• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • GST ಜಾರಿಯಿಂದ ಯಾವುದೇ ಲಾಭ ಇಲ್ವಂತೆ! ಇದ್ರ ಬಗ್ಗೆ ಏನ್​ ಹೇಳುತ್ತೆ ರಿಪೋರ್ಟ್? ಪಕ್ಕಾ ಮಾಹಿತಿ ಇಲ್ಲಿದೆ

GST ಜಾರಿಯಿಂದ ಯಾವುದೇ ಲಾಭ ಇಲ್ವಂತೆ! ಇದ್ರ ಬಗ್ಗೆ ಏನ್​ ಹೇಳುತ್ತೆ ರಿಪೋರ್ಟ್? ಪಕ್ಕಾ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯು, ರಾಜ್ಯಗಳ ತೆರಿಗೆ ಸಂಗ್ರಹ (Tax Collection) ದಲ್ಲಿ ಹೆಚ್ಚಳಕ್ಕೆ ಕಾರಣವಾಗಿಲ್ಲ. ಅವುಗಳಿಗೆ ಯಾವುದೇ ಲಾಭವೂ ಸಿಕ್ಕಿಲ್ಲ ಎಂದು ರೇಟಿಂಗ್‌ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್‌ (Domestic ratings agency India) ಹೇಳಿದೆ.

ಮುಂದೆ ಓದಿ ...
  • Share this:

ಜಿಎಸ್​ಟಿ (GST) ... ಜಿಎಸ್​ಟಿ.. ಜಿಎಸ್​ಟಿ ಈ ಪದ ಕೇಳಿದ್ರೆ ಸಾಕು ದೇಶದ ಪ್ರತಿಯೊಬ್ಬರಿಗೂ ಟ್ಯಾಕ್ಸ್ (Tax)​ ಅಂತ ಹೇಳಿಬಿಡುತ್ತಾರೆ. ದೇಶದಲ್ಲಿ ಇತರೆ ಟ್ಯಾಕ್ಸ್​ಗಳನ್ನು ತೆಗೆದು ಸರಕು ಮತ್ತು ತೆರಿಗೆ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಜಿಎಸ್​ಟಿ ಜಾರಿಯಾಗುತ್ತಿದ್ದಂತೆ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಈ ನಿಯಮಕ್ಕೆ ಒಪ್ಪಿಗೆ ಸೂಚಿಸಿದ್ದರು. ಜಿಎಸ್​ಟಿ ಜಾರಿಯಾಗಿ 5 ವರ್ಷಗಳೇ ಮುಗಿದಿದೆ. ಜಿಎಸ್​​ಟಿ ಜಾರಿಯಾದ ಬಳಿಕೆ ಕೆಲ ದಿನಗಳ  ಕಾಲ ಎಲ್ಲರಿಗೂ ಗೊಂದಲ ಉಂಟಾಗಿತ್ತು, ಈ ಜಿಎಸ್​ಟಿ ಬಗ್ಗೆ ತಿಳಿದುಕೊಳ್ಳಲು ಕೆಲ ತಿಂಗಳುಗಳ ಕಾಲ ಸಮಯ ಬೇಕಾಯಿತು. ಇದೀಗ ಹೊಸ ವಿಚಾರ ಏನಪ್ಪಾ ಅಂದರೆ, ಜಿಎಸ್​ಟಿ ಬಗ್ಗೆ ಹೊಸ ಚರ್ಚೆ ಶುರವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯು, ರಾಜ್ಯಗಳ ತೆರಿಗೆ ಸಂಗ್ರಹ (Tax Collection) ದಲ್ಲಿ ಹೆಚ್ಚಳಕ್ಕೆ ಕಾರಣವಾಗಿಲ್ಲ. ಅವುಗಳಿಗೆ ಯಾವುದೇ ಲಾಭವೂ ಸಿಕ್ಕಿಲ್ಲ ಎಂದು ರೇಟಿಂಗ್‌ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್‌ (Domestic ratings agency India) ಹೇಳಿದೆ.


ಜಿಎಸ್​ಟಿಯಿಂದ ಯಾವುದೇ ಲಾಭ ಇಲ್ಲ: ವರದಿ!


ಜಿಎಸ್‌ಟಿ ಜಾರಿಯಾದ ಬಳಿಕದ ಕಳೆದ 5 ವರ್ಷಗಳಲ್ಲಿ, ಈ ವ್ಯವಸ್ಥೆ ಜಾರಿಯ ಕಾರಣಕ್ಕಾಗಿ ತೆರಿಗೆ ಸಂಗ್ರಹ ಹೆಚ್ಚಳವಾಗಿರುವ ಯಾವುದೇ ಸುಳಿವುಗಳೂ ಸಿಕ್ಕಿಲ್ಲ ಎಂದು ಸಂಸ್ಥೆಯ ವರದಿ ಹೇಳಿದೆ. ಈ ವಿಚಾರ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸುಖಾಸುಮ್ಮನೇ ದೇಶದಲ್ಲಿ ಜಿಎಸ್​ಟಿ ಜಾರಿ ಮಾಡಿದರಾ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲ ಸಪರೇಟ್​ ಟ್ಯಾಕ್ಸ್​ ಕಟ್ಟುವ ಬದಲು ಒಂದೇ ಟ್ಯಾಕ್ಸ್​ ಕಟ್ಟುವುದೇ ಜಿಎಸ್​ಟಿ ಇದರಿಂದ ನಮಗೆ ಬಹಳ ಸಹಾಯ ಆಗಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆದರೆ, ಈ ವರಿದ ನಿಜಕ್ಕೂ ಆತಂಕ ಮೂಡಿಸಿರುವುದು ಸತ್ಯ.


2017ರಲ್ಲಿ ಜಾರಿಯಾಗಿದ್ದ ಜಿಎಸ್​​​ಟಿ!


ಕೇಂದ್ರ ಸರ್ಕಾರವು 2017ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತಂದಾಗ, ರಾಜ್ಯಗಳ ತೆರಿಗೆ ಕೊರತೆಯನ್ನು ನೀಗಿಸಲು ಜಿಎಸ್‌ಟಿಯನ್ನು ಪರಿಹಾರವಾಗಿ ನೀಡುವುದಾಗಿ ರಾಜ್ಯ ಸರ್ಕಾರಗಳೊಂದಿಗೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಈ ವರ್ಷ ಜೂನ್‌ನಿಂದ ಕೇಂದ್ರವು ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹದ ಕೊರತೆ ನೀಗಿಸಿಕೊಳ್ಳಲು ನೀಡುವ ಪರಿಹಾರವನ್ನು ನಿಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ ಮಂಡನೆಯ ವೇಳೆ ಹಲವಾರು ರಾಜ್ಯಗಳು ಈ ಪರಿಹಾರ ನೀಡುವುದನ್ನು ಜೂ. 2022ರ ನಂತರವೂ ಮುಂದುವರೆಸಬೇಕು ಎಂದು ಕೇಳಿಕೊಂಡಿದ್ದರು.


ಇದನ್ನೂ ಓದಿ: ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ತಜ್ಞರು ಹೇಳಿದ ಈ ವಿಷಯಗಳನ್ನು ನೆನಪಿನಲ್ಲಿಡಿ


ಜಿಎಸ್​​ಟಿಯಿಂದ ಯಾವುದೇ ಪ್ರಯೋಜನವಾಗಿಲ್ವಾ?


ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಾಜ್ಯಗಳು ತಮ್ಮ ತೆರಿಗೆ ಆದಾಯವನ್ನು ಹೆಚ್ಚಿಸುವ ಪ್ರಮುಖ ಉದ್ದೇಶವನ್ನು ಸಾಧಿಸಲು ಸಹಾಯ ಮಾಡಿಲ್ಲ ಎಂದು ದೇಶೀಯ ರೇಟಿಂಗ್ ಏಜೆನ್ಸಿ ಇಂಡಿಯಾ ರೇಟಿಂಗ್ಸ್ ಹೇಳಿದೆ. ಜಿಎಸ್‌ಟಿ ಜಾರಿಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.ಈ ವರ್ಷದ ಜೂನ್‌ನಿಂದ ಕೇಂದ್ರವು ರಾಜ್ಯಗಳಿಗೆ ತೆರಿಗೆ ಸಂಗ್ರಹ ಕೊರತೆಗೆ ಯಾವುದೇ ಪರಿಹಾರ ನೀಡುವುದನ್ನು ನಿಲ್ಲಿಸಲಿದೆ.


ಇದನ್ನೂ ಓದಿ:  ಬ್ಯಾಂಕಲ್ಲಿ ಹಣ ಇಡ್ತೀರಾ? ತಪ್ಪದೇ ಹೊಸ ನಿಯಮ ತಿಳಿಯಿರಿ


2017 ರಲ್ಲಿ ಹೊಸ ಪರೋಕ್ಷ ತೆರಿಗೆ ಆಡಳಿತದ ರೋಲ್ ಔಟ್ ಸಮಯದಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ಒಪ್ಪಂದದ ಭಾಗವಾಗಿ ಐದು ವರ್ಷಗಳ ಅವಧಿಗೆ GST ಪರಿಹಾರವಾಗಿತ್ತು. ಹಲವಾರು ರಾಜ್ಯಗಳು ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸುವಂತೆ ಕೇಳಿಕೊಂಡಿವೆ. ಆದಾಗ್ಯೂ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, FY23 ರ ಬಜೆಟ್ ಅನ್ನು ಮಂಡಿಸುವಾಗ, ಪರಿಹಾರದ ಅವಧಿಯನ್ನು ಜೂನ್ 2022 ರ ನಂತರ ವಿಸ್ತರಿಸಲಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.


ಸಿಎಸ್​ಟಿಯ ಪಾಲಿನಲ್ಲೂ ಇಳಿಕೆ


ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‌ಟಿ)ಯಲ್ಲಿ ಶೇ.2 ರಷ್ಟುಲಾಭ ಪಡೆದುಕೊಳ್ಳುತ್ತಿದ್ದವು. ಆದರೆ ಜಿಎಸ್‌ಟಿ ಅಳವಡಿಕೆ ನಂತರ ರಾಜ್ಯಗಳ ಆದಾಯದಲ್ಲಿ ಸಿಎಸ್‌ಟಿಯ ಪಾಲು ಕೂಡಾ ಶೇ.4.16 ರಿಂದ ಶೇ.0.95ಕ್ಕೆ ಇಳಿಕೆಯಾಗಿದೆ ಎಂದು ಏಜೆನ್ಸಿ ತಿಳಿಸಿದೆ.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು