Apple: ಸ್ಟೀವ್‌ ಜಾಬ್ಸ್‌ಗಿದೆ ಭಾರತದ ನಂಟು, ಆ್ಯಪಲ್ ಸ್ಥಾಪನೆಗೂ ಮುನ್ನ ಭೇಟಿ ನೀಡಿದ್ದ ಖ್ಯಾತ ಉದ್ಯಮಿ

ಸ್ಟೀವ್‌ ಜಾಬ್ಸ್‌

ಸ್ಟೀವ್‌ ಜಾಬ್ಸ್‌

ಸ್ಟೀವ್ ಜಾಬ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡುವ ಮೊದಲು ಜ್ಞಾನದ ಹುಡುಕಾಟದಲ್ಲಿ ತಮ್ಮ 18 ರ ಹರೆಯದಲ್ಲೇ ಭಾರತಕ್ಕೆ ಆಗಮಿಸಿದ್ದರು. ಇಲ್ಲಿನ ಸಂಸ್ಕೃತಿ ಹಾಗೂ ಭಾರತೀಯರ ಸರಳತೆ ಅವರ ಮನವನ್ನು ಬಹುವಾಗಿ ಆಕರ್ಷಿಸಿದೆ ಎಮದು ಹೇಳಿದ್ದಾರೆ.

  • Share this:

ಆ್ಯಪಲ್ ಕಂಪನಿ (Apple Company) ಸಂಪೂರ್ಣವಾಗಿ ಭಾರತಕ್ಕೆ ಕಾಲಿರಿಸಿದ್ದು, ದೇಶದಲ್ಲಿ ಐಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಿದ ನಂತರ ಸಂಸ್ಥೆ ಮುಂಬೈನ BKC ಯಲ್ಲಿನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ (Jio World Drive) ತನ್ನ ಮೊದಲ ರಿಟೇಲ್ ಸ್ಟೋರ್ ಅನ್ನು ತೆರೆದಿದೆ. ಇನ್ನು ಎರಡನೆಯ ಮಳಿಗೆಯನ್ನು ದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿ ಕೆಲವೇ ದಿನಗಳಲ್ಲಿ ತೆರೆಯಲಿದೆ ಎಂಬ ಮಾಹಿತಿ ನೀಡಿದೆ.


ಸ್ಟೀವ್ ಜಾಬ್ಸ್ ಹಾಗೂ ಭಾರತದ ನಂಟು


ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರಿಗೂ ಭಾರತಕ್ಕೂ ಅವಿನಾಭಾವ ನಂಟಿದೆ ಎಂಬುದು ಜಾಬ್ಸ್ ಬಗ್ಗೆ ತಿಳಿದವರಿಗೆ ಗೊತ್ತಿದೆ. ಹಾಗಾಗಿ ಆ್ಯಪಲ್ ಭಾರತದಲ್ಲಿ ತನ್ನ ಅಸ್ತಿತ್ವ ಹೊಂದಿದೆ ಎಂಬ ಮಾತನ್ನು ಅಕ್ಷರಶಃ ಒಪ್ಪಿಕೊಳ್ಳುತ್ತಾರೆ.


ಅತ್ಯಂತ ವಿಶಿಷ್ಟವಾದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ನಿರ್ಮಿಸಲು ಸ್ಟೀವ್ ಮಾಡಿದ ಸಂಕಲ್ಪವು ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಕಾರಣವಾಯಿತು, ಅನೇಕರಿಗೆ ಉದ್ಯೋಗಗಳನ್ನು ದೊರಕಿಸಿಕೊಟ್ಟಿತು.


ಇದನ್ನೂ ಓದಿ: Home Loan ಇಎಂಐ ಹೇಗೆ ಕಡಿಮೆ ಮಾಡೋದು? ಇಲ್ಲಿವೆ ಸಿಂಪಲ್ ಸಲಹೆ

 ಭಾರತದ ನೆಲ ಅವರನ್ನು ಆಕರ್ಷಿಸಿತ್ತು

ಸ್ಟೀವ್ ಜಾಬ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡುವ ಮೊದಲು ಜ್ಞಾನದ ಹುಡುಕಾಟದಲ್ಲಿ ತಮ್ಮ 18 ರ ಹರೆಯದಲ್ಲೇ ಭಾರತಕ್ಕೆ ಆಗಮಿಸಿದ್ದರು. ಇಲ್ಲಿನ ಸಂಸ್ಕೃತಿ ಹಾಗೂ ಭಾರತೀಯರ ಸರಳತೆ ಅವರ ಮನವನ್ನು ಬಹುವಾಗಿ ಆಕರ್ಷಿಸಿತು ಅಂತೆಯೇ ಆಧ್ಯಾತ್ಮಿಕ ವಾತಾವರಣದ ಸ್ಟೀವ್ ಅವರನ್ನು ಭಾರತದ ನೆಲದಲ್ಲಿ ಕಾಲಿಡುವಂತೆ ಮಾಡಿತು.


ಜಾಬ್ಸ್, ನೈನಿತಾಲ್ ಬಳಿಯ ಕೈಂಚಿಯಲ್ಲಿರುವ ನೀಮ್ ಕರೋಲಿ ಬಾಬಾ ಅವರ ಆಶ್ರಮವನ್ನು ತಲುಪಿದಾಗ, ಬಾಬಾ ಅದಾಗಲೇ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಸ್ಟೀವ್ ಭಾರತವನ್ನು ಕಲ್ಪಿಸಿಕೊಂಡಂತೆ ದೇಶವಿರಲಿಲ್ಲ ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಭಾರತ ತಾವು ಕಲ್ಪಸಿಕೊಂಡಿದ್ದಕ್ಕಿಂತ ಬಡತನ ಸ್ಥಿತಿಯನ್ನೆದುರಿಸುತ್ತಿತ್ತು ಎಂದು ಜಾಬ್ಸ್ ಅವರ ಜೀವನಚರಿತ್ರೆ ಬರೆದಿದ್ದ ಲೇಖಕರಾದ ಮೈಕೆಲ್ ಮೊರಿಟ್ಜ್ ತಿಳಿಸುತ್ತಾರೆ.


ಫೇಸ್‌ಬುಕ್ ಸ್ಥಾಪಕ ಜುಕರ್‌ಬರ್ಗ್ ಕೂಡ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು


2015 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‌ನಲ್ಲಿರುವ ಫೇಸ್‌ಬುಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾಗ ಜುಕರ್‌ಬರ್ಗ್ ಕೂಡ ನೀಮ್ ಕರೋಲಿ ಬಾಬಾರ ಆಶ್ರಮಕ್ಕೆ ಭೇಟಿ ನೀಡುವಂತೆ ಜಾಬ್ಸ್ ತಮಗೆ ಸೂಚಿಸಿದ್ದರು ಎಂದು ತಿಳಿಸಿದ್ದನ್ನು ಸ್ಮರಿಸಬಹುದು.


ಜಾಬ್ಸ್ ತಮ್ಮ ಸಂಸ್ಥೆ ಹಾಗೂ ಭವಿಷ್ಯದ ದೃಷ್ಟಿ ಹೇಗಿರಬೇಕೆಂಬ ಕಂಪನಿಯಲ್ಲಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಂತೆಯೇ ಜಾಬ್ಸ್‌ಗೆ ವಿಕಸನದ ದಾರಿ ತೋರಿದ್ದ ಈ ಆಶ್ರಮಕ್ಕೆ ತಾನೂ ಭೇಟಿ ನೀಡಿದ್ದಾಗಿ ಮೋದಿಯವರಿಗೆ ತಿಳಿಸಿದ್ದರು.


ಸ್ಟೀವ್‌ ಜಾಬ್ಸ್‌


ಜುಕರ್‌ಬರ್ಗ್ ಅವರು 2008 ರಲ್ಲಿ ಕೈಂಚಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ತಿಂಗಳಾನುಗಟ್ಟಲೆ ಪ್ರವಾಸ ಮಾಡಿದ ಜುಕರ್‌ಬರ್ಗ್, ವಿಧ ವಿಧವಾದ ಜನರನ್ನು ಭೇಟಿಯಾದರು ಹಾಗೂ ಜನರ ಸಂಪರ್ಕ ಹೇಗಿದೆ ಎಂಬುದನ್ನು ಅರಿತುಕೊಂಡರು. ಫೇಸ್‌ಬುಕ್‌ ನಿರ್ಮಾಣಗೊಂಡಿರುವ ಹಾಗೂ ಅಭಿವೃದ್ಧಿಗೊಂಡಿರುವ ಈ ಹತ್ತು ವರ್ಷಗಳಲ್ಲಿ ಈ ಅಂಶಗಳನ್ನು ನಾನು ಎಂದಿಗೂ ನೆನಪಿಸಿಕೊಳ್ಳುತ್ತೇನೆ ಎಂದು ಜುಕರ್‌ಬರ್ಗ್ ಮೋದಿಯವರಿಗೆ ತಿಳಿಸಿದ್ದಾರೆ.


ಅನೇಕ ಮಹಾನ್ ಸಾಧಕರನ್ನು ಆಕರ್ಷಿಸಿದ್ದ ಆಶ್ರಮ


ಜೂಲಿಯಾ ರಾಬರ್ಟ್ಸ್, ಗೂಗಲ್‌ನ ಲ್ಯಾರಿ ಪೇಜ್ ಮತ್ತು ಇಬೇಯ ಜೆಫ್ ಸ್ಕೋಲ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪಾಶ್ಚಿಮಾತ್ಯ ಪ್ರಸಿದ್ಧ ವ್ಯಕ್ತಿಗಳನ್ನು ಆಕರ್ಷಿಸಿದ ನೀಮ್ ಕರೋಲಿ ಬಾಬಾ ಅವರು ಯಾವುದೇ ತತ್ವಶಾಸ್ತ್ರವನ್ನು ಪ್ರತಿಪಾದಿಸದ ಅತೀಂದ್ರಿಯರಾಗಿದ್ದರು.


ಇತರರಿಗೆ ಸೇವೆ ಸಲ್ಲಿಸುವುದು ಅವರ ಏಕೈಕ ಸಂದೇಶವಾಗಿತ್ತು. ರಾಮ್ ದಾಸ್ ಎಂದು ಕರೆಯಲ್ಪಡುವ ರಿಚರ್ಡ್ ಆಲ್ಪರ್ಟ್ ಅವರ ಅತ್ಯಂತ ಪ್ರಸಿದ್ಧ ಭಕ್ತರಲ್ಲಿ ಒಬ್ಬರಿಂದ ಕರೋಲಿ ಬಾಬಾ ಪಶ್ಚಿಮದಲ್ಲಿ ಜನಪ್ರಿಯರಾದರು, ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ತಿಮೋತಿ ಲಿಯರಿಯೊಂದಿಗೆ ಸೈಕೆಡೆಲಿಕ್ ಔಷಧಿಗಳ ಚಿಕಿತ್ಸಕ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿದರು.


ಸ್ಟೀವ್ ಜಾಬ್ಸ್ ಮತ್ತು ಪರಮಹಂಸ ಯೋಗಾನಂದ


ಜಾಬ್ಸ್ ತಮ್ಮ ಜೀವನದಲ್ಲಿ ಮರೆಯದ ಘಟನೆ ಎಂದರೆ ಪರಮಹಂಸ ಯೋಗಾನಂದರ ಯೋಗಿಯ ಆತ್ಮಚರಿತ್ರೆಯನ್ನು ಓದಿದ್ದರು. ಈ ಪುಸ್ತಕದ ವಿಶೇಷತೆ ಎಂದರೆ 1946 ರಲ್ಲಿ ಪ್ರಕಟವಾದಾಗಿನಿಂದ ಆಧ್ಯಾತ್ಮಿಕ ಬೆಸ್ಟ್ ಸೆಲ್ಲರ್ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೀಮ್ ಕರೋಲಿ ಬಾಬಾ ವಾಸಿಸುತ್ತಿದ್ದರು ಎಂಬ ಹಳ್ಳಿಗೆ ಭೇಟಿ ನೀಡಿದ್ದ ಸ್ಟೀವ್ ಜಾಬ್ಸ್ ನೈನಿತಾಲ್ ಬಳಿಯ ಹಳ್ಳಿಯನ್ನು ತಲುಪಿದ ಸಂದರ್ಭದಲ್ಲಿ ಬಾಬಾ ದೈವಾಧೀನರಾಗಿದ್ದರು.


ಆ ಸಮಯದಲ್ಲಿಯೇ ಯೋಗಿಯ ಆತ್ಮಚರಿತ್ರೆ ಪುಸ್ತಕ ಅವರಿಗೆ ದೊರಕಿತು. ಈ ಪುಸ್ತಕವು ಜಾಬ್ಸ್ ಅವರನ್ನು ಎಷ್ಟು ಸೆಳೆದಿತ್ತು ಎಂದರೆ ಅವರು ಸಾಯುವವರೆಗೆ ಅದರಲ್ಲಿದ್ದ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಹಾಗೂ ಜೀವನದುದ್ದಕ್ಕೂ ನೆನಪಿಸಿಕೊಂಡಿದ್ದರು.


2011 ರಲ್ಲಿ ಅವರು ಸಾಯುವ ಕೆಲವು ತಿಂಗಳ ಮೊದಲು, ಅವರ ಐಪ್ಯಾಡ್‌ನಲ್ಲಿ ಅವರು ಹೊಂದಿದ್ದ ಏಕೈಕ ಪುಸ್ತಕ ಯೋಗಿಯ ಆತ್ಮಚರಿತ್ರೆಯಾಗಿತ್ತು ಎಂದು ಬರಹಗಾರ ಮೈಕೆಲ್ ತಿಳಿಸಿದ್ದಾರೆ. ಜಾಬ್ಸ್‌ನ ಜೀವನ ಮತ್ತು ವೃತ್ತಿಜೀವನದ ಬಗ್ಗೆ ತಿಳಿದಿರುವ ಹೆಚ್ಚಿನವರು ಇದು ಜಾಬ್ಸ್ ಅವರ ಜೀವನದಲ್ಲಿ ಇತರ ಯಾವುದೇ ತತ್ವಶಾಸ್ತ್ರಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದ ಪುಸ್ತಕ ಎಂದೇ ತಿಳಿಸುತ್ತಾರೆ.


top videos    ಜಾಬ್ಸ್ ಭಾರತಕ್ಕೆ ಪ್ರವಾಸಗೈದ ಕೆಲವು ವರ್ಷಗಳ ನಂತರ ಅವರು ಆ್ಯಪಲ್ ಎಂಬ ಮಹೋನ್ನತ ಸಂಸ್ಥೆಯ ಹುಟ್ಟಿಗೆ ಕಾರಣರಾದರು ಎಂದು ಜಾಬ್ಸ್ ನಿಕಟ ಸ್ನೇಹಿತ ಬೆನಿಯೋಫ್ ತಿಳಿಸುತ್ತಾರೆ. ಇಂದು ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಸ್ಟೋರ್ ಅನ್ನು ತೆರೆದ ಇದೇ ಸಮಯದಲ್ಲಿ ತನ್ನ ಆಧ್ಯಾತ್ಮಿಕ ತಾಣಕ್ಕೆ ಪುನಃ ಮರಳಿದೆ ಎಂದು ಬೆನಿಯೋಫ್ ನೆನಪಿಸಿಕೊಂಡಿದ್ದಾರೆ. ಹೀಗೆ ಜಾಬ್ಸ್ ಹಾಗೂ ಭಾರತದ ನಡುವಿನ ಸಂಪರ್ಕ ಪುನರ್ ಜೋಡಣೆಯಾಗಿದೆ.

    First published: