Mudra Yojana: ಹೊಸ ಉದ್ಯಮ ಆರಂಭಿಸಬೇಕಾ? ಹಣಕಾಸಿನ ಕೊರತೆಯೇ? ಹಾಗಾದ್ರೆ ಮುದ್ರಾ ಯೋಜನೆ ಬಗ್ಗೆ ತಿಳಿದುಕೊಳ್ಳಿ

ಪ್ರಧಾನಮಂತ್ರಿ ಮುದ್ರಾ ಶಿಶು ಯೋಜನೆಯಡಿ ಯುವಕರಿಗೆ 50 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಕಿಶೋರ್ ಯೋಜನೆ ಅಡಿಯಲ್ಲಿ ಜನರು 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯುತ್ತಾರೆ.

ಹಣ

ಹಣ

  • Share this:
ಕೊರೊನಾ ಮಹಾಮಾರಿ (COVID Pandemic) ದೇಶದ ಅನೇಕ ಉದ್ಯೋಗಿಗಳ ಕೈಯಿಂದ ಕೆಲಸ ಕಿತ್ತುಕೊಂಡಿದೆ. ಇದೇ ವೇಳೆ ಕೆಲವರ ಆದಾಯವೂ (Income) ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನವರು ಸ್ವಂತ ಉದ್ಯಮವನ್ನು (Business) ಪ್ರಾರಂಭಿಸಲು ಬಯಸುತ್ತಿದ್ದಾರೆ. ಎಷ್ಟೋ ಜನರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವ್ಯವಹಾರ ಆರಂಭಿಸಿ ಸಕ್ಸಸ್ ಸಹ ಆಗಿದ್ದಾರೆ. ನೀವು ಸಹ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಮತ್ತು ಹಣದ (Finance) ಕೊರತೆಯಿಂದ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ದೇಶದ ಪ್ರತಿಯೊಬ್ಬ ಯುವಕರಿಗೆ ಉದ್ಯೋಗ ಪಡೆಯಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳಲ್ಲಿ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ. (Pradhan Mantri Mudra Yojana)

ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರ ಯುವಕರಿಗೆ ತಮ್ಮ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು 50 ಸಾವಿರದಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಸರ್ಕಾರದ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ. ಹಾಗಾದರೆ ಈ ಸರ್ಕಾರದ ಯೋಜನೆ ಮತ್ತು ಈ ಯೋಜನೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಗೆಳೆತನದ ಕಮಾಲ್: 5 ತಿಂಗಳಲ್ಲಿ 4,300 ಕೋಟಿಯ ಕಂಪನಿಯ ಮಾಲೀಕರಾದ 19 ವರ್ಷದ ಹುಡುಗರು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ, ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ ಸಾಲವನ್ನು ನೀಡಲಾಗುತ್ತದೆ. ಉದ್ಯಮದ ಆರ್ಥಿಕ ಸ್ಥಿತಿಯನ್ನು ಗಮನಿಸಿ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ.

>> ಪ್ರಧಾನ ಮಂತ್ರಿ ಮುದ್ರಾ ಶಿಶು ಯೋಜನೆ

>> ಪ್ರಧಾನ ಮಂತ್ರಿ ಮುದ್ರಾ ಕಿಶೋರ್ ಯೋಜನೆ

>> ಪ್ರಧಾನ ಮಂತ್ರಿ ಮುದ್ರಾ ತರುಣ್ ಯೋಜನೆ

5 ಲಕ್ಷದಿಂದ 10 ಲಕ್ಷದವರೆಗೆ ಸಾಲ

ಪ್ರಧಾನಮಂತ್ರಿ ಮುದ್ರಾ ಶಿಶು ಯೋಜನೆಯಡಿ ಯುವಕರಿಗೆ 50 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಕಿಶೋರ್ ಯೋಜನೆ ಅಡಿಯಲ್ಲಿ ಜನರು 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯುತ್ತಾರೆ. ಮತ್ತೊಂದೆಡೆ, ತರುಣ್ ಯೋಜನೆಯಲ್ಲಿ, ಸರ್ಕಾರವು ಜನರಿಗೆ ಉದ್ಯೋಗ ಪ್ರಾರಂಭಿಸಲು 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡುತ್ತಿದೆ.

ಸಾಲ ಪಡೆಯೋದು ಹೇಗೆ?

ಈ ಯೋಜನೆಯಡಿಯಲ್ಲಿ ಸಾಲಕ್ಕಾಗಿ, ಗುರುತಿನ ಪುರಾವೆ, ಮನೆಯ ವಿಳಾಸದ ಪುರಾವೆ ಮತ್ತು ವ್ಯಾಪಾರ ಸಂಬಂಧಿತ ದಾಖಲೆಗಳ ಅಗತ್ಯವಿದೆ. ಇದರ ನಂತರ ನೀವು ಬ್ಯಾಂಕ್ ಅಥವಾ ಸಾಲದ ಕಂಪನಿಗೆ ಹೋಗಬೇಕು ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಇದರ ನಂತರ ನಿಮ್ಮ ದಾಖಲೆಗಳನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಎಲ್ಲಾ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಸಾಲವನ್ನು ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ:  Wedding Insurance ಮಾಡ್ಕೊಳ್ಳಿ: Omicronನಿಂದ ಮದುವೆ ಕ್ಯಾನ್ಸಲ್ ಆದ್ರೆ ಮುಂಗಡ ವೆಚ್ಚದ ಹಣ ಸಿಗುತ್ತೆ

ಎಷ್ಟು ಬಡ್ಡಿ ವಿಧಿಸಲಾಗುವುದು?

ವಿವಿಧ ಬ್ಯಾಂಕ್‌ಗಳಲ್ಲಿ ಇದರ ಬಡ್ಡಿದರಗಳು ವಿಭಿನ್ನವಾಗಿರಬಹುದು. ವಿವಿಧ ಬ್ಯಾಂಕುಗಳು ಸಾಲದ ಮೇಲೆ ವಿವಿಧ ಬಡ್ಡಿ ದರಗಳನ್ನು ವಿಧಿಸಬಹುದು. ಹೆಚ್ಚಾಗಿ ಈ ಯೋಜನೆಯಡಿ ಬಡ್ಡಿ ದರವು ವಾರ್ಷಿಕ 9 ರಿಂದ 12 ಪ್ರತಿಶತವರೆಗೆ ಇರುತ್ತೆ.

ಹೊಸ ಉದ್ಯಮದತ್ತ ಯುವ ಪೀಳಿಗೆ

ಇತ್ತೀಚೆಗೆ ಯುವ ಸಮೂಹ ಸ್ಟಾರ್ಟ್ ಅಪ್ (Startup) ನತ್ತ ಮುಖ ಮಾಡುತ್ತಿದ್ದು, ತಮ್ಮದೇ ಸ್ವಂತ ಉದ್ಯಮ ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರಗಳು ಸಹ ಹಲವು ಯೋಜನೆಗಳ ಮೂಲಕ ಇದಕ್ಕೆ ಬಂಡವಾಳವನ್ನು ಹೂಡಿಕೆಗೆ ಸಾಲದ ರೂಪದಲ್ಲಿ ಸಹಾಯ ಮಾಡುತ್ತಿವೆ, ಇತ್ತೀಚೆಗೆ ಖಾಸಗಿ ವಾಹಿನಿಯೊಂದು ಈ ರೀತಿ ನವ ಉದ್ಯಮಿಗಳಿಗೆ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡುತ್ತಿದೆ, ಪ್ರತಿನಿತ್ಯ ಕನಸುಗಳೊಂದಿಗೆ ಬರುವ ನವ ಉದ್ಯಮಿಗಳು ತಮ್ಮ ವ್ಯವಹಾರಕ್ಕೆ ಬೇಕಾಗುವ ಬಂಡವಾಳ ಪಡೆದುಕೊಳ್ಳುತ್ತಿದ್ದಾರೆ.
Published by:Mahmadrafik K
First published: