Success Story: ಯುವ ಸಾಧಕರಿಗೆ ಬೆಸ್ಟ್‌ ಮಾಡೆಲ್‌, ನಿಮಗೆ ಸ್ಪೂರ್ತಿ ನೀಡಬಲ್ಲ ಉದ್ಯಮಿ ಇವರು

ಇವರ ಸಕ್ಸಸ್ ಕಥೆ ಕೇಳಿ

ಇವರ ಸಕ್ಸಸ್ ಕಥೆ ಕೇಳಿ

ಚಾಲೆಂಜ್‌ಗಳನ್ನು ಹೆಚ್ಚಾಗಿ ಇಷ್ಟಪಡುವ ಇವರು ರಿಸ್ಕ್‌ ತೆಗೆದುಕೊಳ್ಳುವವರು ಮಾತ್ರ ಜೀವನದಲ್ಲಿ ಗೆಲ್ತಾರೆ. ಜೊತೆಗೆ ನಿಮಗೇ ನೀವು ಮೊದಲು ಸ್ವಂತ ಬಾಸ್‌ ಆಗಬೇಕು.

  • Share this:

ಸಣ್ಣಪುಟ್ಟ ಸೋಲುಗಳನ್ನು ತಲೆಗೆ ಹಚ್ಚಿಕೊಳ್ಳದೇ ಕೇವಲ ಸಾಧನೆ ಕಡೆಗೆ ಗಮನರಿಸಬೇಕು. ಯುವ ಜನತೆ ಇದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಈಗಂತೂ ಯುವ ಪೀಳಿಗೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತು ಸಂಸ್ಥೆಯನ್ನು ನಿಭಾಯಿಸುತ್ತಿದ್ದಾರೆ. ಇಂತಹ ಹಲವು ಉತ್ತಮ ನಿದರ್ಶನಗಳು ಅನೇಕಾನೇಕರಿಗೆ ಸ್ಪೂರ್ತಿಯಾಗುತ್ತಿವೆ. ಇಂತಹ ಸಾಧಕರ, ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ (Success Story) ಮಲೇಷ್ಯಾದ ಮೊಹಮ್ಮದ್ ಇರ್ಫಾನ್ ಕೂಡ ಒಬ್ಬರು. ಮಾಡೆಲ್‌, ಉದ್ಯಮಿ ಮತ್ತು ಕಂಪನಿಯ ಸಿಇಒ (Entrepreneur) ಆಗಿರುವ ಮಲೇಷ್ಯಾದ ಮೊಹಮ್ಮದ್ ಇರ್ಫಾನ್ (Muhammad Irfan)  ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಯುವ ಪ್ರತಿಭೆ.


ಮಾಡೆಲ್, ಉದ್ಯಮಿ, ಸಿಇಒ
ಹೂಡಿಕೆ ಮತ್ತು ಉದ್ಯಮ ನಡೆಸುವಾಗ ಹಲವಾರು ಏರುಪೇರುಗಳನ್ನು ಅನುಭವಿಸಿದರೂ ಯಾವುದಕ್ಕೂ ಕುಗ್ಗದ ಇರ್ಫಾನ್‌ ಇಂದು ಯಶಸ್ಸಿನ ಅಲೆಯಲ್ಲಿದ್ದಾರೆ. ಫ್ಯಾಶನ್ ಉದ್ಯಮದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕುಟುಂಬದ ಹಿನ್ನೆಲೆಯಿಂದ ಬಂದ ಇವರಿಗೆ ಮೊದಲಿಗೆ ಹೆಚ್ಚು ಆಕರ್ಷಿಸಿದ್ದು ಬಣ್ಣ ಬಣ್ಣದ ಫ್ಯಾಶನ್‌ ಲೋಕ. ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ಸಾಮಾಜೀಕರಣ, ರಿಯಲ್ ಎಸ್ಟೇಟ್ ಮತ್ತು ನೈಸರ್ಗಿಕ ಉದ್ಯಮಿ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.‌


"ಅಲ್ಫಾರೊ ಮಾಲ್‌" ಸಿಇಒ ಇರ್ಫಾನ್
"ಅಲ್ಫಾರೊ ಮಾಲ್‌ (ALFARO MALL)" ಸಿಇಒ ಆಗಿರುವ ಮೊಹಮ್ಮದ್ ಇರ್ಫಾನ್ ಇಂದು ಕಂಪನಿಯನ್ನು ಲಾಭದಾಯಕ ಮತ್ತು ಸಕ್ಸಸ್‌ನತ್ತ ಕೊಂಡೊಯುತ್ತಿದ್ದಾರೆ. ಇದೊಂದು ಮಲೇಷ್ಯಾದಲ್ಲಿನ ಬಟ್ಟೆ ಬ್ರ್ಯಾಂಡ್ ಆಗಿದ್ದು, ಜಗತ್ತಿನಾದ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿ ಜನಮನ ಗೆದ್ದಿದೆ. ಫ್ಯಾಶನ್‌ ಲೋಕವನ್ನು ಆಳುತ್ತಿದೆ.


ಚಾಲೆಂಜ್‌ಗಳನ್ನು ಹೆಚ್ಚಾಗಿ ಇಷ್ಟಪಡುವ ಇವರು ರಿಸ್ಕ್‌ ತೆಗೆದುಕೊಳ್ಳುವವರು ಮಾತ್ರ ಜೀವನದಲ್ಲಿ ಗೆಲ್ತಾರೆ ಎಂಬ ನಂಬಿಕೆ ಹೊಂದಿದ್ದಾರೆ. ಜೊತೆಗೆ ನಿಮಗೇ ನೀವು ಮೊದಲು ಸ್ವಂತ ಬಾಸ್‌ ಆಗಬೇಕು ಎಂದಿದ್ದಾರೆ. ಹೀಗೆ ಮೊಹಮ್ಮದ್ ಇರ್ಫಾನ್ ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ ಎಂಬುದರ ಬಗ್ಗೆ ತಮ್ಮದೇ ನಿಲುವು, ಗುರಿಗಳನ್ನು ಇಟ್ಟುಕೊಂಡು ಅದೇ ಹಾದಿಯಲ್ಲಿ ಮುಂದುವರೆಯುತ್ತಿದ್ದಾರೆ.


ಬಿಟ್ಟುಕೊಡದ ಮನೋಭಾವ ಸಕ್ಸಸ್‌ಗೆ ಸೂತ್ರ
ಏನೇ ಸಂದರ್ಭ ಬಂದರೂ, ಎಂತಹದ್ದೇ ಸವಾಲು ಬಂದರೂ ಯಾವುದನ್ನೂ ಬಿಟ್ಟುಕೊಡಬಾರದು ಎಂಬ ಮನೋಭಾವ ಹೊಂದಿರುವ ಇವರು ರಿಸ್ಕ್‌ ತೆಗೆದುಕೊಳ್ಳಲು ಹಿಂದೆ ಬೀಳುವುದಿಲ್ಲ. ಈ ಅಪಾಯಗಳು ಭಯ ಮತ್ತು ಶ್ರಮದ ಮೇಲೆ ನಿರ್ಮಿಸಲಾದ ವ್ಯಾಪಾರವನ್ನು ನಿರೂಪಿಸುತ್ತವೆ. ಎಲ್ಲಾ ಅಡೆತಡೆಗಳನ್ನು ನಿವಾರಿಸಿದ ಉದ್ಯಮಿಗಳ ಬಗ್ಗೆ ತಿಳಿಯುವುದು ಮತ್ತು ಅವರ ಅನುಭವಗಳ ಬಗ್ಗೆ ಓದುವುದು ನಿಮ್ಮ ಉದ್ಯಮಶೀಲ ಗುರಿಗಳನ್ನು ಅನುಸರಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ ಎನ್ನುತ್ತಾರೆ ಮೊಹಮ್ಮೊದ್‌ ಇರ್ಫಾನ್.


ಇದನ್ನೂ ಓದಿ: Success Story: ದೇಸಿ ತಳಿ ಬದನೆ ಬೆಳೆದ ರೈತ, 16 ಗುಂಟೆಯಲ್ಲಿ 2 ಲಕ್ಷ ಆದಾಯ!


ಯಶಸ್ಸಿಗೆ ತಯಾರಿ ಅತ್ಯಗತ್ಯ
"ಯಶಸ್ಸು ಪೂರ್ವ ತಯಾರಿಯ ಮೇಲೆ ಅವಲಂಬಿತವಾಗಿದೆ, ಮತ್ತು ಆ ತಯಾರಿ ಇಲ್ಲದೆ, ವೈಫಲ್ಯದ ಹೆಚ್ಚಿನ ಸಂಭವನೀಯತೆ ಇರುತ್ತದೆ" ಎಂಬುದು ಮುಹಮ್ಮದ್ ಇರ್ಫಾನ್ ನಿಲುವು. ಸಮಗ್ರತೆ, ನೈತಿಕತೆ, ನಾಯಕತ್ವ, ಸಮುದಾಯದಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಮಾರ್ಗದರ್ಶನ ಸೇರಿದಂತೆ ಅಗತ್ಯವಿರುವ ಎಲ್ಲಾ ಗುಣಗಳನ್ನು ಇರ್ಫಾನ್ ಹೊಂದಿದ್ದಾರೆ.




ಫ್ಯಾಷನ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಪ್ರತಿಯೊಬ್ಬರಿಗೂ ಬೆನ್ನೆಲುಬಾಗಿ ನಿಲ್ಲುವ ಇವರು ತಮಗೆ ತಿಳಿದ ಮಾರ್ಗದರ್ಶನ ನೀಡಲು ಸದಾ ಸಿದ್ಧರಾಗಿರುತ್ತಾರೆ. ಫ್ಯಾಷನ್ ಉದ್ಯಮದಲ್ಲಿ ಟ್ರೆಂಡ್‌ಗಳು ಮತ್ತು ಅನೇಕ ಬದಲಾವಣೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಮುಂದುವರಿಸಲು ಪಣತೊಟ್ಟಿರುವ ಇರ್ಫಾನ್‌, ಉದ್ಯಮದಲ್ಲಿ ಇತರರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.


ಇದನ್ನೂ ಓದಿ: Home Loan: ಮನೆ ಖರೀದಿ ಮಾಡೋ ಮೊದ್ಲು ಈ ಹೋಮ್​ ಲೋನ್​ ಡಿಸ್ಕೌಂಟ್​ ಬಗ್ಗೆ ತಿಳಿದುಕೊಳ್ಳಿ


ಅವರು ಪ್ರಪಂಚದ ವಿವಿಧ ಭಾಗಗಳಲ್ಲಿ ಮಾಡೆಲ್‌ಗಳೊಂದಿಗೆ ಕೆಲಸ ಮಾಡಿದ್ದು, ಈಗಾಗಲೇ ಶೂಟ್‌ಗಳು, ಬ್ರ್ಯಾಂಡ್ ಜಾಹೀರಾತುಗಳು ಮತ್ತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾ ಇನ್ಪ್ಲೂಯೆನ್ಸರ್‌ ಆಗಿರುವ ಇಂದು ಟಾಪ್‌ ಪ್ರಭಾವಿಗಳ ಸಾಲಿನಲ್ಲಿದ್ದಾರೆ.

top videos
    First published: