• Home
  • »
  • News
  • »
  • business
  • »
  • Startup Success Story: ಮಗಳ ತ್ವಚೆಯ ಸಮಸ್ಯೆ ಹೋಗಲಾಡಿಸಲು ತಯಾರಿಸಿದ ಉತ್ಪನ್ನಗಳಿಂದ ಸ್ಟಾರ್ಟಪ್!

Startup Success Story: ಮಗಳ ತ್ವಚೆಯ ಸಮಸ್ಯೆ ಹೋಗಲಾಡಿಸಲು ತಯಾರಿಸಿದ ಉತ್ಪನ್ನಗಳಿಂದ ಸ್ಟಾರ್ಟಪ್!

ಸಕ್ಸಸ್ ಸ್ಟೋರಿ ಓದಿ

ಸಕ್ಸಸ್ ಸ್ಟೋರಿ ಓದಿ

ತಾವು ತಯಾರಿಸುವ ಉತ್ಪನ್ನಗಳನ್ನು ಮೆಚ್ಚಿಕೊಂಡ ಜನರೇ ಅದನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಕೃತ್ತಿಕಾ ತಿಳಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಸೌಂದರ್ಯ ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದೆ. ನೂರಾರು ಸಂಸ್ಥೆಗಳು ಇಂದು ಇದೇ ಕ್ಷೇತ್ರದಲ್ಲಿ ಮಿಲಿಯನ್ ಗಟ್ಟಲೆ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ನೈಸರ್ಗಿಕ ಹಾಗೂ ಸ್ವದೇಶಿ ಸೌಂದರ್ಯ ಪ್ರಸಾದನಗಳನ್ನು ಭಾರತೀಯ ಗ್ರಾಹಕರಿಗೆ ಒದಗಿಸುವ ಮೂಲಕ ಸೌಂದರ್ಯ ಮಾರುಕಟ್ಟೆ ಇಂದು ಯಶಸ್ವಿ ಉದ್ಯಮವಾಗಿ (Business Success Story) ಹೆಸರುಮಾಡುತ್ತಿದೆ. ನೈಸರ್ಗಿಕ ಪರಿಕರಗಳನ್ನು ಬಳಸಿಕೊಂಡೇ ಬ್ಯೂಟಿ ಪ್ರಾಡಕ್ಟ್‌ಗಳನ್ನು ಗ್ರಾಹಕರಿಗೆ ವಿತರಿಸುವ ಕೊಯಮತ್ತೂರು ಮೂಲದ ಸ್ಟಾರ್ಟಪ್ (Startup Story) ವಿಲ್ವಾಹ್ ಸ್ಟೋರ್ ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಪೈಪೋಟಿ ನೀಡುವ ಸಂಸ್ಥೆಯಾಗಿ ಹೊರಹೊಮ್ಮಿದೆ.


ವಿವಿಧ ಉತ್ಪನ್ನಗಳ ತಯಾರಿ
2017 ರಲ್ಲಿ ಆರಂಭವಾದ ಈ ಸ್ಟಾರ್ಟಪ್, ಗ್ರಾಹಕರಿಗೆ ಬೇರೆ ಬೇರೆ ಬಗೆಯ ಉತ್ಪನ್ನಗಳನ್ನು ಒದಗಿಸುತ್ತಿದೆ.  ಸೋಪ್‌ನಿಂದ ಹಿಡಿದು ಶ್ಯಾಂಪೂ, ಸೊಳ್ಳೆಮದ್ದು, ಡಿಯೋಡ್ರೆಂಟ್‌ಗಳು, ತ್ವಚೆಯ ಕ್ರೀಮ್‌ಗಳು ಹೀಗೆ ಪ್ರತಿಯೊಂದನ್ನು ನೈಸರ್ಗಿಕ ಪರಿಕರಗಳನ್ನು ಬಳಸಿ ತಯಾರಿಸುತ್ತಿದೆ.


ವಿಲ್ವಾಹ್ ಸ್ಟೋರ್‌ನ ಒಡತಿ ಕೃತ್ತಿಕಾ ಕುಮಾರನ್ ಸ್ಟಾರ್ಟಪ್ ನಡೆಸುವ ಉದ್ದೇಶವನ್ನೇ ಹೊಂದಿರಲಿಲ್ಲ. ಬದಲಿಗೆ ತಮ್ಮ ಮಗಳ ತ್ವಚೆಯ ಇಸಬು ಸಮಸ್ಯೆಗೆ ಒಂದು ಸೋಪ್ ಉತ್ಪನ್ನವನ್ನು ತಯಾರಿಸಬೇಕೆಂಬ ಇಚ್ಛೆಯನ್ನು ಹೊಂದಿದ್ದರು ಎಂಬುದಾಗಿ ತಿಳಿಸುತ್ತಾರೆ.


ಸಾಧನೆಯ ದಾರಿಯ ಬಗ್ಗೆ ಮಾತು
ತ್ವಚೆಯ ಸಮಸ್ಯೆಯಿಂದಲೇ ತಮ್ಮ ತಾಯಿಯನ್ನು ಕಳೆದುಕೊಂಡಿರುವ ಕೃತ್ತಿಕಾ ಸಮಾಜಕ್ಕೆ ಏನಾದರೂ ಉತ್ತಮವಾದುದನ್ನು ನೀಡಬೇಕು ಎಂಬ ಅಭಿಲಾಶೆಯನ್ನು ಹೊಂದಿದ್ದರು. ಆದರೆ ಉದ್ಯಮ ರಂಗದಲ್ಲಿ ನಾನು ಏನಾದರೂ ಸಾಧಿಸುತ್ತೇನೆಂದು ಅಂದುಕೊಂಡಿರಲಿಲ್ಲ ಎಂದವರು ನುಡಿಯುತ್ತಾರೆ.


ನೈಸರ್ಗಿಕ ಉತ್ಪನ್ನಗಳನ್ನು ಮೆಚ್ಚಿದ ಗ್ರಾಹಕರು
ನೈಸರ್ಗಿಕವಾಗಿ ಬೆಳೆದ ಪರಿಕರಗಳನ್ನು ಬಳಸಿಕೊಂಡು ಕೃತ್ತಿಕಾ ಒಂದೊಂದಾಗಿ ಸೌಂದರ್ಯ ಉತ್ಪನ್ನಗಳನ್ನು ತಯಾರಿಸತೊಡಗಿದರು. ಹಾಗೂ ತಮ್ಮ ಕುಟುಂಬದವರಿಗೆ ವಿತರಿಸಿದರು. ಆದರೆ ಇವರ ಉತ್ಪನ್ನಗಳನ್ನು ಮೆಚ್ಚಿಕೊಂಡ ಇತರರು ಕೂಡ ಕೃತ್ತಿಕಾರಿಗೆ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ಎಂದು ವಿನಂತಿಸಿದಾಗ ತಮ್ಮದೇ ಆದ ಸಂಸ್ಥೆಯನ್ನು ಏಕೆ ಸ್ಥಾಪಿಸಬಾರದು ಎಂಬ ಯೋಚನೆ ಬಂದಿತು ಎಂಬುದಾಗಿ ಕೃತ್ತಿಕಾ ಹೇಳುತ್ತಾರೆ.


ನೈಸರ್ಗಿಕ ಉತ್ಪನ್ನಗಳಿಗೆ ಬೇಡಿಕೆ ಹಾಗೂ ಕೊರತೆಯನ್ನು ಗಮನಿಸಿದ ಕೃತ್ತಿಕಾ ಈ ದಿಸೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ತಮ್ಮ ಮಗಳಿಗಾಗಿ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ ಅವರು ಬ್ರ್ಯಾಂಡ್ ಅನ್ನು ಕಟ್ಟಬೇಕೆಂಬ ಉದ್ದೇಶವನ್ನೇ ಹೊಂದಿರಲಿಲ್ಲ.


ಆದರೆ ತಾವು ತಯಾರಿಸುವ ಉತ್ಪನ್ನಗಳನ್ನು ಮೆಚ್ಚಿಕೊಂಡ ಜನರೇ ಅದನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಕೃತ್ತಿಕಾ ತಿಳಿಸಿದ್ದಾರೆ.


ವೆಬ್‌ಸೈಟ್ ಹೊಂದಿರುವ ಸ್ಟಾರ್ಟಪ್
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ ಪೇಜ್‌ನೊಂದಿಗೆ 2017 ರಲ್ಲಿ ವಿಲ್ವಾಹ್ ಸಾಮಾಜಿಕ ತಾಣದಲ್ಲೂ ಗ್ರಾಹಕರನ್ನು ತಲುಪಿತು. ಪ್ರಸ್ತುತ ಮೂರು ಸ್ಟೋರ್‌ಗಳು ಹಾಗೂ ಸಾಮಾಜಿಕ ತಾಣದಲ್ಲಿ ಹೆಚ್ಚುವರಿಯಾಗಿ ತನ್ನದೇ ಆದ ವೆಬ್‌ಸೈಟ್ ಅನ್ನು ಸ್ಟಾರ್ಟಪ್ ಹೊಂದಿದೆ.


ಇದನ್ನೂ ಓದಿ: Reliance Family Day: ಮುಕೇಶ್​ ಅಂಬಾನಿ ಮಕ್ಕಳಿಗೆ ವಹಿಸಿರುವ ಜವಾಬ್ದಾರಿಗಳೇನು? ಮೆಸ್ಸಿಯ ಉದಾಹರಣೆ ನೀಡಿದ ಖ್ಯಾತ ಉದ್ಯಮಿ!


ಉದ್ಯಮದಲ್ಲಿ ವೈವಿಧ್ಯತೆಯನ್ನುಂಟು ಮಾಡಿದ್ದು ತಮ್ಮ ಸೌಂದರ್ಯ ಪ್ರಸಾದನಗಳಲ್ಲಿ ಆಡಿನ ಹಾಲನ್ನು ಬಳಸುತ್ತಿರುವುದಾಗಿ ಕೃತ್ತಿಕಾ ತಿಳಿಸಿದ್ದಾರೆ. ಕೃಷಿ ಕುಟುಂಬದಿಂದ ಬಂದಿರುವ ಕೃತ್ತಿಕಾ ಆಡಿನ ಹಾಲನ್ನು ಬಳಸಿಕೊಂಡು ಒಂದಿಷ್ಟು ಉತ್ಪನ್ನಗಳನ್ನು ತಯಾರಿಸಿದ್ದು ಅದು ಯಶಸ್ಸನ್ನು ತಂದುಕೊಟ್ಟಿತು ಎಂದು ತಿಳಿಸಿದ್ದಾರೆ.


ಎದುರಾದ ಸವಾಲುಗಳು
ಯಾವುದೇ ಉದ್ಯಮದಲ್ಲಿ ಸವಾಲುಗಳು ಸರ್ವೇ ಸಾಮಾನ್ಯ ಎಂದು ಹೇಳುವ ಕೃತ್ತಿಕಾ ತಮ್ಮದೇ ಆದ ತಂಡವನ್ನು ನಿರ್ಮಿಸುವಲ್ಲಿ ಕೊಂಚ ಕಷ್ಟಪಟ್ಟರು ಎಂದು ತಿಳಿಸಿದ್ದಾರೆ. ಸರಿಯಾದ ಪರಿಕರಗಳನ್ನು ಬಳಸಿಕೊಂಡು ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುವುದು ಎಂದರೆ ಅದೊಂದು ಸವಾಲೇ ಸರಿ ಎಂದು ಹೇಳುವ ಕೃತ್ತಿಕಾ ಇದಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿರುವುದಾಗಿ ತಿಳಿಸುತ್ತಾರೆ.


ಗ್ರಾಹಕರ ಪ್ರತಿಕ್ರಿಯೆಗಳಿಗೆ ಅನುಸಾರವಾಗಿ ಉತ್ಪನ್ನಗಳಲ್ಲಿ ಸುಧಾರಣೆಗಳನ್ನು ಮಾಡುವುದಾಗಿ ತಿಳಿಸುವ ಕೃತ್ತಿಕಾ ಗ್ರಾಹಕರ ಇಷ್ಟ, ಅಭಿಪ್ರಾಯ ಅನಿಸಿಕೆಗಳಿಗೆ ಅನುಸಾರವಾಗಿಯೇ ಪ್ರಾಡಕ್ಟ್‌ಗಳನ್ನು ತಯಾರಿಸಿಕೊಡುತ್ತೇವೆ ಎಂದು ತಿಳಿಸುತ್ತಾರೆ.


ಇದನ್ನೂ ಓದಿ: Kamalapur Red Banana: ಕಮಲಾಪುರದ ಕೆಂಬಾಳೆ ರುಚಿಯಲ್ಲಿ ಬೆಸ್ಟ್, ರೈತರೂ ಖುಷ್!


ಒಂದು ರೀತಿಯಲ್ಲಿ ಇದುವೇ ನಮ್ಮ ಯಶಸ್ಸಿಗೆ ಕಾರಣ ಎಂದು ನುಡಿದಿದ್ದಾರೆ. ಗ್ರಾಹಕರ ಅಭಿರುಚಿಯನ್ನು ಪರಿಗಣಿಸಿ ಅದನ್ನು ತಂಡದಲ್ಲಿರುವ ಸಂಶೋಧಕ ಹಾಗೂ ಅಭಿವೃದ್ಧಿ ತಂಡಗಳಿಗೆ ರವಾನಿಸಿ ಅದನ್ನು ಅನುಸರಿಸಿ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ಕೃತ್ತಿಕಾ ತಿಳಿಸಿದ್ದಾರೆ. 2023 ರಲ್ಲಿ ಸಂಸ್ಥೆಯು 30 ಕೋಟಿ ಆದಾಯವನ್ನು ತಲುಪಲಿದೆ ಎಂದು ಕೃತ್ತಿಕಾ ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: