Business Idea: 10 ಸಾವಿರದಲ್ಲಿ ವ್ಯವಹಾರ ಆರಂಭಿಸಿ, ಮಾಸಿಕವಾಗಿ ಲಕ್ಷಕ್ಕೂ ಹೆಚ್ಚು ಹಣ ಗಳಿಸಿ

ಈ ವ್ಯವಹಾರಗಳನ್ನು ಆರಂಭಿಸಲು 10 ರಿಂದ 15 ಸಾವಿರ ರೂ.ವರೆಗೆ ಮಾತ್ರ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಅಂತಹ ಲಾಭದಾಯಕ ಪರಿಕಲ್ಪನೆಗಳು (Profitable business ideas) ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Business Ideas: ನೀವು ಕೆಲಸದ ಹೊರತಾಗಿ ಹೆಚ್ಚುವರಿ ಆದಾಯವನ್ನು ಬಯಸಿದರೆ (How to earn money?) ಪ್ರತ್ಯೇಕವಾಗಿ ವ್ಯಾಪಾರ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು (Extra Income) ಮಾಡಬಹುದು. ಇಂದು ಮನೆಯಲ್ಲಿಯೇ ಕುಳಿತು ನಿಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮಾಡುವ ಮೂಲಕ ಉತ್ತಮ ಆದಾಯವನ್ನು (good income) ನಿಮ್ಮದಾಗಿಸಿಕೊಳ್ಳಬಹುದು. ಮನೆಯಲ್ಲಿಯೇ ಕುಳಿತು ಕಡಿಮೆ ಬಂಡವಾಳ (Investment) ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ವ್ಯವಹಾರಗಳನ್ನು ಆರಂಭಿಸಲು 10 ರಿಂದ 15 ಸಾವಿರ ರೂ.ವರೆಗೆ ಮಾತ್ರ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಅಂತಹ ಲಾಭದಾಯಕ ಪರಿಕಲ್ಪನೆಗಳು (Profitable business ideas) ಇಲ್ಲಿವೆ.

ಸ್ವಂತ ವ್ಯಾಪಾರ (Own Business) ಆರಂಭಿಸಬೇಕು ಅನ್ನೋದು ಬಹುತೇಕರ ಕನಸು,. ಆದ್ರೆ ಅದು ಹೇಗೆ ನಡೆಯುತ್ತಾ ಅನ್ನೋ ಆತಂಕ ಇರುತ್ತದೆ. ಜೊತೆಗೆ ಈ ವ್ಯವಹಾರ ವರ್ಷದ ಎಲ್ಲ ದಿನಗಳಲ್ಲಿ ನಡೆಯುತ್ತಿರಬೇಕು. ಅಂತಹ ವ್ಯವಹಾರಗಳನ್ನು ಆರಂಭಿಸುವತ್ತ ಜನರು ಮುಂದಾಗುತ್ತಾರೆ.

ಚಾಕ್ ತಯಾರಿಕೆ ವ್ಯಾಪಾರ (Chalk Making Business)

ಸೀಮೆಸುಣ್ಣ ತಯಾರಿಕೆ ವ್ಯವಹಾರವರನ್ನ ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾಗಿದೆ. ಈ ವ್ಯವಹಾರವನ್ನು ಮನೆಯಲ್ಲಿ ಕುಳಿತು ಸುಲಭವಾಗಿ ಪ್ರಾರಂಭಿಸಬಹುದು. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸೀಮೆಸುಣ್ಣದ ಅಗತ್ಯವಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸೀಮೆಸುಣ್ಣವನ್ನು ತಯಾರಿಸಲು ಹೆಚ್ಚಿನ ವಸ್ತುಗಳ ಬೇಕಾಗುವದಿಲ್ಲ.

ಸೀಮೆಸುಣ್ಣ ತಯಾರಿಕೆ ವ್ಯವಹಾರವನ್ನು ಕೇವಲ 10,000 ರೂಗಳಲ್ಲಿ ಪ್ರಾರಂಭಿಸಬಹುದು. ಇದರಲ್ಲಿ ಬಿಳಿ ಸೀಮೆಸುಣ್ಣದಿಂದಲೂ ಬಣ್ಣದ ಸೀಮೆಸುಣ್ಣವನ್ನು ತಯಾರಿಸಬಹುದು. ಸೀಮೆಸುಣ್ಣವನ್ನು ಮುಖ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲಾಗುತ್ತದೆ. ಇದು ಬಿಳಿ ಬಣ್ಣದ ಪುಡಿ. ಇದು ಜಿಪ್ಸಮ್ ಎಂಬ ಕಲ್ಲಿನಿಂದ ತಯಾರಿಸಿದ ಜೇಡಿಮಣ್ಣಿನ ಒಂದು ವಿಧವಾಗಿದೆ.

ಇದನ್ನೂ ಓದಿ:  LIC Jeevan Tarun Plan: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಯೋಜನೆ: ಸಿಗುತ್ತೆ 26 ಲಕ್ಷ ರೂಪಾಯಿ

ಬಿಂದಿ ತಯಾರಿಕೆ ವ್ಯಾಪಾರ (Bindi making Business)

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಂದಿ ಬೇಡಿಕೆ ಹೆಚ್ಚಿದೆ. ಮೊದಲು ವಿವಾಹಿತ ಮಹಿಳೆಯರು ಮಾತ್ರ ಬಿಂದಿಗೆ ಹಚ್ಚುತ್ತಿದ್ದರು, ಆದರೆ ಈಗ ಹುಡುಗಿಯರು ಬಿಂದಿ ಹಚ್ಚುವ ಟ್ರೆಂಡ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಹೊರ ದೇಶಗಳಲ್ಲೂ ಮಹಿಳೆಯರು ಬಿಂದಿ ಹಚ್ಚಲು ಆರಂಭಿಸಿದ್ದಾರೆ. ಕೇವಲ 12,000 ರೂಪಾಯಿ ಹೂಡಿಕೆ ಮಾಡಿ ಮನೆಯಲ್ಲಿಯೇ ಕುಳಿತು ಬಿಂದಿ ತಯಾರಿಸುವ ವ್ಯಾಪಾರ ಆರಂಭಿಸಬಹುದು. ವಿವಿಧ ಆಕೃತಿಯ ಬಿಂದಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದೆ.

ಲಕೋಟೆಗಳ ತಯಾರಿಕೆ ವ್ಯಾಪಾರ (Envelope Making Business)

ಲಕೋಟೆಗಳನ್ನು ತಯಾರಿಸುವುದು ತುಂಬಾ ಸರಳ ಮತ್ತು ಅಗ್ಗದ ವ್ಯವಹಾರವಾಗಿದೆ. ಇದು ಕಾಗದ ಅಥವಾ ಕಾರ್ಡ್ ಬೋರ್ಡ್ ಇತ್ಯಾದಿಗಳಿಂದ ತಯಾರಿಸಿದ ಉತ್ಪನ್ನವಾಗಿದೆ. ಇದನ್ನು ಹೆಚ್ಚಾಗಿ ಪ್ಯಾಕೇಜಿಂಗ್ಗಾಗಿ ಬಳಸಲಾಗುತ್ತದೆ. ಪೇಪರ್‌ಗಳು, ಗ್ರೀಟಿಂಗ್ ಕಾರ್ಡ್‌ಗಳು ಮುಂತಾದ ವಸ್ತುಗಳನ್ನು ಪ್ಯಾಕೇಜಿಂಗ್ ಮಾಡಲು ಇದನ್ನು ಬಳಸಲಾಗುತ್ತದೆ.

ಈ ವ್ಯವಹಾರದಲ್ಲಿ ಪ್ರತಿ ತಿಂಗಳು ಗಳಿಕೆ ಇರುತ್ತದೆ. ನೀವು ಮನೆಯಿಂದಲೇ ಈ ವ್ಯವಹಾರವನ್ನು ಪ್ರಾರಂಭಿಸಿದರೆ, ನೀವು 10,000 ರಿಂದ 30,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಮತ್ತು ನೀವು ಯಂತ್ರದಿಂದ ಲಕೋಟೆಗಳನ್ನು ತಯಾರಿಸಿದರೆ, ಇದಕ್ಕಾಗಿ ನೀವು 2,00,000 ರಿಂದ 5,00,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿ:  Inter caste Marriage: ಅಂತರ್ಜಾತಿ ಮದುವೆಯಾಗುವ ಜೋಡಿಗೆ ಸಿಗುತ್ತೆ ಸರ್ಕಾರದಿಂದ ಧನ ಸಹಾಯ

ಮೇಣದಬತ್ತಿ ತಯಾರಿಸುವ ವ್ಯವಹಾರ (Candle making Business)

ಈ ವ್ಯವಹಾರವೂ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಮೊದಲಿಗೆ ರಾತ್ರಿ ವಿದ್ಯುತ್ ಕಡಿತಗೊಂಡಾಗ ಮೇಣದ ಬತ್ತಿ ಬೆಳಗುತ್ತಿದ್ದರು. ಈಗ ಬ್ಯಾಟರಿ ಚಾಲಿತ, ವಿದ್ಯುತ್ ಚಾಲಿತ ಟಾರ್ಚ್ ಬಳಕೆ ಮಾಡಲಾಗುತ್ತಿದೆ. ಈಗ ಹುಟ್ಟುಹಬ್ಬ, ಮನೆ, ಹೋಟೆಲ್ ಗಳನ್ನು ಅಲಂಕಾರಿಕ ವಸ್ತುಗಳಾಗಿ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಈ ಉದ್ಯಮ ಆರಂಭಕ್ಕೆ ನೀವು 10 ರಿಂದ 20 ಸಾವಿರ ರೂ. ಹೂಡಿಕೆ ಮಾಡಬೇಕಾಗುತ್ತದೆ.
Published by:Mahmadrafik K
First published: