Radhika Gupta: ಪುರುಷ ಪ್ರಧಾನ ಕ್ಷೇತ್ರದಲ್ಲಿ ರಾಧಿಕಾ ಗುಪ್ತಾ ಸಾಧಿಸಿದ ಸಾಧನೆ ಏನು? ಅವರ ಮಾತಲ್ಲೇ ಕೇಳಿ

ರಾಧಿಕಾ ಗುಪ್ತಾ

ರಾಧಿಕಾ ಗುಪ್ತಾ

2017ರಲ್ಲಿ ಎಡೆಲ್ವೀಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರ್ಪಡೆಗೊಂಡ ರಾಧಿಕಾ ಸಂಸ್ಥೆಯ ಅಮೂಲಾಗ್ರ ಬೆಳವಣಿಗೆಯಲ್ಲಿ ಪಾಲುದಾರ ಎಂದೆನಿಸಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಇಂದು ಮಹಿಳೆ(Woman) ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಗೃಹಕತ್ಯಗಳಿಗೆ ಮಾತ್ರವೇ ಆಕೆ ಸೀಮಿತ ಎಂದು ಹೇಳುತ್ತಿದ್ದವರ ಮುಂದೆಯೇ ವಿಶಾಲವಾಗಿ ಬೆಳೆದು ನಿಂತಿದ್ದಾರೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ(Employment Industry) ಕೀರ್ತಿ ಹೆಸರು ಸಂಪಾದಿಸಿದ್ದಾರೆ. ಮನೆ, ಮಕ್ಕಳು ಸಂಸಾರವನ್ನು ನಿಭಾಯಿಸಿಕೊಂಡೇ ಮಹಿಳೆ ಕಂಪನಿಯನ್ನು(Company) ಸಂಸ್ಥೆಯನ್ನು ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಅಸಾಧಾರಣೆ ಸಾಧನೆಗೈದ ವ್ಯವಹಾರಸ್ಥೆ ರಾಧಿಕಾ ಗುಪ್ತಾ(Radhika Gupta) ನಾರಿಶಕ್ತಿಗೆ ಅತ್ಯುತ್ತಮ ಉದಾಹರಣೆ ಎಂದೆನಿಸಿದ್ದಾರೆ.


2017ರಲ್ಲಿ ಎಡೆಲ್ವೀಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರ್ಪಡೆಗೊಂಡ ರಾಧಿಕಾ ಸಂಸ್ಥೆಯ ಅಮೂಲಾಗ್ರ ಬೆಳವಣಿಗೆಯಲ್ಲಿ ಪಾಲುದಾರ ಎಂದೆನಿಸಿದ್ದಾರೆ.


ರಾಧಿಕಾ ಸಂಸ್ಥೆಗೆ ಸೇರಿದ ಸಮಯದಲ್ಲಿ ಫಂಡ್ ಹೌಸ್ ರೂ. 9,128 ಕೋಟಿ ಆಸ್ತಿಯನ್ನು ಹೊಂದಿತ್ತು. ಜನವರಿ 2023 ರಲ್ಲಿ ಸಂಸ್ಥೆಯ ಆಸ್ತಿ ರೂ. 1,01,406 ಕೋಟಿಗಳಷ್ಟು ಹೆಚ್ಚಾಗಿದೆ. ರಾಧಿಕಾ ಸಂಸ್ಥೆಯಲ್ಲಿ ಮಾಡಿರುವ ಅಸಾಧಾರಣ ಕೆಲಸಗಳೇನು? ಮುಂದಿನ ಗುರಿ ಏನು ಎಂಬುದನ್ನು ಆಕೆಯ ಮಾತುಗಳಲ್ಲೇ ಕೇಳೋಣ


ನೀವು 2017 ರಲ್ಲಿ Edelweiss AMC (ಎಡೆಲ್ವೀಸ್ ಅಸೆಟ್) ಗೆ ಸೇರಿದಾಗ, ನಿಮ್ಮ ಮನಸ್ಸಿನಲ್ಲಿ ಯಾವುದೇ ದೊಡ್ಡ ಯೋಜನೆಗಳು ಹೊಂದಿದ್ರಾ?


ನಾವು ಹಲವು ವರ್ಷಗಳಿಂದ AMC ಪರವಾನಗಿ ಹೊಂದಿದ್ದೇವೆ. ಜೆಪಿ ಮೋರ್ಗಾನ್ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಎಡೆಲ್ವೀಸ್ ಗ್ರೂಪ್ ವ್ಯವಹಾರದ ಮೇಲೆ ಕೇಂದ್ರೀಕರಿಸಲು ಹೊರಟಿದೆ ಎಂಬುದು ಸ್ಪಷ್ಟವಾಗಿತ್ತು.


ಇದನ್ನೂ ಓದಿ: Business Ideas: ನೀವು ಮಿಲಿಯನೇರ್ ಆಗಬೇಕೆಂದರೆ ಈ ಕೃಷಿ ಮಾಡಿ, ಒಂದು ಎಕರೆಗೆ 1 ಕೋಟಿ ಲಾಭ ಬರೋದು ಖಂಡಿತ!


ನಮ್ಮ ತಂಡವು ಮೀಟಿಂಗ್ ಹಾಗೂ ಡಿಬೇಟ್‌ಗಳಲ್ಲಿ ಸಮಯ ಕಳೆಯುವುದಕ್ಕಿಂತ ಯಾವುದು ಮುಖ್ಯವೋ ಆ ಅಂಶಗಳತ್ತ ಗಮನಹರಿಸುವ ತಂಡವಾಗಿದೆ. ನಾವಿದನ್ನು ಕ್ಲೀನಪ್ ಫೇಸ್ ಎಂದು ಕರೆಯುತ್ತೇವೆ ಎಂದು ರಾಧಿಕಾ ವಿವರಿಸಿದ್ದಾರೆ.


ಹೀಗಾಗಿ 40 ಜನರಿದ್ದ ಸಂಸ್ಥೆ ಇಂದು 300 ಉದ್ಯೋಗಿಗಳನ್ನು ಹೊಂದುವ ಮೂಲಕ ಸಾಮರ್ಥ್ಯಶಾಲಿಯಾಗಿ ಬೆಳೆದಿದೆ. ಐದು ವರ್ಷಗಳ ಯೋಜನೆಯ ಮೂಲಕ ಈ ಸಾಧನೆಯನ್ನು ಸಾಧಿಸಿದ್ದೇವೆ.


ನಿಮ್ಮ ಯಶಸ್ಸಿನ ಹಿಂದಿನ ಅಂಶಗಳೇನು?


ಗ್ರಾಹಕರ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರವಾಗಿರುವ ಭಾರತ್ ಬಾಂಡ್ ಇಟಿಎಫ್‌ಗಳು ಅಥವಾ ಇಂಟರ್ನ್ಯಾಷನಲ್ ಫಂಡ್‌ಗಳ ಮೇಲೆ ನಿರಂತರವಾಗಿ ಗಮನಹರಿಸುವುದು ಸವಾಲಾಗಿದೆ.


ಟ್ವಿಟರ್‌ನಲ್ಲಿ ಹಲವಾರು ರೀತಿಯ ಸಂವಾದಗಳನ್ನು ನಡೆಸುವ ಮೂಲಕ ಸಾಮಾಜಿಕ ತಾಣದಲ್ಲೇ ಹೆಚ್ಚು ಸಮಯ ಕಳೆಯುತ್ತೇವೆ. ಮಾರುಕಟ್ಟೆ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ನಾವು ವ್ಯವಹಾರವನ್ನು ಮುಂದುವರಿಸುತ್ತೇವೆ, ಬ್ರ್ಯಾಂಡ್ ಅನ್ನು ನಿರ್ಮಿಸುವತ್ತ ನಾವು ಆದ್ಯತೆ ನೀಡುವುದಿಲ್ಲ ಎಂಬುದು ರಾಧಿಕಾ ಮಾತಾಗಿದೆ.


ನಾವು ಕಚೇರಿಯಲ್ಲಿ ಸಣ್ಣ ಉತ್ಪನ್ನ ಗುಂಪನ್ನು ಹೊಂದಿದ್ದೇವೆ ಮತ್ತು ನಾವು ತಡರಾತ್ರಿಗಳು ಮತ್ತು ವಾರಾಂತ್ಯಗಳಲ್ಲಿ ವಾಟ್ಸ್‌ ಆ್ಯಪ್‌ನಲ್ಲಿ ವಿಷಯಗಳನ್ನು ಚರ್ಚಿಸುತ್ತೇವೆ! ವಿಭಿನ್ನ ತಂಡವನ್ನು ನಾವು ಹೊಂದಿದ್ದೇವೆ.


ಕಳೆದ ವರ್ಷ, ನಾವು ಅಂದಾಜು ಸರಾಸರಿ ಆಸ್ತಿ ರೂ 65,000 ಕೋಟಿಯನ್ನು ಹೊಂದಿದ್ದೇವೆ. ನಾವು ದೇಶದ ಪ್ರತಿಯೊಬ್ಬ ರಾಷ್ಟ್ರೀಯ ವಿತರಕರೊಂದಿಗೆ ಕೆಲಸ ಮಾಡಿದ್ದೇವೆ ಎಂಬುದು ರಾಧಿಕಾ ಅಭಿಪ್ರಾಯವಾಗಿದೆ.


ಮಹಿಳೆಯಾಗಿ, ಪುರುಷ ಪ್ರಧಾನ ವೃತ್ತಿಯಲ್ಲಿ ನೀವು ತೊಂದರೆಗಳನ್ನು ಎದುರಿಸಿದ್ದೀರಾ?


ಇದು ಕಠಿಣವಾಗಿತ್ತು, ನಾನು ಮಹಿಳೆ ಎಂಬ ಕಾರಣಕ್ಕೆ ಅಲ್ಲ ನಾನು ಯುವತಿ ಹಾಗೂ ಅಷ್ಟೊಂದು ಪಕ್ವತೆ ಹೊಂದಿಲ್ಲ ಎಂಬ ಕಾರಣಕ್ಕೆ ತೊಂದರೆಗಳಿದ್ದವು ಎಂಬುದು ರಾಧಿಕಾ ಮಾತಾಗಿದೆ.


ನನ್ನ ಸಹೋದ್ಯೋಗಿಗಳು ನನಗಿಂತ ಹಿರಿಯರಾಗಿದ್ದರು. ವ್ಯವಹಾರದಲ್ಲಿ 15-20 ವರ್ಷಗಳ ಅನುಭವ ಹೊಂದಿದವರೇ ನನ್ನ ವೃತ್ತಿಯಲ್ಲಿದ್ದರು. ನನ್ನ ಉದ್ಯಮದ ಆರಂಭದ ದಿನಗಳಲ್ಲಿ ನಾನು ಹೊರಗಿನವಳು ಎಂಬ ಭಾವನೆ ನನ್ನನ್ನು ಕಾಡಿತ್ತು. ಹಲವಾರು ವರ್ಷಗಳ ನಂತರ AMFI ನ ಉಪಾಧ್ಯಕ್ಷರಾದಾಗ ಆ ಭಾವನೆ ಬದಲಾಯಿತು ಎಂದು ರಾಧಿಕಾ ತಿಳಿಸಿದ್ದಾರೆ.


ಇದನ್ನೂ ಓದಿ: Electric Car: ಒಮ್ಮೆ ಚಾರ್ಜ್ ಮಾಡಿದರೆ 850 ಕಿಮೀ ಸಂಚರಿಸುವ ಎಲೆಕ್ಟ್ರಿಕ್​ ಕಾರುಗಳಿವು!


ನಿಮ್ಮ ಯಶಸ್ಸಿನ ಕುರಿತು ನಿಮ್ಮ ಮಗುವಿಗೆ ಹೇಳಬೇಕಾದಲ್ಲಿ ಯಾವ ಅಂಶವನ್ನು ತಿಳಿಸುತ್ತೀರಿ?


ನನ್ನ ತಂಡದ ಮಂತ್ರ ಚಪ್ಪಲ್ ಘಿಸೋ ಅಂದರೆ ನಿಮ್ಮಷ್ಟಕ್ಕೆ ನೀವೇ ಪ್ರಯತ್ನಿಸಿ ಎಂದಾಗಿದೆ. ನಮ್ಮ ಸಂಸ್ಥೆ ಅಷ್ಟೊಂದು ದೊಡ್ಡ ಫಂಡ್ ಹೌಸ್ ಅಲ್ಲದ ಕಾರಣ ಸ್ವಲ್ಪ ಪ್ರಯತ್ನಿಸುವುದು ಹಾಗೂ ನಮ್ಮಲ್ಲಿ ನಾವು ವಿಶ್ವಾಸವಿರಿಸುವುದು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ತಿಳಿಸಿದ್ದಾರೆ.



ನಾನು ಹೆಚ್ಚು ಪ್ರಯಾಣಿಸುವುದರಿಂದ ಮೂರು ತಿಂಗಳಿಗೊಮ್ಮೆ ಕನಿಷ್ಠ ಐದು ಜೋಡಿ ಪಾದರಕ್ಷೆಗಳನ್ನು ಕೊಳ್ಳುತ್ತೇನೆ ಎಂಬುದು ರಾಧಿಕಾ ಮಾತಾಗಿದೆ.


ಪ್ರತ್ಯೇಕತೆ ಒಂದು ಹೊರೆ ಎಂಬುದಾಗಿ ಭಾವಿಸದಿರಲು ನನ್ನ ಮಗುವಿಗೆ ತಿಳಿಸುತ್ತೇನೆ, ಏಕೆಂದರೆ ಇದು ಒಂದು ಸ್ವತ್ತು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ರಾಧಿಕಾ ತಿಳಿಸಿದ್ದಾರೆ.

Published by:Latha CG
First published: