Buisness Idea: ಸಂಬಳಕ್ಕಿಂತ ಹೆಚ್ಚು ಹಣ ಗಳಿಸುವ ವ್ಯವಹಾರಗಳ ಪಟ್ಟಿ ಇಲ್ಲಿದೆ

Business Idea: ಇತ್ತೀಚಿನ ದಿನಗಳಲ್ಲಿ ಜನರು ಇಂತಹ ವ್ಯವಹಾರದ ಮೂಲಕ ಉದ್ಯೋಗಕ್ಕಿಂತ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬಹುತೇಕರು ಮಾಡುತ್ತಿರುವ ಉದ್ಯೋಗವನ್ನು ತೊರೆದು ಸ್ಟಾರ್ಟ್ ಅಪ್ (Startup) ನತ್ತ ಮುಖ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Business Idea: ಕೊರೊನಾ (Corona Virus And Lockdown) ಎಷ್ಟೋ ಜನರನ್ನು ಉದ್ಯೋಗ(Job)ವನ್ನು ಕಿತ್ತುಕೊಂಡಿದೆ. ಕೆಲವರು ಉಳಿತಾಯದ ಹಣವನ್ನೆಲ್ಲ (Savings) ಖರ್ಚು ಮಾಡಿ ಹೊಸ ಕೆಲಸದ ಶೋಧದಲ್ಲಿದ್ದಾರೆ.  ಕೆಲಸ ಹೋದ್ರೂ ಪರವಾಗಿಲ್ಲ, ಮನೆಯಲ್ಲಿಯೇ ಕುಳಿತು ಹೊಸ ವ್ಯವಹಾರ (New Business) ಆರಂಭಿಸುವ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಕಡಿಮೆ ಹೂಡಿಕೆ (Low Investment) ಮಾಡುವ ಮೂಲಕ ಉತ್ತಮ ಆದಾಯವನ್ನು (Income) ನಿಮ್ಮದಾಗಿಸಿಕೊಳ್ಳಬಹುದು. ಇಲ್ಲಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ವ್ಯವಹಾರಗಳನ್ನು ಆಯ್ಕೆ ಮಾಡಿ ಹೆಚ್ಚು ಆದಾಯ ಸಂಪಾದಿಸಬಹುದು. ಇತ್ತೀಚಿನ ದಿನಗಳಲ್ಲಿ ಜನರು ಇಂತಹ ವ್ಯವಹಾರದ ಮೂಲಕ ಉದ್ಯೋಗಕ್ಕಿಂತ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬಹುತೇಕರು ಮಾಡುತ್ತಿರುವ ಉದ್ಯೋಗವನ್ನು ತೊರೆದು ಸ್ಟಾರ್ಟ್ ಅಪ್ (Startup) ನತ್ತ ಮುಖ ಮಾಡುತ್ತಿದ್ದಾರೆ.

ಹಣಕಾಸು ಯೋಜನೆ ಸೇವೆ, ಬ್ಯೂಟಿ ಮತ್ತು ಸ್ಪಾ ಶಾಪ್, ಗೇಮ್ ಸ್ಟೋರ್‌ ನಂತಹ ಎಲ್ಲಾ ವ್ಯವಹಾರಗಳ ಮೂಲಕ ನೀವು ದೊಡ್ಡ ಮೊತ್ತದ ಹಣವನ್ನು ಗಳಿಸಬಹುದು. ಇದರಲ್ಲಿ ನೀವು ವಿಶೇಷವಾಗಿ ಏನನ್ನೂ ಹೂಡಿಕೆ ಮಾಡುವ ಅಗತ್ಯವಿಲ್ಲ. ನಿಮ್ಮ ವ್ಯಾಪಾರವು ಬೆಳೆದಂತೆ, ಹೂಡಿಕೆಯನ್ನು ಹೆಚ್ಚಿಸಬಹುದು.

ಹಣಕಾಸು ಯೋಜನೆ ಸೇವೆ- Finance Business Planning Service

ಹಣವನ್ನು ಹೊಂದಿರುವ ಅನೇಕ ಜನರಿದ್ದಾರೆ. ಆದರೆ ಆ ಹಣವನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡುವುದು ಅಥವಾ ಹೂಡಿಕೆ ಮಾಡುವ ಮೂಲಕ ಆ ಹಣವನ್ನು ಹೇಗೆ ಹೆಚ್ಚಿಸುವುದು ಎಂಬುವುದರ ಬಗ್ಗೆ ಅರಿವಿಲ್ಲ. ನೀವು ಹಣಕಾಸಿನ ಬಗ್ಗೆ ಸ್ವಲ್ಪ ಜ್ಞಾನವನ್ನು ಹೊಂದಿದ್ದರೆ, ನೀವು ಅದರಿಂದ ಉತ್ತಮ ಹಣವನ್ನು ಗಳಿಸಬಹುದು ಎಂಬುದನ್ನು ನೆನಪಿಡಿ.

ಇದನ್ನೂ ಓದಿ:  ಈ 31 ಲಕ್ಷ ಜನರಿಗೆ ಉಡುಗೊರೆ ನೀಡಲು ಸಿದ್ಧವಾಗಿದೆ Modi Government: ಶೀಘ್ರದಲ್ಲೇ ಘೋಷಣೆ ಸಾಧ್ಯತೆ

ಇದಕ್ಕಾಗಿ ನೀವು ಫೈನಾನ್ಶಿಯಲ್ ಪ್ಲಾನಿಂಗ್ ಸರ್ವಿಸ್ ಬಿಸಿನೆಸ್ ನೀಡುವ ಮೂಲಕ ಉತ್ತಮ ವ್ಯಾಪಾರ ಆರಂಭಿಸಬಹುದು. ಈ ವ್ಯವಹಾರದ ವಿಶೇಷತೆಯೆಂದರೆ ನೀವು ಅದರಲ್ಲಿ ಏನನ್ನೂ ಹೂಡಿಕೆ ಮಾಡುವ ಅಗತ್ಯವಿಲ್ಲ. ಇಂದಿನ ಆರ್ಥಿಕ ಯುಗದಲ್ಲಿ ಜನರು ಈ ವ್ಯವಹಾರದ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಆಟದ ಅಂಗಡಿ/ ವಿಡಿಯೋ ಗೇಮ್ ಸೆಂಟರ್

ಮಕ್ಕಳು ಹೆಚ್ಚು ಹೆಚ್ಚು ಆಟಗಳನ್ನು ಆಡಲು ಇಷ್ಟಪಡುತ್ತಾರೆ. ಅದಕ್ಕಾಗಿ ಅವರು ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿರುವ ಆಟದ ಅಂಗಡಿಗೆ ಹೋಗಲು ಇಷ್ಟಪಡುತ್ತಾರೆ. ನೀವು ಸಹ ಅಂತಹ ಸ್ಥಳದಲ್ಲಿ ವಾಸಿಸುತ್ತಿದ್ದರೆ ಈ ವ್ಯವಹಾರವು ನಿಮಗೆ ತುಂಬಾ ಒಳ್ಳೆಯದು ಮತ್ತು ಲಾಭದಾಯಕವಾಗಿರಲಿದೆ.

ಸದ್ಯದ ಕಾಲದಲ್ಲಿ ಪೋಷಕರೇ ಮಕ್ಕಳಿಗೆ ಹೆಚ್ಚು ಆಟ ಆಡಲು ಪ್ರೋತ್ಸಾಹಿಸುತ್ತಾರೆ. ಇದಕ್ಕೆ ಕಾರಣ ಟಿವಿ, ಮೊಬೈಲ್ ಮತ್ತು ಕಂಪ್ಯೂಟರ್. ಮಕ್ಕಳು ಆಟ ಆಡೋದರಿಂದ ಅವರ ಆರೋಗ್ಯ ಚೆನ್ನಾಗಿರುತ್ತೆ ಎಂದು ಅರ್ಥ ಮಾಡಿಕೊಂಡಿರುವ ಪೋಷಕರು ದೈಹಿಕ ಆಟಗಳನ್ನು ಕಲಿಸುತ್ತಾರೆ. ಹಾಗಾಗಿ ಆಟಿಕೆ ಅಥವಾ ಆಟದ ಸಾಮಾನುಗಳನ್ನು ಮಾರುವಂತಹ ವ್ಯವಹಾರ ಹೆಚ್ಚು ಉತ್ತಮ.

ಇನ್ನು ಮತ್ತೊಂದು ವರ್ಗದ ಮಕ್ಕಳು ವಿಡಿಯೋ ಗೇಮ್ ಆಡಲು ಇಷ್ಟಪಡುತ್ತಾರೆ. ಹಾಗಾಗಿ ಮಕ್ಕಳು ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ವಿಡಿಯೋ ಗೇಮ್ ಸೆಂಟರ್ ಆರಂಭಿಸಬಹುದು ಅಥವಾ ಬಾಡಿಗೆ ಕ್ರೀಡಾ ವಸ್ತುಗಳನ್ನು ನೀಡುವ ಶಾಪ್ ಆರಂಭಿಸಬುದು.

ಇದನ್ನೂ ಓದಿ:  Post Office MIS: ಪ್ರತಿ ತಿಂಗಳು ನಿರ್ದಿಷ್ಟ ಆದಾಯ ನೀಡುವ ಅಂಚೆ ಕಚೇರಿಯ ಮಾಸಿಕ ಯೋಜನೆ

ಬ್ಯೂಟಿ & ಸ್ಪಾ ಶಾಪ್

ನೀವು ಮಹಿಳೆಯಾಗಿದ್ದರೆ ಮತ್ತು ಸೌಂದರ್ಯ ಮತ್ತು ಸ್ಪಾ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರೆ, ನೀವು ಇದರಿಂದ ಸಾಕಷ್ಟು ಹಣವನ್ನು ಗಳಿಸಬಹುದು. ನಿಮ್ಮ ಸ್ವಂತ ಮನೆಯಲ್ಲಿ ಸೌಂದರ್ಯ ಮತ್ತು ಸ್ಪಾ ಅಂಗಡಿಯನ್ನು ತೆರೆಯುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು.

ನೀವು ಬಯಸಿದರೆ ಬಾಡಿಗೆಗೆ ಅಂಗಡಿಯನ್ನು ತೆಗೆದುಕೊಳ್ಳುವ ಮೂಲಕ ಕಡಿಮೆ ಹೂಡಿಕೆಯಲ್ಲಿ ಉತ್ತಮವಾದ ಸೌಂದರ್ಯ ಮತ್ತು ಸ್ಪಾ ಅಂಗಡಿಯನ್ನು ಪ್ರಾರಂಭಿಸಬಹುದು. ಇಂದಿನ ದಿನಗಳಲ್ಲಿ ದೇಶದ ಬಹುತೇಕ ಮಹಿಳೆಯರು ಉತ್ತಮ ಆದಾಯ ಗಳಿಸುತ್ತಿದ್ದಾರೆ.
Published by:Mahmadrafik K
First published: