Startup: ಇನ್ಮುಂದೆ ವಿದೇಶದಲ್ಲೂ ಕೂತು ಮನೆ ಅಡುಗೆ ಸವಿಯಬಹುದು! ಭಾರತೀಯ ಸ್ಟಾರ್ಟ್ ಅಪ್‍ಗಳಿಂದ ದೇಸಿ ಟಿಫಿನ್ ಸರ್ವಿಸ್

ನಮ್ಮ ದೇಶದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ, ದೇಶದ ಹಲವಾರು ಮಹಾನಗರಗಳಲ್ಲಿ ಚಾಲ್ತಿಯಲ್ಲಿರುವ ಡಬ್ಬಾವಾಲಾಗಳ ಸೇವೆಯ ಪರಿಕಲ್ಪನೆ ಇದೀಗ ಗಡಿ ದಾಟಿ ಕೆನಡಾ ದೇಶಕ್ಕೂ ಪ್ರವೇಸಿದೆ. ಟೊರೊಂಟೋ ಮೂಲದ ಸ್ಟಾರ್ಟ್ ಅಪ್ ಒಂದು ಟಿಫಿನ್ ಸೇವೆ ಒದಗಿಸಲು ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿರುವುದೇ ಈ ಹೊಸ ಬದಲಾವಣೆಗೆ ಕಾರಣವಾಗಿದೆ.

ಪಮ್ಕಿನ್ ಕಾರ್ಟ್

ಪಮ್ಕಿನ್ ಕಾರ್ಟ್

  • Share this:
ನಮ್ಮ ದೇಶದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ, ದೇಶದ ಹಲವಾರು ಮಹಾನಗರಗಳಲ್ಲಿ ಚಾಲ್ತಿಯಲ್ಲಿರುವ ಡಬ್ಬಾವಾಲಗಳ ಸೇವೆಯ ಪರಿಕಲ್ಪನೆ ಇದೀಗ ಗಡಿ ದಾಟಿ ಕೆನಡಾ (Canada) ದೇಶಕ್ಕೂ ಪ್ರವೇಸಿದೆ. ಟೊರೊಂಟೋ ಮೂಲದ ಸ್ಟಾರ್ಟ್ ಅಪ್ Startup) ಒಂದು ಟಿಫಿನ್ ಸೇವೆ ಒದಗಿಸಲು ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿರುವುದೇ ಈ ಹೊಸ ಬದಲಾವಣೆಗೆ ಕಾರಣ. ಪಮ್ಕಿನ್ ಕಾರ್ಟ್ (Pumpkin Kart) ವೇದಿಕೆಯ ಭಾಗವಾಗಿರುವ ಈ ಸೇವೆಯನ್ನು ಟಿಫಿನ್ ಸರ್ವಿಸ್ ಎಂದು ಕರೆಯಾಗುತ್ತಿದೆ. ಪಮ್ಕಿನ್ ಕಾರ್ಟ್ ಮನೆಯೂಟ ಮತ್ತು ದಿನಸಿಗಾಗಿ ಹಾತೊರೆಯುವ ಹೊಸ ವಲಸಿಗರ ಹಸಿವನ್ನು ನೀಗಿಸಲು ಪ್ರಯತ್ನಿಸುತ್ತಿರುವ ವೇದಿಕೆಯಾಗಿದೆ.

ಪಮ್ಕಿನ್ ಕಾರ್ಟ್ ಟಿಫಿನ್ ಸರ್ವಿಸ್
ಈ ಟಿಫಿನ್ ಸರ್ವಿಸ್ ಅನ್ನು ಪಮ್ಕಿನ್ ಕಾರ್ಟ್ ಮೇ ತಿಂಗಳಲ್ಲಿ ಆರಂಭಿಸಿತು. ಇದು ತನ್ನ ಚಂದಾದಾರರಿಗೆ ಕೇರಳ, ಪಂಜಾಬ್ ಅಥವಾ ಗುಜರಾತ್ ಸೇರಿದಂತೆ ಹಲವು ಭಾರತೀಯ ಸ್ಥಳಗಳ ಊಟವನ್ನು ಒದಗಿಸುತ್ತದೆ. ಈ ಸೇವೆ ಇನ್ನೂ ಹೊಸತು, ಸದ್ಯಕ್ಕೆ ಇದು ಗ್ರೇಟರ್ ಟೊರೊಂಟೋ ಪ್ರದೇಶದಲ್ಲಿ ಲಭ್ಯವಿದೆ. ಈ ಪ್ರದೇಶ ಸರಿ ಸುಮಾರು ಶೇಕಡಾ 60 ರಷ್ಟು ವಲಸಿಗರನ್ನು ಒಳಗೊಂಡಿದೆ ಮತ್ತು ಅದರಲ್ಲಿ ಅರ್ಧದಷ್ಟು ಮಂದಿ ಭಾರತೀಯರಾಗಿರಬಹುದು.ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ
ಪಮ್ಕಿನ್ ಕಾರ್ಟ್, ಮಧ್ಯರಾತ್ರಿಯ ನಂತರ ಬಳಕೆ ಆಗದೇ ಇರುವ, ಹೇಲ್ತ್ ಕೆನಡಾ ಪ್ರಮಾಣಿಕೃತ ಅಡುಗೆ ಮನೆಗಳನ್ನು ಬಳಸಲು ಹಲವಾರು ರೆಸ್ಟೊರೆಂಟ್‍ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಪಮ್ಕಿನ್ ಕಾರ್ಟ್ ಜೊತೆ ಪಾಲುದಾರರಾಗಿರುವ ಹೋಮ್ ಶೇಫ್‍ಗಳು ಆ ಸಮಯದಲ್ಲಿ, ಈ ವೃತ್ತಿಪರ ಅಡುಗೆ ಮನೆಗಳನ್ನು ಪ್ರವೇಶಿಸಿ, ಮರುದಿನ ಗ್ರಾಹಕರಿಗೆ ಒದಗಿಸಬೇಕಿರುವ ಆಹಾರಗಳನ್ನು ತಯಾರಿಯಲ್ಲಿ ತೊಡಗುತ್ತಾರೆ.

ಪಮ್ಕಿನ್ ಕಾರ್ಟ್‍ನ ಸಿಇಓ ಫಿಲಿಫ್ ಕೊರೆಯಾ ಅವರು, ಈ ಪರಿಕಲ್ಪನೆಯನ್ನು ಮುಂದಿನ ದಿನಗಳಲ್ಲಿ ಗ್ರೇಟ್ ಟೊರೆಂಟೋ ಪ್ರದೇಶದ ವ್ಯಾಪ್ತಿಯ ಹೊರಗೆ ಕೂಡ ಪರಿಚಯಿಸುವ ಆಶಯ ಹೊಂದಿದ್ದಾರೆ. ಭಾರತದಲ್ಲಿರುವ ಕುಟುಂಬಗಳು, ವಿದೇಶದಲ್ಲಿರುವ ತಮ್ಮ ಸಂಬಂಧಿಗಳಿಗಾಗಿ ಈ ಮಾಸಿಕ ಊಟದ ಪ್ಯಾಕೆಜ್‍ಗಳನ್ನು ಖರೀದಿಸಲು ಅನುವು ಮಾಡಿಕೊಡುವುದು ಅವರ ಭವಿಷ್ಯದ ಯೋಜನೆಗಳಲ್ಲಿ ಒಂದಾಗಿದೆ.

ಪಮ್ಕಿನ್ ಕಾರ್ಟ್ ಆರಂಭಿಅಸಳು ಕಾರಣವೇನು
ಕೆನಡಾದ ಟೊರೊಂಟೋದಲ್ಲಿ , ವಿದ್ಯಾರ್ಥಿಯಾಗಿ ಜೀವಿಸುತ್ತಿದ್ದಾಗ ಕೊರೆಯಾ ಅವರು ಭಾರತೀಯ ಊಟ ಸಿಗದ ಸಮಸ್ಯೆಯಿಂದ ಒದ್ದಾಡಿದ್ದರು. ಅವರ ಆ ಅನುಭವವೇ ಈ ಟಿಫಿನ್ ಸೇವೆ ಆರಂಭಿಸಲು ಕಾರಣವಾಗಿದೆ. ಪಮ್ಕಿನ್ ಕಾರ್ಟ್ ಅನ್ನು 2020 ರ ಮೇಯಲ್ಲಿ ಆರಂಭಗೊಂಡಿತು.

ಇದನ್ನೂ ಓದಿ: Best Business Idea: ಈ ಬ್ಯುಸಿನೆಸ್​ ಶುರು ಮಾಡೋಕೆ ಬೇಕಿರೋದು 25 ಸಾವಿರ! 5 ವರ್ಷದಲ್ಲಿ 72 ಲಕ್ಷ ದುಡ್ಡು ಮಾಡ್ಬಹುದು ರೀ

ಕೋವಿಡ್ -19 ಸಾಂಕ್ರಮಿಕದ ಸಂದರ್ಭದಲ್ಲಿ ಹಲವಾರು ರೆಸ್ಟೊರೆಂಟ್‍ಗಳು ಕೇವಲ ಟೇಕ್ –ಔಟ್ ಅಥವಾ ಡೆಲಿವರಿಗಳನ್ನು ಮಾತ್ರ ನೀಡುತ್ತಿದ್ದವು. ಈ ಪರಿಸ್ಥಿತಿ, ಅಪ್ಲಿಕೇಶನ್ ಆಧಾರಿತ ಸೇವೆಗಳಿಗೆ ಮಾರುಕಟ್ಟೆಯನ್ನು ಹೆಚ್ಚಿಸಿತು. ಅಲ್ಲದೇ, ಭಾರತದಿಂದ ಬರುತ್ತಿರುವ ಹೆಚ್ಚಿನ ವಲಸಿಗರು, ವಿದ್ಯಾರ್ಥಿಗಳು ಅಥವಾ ಯುವ ವೃತ್ತಿಪರರು, ಈ ವಿತರಣಾ ಸಂಸ್ಕತಿಗೆ ಈಗಾಗಲೇ ಒಗ್ಗಿಕೊಂಡಿದ್ದಾರೆ.

ಪಮ್ಕಿನ್ ಕಾರ್ಟ್, ಊಬರ್ ಈಟ್ಸ್ ಅಥವಾ ಡೋರ್‍ಡ್ಯಾಶ್ ಮುಂತಾದ ಮುಖ್ಯವಾಹಿನಿಯ ಸೇವೆಗಳಿಗೆ ಸಂಬಂಧವಿಲ್ಲದ, ಅನುಕೂಲಗಳನ್ನು ನೀಡುತ್ತದೆ. ಟೊರೊಂಟೋ ಮೂಲದ ದಕ್ಷಿಣ ಭಾರತೀಯ ರೆಸ್ಟೊರೆಂಟ್ ದೇಸಿ ಮನೆಯ ಅಪರೇಷನ್ಸ್ ಮ್ಯಾನೇಜರ್ ಅರುಣ್ ಕುಮಾರ್ ಅವರು ಹೇಳುವ ಪ್ರಕಾರ, ಪಮ್ಕಿನ್ ಕಾರ್ಟ್‍ನ ಡೆಲಿವರಿ ರೇಡಿಯಸ್ 30 ಕೀ ಆಗಿದ್ದು, ಬೇರೆಯವರಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ, ಅವರಿಗೆ ವಿಸ್ತೃತವಾದ ವ್ಯಾಪ್ತಿಯನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಹೊಸ ಗ್ರಾಹಕರನ್ನು ನೀಡುತ್ತದೆ.

ಇದನ್ನೂ ಓದಿ: Vijayapura News: ಕೈಮಗ್ಗ ನೇಕಾರರರಿಗೆ ಸಾಲ ಸೌಲಭ್ಯ; ಅರ್ಜಿ ಸಲ್ಲಿಸುವುದು ಹೇಗೆ? ವಿವರ ಇಲ್ಲಿದೆ

ಈ ಕುರಿತು ಪಮ್ಕಿನ್ ಕಾರ್ಟ್‍ನ ಸಲಹೆಗಾರ ವಿಜಯ್ ಥಾಮಸ್ ಹೇಳಿದ್ದು ಹೀಗೆ
“ನಾವು ನಮ್ಮ ಗ್ರಾಹಕರ ವಿಭಾಗವನ್ನು ಚೆನ್ನಾಗಿ ತಿಳಿಯುವ ಪ್ರಯೋಜನವನ್ನು ಹೊಂದಿದ್ದೇವೆ” ಎನ್ನುತ್ತಾರೆ ಪಮ್ಕಿನ್ ಕಾರ್ಟ್‍ನ ಸಲಹೆಗಾರ ವಿಜಯ್ ಥಾಮಸ್. ಅಂದರೆ, ಮಂದಾಕಿನಿ, ದೇಸಿ ಹೂಚ್‍ನಂತಹ ಅಪರೂಪದ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವುದು. ಅವುಗಳ ವಿತರಣೆ ಭಾರತದಲ್ಲಿ ಕಾನೂನು ಬಾಹಿರವಾಗಿದೆ. ಆದರೆ, ಒಂಟಾರಿಯೋದ ಡಿಸ್ಟೆಲರಿಯಲ್ಲಿ ಕಾನೂನು ಬದ್ಧವಾಗಿ ತಯಾರಿಸಲಾಗುತ್ತದೆ. ಪಮ್ಕಿನ್ ಕಾರ್ಟ್ ಪಾನ್ ಫ್ಲೇವರ್‍ನ ಚಾಕಲೇಟನ್ನು ಕೂಡ ಗ್ರಾಹಕರಿಗೆ ಒದಗಿಸುತ್ತದೆ.
Published by:Ashwini Prabhu
First published: