• Home
  • »
  • News
  • »
  • business
  • »
  • Pension: ಆನ್‌ಲೈನ್‌ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಹೀಗೆ ಮಾಡಿ!

Pension: ಆನ್‌ಲೈನ್‌ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಹೀಗೆ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಮಾಣಪತ್ರವು ಪಿಂಚಣಿದಾರರ ಅಸ್ತಿತ್ವದ ಪುರಾವೆಯಾಗಿರುವುದರಿಂದ ಇದನ್ನು ಪ್ರತಿವರ್ಷ ಚಾಚೂ ತಪ್ಪದೇ ಕೇಂದ್ರ ಪಿಂಚಣಿದಾರರು ಸಲ್ಲಿಸಬೇಕು, ಇದನ್ನು ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಸ್ಥಗಿತ ಕೂಡ ಆಗಬಹುದು.

  • Share this:

ಪಿಂಚಣಿ (Pension) , ಇಳಿವಯಸ್ಸಿನಲ್ಲಿ ಕೈಹಿಡಿಯುವ ಉತ್ತಮ ಸೇವಾನಿಧಿ. ಪ್ರತಿ ತಿಂಗಳು ಪಿಂಚಣಿ ಪಡೆಯಲು ಪಿಂಚಣಿದಾರರು (Pensioners) ನಾವು ಜೀವಂತವಾಗಿ ಇದ್ದೇವೆ ಎಂಬುವುದನ್ನು ವರ್ಷಕ್ಕೆ ಒಂದು ಬಾರಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು.ಹೌದು, ಕೇಂದ್ರ ಸರ್ಕಾರ (Central Government) ದಿಂದ ಪ್ರತಿ ತಿಂಗಳು ಪಿಂಚಣಿಯನ್ನು ಪಡೆಯುವವರು ತಮ್ಮ ಜೀವನ್ ಪ್ರಮಾಣ (Jeevan Praman) ಅಥವಾ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಪ್ರತಿ ವರ್ಷ ಪಿಂಚಣಿ ವಿತರಣಾ ಏಜೆನ್ಸಿಗೆ (PDA) ಸಲ್ಲಿಸಬೇಕು.ಪ್ರಮಾಣಪತ್ರವು ಪಿಂಚಣಿದಾರರ ಅಸ್ತಿತ್ವದ ಪುರಾವೆಯಾಗಿರುವುದರಿಂದ ಇದನ್ನು ಪ್ರತಿವರ್ಷ ಚಾಚೂ ತಪ್ಪದೇ ಕೇಂದ್ರ ಪಿಂಚಣಿದಾರರು ಸಲ್ಲಿಸಬೇಕು, ಇದನ್ನು ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಸ್ಥಗಿತ ಕೂಡ ಆಗಬಹುದು.


ಯಾವಾಗಿನಿಂದ ಸಲ್ಲಿಕೆ ಮಾಡಬಹುದು?


ಪ್ರತಿ ವರ್ಷ ಪಿಂಚಣಿದಾರರು ನವೆಂಬರ್ 1 ರಿಂದ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಆದಾಗ್ಯೂ, ಕೇಂದ್ರ ಸರ್ಕಾರವು 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಪಿಂಚಣಿದಾರರಿಗೆ ಹೆಚ್ಚುವರಿ ಸಮಯವನ್ನು ನೀಡಿದೆ. ಹೀಗಾಗಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಸಮಯವನ್ನು ಒದಗಿಸಿದ್ದು, ಅಕ್ಟೋಬರ್‌ 1 ರಿಂದಲೇ ಅವರು ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಕೆ ಮಾಡಬಹುದು.


ಜೀವನ ಪ್ರಮಾಣಪತ್ರ ಸಲ್ಲಿಕೆಯ ವಿಧಾನಗಳು


ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರವು ಅನೇಕ ಆಯ್ಕೆಗಳನ್ನು ಒದಗಿಸಿದೆ.


* ಬ್ಯಾಂಕ್‌, ಅಂಚೆ ಕಚೇರಿ ಮತ್ತು ಇತರೆ
ಪಿಂಚಣಿದಾರರು ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಜ್ಯ/UT ಸರ್ಕಾರಿ ಕಛೇರಿಗಳಂತಹ ಪಿಂಚಣಿ ವಿತರಣಾ ಏಜೆನ್ಸಿಗಳಿಗೆ ಖುದ್ದು ಭೇಟಿ ನೀಡುವ ಮೂಲಕ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಅಥವಾ ಪಿಂಚಣಿದಾರರು ತಾವಾಗಿಯೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದಾಗ ಡಿಜಿಟಲ್ ಆಗಿ ಸಲ್ಲಿಸಲು ಆಯ್ಕೆ ಮಾಡಬಹುದು.


ಅಥವಾ ಪಿಂಚಣಿದಾರರು ಪಿಂಚಣಿ ವಿತರಣಾ ಏಜೆನ್ಸಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅವರು ನಿಗದಿತ ಸ್ವರೂಪದಲ್ಲಿ ಯಾವುದೇ ಗೊತ್ತುಪಡಿಸಿದ ಅಧಿಕಾರಿಯಿಂದ ಸಹಿ ಮಾಡಿದ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.


* ಪೋರ್ಟಲ್ ಮೂಲಕ ಸಲ್ಲಿಕೆ


ಪಿಂಚಣಿದಾರರು ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಜೀವನ್ ಪ್ರಮಾಣ್ ಪೋರ್ಟಲ್ ಅನ್ನು ಬಳಸಬಹುದು. ಈ ವಿಧಾನದಲ್ಲಿ, ಪಿಂಚಣಿದಾರರು ಜೀವನ್ ಪ್ರಮಾಣ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಮತ್ತು ಯುಐಡಿಎಐ-ನಿರ್ದೇಶಿತ ಸಾಧನಗಳ ಮೂಲಕ ಸೆರೆಹಿಡಿಯಲಾದ ಬಯೋಮೆಟ್ರಿಲ್ ಡೇಟಾವನ್ನು ಸಲ್ಲಿಕೆ ಮಾಡಬೇಕು.


ಜೀವನ್ ಪ್ರಮಾಣ ಡಿಜಿಟಲ್ ಪ್ರಮಾಣಪತ್ರಕ್ಕಾಗಿ ವ್ಯಕ್ತಿಯ ಬಯೋಮೆಟ್ರಿಕ್‌ಗಳನ್ನು ದಾಖಲಿಸಲು ಅನುಮತಿಸಲಾದ ಎಲ್ಲಾ ಸಾಧನಗಳ ಪಟ್ಟಿಯನ್ನು UIDAI ನಿರ್ವಹಿಸುತ್ತದೆ.


ಇದನ್ನೂ ಓದಿ: ಈ ಎರಡು ಬ್ಯಾಂಕ್​ನಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಶಾಕ್


* ಆ್ಯಪ್ ಆಯ್ಕೆ ಮಾಡಬಹುದು


ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 2020 ರಲ್ಲಿ ಪೋಸ್ಟ್‌ಮ್ಯಾನ್ ಮೂಲಕ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ಮನೆ ಬಾಗಿಲಿಗೆ ಸೇವೆಯನ್ನು ಪ್ರಾರಂಭಿಸಿತು. ಪಿಂಚಣಿದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ Postinfo ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.


* ಮನೆ ಮನೆ ಸೇವೆ ಮತ್ತು ಟೋಲ್‌ ಫ್ರೀ ನಂಬರ್


ಅಲೈಯನ್ಸ್ ಮೂಲಕ ಜೀವನ ಪ್ರಮಾಣಪತ್ರಗಳ ಉತ್ಪಾದನೆ ಮತ್ತು ಸಂಗ್ರಹಣೆಗಾಗಿ ಸರ್ಕಾರವು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಿದೆ. ಇದು 100 ಪ್ರಮುಖ ನಗರಗಳಲ್ಲಿ ಸೇವೆಗಳನ್ನು ಒದಗಿಸುವ 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಒಳಗೊಂಡಿದೆ.


ಪಿಂಚಣಿದಾರರು ಡೋರ್‌ಸ್ಟೆಪ್ ಬ್ಯಾಂಕಿಂಗ್ (DSB) ಮೊಬೈಲ್ ಅಪ್ಲಿಕೇಶನ್, DSB ಯ ಅಧಿಕೃತ ವೆಬ್‌ಸೈಟ್ ಅಥವಾ ಟೋಲ್‌ಫ್ರೀ ಸಂಖ್ಯೆ 18001213721 ಹಾಗೂ 18001037188ಕ್ಕೆ ಕರೆ ಮಾಡಿಯೂ ಸೇವೆಗೆ ಬುಕ್ಕಿಂಗ್ ಮಾಡಬಹುದು.


* ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿ


ಯುಐಡಿಎಐ ಆಧಾರ್ ಸಾಫ್ಟ್‌ವೇರ್ ಆಧಾರಿತ ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿಯನ್ನು ಬಳಸಿಕೊಂಡು ಕೂಡಾ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು. ಇದು ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಇನ್ನೊಂದು ವಿಧಾನವಾಗಿದೆ.


ಇದನ್ನೂ ಓದಿ: ಪಿಎಫ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ, ಇನ್ಮುಂದೆ ಹಣ ವಿತ್​ಡ್ರಾ ಮತ್ತಷ್ಟು ಸುಲಭ!


ಇದು ಪಿಂಚಣಿದಾರರು ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲೇ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್ ಮಾಡಲು ಅನುವುಮಾಡುತ್ತದೆ. ಪಿಂಚಣಿದಾರರ ಲೈವ್ ಫೋಟೋವನ್ನು ಸ್ಮಾರ್ಟ್‌ಫೋನ್ ಮೂಲಕ ಸೆರೆಹಿಡಿಯಬೇಕು ಮತ್ತು ನಂತರ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ರಚಿಸಲು ಜೀವನ್ ಪ್ರಮಾಣ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬೇಕು.

Published by:ವಾಸುದೇವ್ ಎಂ
First published: