ಈಗಂತೂ ಖಾಸಗಿ ಕಂಪನಿಗಳ ಕೆಲಸಗಳು (Private Company Jobs) ನೀರಿನ ಮೇಲಿನ ಗುಳ್ಳೆಗಳಂತಾಗಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎಂದರೆ ಆ ಗುಳ್ಳೆ ಯಾವುದೇ ಕ್ಷಣದಲ್ಲಿ ಬೇಕಾದರೂ ಒಡೆದು ಮಾಯವಾಗಬಹುದು. ಈಗಿನ ಖಾಸಗಿ ಕಂಪನಿಯಲ್ಲಿನ ಕೆಲಸಗಳು (Work) ಇದೇ ರೀತಿ ಯಾವುದೇ ಕ್ಷಣದಲ್ಲಿ ಬೇಕಾದರೂ ನಮ್ಮನ್ನು ದಾರಿ ಮಧ್ಯದಲ್ಲಿ ಬಿಟ್ಟು ಹೋಗಬಹುದು. ಇದಕ್ಕೆ ಸದ್ಯ ನಡೆಯುತ್ತಿರುವ ಉದ್ಯೋಗಿ ವಜಾಗೊಳಿಸುವಿಕೆಯೇ (Layoffs) ಸಾಕ್ಷಿ. ಹೀಗೆ ಕೆಲಸ ಹೋದರೆ ಏನು ಮಾಡೋದು ಹೇಳಿ? ಈ ಯೋಚನೆ ಅನೇಕರ ತಲೆಯಲ್ಲಿ ಇದೀಗ ಓಡಾಡುತ್ತಿದೆ ಅಂತ ಹೇಳಬಹುದು.
ಆದರೆ ಏನು ಮಾಡುವುದು? ಸ್ವಂತ ವ್ಯವಹಾರ ಶುರು (New Business) ಮಾಡಲು ಕೈಯಲ್ಲಿ ಕಾಸಿಲ್ಲ (Money), ಇದ್ದರೂ ಅದು ದೈನಂದಿನ ಜೀವನದ ಬಂಡಿಯನ್ನು ಸಾಗಿಸಲು ಬೇಕು. ಹೀಗೆ ಕೈಯಲ್ಲಿ ಕಾಸಿಲ್ಲ ಮತ್ತು ಬ್ಯಾಂಕ್ ಖಾತೆಯಲ್ಲಿ (Bank Account Balance) ಸ್ವಂತ ವ್ಯವಹಾರದಲ್ಲಿ ಹೂಡಿಕೆ ಮಾಡಲು ಹಣವಿಲ್ಲ ಅಂತ ಅನೇಕರು ಖಾಸಗಿ ಕಂಪನಿಗಳ ಅನಿಶ್ಚಿತ ಕೆಲಸಗಳಿಗೆ ಜೋತು ಬಿದ್ದಿದ್ದಾರೆ ಅಂತ ಹೇಳಬಹುದು.
ಇಂದಿನ ಜಗತ್ತಿನಲ್ಲಿ, ಯಶಸ್ವಿ ವ್ಯವಹಾರವನ್ನು ಪ್ರಾರಂಭಿಸುವ ಸಾಧ್ಯತೆಗಳಿಗೆ ಏನೂ ಬರವಿಲ್ಲ. ತಂತ್ರಜ್ಞಾನದ ಪ್ರಗತಿ ಮತ್ತು ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆಗಳೊಂದಿಗೆ, ಪ್ರತಿದಿನ ಹೊಸ ಹೊಸ ವ್ಯವಹಾರ ಕಲ್ಪನೆಗಳು ಹೊರ ಹೊಮ್ಮುತ್ತಿವೆ ಅಂತ ಹೇಳಬಹುದು.
10 ಸ್ಮಾರ್ಟ್ ಬ್ಯುಸಿನೆಸ್ ಐಡಿಯಾಗಳು
ಆದಾಗ್ಯೂ, ಸರಿಯಾದ ವ್ಯವಹಾರ ಕಲ್ಪನೆಯನ್ನು ಆಯ್ಕೆ ಮಾಡುವುದು ಮತ್ತು ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಅಂದುಕೊಂಡಿದ್ದಕಿಂತ ಸ್ವಲ್ಪ ಕಠಿಣವಾದ ಕೆಲಸವಾಗಿದೆ.
ನಿಮಗೆ ಯಾವುದಾದರೂ ಒಂದು ಒಳ್ಳೆಯ ಸ್ವಂತ ವ್ಯವಹಾರ ಶುರು ಮಾಡಬೇಕು ಅನ್ನೋ ಯೋಚನೆ ಇದ್ದರೆ, ಇಲ್ಲಿವೆ ನೋಡಿ 10 ಯಶಸ್ವಿ ವ್ಯವಹಾರ ಕಲ್ಪನೆಗಳು.
1. ಇ-ಕಾಮರ್ಸ್ ಸ್ಟೋರ್: ಇ-ಕಾಮರ್ಸ್ ಸ್ಟೋರ್ ಅನ್ನು ಪ್ರಾರಂಭಿಸುವುದು ತುಂಬಾನೇ ಲಾಭದಾಯಕ ವ್ಯವಹಾರ ಕಲ್ಪನೆಯಾಗಿದೆ. ಅದರಲ್ಲೂ ವಿಶೇಷವಾಗಿ ನೀವು ನಿರ್ದಿಷ್ಟವಾದ ಒಂದು ಉತ್ಪನ್ನ ಅಥವಾ ಸೇವೆಯನ್ನು ನೀಡುತ್ತಿದ್ದರಂತೂ ಇದು ತುಂಬಾನೇ ಒಳ್ಳೆಯ ವ್ಯವಹಾರ ಅಂತ ಹೇಳಬಹುದು.
2.ಸಾಮಾಜಿಕ ಮಾಧ್ಯಮ ನಿರ್ವಹಣೆ: ಸಾಮಾಜಿಕ ಮಾಧ್ಯಮವು ಯಾವುದೇ ವ್ಯವಹಾರದ ಮಾರ್ಕೆಟಿಂಗ್ ಕಾರ್ಯತಂತ್ರದ ಅತ್ಯಗತ್ಯ ಭಾಗವಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವುದು ಒಂದು ಲಾಭದಾಯಕ ವ್ಯವಹಾರವಾಗಿದೆ.
3.ಆನ್ಲೈನ್ ಶಿಕ್ಷಣ: ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಈ ಆನ್ಲೈನ್ ಶಿಕ್ಷಣಕ್ಕೆ ತುಂಬಾನೇ ಡಿಮ್ಯಾಂಡ್ ಹೆಚ್ಚಾಗಿದೆ ಅಂತ ಹೇಳಬಹುದು. ಆನ್ಲೈನ್ ಕೋರ್ಸ್ ಅಥವಾ ಬೋಧನಾ ಸೇವೆಯನ್ನು ಪ್ರಾರಂಭಿಸುವುದು ಯಶಸ್ವಿ ವ್ಯವಹಾರ ಕಲ್ಪನೆಯಾಗಿದೆ.
4.ವೈಯಕ್ತಿಕ ಫಿಟ್ನೆಸ್ ತರಬೇತಿ: ಈಗಂತೂ ಬಹುತೇಕರು ಫಿಟ್ ಆಗಿ ಇರಬೇಕು ಅಂತ ಬಯಸುತ್ತಾರೆ, ಹಾಗಾಗಿ ಈಗ ವೈಯಕ್ತಿಕ ಫಿಟ್ನೆಸ್ ತರಬೇತಿ ಕೇಂದ್ರಗಳನ್ನು ಶುರು ಮಾಡುವುದು ಒಂದು ಒಳ್ಳೆಯ ವ್ಯವಹಾರ ಯೋಜನೆ ಅಂತ ಹೇಳಬಹುದು.
5.ಫುಡ್ ಟ್ರಕ್: ರುಚಿಕರವಾದ ಆಹಾರ ತಿನ್ನೋದು ಅಂದ್ರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಹಾಗಾಗಿ ಈ ಫುಡ್ ಟ್ರಕ್ ಗಳು ತುಂಬಾನೇ ಜನಪ್ರಿಯ ವ್ಯಾಪಾರ ಕಲ್ಪನೆಯಾಗಿದೆ ಮತ್ತು ಹೆಚ್ಚಿನ ಕಾಲ್ನಡಿಗೆ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಥವಾ ಕಡಿಮೆ ಊಟದ ಆಯ್ಕೆಗಳಿರುವ ಪ್ರದೇಶಗಳಲ್ಲಿ ಇದು ತುಂಬಾನೇ ಯಶಸ್ವಿಯಾಗಬಹುದು.
6.ಮನೆ ಶುಚಿಗೊಳಿಸುವ ಸೇವೆಗಳು: ಈಗ ಗಂಡ ಮತ್ತು ಹೆಂಡತಿ ಇಬ್ಬರು ಕೆಲಸ ಮಾಡುವುದರಿಂದ ಮನೆಯನ್ನು ಸ್ವಚ್ಚವಾಗಿರಿಸಿಕೊಳ್ಳಲು ತುಂಬಾನೇ ಕಷ್ಟಕರವಾಗಿರುತ್ತದೆ. ಹಾಗಾಗಿ ಮನೆ ಸ್ವಚ್ಛಗೊಳಿಸುವ ಸೇವೆಗಳಿಗೆ ಬೇಡಿಕೆ ತುಂಬಾನೇ ಹೆಚ್ಚುತ್ತಿದೆ ಮತ್ತು ಇದು ಒಂದು ಅತ್ಯುತ್ತಮ ವ್ಯಾಪಾರ ಅವಕಾಶವಾಗಿದೆ.
ಇದನ್ನೂ ಓದಿ: Business Ideas: ಕೈಯಲ್ಲಿ ಕಡಿಮೆ ದುಡ್ಡಿದ್ರೂ ಸಾಕು, ಈ ಬ್ಯುಸಿನೆಸ್ ಆರಂಭಿಸಿ ಬಿಂದಾಸ್ ಆಗಿರಬಹುದು!
7.ಗ್ರಾಫಿಕ್ ಡಿಸೈನ್: ನೀವು ಗ್ರಾಫಿಕ್ ವಿನ್ಯಾಸದ ಪ್ರತಿಭೆಯನ್ನು ಹೊಂದಿದ್ದರೆ, ವಿನ್ಯಾಸ ವ್ಯವಹಾರವನ್ನು ಪ್ರಾರಂಭಿಸುವುದು ಲಾಭದಾಯಕ ಉದ್ಯಮವಾಗಿದೆ.
8.ಸಾಕುಪ್ರಾಣಿ ಆರೈಕೆ ಸೇವೆಗಳು: ಇದೀಗ ಸಾಕುಪ್ರಾಣಿಗಳ ಮಾಲೀಕತ್ವವು ಹೆಚ್ಚುತ್ತಿರುವುದರಿಂದ, ಸಾಕುಪ್ರಾಣಿಗಳ ಆರೈಕೆ ಸೇವೆಯನ್ನು ಪ್ರಾರಂಭಿಸುವುದು ಸಹ ತುಂಬಾನೇ ಲಾಭದಾಯಕ ವ್ಯವಹಾರ ಕಲ್ಪನೆಯಾಗಿದೆ ಅಂತ ಹೇಳಬಹುದು.
9. ಆನ್ಲೈನ್ ಮಾರ್ಕೆಟಿಂಗ್ ಏಜೆನ್ಸಿ: ವ್ಯವಹಾರಗಳು ಯಶಸ್ವಿಯಾಗಲು ಆನ್ಲೈನ್ ಮಾರ್ಕೆಟಿಂಗ್ ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾಗಿ ಆನ್ಲೈನ್ ಮಾರ್ಕೆಟಿಂಗ್ ಏಜೆನ್ಸಿಯನ್ನು ಪ್ರಾರಂಭಿಸುವುದು ಭರವಸೆಯ ವ್ಯವಹಾರ ಕಲ್ಪನೆಯಾಗಿದೆ.
10.ಮೊಬೈಲ್ ಅಪ್ಲಿಕೇಶನ್ ಡೆವಲಪರ್: ಮೊಬೈಲ್ ಅಪ್ಲಿಕೇಶನ್ ಗಳು ಇದೀಗ ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ, ಮೊಬೈಲ್ ಅಪ್ಲಿಕೇಶನ್ ಡೆವಲಪರ್ ಗಳಿಗೆ ತುಂಬಾನೇ ಬೇಡಿಕೆ ಇದೆ ಮತ್ತು ಇದನ್ನು ಸ್ವಂತ ವ್ಯವಹಾರವನ್ನಾಗಿ ಸಹ ಶುರು ಮಾಡಬಹುದು.
ಯಶಸ್ವಿ ವ್ಯವಹಾರವನ್ನು ಪ್ರಾರಂಭಿಸಲು ಜಾಗರೂಕ ಯೋಜನೆ, ಹೂಡಿಕೆ ಮಾಡಲು ಹಣ ಮತ್ತು ಅದನ್ನು ಕಾರ್ಯಗತಗೊಳಿಸಲು ದೃಢವಾದ ನಿಶ್ಚಯದ ಅಗತ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ