Startup: ಕಡಿಮೆ ಖರ್ಚು, ಹೆಚ್ಚು ಲಾಭ! ಸೌರ ಉಪಕರಣಗಳ ಸ್ಟಾರ್ಟಪ್‌ನಿಂದ ಕೋಟಿಗಟ್ಟಲೆ ಆದಾಯ

ಅಗ್ರಿ ವಿಜಯ್​

ಅಗ್ರಿ ವಿಜಯ್​

ಹವಾಮಾನ ಬದಲಾವಣೆಯನ್ನು ತಗ್ಗಿಸುವ ಹಾಗೆಯೇ ಕೃಷಿ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಪುಣೆಯ ವಿಮಲ್ ಪಂಜ್ವಾನಿ ಅವರು ಅಗ್ರಿ ವಿಜಯ್ ಅನ್ನು ಸ್ಥಾಪಿಸಿದರು.

 • Share this:

  ನಾವು ತಂತ್ರಜ್ಞಾನದಲ್ಲಿ (New Techonology)  ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಇದು ಹಳ್ಳಿಗಳನ್ನು (Village) ಅದರಲೂ ರೈತರನ್ನು ತಲುಪುವಲ್ಲಿ ತಡವಾಗುತ್ತಿದೆ. ಅವರಲ್ಲಿ ಅನೇಕರು ಇನ್ನೂ ಕೂಡ ಹೊರೆಯಾಗುವಂಥ ಹಳೆಯ ವಿಧಾನವನ್ನೇ ಬಳಸುತ್ತಿದ್ದಾರೆ. ಆದರೆ ಅಲ್ಲಲ್ಲಿ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುವ… ಕೃಷಿಕರಿಗೆ (Agriculturiest) ಇದನ್ನು ಅರ್ಥ ಮಾಡಿಸುವ ಕೆಲಸ ನಡೆಯುತ್ತಿದೆ. ಅದರಲ್ಲೊಂದು ಅಗ್ರಿ ವಿಜಯ್ (Agri Vijay). ನಮ್ಮಲ್ಲಿ ಇನ್ನೂ ಕೂಡ ಅನೇಕ ಜನರಿಗೆ ನವೀಕರಿಸಬಹುದಾದ ಇಂಧಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ.


  ಅದಕ್ಕಾಗಿಯೇ ದುಬಾರಿ ಇಂಧನ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ, ಹವಾಮಾನ ಬದಲಾವಣೆಯನ್ನು ತಗ್ಗಿಸುವ ಹಾಗೆಯೇ ಕೃಷಿ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಪುಣೆಯ ವಿಮಲ್ ಪಂಜ್ವಾನಿ ಅವರು ಅಗ್ರಿ ವಿಜಯ್ ಅನ್ನು ಸ್ಥಾಪಿಸಿದರು.


  “ಸೋಲಾರ್‌ ಉಪಕರಣಗಳ ಮಾಹಿತಿ ಕೊರತೆ”!


  "ನವೀಕರಿಸಬಹುದಾದ ಇಂಧನದ ಬಗ್ಗೆ ಹಳ್ಳಿಯ ಜನರಿಗೆ ಅಷ್ಟಾಗಿ ಅರಿವಿರುವಿದಿಲ್ಲ. ಉತ್ತಮ ತಂತ್ರಜ್ಞಾನ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಲಭ್ಯವಿರುವುದಿಲ್ಲ. ಸೋಲಾರ್ ಡ್ರೈಯರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ರೈತರಿಗೆ ಅಷ್ಟಾಗಿ ತಿಳಿದಿಲ್ಲ. ಏಕೆಂದರೆ ಈ ಬಗ್ಗೆ ಡೆಮೋ ನೀಡುವಂಥ ಯಾವುದೇ ವ್ಯವಸ್ಥೆ ನಮ್ಮಲ್ಲಿಲ್ಲ.


  ಅಲ್ಲದೇ ಅಂಥ ಉತ್ಪನ್ನಗಳನ್ನು ಖರೀದಿಸಲು ಬಯಸುವ ರೈತರಿಗೆ ಹಣಕಾಸಿನ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಆದ್ರೆ ಅಗ್ರಿವಿಜಯ್‌ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬುದಾಗಿ ಹೇಳುತ್ತಾರೆ 34 ವರ್ಷದ ವಿಮಲ್‌ ಪಂಜ್ವಾನಿ.


  ಅಗ್ರಿ ವಿಜಯ್‌ ರೈತರಿಗೆ ಹೇಗೆ ಸಹಾಯ ಮಾಡುತ್ತದೆ?


  ಕೃಷಿ ಅಗತ್ಯಗಳಿಗೆ ಮತ್ತು ಮೂಲಸೌಕರ್ಯ ಸೆಟ್‌ಅಪ್‌ಗೆ ಅನುಗುಣವಾಗಿ ಸೋಲಾರ್ ವಾಟರ್ ಪಂಪ್‌ಗಳಿಂದ ಸೋಲಾರ್ ಇನ್ವರ್ಟರ್‌ಗಳು, ಬಯೋಗ್ಯಾಸ್ ಡೈಜೆಸ್ಟರ್‌ಗಳು, ಸೋಲಾರ್ ವಾಟರ್ ಹೀಟರ್‌ಗಳು, ಸೋಲಾರ್ ಕೋಲ್ಡ್ ಸ್ಟೋರೇಜ್, ಮತ್ತು ಸೋಲಾರ್ ಡ್ರೈಯರ್‌ಗಳವರೆಗೆ ಮುಂತಾದ 200 ಕ್ಕೂ ಹೆಚ್ಚು ರೀತಿಯ ಹಸಿರು ಶಕ್ತಿ ಉಪಕರಣಗಳನ್ನು ಈ ಸ್ಟಾರ್ಟ್‌ಅಪ್‌ ರೈತರಿಗೆ ನೀಡುತ್ತದೆ.


  ಹೆಚ್ಚು ಮಾರಾಟವಾಗುವ ಉತ್ಪನ್ನಗಳಲ್ಲಿ ಸೋಲಾರ್ ವಾಟರ್ ಪಂಪ್‌ಗಳು, ಬಯೋಗ್ಯಾಸ್ ಡೈಜೆಸ್ಟರ್‌ಗಳು, ಸೋಲಾರ್ ಡ್ರೈಯರ್‌ಗಳು, ಸೋಲಾರ್ ವಾಟರ್ ಹೀಟರ್‌ಗಳು ಮತ್ತು ಸೋಲಾರ್ ಸ್ಪ್ರೇಯರ್‌ಗಳು ಸೇರಿವೆ. ಎಲ್ಲಾ ಉತ್ಪನ್ನಗಳಲ್ಲಿ, ರೈತರು ಸೋಲಾರ್ ವಾಟರ್ ಪಂಪ್‌ಗಳು ಮತ್ತು ಬಯೋಗ್ಯಾಸ್ ಡೈಜೆಸ್ಟರ್‌ಗಳ ಮೇಲೆ ಸರ್ಕಾರದ ಸಬ್ಸಿಡಿಗಳನ್ನು ಸಹ ಪಡೆಯಬಹುದು.


  ವೆಚ್ಚ ಕಡಿಮೆ – ಆದಾಯ ಹೆಚ್ಚು!


  “ಸೋಲಾರ್‌ ವಾಟರ್‌ ಪಂಪ್ ನಮ್ಮ ಪ್ರಮುಖ ಉತ್ಪನ್ನವಾಗಿದೆ. ಇದು ರೈತರ ಡೀಸೆಲ್ ಮತ್ತು ವಿದ್ಯುತ್ ವೆಚ್ಚವನ್ನು ಉಳಿಸುತ್ತದೆ. ಅವರು 8-10 ಗಂಟೆಗಳ ಕಾಲ ತರಕಾರಿ ಕೃಷಿಗಾಗಿ ಪಂಪ್ ಅನ್ನು ಬಳಸಲು ಬಯಸಿದಾಗ ವೆಚ್ಚವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.


  ಇದನ್ನೂ ಓದಿ: 3,000 ರೂ.ನಿಂದ ಆರಂಭಿಸಿದ ಮಹಿಳೆಯರ ಕ್ಯಾಂಟೀನ್​ನಿಂದ ಈಗ ವರ್ಷಕ್ಕೆ 3 ಕೋಟಿ ಆದಾಯ!


  ಗ್ರಿಡ್ ವಿದ್ಯುಚ್ಛಕ್ತಿಯೊಂದಿಗೆ ಸಂಪರ್ಕ ಹೊಂದಿದ ನಂತರ ಇದನ್ನು ರಾತ್ರಿಯಲ್ಲಿ ಸಹ ಓಡಿಸಬಹುದು. ಡೀಸೆಲ್ ಮತ್ತು ಎಲೆಕ್ಟ್ರಿಕ್ ವಾಟರ್ ಪಂಪ್‌ಗಳಿಗೆ ತಿಂಗಳಿಗೆ 25,000 ರೂ. ತಗಲುತ್ತದೆ. ಒಮ್ಮೆ ನೀವು ಅದನ್ನು ಸೋಲಾರ್ ವಾಟರ್ ಪಂಪ್‌ನೊಂದಿಗೆ ಬದಲಾಯಿಸಿದರೆ, ಅದು 10,000 ರೂಪಾಯಿಗಳನ್ನು ಉಳಿಸಬಹುದು ಎಂಬುದಾಗಿ ಪಂಜ್ವಾನಿ ಹೇಳುತ್ತಾರೆ.


  500 ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ


  ಇಲ್ಲಿಯವರೆಗೆ, ಸ್ಟಾರ್ಟಪ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಾದ್ಯಂತ ಇರುವ ತನ್ನ 75 ನವೀಕರಿಸಬಹುದಾದ ಇಂಧನ ಮಳಿಗೆಗಳಿಂದ ಅಂತಹ 500 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಿದೆ.


  ಈ ಸ್ಟಾರ್ಟಪ್ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ 300 ಕ್ಕೂ ಹೆಚ್ಚು ರೈತರನ್ನು ಆನ್‌ಬೋರ್ಡ್ ಮಾಡಿದೆ. ಈ ವರ್ಷ 100 ನವೀಕರಿಸಬಹುದಾದ ಇಂಧನ ಮಳಿಗೆಗಳ ಮೂಲಕ 1,000 ರೈತರವರೆಗೆ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.


  ಹವಾಮಾನ ಬದಲಾವಣೆಗೆ ಸೌರ ಇಂಧನಗಳ ಪರಿಹಾರ


  ಅಂದಹಾಗೆ ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ವಿಮಲ್‌ ಅವರ ಅಗ್ರಿ ವಿಜಯ್‌ ಪ್ರಯಾಣ ಆರಂಭವಾಯಿತು. “ನಾನು ಉದ್ಯೋಗ ಬದಲಾವಣೆಗಾಗಿ ಹುಡುಕುತ್ತಿದ್ದೆ. ನನ್ನ ತಾಯಿ ಶೋಭಾ ಚಂಚಲಾನಿ ಸರ್ಕಾರಿ ಉದ್ಯೋಗಿಯಾಗಿ ನಿವೃತ್ತರಾಗಿದ್ದರು.  ಅವರು ತಮ್ಮ ನಿವೃತ್ತಿಯ ಉಳಿತಾಯವನ್ನು ನಮ್ಮ ಯೋಜನೆಗೆ ಹಾಕಿದ್ದರಿಂದ ನಾವು ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದ್ದೇವೆ “ ಎಂಬುದಾಗಿ ವಿಮಲ್‌ ಹೇಳುತ್ತಾರೆ. “ನಾವು ದೇಶದಲ್ಲಿ 1,500 ಅಗ್ರಿ-ಟೆಕ್ ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದೇವೆ. ಆದರೆ ಯಾರೂ ಕೃಷಿಗಾಗಿ ನವೀಕರಿಸಬಹುದಾದ ಇಂಧನ ಉತ್ಪನ್ನಗಳ ಬಗ್ಗೆ ಅಷ್ಟಾಗಿ ಮಾತನಾಡುವುದಿಲ್ಲ. ಅಂತಹ ಉತ್ಪನ್ನಗಳಿಗೆ ಯಾವುದೇ ಮೀಸಲಾದ ಮಾರುಕಟ್ಟೆ ಇರಲಿಲ್ಲ ಎಂದು ಅವರು ಸೇರಿಸುತ್ತಾರೆ.

  Published by:ವಾಸುದೇವ್ ಎಂ
  First published: