Ashneer Grover: ಈ ಸೆಲೆಬ್ರಿಟಿ ಮನೆಯಲ್ಲಿದೆ ಬೃಹತ್ ಬಾರ್! 100 ಕೋಟಿಯ ಡೈನಿಂಗ್ ಟೇಬಲ್

ಅಶ್ನೀರ್ ಗ್ರೋವರ್

ಅಶ್ನೀರ್ ಗ್ರೋವರ್

ಅಶ್ನೀರ್ ಅವರ ಮನೆಯೊಳಗೆ ಲಿವಿಂಗ್ ಏರಿಯಾ ಪಕ್ಕದಲ್ಲಿ ಇಂಟರ್ನಲ್ ಬಾರ್ ಇದ್ದು, 100-150 ಬಾಟಲಿಗಳಷ್ಟು ಆಲ್ಕೋಹಾಲ್ ಇರುತ್ತದೆ. ಬಿಳಿ ಬಣ್ಣದ ಡೈನಿಂಗ್ ಟೇಬಲ್ ಬರೋಬ್ಬರಿ 10 ಕೋಟಿ ರೂಪಾಯಿ ಬೆಲೆ ಬಾಳುವದ್ದಾಗಿದೆ.

  • Trending Desk
  • 2-MIN READ
  • Last Updated :
  • Bangalore, India
  • Share this:

ಈ ಸೆಲೆಬ್ರಿಟಿಗಳ ಐಷಾರಾಮಿ ಮನೆಗಳ (Luxury Home) ಬಗ್ಗೆ ಏನ್ ಹೊಸದಾಗಿ ಹೇಳೋದಿದೆ ಹೇಳಿ? ಸೆಲೆಬ್ರಿಟಿಗಳ (Celebrity) ಮನೆಯಲ್ಲಿ ಐಷಾರಾಮಿ ಬೆಲೆ ಬಾಳುವ ವಸ್ತುಗಳು ಇರುತ್ತವೆ. ಅಭಿಮಾನಿಗಳಿಗಂತೂ (Fans) ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಐಷಾರಾಮಿ ಮನೆಯ ಫೋಟೋಗಳು ಮತ್ತು ವೀಡಿಯೋಗಳನ್ನು  (Videos) ನೋಡುವುದೇ ಒಂದು ರೀತಿಯ ಹಬ್ಬ ಅಂತ ಹೇಳಬಹುದು. ಈಗ ಇಲ್ಲಿ ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ದ ಮಾಜಿ ಜಡ್ಜ್ ಮತ್ತು ಭಾರತ್ ಪೇ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರ ದೆಹಲಿಯಲ್ಲಿರುವ ಐಷಾರಾಮಿ ಮನೆಯನ್ನು ಬಹುತೇಕರು ನೋಡಿರಲಿಕ್ಕಿಲ್ಲ.


ಅವರೇ ಖುದ್ದು ಅವರ ಹೆಂಡತಿ ಮಾಧುರಿ ಜೈನ್ ಗ್ರೋವರ್ ಅವರೊಂದಿಗೆ ಸೇರಿಕೊಂಡು ಅಭಿಮಾನಿಗಳಿಗೆ ತಮ್ಮ ಐಷಾರಾಮಿ ಮನೆಯನ್ನು ತೋರಿಸಿದ್ದಾರೆ.




ಅಶ್ನೀರ್ ಗ್ರೋವರ್ ಅವರ ಐಷಾರಾಮಿ ಮನೆ ಹೇಗಿದೆ ಗೊತ್ತೇ?


ಇತ್ತೀಚಿನ ಸಂದರ್ಶನವೊಂದರಲ್ಲಿ, ಅಶ್ನೀರ್ ಅವರು ಮತ್ತು ಅವರ ಪತ್ನಿ ತಮ್ಮ ಅಪಾರ್ಟ್ಮೆಂಟ್ ಮನೆಯ ಒಳಾಂಗಣವನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಬ್ರಟ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಅಶ್ನೀರ್ ಆತಿಥೇಯರನ್ನು ತಮ್ಮ ಅಪಾರ್ಟ್ಮೆಂಟ್ ಒಳಗೆ ಪರ್ಸನಲ್ ಎಲಿವೇಟರ್ ಹೊಂದಿರುವ ತಮ್ಮ ಮನೆಯನ್ನು ತೋರಿಸಿದರು.


ಲಕ್ಷುರಿ ಮಂಚಗಳು ಮತ್ತು ಚಿನ್ನ ಲೇಪಿತ ಕೋಸ್ಟರ್ ಗಳನ್ನು ಹೊಂದಿರುವ ಚಹಾ ಟೇಬಲ್ ಅನ್ನು ತೋರಿಸಿದರು. ಸೀಸನ್ ಒಂದರ ನಂತರ ಶಾರ್ಕ್ ಟ್ಯಾಂಕ್ ಇಂಡಿಯಾ ತಂಡವು ಉಡುಗೊರೆಯಾಗಿ ನೀಡಿದ ತನ್ನ ಪ್ರತಿಮೆಯನ್ನು ಉದ್ಯಮಿ ಬಹಿರಂಗಪಡಿಸಿದರು.


ಅಶ್ನೀರ್ ಮನೆಯಲ್ಲಿ ಏನೆಲ್ಲಾ ಇದೆ ಗೊತ್ತೇ?


ಅಶ್ನೀರ್ ಲಿವಿಂಗ್ ಏರಿಯಾದ ಪಕ್ಕದಲ್ಲಿ ಇಂಟರ್ನಲ್ ಬಾರ್ ಹೊಂದಿದ್ದು, 100-150 ಬಾಟಲಿಗಳಷ್ಟು ಆಲ್ಕೋಹಾಲ್ ಇದೆ ಎಂದು ಅವರು ಹೇಳಿದರು. ಬಾರ್ ಹೆಚ್ಚಾಗಿ ತನ್ನ ತಂದೆ ಬಳಸುತ್ತಾರೆ ಎಂದಿದ್ದಾರೆ.




ನಂತರ ಅವರು ತಮ್ಮ ದಂತ ಬಣ್ಣದ ಡೈನಿಂಗ್ ಟೇಬಲ್ ಬಳಿಗೆ ತೆರಳಿದರು. ಇದಕ್ಕೆ 10 ಕೋಟಿ ರೂಪಾಯಿ ಎಂದು ಅವರು ತಮಾಷೆಯಾಗಿ ಹೇಳಿದರು. ಈ ಟೇಬಲ್ ಅತ್ಯಂತ ದುಬಾರಿಯಾದ ಟೇಬಲ್ ಆಗಿದ್ದು, ಇದು 10 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Kartik Aaryan: ಕಾರ್ತಿಕ್ ಆರ್ಯನ್ ಕಿಕೌಟ್ ಮಾಡಿದ್ದ ಕರಣ್! ಬಾಲಿವುಡ್ ನಿರ್ಮಾಪಕನಿಗೆ ನಟ ಕೊಟ್ಟ ಪ್ರತ್ಯುತ್ತರವೇನು?


ಈ ದೊಡ್ಡ ಟೇಬಲ್ ಅನ್ನು ಮನೆಯ ಒಳಗೆ ತರಲು ಎಷ್ಟು ಹರಸಾಹಸ ಪಡಬೇಕಾಯಿತು ಎನ್ನುವುದನ್ನೂ ಅವರು ಬಹಿರಂಗಪಡಿಸಿದರು.


ಇಷ್ಟೇ ಅಲ್ಲದೆ ಅವರ ಮನೆ ಸುಮಾರು 50 ಮೀಟರ್ ಅಳತೆಯ ದೊಡ್ಡ ಕಾರಿಡಾರ್ ಅನ್ನು ಹೊಂದಿದೆ. ಈ ಹಜಾರವು ಮನೆಯ ಉಳಿದ ಭಾಗಕ್ಕೆ ಅವರ ಮಕ್ಕಳಾದ ಅವಿ ಮತ್ತು ಮನ್ನತ್ ಅವರ ಕೋಣೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.




ಅವರ ಮನೆಯ ರೆಫ್ರಿಜರೇಟರ್ ಅನ್ನು ಹಲವಾರು ಕಾಂತಗಳಿಂದ ಅಲಂಕರಿಸಲಾಗಿತ್ತು, ದಂಪತಿಗಳು ವಿವಿಧ ದೇಶಗಳಿಗೆ ಭೇಟಿ ನೀಡಿದಾಗ ಇವುಗಳನ್ನು ಸಂಗ್ರಹಿಸಲಾಗಿತ್ತು ಅಂತ ಹೇಳಿದ್ದಾರೆ.


ಅಶ್ನೀರ್ - ಮಾಧುರಿ ಅವರ ಮಲಗುವ ಕೋಣೆ ಫ್ರೆಂಚ್ ಕಿಟಕಿಯನ್ನು ಸಹ ಹೊಂದಿದೆ.


ಬೂದು ಬಣ್ಣದಲ್ಲಿ ನಿರ್ಮಿಸಲಾದ ಅಶ್ನೀರ್ ಮತ್ತು ಮಾಧುರಿ ಅವರ ಮಲಗುವ ಕೋಣೆಯು ಸಾಕಷ್ಟು ಬೆಳಕು ಬರಲು ಸಾಧ್ಯವಿರುವ ದೊಡ್ಡ ಫ್ರೆಂಚ್ ಕಿಟಕಿಯನ್ನು ಸಹ ಹೊಂದಿದೆ.


ಅವರ ಕಿಂಗ್ ಸೈಜ್ ಹಾಸಿಗೆಯ ಜೊತೆಗೆ, 'ಆರೋಗ್ಯಕರ ತಿಂಡಿ' ಗಳಿಂದ ತುಂಬಿದ ಡ್ರಾ ಗಳು ಇವೆ. ಅವುಗಳಲ್ಲಿ ಮೊದಲು ಚಿಪ್ಸ್ ತುಂಬಲಾಗಿತ್ತು ಎಂದು ಮಾಧುರಿ ಹೇಳಿದರು.


ಇದಲ್ಲದೆ, ಮಾಧುರಿ ಅವರ ನೆಚ್ಚಿನ ಮೇಬ್ಯಾಕ್ ಮತ್ತು ಅಶ್ನೀರ್ ಅವರ ಜನಪ್ರಿಯ ಹಸಿರು ಪೋರ್ಷೆ ಸೇರಿದಂತೆ ತಮ್ಮ ಕಾರುಗಳ ಸಂಗ್ರಹದೊಂದಿಗೆ ಅಶ್ನೀರ್ ತಮ್ಮ ವೈಯಕ್ತಿಕ ಗ್ಯಾರೇಜ್ ನ ಅಪರೂಪದ ನೋಟವನ್ನು ವೀಕ್ಷಕರಿಗೆ ತೋರಿಸಿದ್ದಾರೆ.

Published by:Divya D
First published: