್ರಮವೊಂದರಲ್ಲಿ ಸುಧಾ ಮೂರ್ತಿ ಕನ್ನಡ ಮಾಧ್ಯಮಗಳ ಬಗ್ಗೆ ಮಾತನಾಡಿದ್ದಾರೆ, ಕನ್ನಡ ಮಾಧ್ಯಮಗಳ ಕಾರ್ಯವನ್ನು ಮೆಚ್ಚಿದ್ದಾರೆ. "ಕನ್ನಡ ಮಾಧ್ಯಮ ಎಲ್ಲರಿಗೂ ಸರ್ಪೋಟ ಮಾಡಿಕೊಂಡು ಬಂದಿದೆ. ಕನ್ನಡ ಮಾಧ್ಯಮದ ಬಗ್ಗೆ ನಾನು ಗರ್ವ ಪಡುತ್ತೇನೆ.  ಬೇರೆ ಎಲ್ಲಾ ಭಾಷೆಗಳ ಮಾಧ್ಯಮಗಳನ್ನು ನೋಡಿದಾಗ, ನನಗೆ ನಮ್ಮ ಕನ್ನಡ ಮಾಧ್ಯಮಗಳ ಬಗ್ಗೆ ಸಾಕಷ್ಟು ಶ್ರೇಷ್ಠ, ಹೆಮ್ಮೆ, ಖುಷಿಯಾಗುತ್ತೆ. ಹಿತ್ತಲ ಗಿಡ ಮದ್ದಲ್ಲ ಅಂತಾರಲ್ಲ ಅವಾಗ ಗೊತ್ತಾಯ್ತು ನನಗೆ ಕನ್ನಡ ಮಾಧ್ಯಮಗಳ ಬಗ್ಗೆ. ಆಲ್​ ದಿ ಬೆಸ್ಟ್​ ಎಲ್ಲರಿಗೂ" ಎಂದು ಸುಧಾ ಮೂರ್ತಿ ಅವರು ಹೊಗಳಿದ್ದಾರೆ.


ಯಾರು ಏನೇ ಅಂದ್ರ ಡೋಂಟ್​ ವರಿ ಎಂದ ಸುಧಾ ಮೂರ್ತಿ


ಒಂದು ಕೆಲಸ ಮಾಡಬೇಕಾದರೆ ಹಲವರು ತೆಗೆಳುವವರು ಇರುತ್ತಾರೆ. ಸಪೋರ್ಟ್ ಮಾಡುವವರು ಇರುತ್ತಾರೆ. ಇತಂಹ ಸಮಯದಲ್ಲಿ ನಾವು ನಮಗೆ ಸಪೋರ್ಟ್ ಮಾಡುತ್ತಿರುವವರ ಬಗ್ಗೆ ಮಾತ್ರ ಯೋಚಿಸಬೇಕು. ಒಳ್ಳೆಯ ಕೆಲಸ ಮಾಡಿದರು ತೆಗೆಳುವವರಿದ್ದಾರೆ. ಅಂಥಹವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕಥೆ ಇಲ್ಲ. ಈ ರೀತಿ ಸುಧಾ ಮೂರ್ತಿ ಅವರು ಕನ್ನಡ ಮಾಧ್ಯಮಗಳ ಮಾತನಾಡಿರುವುದು ನಿಜಕ್ಕೂ ಖುಷಿಯ ವಿಚಾರ. ಅದರಲ್ಲೂ ಯಾರು ಏನೇ ಅಂದರೂ ಡೋಂಟ್​ ವರಿ, ಮುನ್ನುಗ್ತಿರಿ ಎಂದಿರುವುದು ಮತ್ತಷ್ಟು ಹುಮ್ಮಸ್ಸು ನೀಡಿದೆ.


ಇದನ್ನೂ ಓದಿ: ತಿರುಪತಿ ದೇವಸ್ಥಾನಕ್ಕೆ 42 ಲಕ್ಷದ ಧರ್ಮರಥ ನೀಡಿದ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ


ಸುಧಾ ಮೂರ್ತಿ ಹೆಸರಿನಲ್ಲೇ ಒಂದು ಆಕರ್ಷಣೆ ಇದೆ!


ಕನ್ನಡ ಮಣ್ಣಿನ ಕುವರಿ, ಅಸಾಮಾನ್ಯ ಸಾಧಕಿ ಶ್ರೀಮತಿ ಸುಧಾ ಮೂರ್ತಿ.  ಇದರ ಜೊತೆಗೆ   ಕನ್ನಡ ಮತ್ತು ಇಂಗ್ಲಿಷ್‌ನ ಖ್ಯಾತ ಬರಹಗಾರ್ತಿ, ಸಮಾಜಸೇವಕಿಯೂ ಆಗಿರುವ ಸುಧಾ ಮೂರ್ತಿಯವರು ಜನಿಸಿದ್ದು 19ನೇ ಆಗಸ್ಟ್‌ 1950ರಂದು. ಅವರು ಜನಸಾಮಾನ್ಯನ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ದುಡಿದವರು. ಇನ್ಫೋಸಿಸ್‌  ಪ್ರತಿಷ್ಠಾನದ  ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿದವರು ಅವರು. ಈ ಹೆಸರಿನಲ್ಲಿಯೇ ಅದೇನೋ ಒಂದು ಆಕರ್ಷಣೆ ಇದೆ.


ಇದನ್ನೂ ಓದಿ: ಮಕ್ಕಳ ಬೆಳವಣಿಗೆಗೆ ಸುಧಾಮೂರ್ತಿಯವರು ಹೇಳಿರುವ ಮಾತುಗಳು 


ಸುಧಾ ಮೂರ್ತಿ ಕೈಯಾಡಿಸದ ಕ್ಷೇತ್ರವಿಲ್ಲ


ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸುಧಾರಣೆಗಾಗಿ ಇವರು ಸದಾ ಮಿಡಿಯುತ್ತಿದ್ದಾರೆ.  ಸರಕಾರಿ, ಹಾಗು ಸರಕಾರಿ ಅನುದಾನಿತ  ಶಾಲೆಗಳಿಗೆ ಕಂಪ್ಯೂಟರ್‌ ಶಿಕ್ಷಣ ಮತ್ತು ಗ್ರಂಥಾಲಯ ಸೌಲಭ್ಯ ಒದಗಿಸುವುದು ಅವರ ಗುರಿ. ತಮ್ಮ ಬಿಡುವಿಲ್ಲದ ಸಮಾಜಕಾರ್ಯದ ನಡುವೆಯೂ ಅವರು ಕಂಪ್ಯೂಟರ್‌ ವಿಜ್ಞಾನವನ್ನೂ ಕಲಿಸಿದ್ದಾರೆ. ಇವರು  ಅನೇಕ ಜನಪ್ರಿಯ ಕಥೆ, ಕಾದಂಬರಿಗಳನ್ನು ಬರೆದಿರುವ  ಜನಪ್ರಿಯ ಬರಹಗಾರ್ತಿಯೂ ಹೌದು.  ಇವರು ʼಗೇಟ್ಸ್‌ ಫೌಂಡೇಶನ್‌ʼ ನ ಆರೋಗ್ಯ ಸುಧಾರಣಾ ಕ್ರಮಗಳ  ಭಾಗವಾಗಿಯೂ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

top videos
    First published: