Success Story: ಕಾರ್ಪೋರೇಟ್ ಟೆಕ್ಕಿ To ಕೃಷಿಕ! 15 ಲಕ್ಷ ಲಾಭ ಗಳಿಸಿದ ಮಂಗಳೂರಿನ ಚೇತನ್ ಶೆಟ್ಟಿ

ಚೇತನ್ ಶೆಟ್ಟಿ

ಚೇತನ್ ಶೆಟ್ಟಿ

2017 ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಚೇತನ್ ಅಲ್ಲಿಂದ 75 ಕಿಮೀ ದೂರವಿರುವ ಬೆಳ್ಳಾರೆಯಲ್ಲಿ ತಮ್ಮ ಪೂರ್ವಿಕರ ಮನೆಗೆ ಸ್ಥಳಾಂತರಗೊಂಡರು.

  • Share this:

ಮಂಗಳೂರು: ದೊಡ್ಡ ದೊಡ್ಡ ಕೆಲಸದವರೇ ಕೃಷಿಯತ್ತ ಪ್ರಸ್ತುತ ವಾಲುತ್ತಿದ್ದರೆ. ಮಣ್ಣನ್ನು ನಂಬಿ ಕೆಟ್ಟವರಿಲ್ಲ ಎನ್ನುವಂತೆ ಸರಿಯಾದ ಕೃಷಿ ಮಾಡಿದವರಿಗೆ (Agriculture) ನಷ್ಟದ ಮಾತೇ ಇಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಹೀಗೆ ಕಾರ್ಪೋರೇಟ್ ಕೆಲಸ ಬಿಟ್ಟು ಕೃಷಿಯಲ್ಲಿ ಸಾಧನೆ (Agriculture Success Story) ಮಾಡಿದವರ ಪಟ್ಟಿಗೆ ನಮ್ಮ ಮಂಗಳೂರಿನ ಈ ವ್ಯಕ್ತಿ (Mangaluru News) ಸೇರಿಕೊಂಡಿದ್ದಾರೆ ನೋಡಿ.


‘ನಮ್ಮ ತಂದೆಯವರಿಗೆ ನಾನು ಕಾರ್ಪೋರೇಟ್ ​ ಕಂಪನಿ ತೊರೆಯುವುದು ಇಷ್ಟವಿರಲಿಲ್ಲ. ಅಮ್ಮ ಅಂತೂ ನಿನಗ್ಯಾರು ಹೆಣ್ಣು ಕೊಡ್ತಾರೆ ಕೆಲಸ ಬಿಡಬೇಡಪ್ಪ ಅಂದ್ರು. ಸ್ನೇಹಿತರಿಗಂತೂ ವೀಕೆಂಡ್​ ಪಾರ್ಟಿಯದ್ದೇ ಚಿಂತೆ. ಆದರೆ ನನ್ನ ನಿರ್ಧಾರ ಮಾತ್ರ ಅಚಲವಾಗಿತ್ತು. ಕಾರ್ಪೋರೇಟ್ ​ ಜಗತ್ತಿಗೆ ವಿದಾಯ ಹೇಳಿ ನಮ್ಮ ಪೂರ್ವಿಕರ ನೆಲವನ್ನು ನಂಬಿಕೊಂಡು ಬಂದೆ. ಒಂದು ವರ್ಷಕ್ಕೆಲ್ಲ ಬೆಂಗಳೂರಿಗೆ ವಾಪಸ್​ ಬರುತ್ತೇನೆ ಎಂದು ನನ್ನನ್ನು ನೋಡಿ ಅಂದು ನಕ್ಕವರು ಇಂದು ಭೇಷ್ ಎನ್ನುತ್ತಿದ್ದಾರೆ. ಕಳೆದ ವರ್ಷ ಕೃಷಿ ಮೂಲಕ 15 ಲಕ್ಷ ಲಾಭವನ್ನು ಗಳಿಸಿದ ಸಾರ್ಥಕ ಕ್ಷಣಗಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದೆ’ ಎನ್ನುತ್ತಾರೆ ಮಂಗಳೂರಿನ ಯುವ ಕೃಷಿಕ ಚೇತನ್ ಶೆಟ್ಟಿ.


ವಿದೇಶಿ ಹಣ್ಣುಗಳನ್ನು ಬೆಳೆದ ಚೇತನ್
2017 ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಚೇತನ್ ಅಲ್ಲಿಂದ 75 ಕಿಮೀ ದೂರವಿರುವ ಬೆಳ್ಳಾರೆಯಲ್ಲಿ ತಮ್ಮ ಪೂರ್ವಿಕರ ಮನೆಗೆ ಸ್ಥಳಾಂತರಗೊಂಡರು. ಅಲ್ಲಿನ ಜಮೀನಿನಲ್ಲಿ ಬಾಳೆಹಣ್ಣು, ಪರಂಗಿ ಮತ್ತು ದ್ರಾಕ್ಷಿ ಸೇರಿದಂತೆ ವಿದೇಶಿ ಹಣ್ಣುಗಳನ್ನು ಬೆಳೆಯಲು ಆರಂಭಿಸಿದರು.


ಇಷ್ಟೆಲ್ಲಾ ಬೆಳೆದಿದ್ದಾರೆ ನೋಡಿ
ಇಂದು ಮಂಜಣ್ಣ ಶೆಟ್ಟಿ ಫ್ಯಾಮಿಲಿ ಫಾರ್ಮ್ 2,500 ಕ್ಕೂ ಹೆಚ್ಚು ಅಡಿಕೆ ಮರಗಳು, 800 ಕಾಳು ಮೆಣಸು ಬಳ್ಳಿಗಳು, 50 ಜಾಯಿಕಾಯಿ ಮರಗಳು, 300 ತೆಂಗಿನ ಮರಗಳು, 650 ರಂಬೂಟಾನ್ ಹಣ್ಣಿನ ಮರಗಳು, 100 ಕ್ಕೂ , ಮ್ಯಾಂಗೋಸ್ಟೀನ್ ಮರಗಳು ಮತ್ತು 50 ಕ್ಕೂ ಹೆಚ್ಚು ಅವಕಾಡೊ ಸಸ್ಯಗಳಿಂದ ಶ್ರೀಮಂತವಾಗಿದೆ ಎಂದು ಹೆಮ್ಮೆ ಪಡುತ್ತಾರೆ ಚೇತನ್.


ಬಾಲ್ಯದ ನೆನಪುಗಳೇ ಇಂದಿನ ಕೃಷಿಗೆ ಸಾರಥಿ
ಬಾಲ್ಯದಲ್ಲಿ ಮಂಗಳೂರಿನ ಬೆಳ್ಳಾರೆಯಲ್ಲಿರುವ ಅಜ್ಜಿಯ ಮನೆಯ ಗದ್ದೆಯಲ್ಲಿ ಅಡಿಕೆ ಮರಗಳ ನಡುವೆ ನಿತ್ಯವೂ ಆಟವಾಡುತ್ತಿದ್ದರು. ಬೆಳಗ್ಗಿನ ಜಾವ ಮಾವಿನ ಕಾಯಿ ಕೀಳುವುದು, ಗದ್ದೆಗಳಿಗೆ ನೀರು ಹಾಕುವುದು ಮಾಡುತ್ತಿದ್ದರು. ಹಸಿರಿನೊಟ್ಟಿಗಿನ ಸಾಂಗತ್ಯ ಅವರ ಮನದಲ್ಲಿ ಹಾಗೇ ನಳನಳಿಸುತ್ತಿತ್ತು. ಕಾರ್ಪೋರೇಟ್​ ಜಗತ್ತಿನಲ್ಲಿ ಈ ಕಾಡುವಿಕೆ ಮತ್ತಷ್ಟು ಮುಂದುವರೆದಿತ್ತು. ಈ ಉತ್ಸಾಹ ಅಜ್ಜ ಅಜ್ಜಿಯಂತೆ ತಾನು ಕೂಡ ಸಮರ್ಥ ಕೃಷಿಕನಾಗಬಲ್ಲನೇ ಎನ್ನುವುದನ್ನು ತಾವೇ ಪರೀಕ್ಷಿಸುವುದಕ್ಕೆ ಪ್ರೇರಣೆಯಾಯಿತು.


ಅಪಾರ್ಟ್​ಮೆಂಟ್​ ಅಡುಗೆ ಮನೆಯಲ್ಲಿ ಅಣಬೆ ಬೆಳೆದರು
ತಮ್ಮ ಬೆಂಗಳೂರಿನ ಸಣ್ಣ ಅಪಾರ್ಟ್​ಮೆಂಟ್​ನ ಅಡುಗೆ ಮನೆಯಲ್ಲಿ ಹುಲ್ಲನ್ನು ತಂದು ಕುದಿಸಿ, ಅದನ್ನು ಬ್ಯಾಗ್​ಗಳಲ್ಲಿ ತುಂಬಿ ಅಣಬೆ ಬೆಳೆದರು. ಇದನ್ನು ಹತ್ತಿರದ ಅಂಗಡಿ ಮತ್ತು ಹೊಟೇಲ್​ಗಳಲ್ಲಿ ಮಾರಾಟ ಮಾಡಿ ಸಣ್ಣ ಆದಾಯವನ್ನು ಪಡೆದುಕೊಂಡರು. ಇದೇ ಸಮಯದಲ್ಲಿ ತಮ್ಮ ಪೂರ್ವಿಕರ ನೆಲದಲ್ಲಿ 3000 ಕೆಜಿಯಷ್ಟು ಅರಿಶಿನವನ್ನು ಬೆಳೆದು ಉತ್ತಮ ಇಳುವರಿ ಪಡೆದರು. ಈ ಆತ್ಮವಿಶ್ವಾಸದಿಂದಲೇ 8 ವರ್ಷಗಳ ಕಾರ್ಪೋರೇಟ್ ಉದ್ಯಮ ತೊರೆದು ಕೃಷಿಯಲ್ಲಿ ತೊಡಗಿಕೊಂಡರು.


10 ಎಕರೆ ಜಮೀನಿನಲ್ಲಿ ಬೋರ್​ಬೆಲ್ ತೋಡಿಸಿದರು. 550 ರಂಬೂಟಾನ್​ ಗಿಡಗಳು, 50 ಮ್ಯಾಂಗೋಸ್ಟೀನ್ ಸಸ್ಯಗಳು ಮತ್ತು 100 ತೆಂಗಿನ ಸಸಿಗಳು, ಬೆಂಡೇಕಾಯಿ, ಸೌತೆಕಾಯಿ, ಬೀನ್ಸ್ ಮೂಲಂಗಿ ಮತ್ತು ಸೊಪ್ಪನ್ನು ನೆಟ್ಟು ಸಮಗ್ರ ಕೃಷಿ ಆರಂಭಿಸಿದರು. ಹಣ್ಣಿನ ತೋಟಕ್ಕಾಗಿ ತಮ್ಮ ಉಳಿತಾಯದ ಹಣ 10 ಲಕ್ಷವನ್ನು ಮೀಸಲಿಟ್ಟರು. ಹಣ್ಣಿನ ಇಳುವರಿ ಬರುವ ತನಕ ಕೃಷಿಯ ಖರ್ಚು - ವೆಚ್ಚ ಭರಿಸಲು ಬಾಳೆ, ಅಡಿಕೆ ನೆರವಾದವು. ಆ ನಂತರ ರಂಬೂಟಾನ್ ಬಂಪರ್​ ಆದಾಯವನ್ನು ತಂದು ಕೊಟ್ಟಿತು ಎನ್ನುತ್ತಾರೆ.


ಕೃಷಿ ಹೂಡಿಕೆ ಮತ್ತು ಕಾರ್ಯಾಚರಣೆಯ ವೆಚ್ಚದ ಬಗ್ಗೆ ಗಮನವಿರಲಿ
ಚೇತನ್ ಅವರು ಹೇಳುವ ಪ್ರಕಾರ ಕೃಷಿ ಆರಂಭಿಸುವಾಗ, ಹೂಡಿಕೆ ಮಾತ್ರವಲ್ಲ ಅದರ ಆಪರೇಷನಲ್ ಕಾಸ್ಟ್​ ಅಂದರೆ ಕಾರ್ಯಾಚರಣೆಯ ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉದಾ: ಫಾರ್ಮ್​ ಸ್ಥಾಪಿಸಲು 10 ಲಕ್ಷ ರೂ ಬೇಕಾಗಬಹುದು. ಆದರೆ ಅದರ ಇಳುವರಿ ಬರುವ ಮುನ್ನ ಕೃಷಿ ನಿರ್ವಹಣೆಗೆ ಹೆಚ್ಚುವರಿಯಾಗಿ 10 ಲಕ್ಷ ರೂ ಅಗತ್ಯವಿರುತ್ತದೆ ಎನ್ನುವ ಅಂಶವನ್ನು ತಿಳಿಸುತ್ತಾರೆ.


ಕುಟುಂಬದವರೇ ಇಲ್ಲಿ ಕೆಲಸದವರು
ಕೆಲಸಗಾರರನ್ನು ಹುಡುಕುವುದೇ ಕೃಷಿಯಲ್ಲಿ ದೊಡ್ಡ ಸವಾಲಾಗಿರುವ ಕಾರಣ ಚೇತನ್​ ಕುಟುಂಬಸ್ಥರೇ ಕೈ ಜೋಡಿಸಿದರು. ಉತ್ಪನ್ನದ ಕೊಯ್ಲು, ಪ್ಯಾಕಿಂಗ್, ಬಸ್​ಗಳಿಗೆ ಲೋಡ್​ ಮಾಡುವುದು, ಸಾಗಾಣಿಕೆ ಕೆಲಸವನ್ನು ಎಲ್ಲರೂ ಹಂಚಿಕೊಂಡಿದ್ದಾರೆ.




ಭಾರತದಾದ್ಯಂತ ಸರಬರಾಜು
ಬೆಂಗಳೂರು, ಮುಂಬೈ, ಪುಣೆ, ದೆಹಲಿ, ಅಮೃತ್​​ಸರ್ ಮತ್ತು ಅಹಮದಬಾದ್​ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೋಲ್​ಸೇಲ್​ ಮತ್ತು ರಿಟೇಲ್​​ ವ್ಯಾಪಾರಿಗಳು ಕೊಳ್ಳುತ್ತಾರೆ. ಕಳೆದ ವರ್ಷ 5,200 ಕೆಜಿ ಉತ್ಪನ್ನವನ್ನು ಮಾರಾಟ ಮಾಡುವ ಮೂಲಕ 15 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ ಚೇತನ್.


ಇದನ್ನೂ ಓದಿ: Yellow Watermelon: ಕೆಂಪಲ್ಲ, ಇದು ಹಳದಿ ಕಲ್ಲಂಗಡಿ! ಭರ್ಜರಿ ಲಾಭ ಗಳಿಸಿದ ಮಲೆನಾಡ ಕೃಷಿಕ


ಚೇತನ್ ಶೆಟ್ಟಿ ತಂದೆಯವರು ಮಗನ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರು ಕೂಡ ಪಾರ್ಮ್​ಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಾರೆ. ಮಗ ತಮ್ಮೊಟ್ಟಿಗೆ ಇರುವುದು ಬಹಳ ಖುಷಿಯ ವಿಷಯ ಎನ್ನುತ್ತಾರೆ. ಇನ್ನೂ ಚೇತನ್ ಅವರು ನಗರದ ಜೀವನ ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ಉತ್ತಮ ಆರೋಗ್ಯ, ನಿದ್ರೆ, ಸರಿಯಾದ ಸಮಯಕ್ಕೆ ಊಟ , ಮೆಚ್ಚಿನ ದುಡಿಮೆ ಮನಸ್ಸಿಗೆ ನೆಮ್ಮದಿಕೊಟ್ಟಿದೆ. ನಮ್ಮ ನಿರ್ಧಾರಗಳು ನಮಗೆ ನೆಮ್ಮದಿ ತರಬೇಕು ಅದೇ ಮುಖ್ಯ ಎನ್ನುತ್ತಾರೆ ಚೇತನ್ ಶೆಟ್ಟಿ.


ಇದನ್ನೂ ಓದಿ: Real Estate ನಲ್ಲಿ ಹೂಡಿಕೆ ಮಾಡೋಕೆ ಇದೇ ರೈಟ್ ಟೈಮ್​, ಕಾರಣ ಇದು!

top videos


    ಯಾವುದೇ ಕ್ಷೇತ್ರವಾಗಿರಲಿ ನಂಬಿಕೆ, ಆತ್ಮವಿಶ್ವಾಸ, ಸರಿಯಾದ ಪ್ರಾಯೋಗಿಕ ಜ್ಞಾನ, ಮಾಹಿತಿ ಜೊತೆಗೆ ಶ್ರದ್ಧೆ , ಪ್ರೀತಿ ಇದ್ದರೆ ಅಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಚೇತನ್​ ಶೆಟ್ಟಿಯವರು ಅದ್ಭುತ ಉದಾಹರಣೆ.

    First published: