Business Idea: 2 ಲಕ್ಷ ಇದ್ರೆ ಈ ಬ್ಯುಸಿನೆಸ್​ ಶುರು ಮಾಡಿ, ತಿಂಗಳಿಗೆ ಈಸಿಯಾಗಿ 50 ಸಾವಿರ ಆದಾಯ ಬರುತ್ತೆ!

ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆ ತುಂಬಾ ದುಬಾರಿಯಾಗಿರುವುದರಿಂದ ಸಾಮಾನ್ಯ ಜನರು ಅದನ್ನು ಖರೀದಿಸಲು ಹೆದರುತ್ತಾರೆ. ಈ ಹಿನ್ನೆಲೆಯಲ್ಲಿ ಅಡುಗೆ ತೈಲ  ವ್ಯಾಪಾರ ಮಾಡುವುದರಿಂದ ಉತ್ತಮ ಆದಾಯ ಪಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಣ (Money) ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ ಒಂದು ಬ್ಯುಸಿನೆಸ್​ ಐಡಿಯಾ (Business Idea) ಇದೆ ನೋಡಿ.

ಅಡುಗೆ ಎಣ್ಣೆ  ಬ್ಯುಸಿನೆಸ್​ನಿಂದ ಹೆಚ್ಚಿನ ಆದಾಯ!

ನಮ್ಮಲ್ಲಿ ಹೆಚ್ಚಿನವರು ಹೊಸಬರು ವ್ಯಾಪಾರ  ಪ್ರಾರಂಭಿಸಲು ಮುಂದಾಗುತ್ತಿದ್ದಾರೆ. ಆದರೆ ಜೀವನ ನಿರ್ವಹಣೆಗೆ ಅವರು ಕಷ್ಟಪಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆ ತುಂಬಾ ದುಬಾರಿಯಾಗಿರುವುದರಿಂದ ಸಾಮಾನ್ಯ ಜನರು ಅದನ್ನು ಖರೀದಿಸಲು ಹೆದರುತ್ತಾರೆ. ಈ ಹಿನ್ನೆಲೆಯಲ್ಲಿ ಅಡುಗೆ ತೈಲ  ವ್ಯಾಪಾರ ಮಾಡುವುದರಿಂದ ಉತ್ತಮ ಆದಾಯ ಪಡೆಯಬಹುದು. ಈ ವ್ಯವಹಾರವನ್ನು ಹಳ್ಳಿ ಅಥವಾ ನಗರದಲ್ಲಿ ಎಲ್ಲಿ ಬೇಕಾದರೂ ಪ್ರಾರಂಭಿಸಬಹುದು.

ಕಡಿಮೆ ಇನ್ವೆಸ್ಟ್​​ಮೆಂಟ್​, ಹೆವ್ವಿ ಪ್ರಾಫಿಟ್​!

ಈ ಹಿಂದೆ ಆಯಿಲ್ ಮಿಲ್‌ಗಳನ್ನು ಆರಂಭಿಸಬೇಕೆಂದಿದ್ದರೆ, ಸಾಕಷ್ಟು ಹಣ ಖರ್ಚಾಗುತ್ತಿತ್ತು. ಈಗ ಮಾರುಕಟ್ಟೆಯಲ್ಲಿ ಪೋರ್ಟಬಲ್ ಯಂತ್ರಗಳ ಆಗಮನದಿಂದ ಕಡಿಮೆ ಹೂಡಿಕೆಯಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇದರ ಜೊತೆಗೆ, ಈ ಆಧುನಿಕ ಯಂತ್ರಗಳು ಕಾರ್ಯನಿರ್ವಹಿಸಲು ಹೆಚ್ಚಿನ ಜನರ ಅಗತ್ಯವಿರುವುದಿಲ್ಲ. ತೈಲ ವ್ಯಾಪಾರವನ್ನು ಪ್ರಾರಂಭಿಸಲು ತೈಲ ಸಂಸ್ಕರಣಾಗಾರ, ಸ್ವಲ್ಪ ದೊಡ್ಡದಾದ ಮನೆ ಮತ್ತು ಎಣ್ಣೆಯನ್ನು ತಯಾರಿಸಲು ಬೇಕಾಗುವ ಬೆಳೆ, ಉದಾಹರಣೆಗೆ ಕಡಲೆಕಾಯಿ ಮತ್ತು ಎಳ್ಳು ಬೀಜಗಳು. ಆಧುನಿಕ ಯಂತ್ರಗಳ ಸಹಾಯದಿಂದ ಮೇಲಿನ ಧಾನ್ಯಗಳ ಎಣ್ಣೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಬಹಳ ಸುಲಭವಾಗಿ ತೆಗೆಯಬಹುದು.

ಇದನ್ನೂ ಓದಿ: ಈ ಎಲೆಗಳ ಬ್ಯುಸಿನೆಸ್​​ ಶುರು ಮಾಡಿ ಜೇಬು ತುಂಬಿಸಿಕೊಳ್ಳಿ! ತುಂಬಾ ಸಿಂಪಲ್​, ಹೂಡಿಕೆ ಕೂಡ ಕಮ್ಮಿ

2 ಲಕ್ಷದಲ್ಲಿ ತೈಲ ಗಿರಣಿ ವ್ಯವಹಾರ ಪ್ರಾರಂಭಿಸಿ!

ವ್ಯವಹಾರವನ್ನು ಪ್ರಾರಂಭಿಸಲು, ನೀವು ಮೊದಲು ಮಧ್ಯಮ ಗಾತ್ರದ ಯಂತ್ರವನ್ನು ಖರೀದಿಸಬೇಕು. ವ್ಯಾಪಾರ ಲಾಭ ಹೆಚ್ಚಾದರೆ ನಂತರ ದೊಡ್ಡ ಯಂತ್ರಗಳನ್ನು ಖರೀದಿಸಬಹುದು. ಎಣ್ಣೆ ತಯಾರಿಸುವ ಯಂತ್ರಕ್ಕೆ ಸುಮಾರು 2 ಲಕ್ಷ ರೂಪಾಯಿ. ತೈಲ ಗಿರಣಿ ವ್ಯವಹಾರವನ್ನು ಪ್ರಾರಂಭಿಸಲು ನೀವು ಪರವಾನಗಿ ಸೇರಿದಂತೆ ಕೆಲವು ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಬೇಕಾಗುತ್ತದೆ. ಒಟ್ಟಾರೆಯಾಗಿ ಒಟ್ಟು 3-4 ಲಕ್ಷ ರೂಪಾಯಿ ಖರ್ಚಾಗುತ್ತೆ. ತೈಲ ಗುಣಮಟ್ಟ ಉತ್ತಮವಾಗಿದ್ದರೆ ಮತ್ತು ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾದರೆ, ವ್ಯವಹಾರವು ಅತ್ಯಂತ ವೇಗವಾಗಿ ಲಾಭವನ್ನು ಗಳಿಸಬಹುದು.

ಇದನ್ನೂ ಓದಿ: ಕುರುಕಲು ತಿಂಡಿ ಮಾರಿ ಕೋಟಿ ಕೋಟಿ ಗಳಿಸ್ಬಹುದು! ಅದಕ್ಕೆ ಮಾಡಬೇಕಾಗಿರೋದು ಇಷ್ಟೇ ನೋಡಿ

ಮಾರುಕಟ್ಟೆ ಮಾಡೋದೇ ಮುಖ್ಯವಾದ ಪಾಯಿಂಟ್​​!

ತೈಲ ವ್ಯವಹಾರದಲ್ಲಿ ಪ್ರಮುಖ ವಿಷಯವೆಂದರೆ ಗ್ರಾಹಕರನ್ನು ಮೆಚ್ಚಿಸುವುದು.  ಹೌದು, ವ್ಯಾಪಾರದ ಆದಾಯ ಮತ್ತು ಲಾಭವು ಗ್ರಾಹಕರ ಮೇಲೆ ಅವಲಂಬಿತವಾಗಿರುತ್ತದೆ. ತೈಲವನ್ನು ಔಟ್ಲೆಟ್ ಆಗಿ ಅಥವಾ ಅಂಗಡಿಯವರೊಂದಿಗೆ ಒಪ್ಪಂದದ ಮೂಲಕ ಮಾರಾಟ ಮಾಡಬಹುದು. ತೈಲ ಉತ್ಪಾದನೆಯಿಂದ ಉಳಿದ ತ್ಯಾಜ್ಯವನ್ನು ಜಾನುವಾರುಗಳ ಆಹಾರಕ್ಕೆ ಮಾರಾಟ ಮಾಡಬಹುದು. ತೈಲ ವ್ಯವಹಾರದ ಆದಾಯವು ಬೇಡಿಕೆ ಮತ್ತು ಕಚ್ಚಾ ವಸ್ತುಗಳ ಬೆಲೆಯನ್ನು ಅವಲಂಬಿಸಿರುತ್ತದೆ. ಕಚ್ಚಾ ವಸ್ತುಗಳ ಬೆಲೆ ಕಡಿಮೆಯಾದಷ್ಟೂ ಹೆಚ್ಚಿನ ಲಾಭ ಪಡೆಯಬಹುದು. ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದರೆ, ನೀವು ತಿಂಗಳಿಗೆ ಕನಿಷ್ಠ 20,000 ರಿಂದ 50,000 ರೂಪಾಯಿ ಆದಾಯಗಳಿಸಬಹುದು.
Published by:Vasudeva M
First published: