ರೈತರು (Farmers) ನಮ್ಮ ದೇಶದ ಬೆನ್ನೆಲುಬು ಅಂತ ಹೇಳುವುದನ್ನು ನಾವು ಚಿಕ್ಕವರಾಗಿದ್ದಾಗಿನಿಂದಲೂ ಕೇಳಿಕೊಂಡೇ ಬಂದಿದ್ದೇವೆ. ಮೊದಲೆಲ್ಲಾ ರೈತರ ಬದುಕು ತುಂಬಾನೇ ಚಿಂತಾಜನಕವಾಗಿತ್ತು, ಕೆಲವೊಮ್ಮೆ ಕ್ರಿಮಿ ಕೀಟಗಳ ಹಾವಳಿಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಗಳು (Crops) ಹಾಳಾದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೆ (Rain) ಬೆಳೆಗಳು ಚೆನ್ನಾಗಿ ಬರದೇ ಇರುವುದನ್ನು ಸಹ ನಾವು ನೋಡಿದ್ದೇವೆ. ಆದರೆ ಈಗ ರೈತರ ಸ್ಥಿತಿ ತುಂಬಾನೇ ಸುಧಾರಿಸಿದೆ, ಏಕೆಂದರೆ ಕೇಂದ್ರ ಸರ್ಕಾರ (Central Government) ರೈತರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿ ಅನುಷ್ಠಾನಕ್ಕೆ ತಂದಿದ್ದು, ಇತ್ತ ಆಯಾ ರಾಜ್ಯಗಳು ಸಹ ತಮ್ಮ ರೈತರಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಪರಿಚಯಿಸಿವೆ.
ತೆಲಂಗಾಣ ರೈತರು ಈಗ ದುಬಾರಿ ಕೃಷಿ ಭೂಮಿ ಒಡೆಯರು
ಈ ವಿಷಯದ ಬಗ್ಗೆ ಮಾತಾಡುವಾಗ ನಾವು ತೆಲಂಗಾಣ ಸರ್ಕಾರವು ರೈತ ಸಮುದಾಯಕ್ಕೆ ನೀಡಿದ ಬೆಂಬಲ ಆಧಾರಿತ ಯೋಜನೆಗಳ ಬಗ್ಗೆ ಮಾತಾಡಲೇ ಬೇಕು. ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿರುವ ತೆಲಂಗಾಣ ರಾಜ್ಯ ಸರ್ಕಾರದ ಯೋಜನೆಗಳಿಂದ ತೆಲಂಗಾಣ ರಾಜ್ಯದ ರೈತರು ಈಗ ದೇಶದ 'ಅತ್ಯಂತ ದುಬಾರಿ' ಕೃಷಿ ಭೂಮಿಗೆ ಒಡೆಯರಾಗುತ್ತಿದ್ದಾರೆ ನೋಡಿ.
ಕೃಷಿ ಭೂಮಿಯ ಮೌಲ್ಯ ಏರಿಕೆ, ಉಚಿತ ವಿದ್ಯುತ್ ಪೂರೈಕೆಯ ಲಾಭವನ್ನು ಪಡೆಯುವ ರೈತರಿಗೆ ರೈತು ಬಂಧುವಿನಂತಹ ಕೃಷಿಗೆ ಸಹಾಯ ಮಾಡುವ ಯೋಜನೆಗಳು, ರೈತು ಬಿಮಾದಂತಹ ವಿಮಾ ಯೋಜನೆಗಳು ಮತ್ತು ಪ್ರತಿ ಜಿಲ್ಲೆಯನ್ನು ಹಾದು ಹೋಗುವ ರಸ್ತೆಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಇವೆಲ್ಲವೂ ಕೃಷಿ ಭೂಮಿಯ ಬೆಲೆ 'ಅತ್ಯಂತ ದುಬಾರಿ' ಎಂದು ಶ್ರೇಯಾಂಕ ನೀಡಲಾದ ಆರು ರಾಜ್ಯಗಳಲ್ಲಿನ 34 ಜಿಲ್ಲೆಗಳ ಪಟ್ಟಿಯಲ್ಲಿ ತೆಲಂಗಾಣ ರಾಜ್ಯದ 16 ಜಿಲ್ಲೆಗಳು ಸ್ಥಾನ ಗಿಟ್ಟಿಸಿವೆ ಅಂತ ಹೇಳಲಾಗುತ್ತಿದೆ.
ಮೇಡ್ಚಲ್ ನಲ್ಲಿರುವ ಕೃಷಿ ಭೂಮಿ ಅತ್ಯಂತ ದುಬಾರಿಯಂತೆ..
ಮೇಡ್ಚಲ್ 'ಅತ್ಯಂತ ದುಬಾರಿ ಕೃಷಿ ಭೂಮಿಯ' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಜಗ್ತಿಯಾಲ್, ರಂಗಾರೆಡ್ಡಿ, ಕರೀಂನಗರ, ಯಾದಾದ್ರಿ ಭೊಂಗಿರ್, ಖಮ್ಮಮ್, ಮೇಡಕ್, ಸಿದ್ದಿಪೇಟ್, ಸೂರ್ಯಪೇಟ್, ಮೆಹಬೂಬ್ ನಗರ್, ನಲ್ಗೊಂಡ, ನಿಜಾಮಾಬಾದ್, ವಿಕಾರಾಬಾದ್, ಜಂಗಗಾಂವ್, ಸಂಗಾರೆಡ್ಡಿ ಮತ್ತು ವಾರಂಗಲ್ ಮೊದಲ 34 ಸ್ಥಾನಗಳಲ್ಲಿವೆ.
ಇದನ್ನೂ ಓದಿ: Work From Pub: ವರ್ಕ್ ಫ್ರಮ್ ಹೋಮ್ ಅಲ್ಲ, ವರ್ಕ್ ಫ್ರಮ್ ಪಬ್! ಇನ್ಮುಂದೆ ಎಣ್ಣೆ ಬಿಟ್ಕೊಳ್ತಾನೇ ಕೆಲ್ಸ ಮಾಡ್ಬಹುದು!
ಏತನ್ಮಧ್ಯೆ, ಅದಿಲಾಬಾದ್, ಕಾಮರೆಡ್ಡಿ, ನಾಗರ್ ಕರ್ನೂಲ್ ಮತ್ತು ನಿರ್ಮಲ್ ಅಷ್ಟು ದುಬಾರಿಯೂ ಅಲ್ಲದೆ ಅಷ್ಟು ಕಡಿಮೆ ಎಂಬಂತೆಯೂ ಅಲ್ಲದೆ ಮಧ್ಯಮ ಬೆಲೆಯಲ್ಲಿದೆ ಅಂತ ಹೇಳಲಾಗಿದೆ.
ಅಹಮದಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಹೈದರಾಬಾದ್ ಮೂಲದ ಆನ್ಲೈನ್ ಕೃಷಿ ಭೂಮಿ ಮಾರುಕಟ್ಟೆಯಾದ ಎಸ್ಫಾರ್ಮ್ಸ್ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ಅಗ್ರಿ ಲ್ಯಾಂಡ್ ಪ್ರೈಸ್ ಇಂಡೆಕ್ಸ್ ನಿಂದ ಈ ಶ್ರೇಯಾಂಕವನ್ನು ನೀಡಲಾಗಿದೆ. ಈ ವರ್ಷದ ಜೂನ್ ನಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಸೂಚ್ಯಂಕವು ಭೂ ಪಟ್ಟಿ ದತ್ತಾಂಶದ ಮಾಸಿಕ ಆವರ್ತನದ ಮೇಲೆ ಹೆಡೋನಿಕ್ ಬೆಲೆ ಮಾದರಿಯನ್ನು ಆಧರಿಸಿದೆ.
6 ರಾಜ್ಯಗಳ ಭೂ ಪಟ್ಟಿಯ ದತ್ತಾಂಶ ಆಧರಿಸಿ ಸೂಚ್ಯಂಕ ಸಿದ್ದಪಡಿಸಲಾಗಿದೆ..
ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಹೀಗೆ ಆರು ರಾಜ್ಯಗಳ ಭೂ ಪಟ್ಟಿಯ ದತ್ತಾಂಶವನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ದಪಡಿಸಲಾಗಿದೆ. ಐಐಎಂ-ಅಹಮದಾಬಾದ್ ನ ಪ್ರಕಾರ, ಈ ಆರು ರಾಜ್ಯಗಳ ಡೇಟಾವನ್ನು ರಾಷ್ಟ್ರೀಯ ಸೂಚ್ಯಂಕದಲ್ಲಿ ಒಟ್ಟುಗೂಡಿಸಲಾಗಿದೆ.
ಇತರ ಆಸ್ತಿ ವರ್ಗಗಳಿಗೆ ಸಂಬಂಧಿಸಿದಂತೆ ಭೂಮಿಯ ಬೆಲೆಗಳಲ್ಲಿನ ಸಾಪೇಕ್ಷ ಚಲನೆಯನ್ನು ಅಧ್ಯಯನ ಮಾಡಲು ಸೂಚ್ಯಂಕವನ್ನು ಇತರ ಬೆಲೆ ಸೂಚ್ಯಂಕಗಳೊಂದಿಗೆ ಜೋಡಿಸಬಹುದು ಎಂದು ಅದು ಹೇಳುತ್ತದೆ. ಕಾಲಾನಂತರದಲ್ಲಿ ಕೃಷಿ ಭೂಮಿಯ ಬೆಲೆಗಳು ಹೇಗೆ ವಿಕಸನಗೊಂಡಿವೆ ಎಂಬುದರ ಬಗ್ಗೆ ಮಧ್ಯಸ್ಥಗಾರರು ತಮ್ಮ ನಿರೀಕ್ಷೆಗಳನ್ನು ಬೆಳೆಸಿಕೊಳ್ಳಬಹುದು ಎಂದು ಅದು ಹೇಳುತ್ತದೆ.
ಇದನ್ನೂ ಓದಿ: Milk Price Hike: ಜನಸಾಮಾನ್ಯರಿಗೆ ಬಿಗ್ ಶಾಕ್, ಮತ್ತೆ ಹಾಲಿನ ದರ ಏರಿಕೆ!
ಇತ್ತೀಚಿನ ಬೆಲೆ ಸೂಚ್ಯಂಕಕ್ಕೆ ಸಂಬಂಧಿಸಿದಂತೆ, ಆರು ರಾಜ್ಯಗಳ 107 ಜಿಲ್ಲೆಗಳನ್ನು ಹೋಲಿಕೆ ಮಾಡಲಾಗಿದ್ದು, ತೆಲಂಗಾಣದ 20 ಜಿಲ್ಲೆಗಳನ್ನು ಈ ಪಟ್ಟಿ ಒಳಗೊಂಡಿದೆ. ಆರು ರಾಜ್ಯಗಳ 34 ಜಿಲ್ಲೆಗಳನ್ನು 'ಅತ್ಯಂತ ದುಬಾರಿ' ಎಂದು ವರ್ಗೀಕರಿಸಲಾಗಿದ್ದು, 32 ಜಿಲ್ಲೆಗಳಲ್ಲಿನ ಭೂಮಿ ಬೆಲೆಗಳನ್ನು 'ಮಧ್ಯಮ' ಮತ್ತು ಉಳಿದ 41 ಜಿಲ್ಲೆಗಳಲ್ಲಿನ ಭೂಮಿಯನ್ನು 'ಕಡಿಮೆ ಬೆಲೆಯದ್ದು' ಎಂದು ಉಲ್ಲೇಖಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ