Business Idea: ದಿನಕ್ಕೆ ಸಿಗುತ್ತೆ 4 ಸಾವಿರ ರೂಪಾಯಿ: ಹೇಗೆ ಆರಂಭಿಸೋದು ಗೊತ್ತಾ ಈ ವ್ಯವಹಾರ?

ಇದರಲ್ಲಿ ನೀವು ದಿನದಲ್ಲಿ 4,000 ರೂ.ವರೆಗೆ ಸುಲಭವಾಗಿ ಗಳಿಸಬಹುದು.  ಈ ವ್ಯವಹಾರದ ದೊಡ್ಡ ವೈಶಿಷ್ಟ್ಯವೆಂದರೆ ಇದರಲ್ಲಿ ಪ್ರತ್ಯೇಕ ತರಬೇತಿ ಅಗತ್ಯ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ಒಂದು ವ್ಯವಹಾರ (Business) ಪ್ರಾರಂಭಿಸಬೇಕಾದ್ರೆ, ಹಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ವ್ಯವಹಾರ ಆರಂಭಿಸುವ ಮೊದಲು ಅದರಲ್ಲಿರುವ ಅಪಾಯಗಳನ್ನು ಮೊದಲ ತಿಳಿದುಕೊಳ್ಳಬೇಕು. ಮಾರುಕಟ್ಟೆ ಅಪಾಯಗಳ (Market Risk)ಜೊತೆಯಲ್ಲಿ ವ್ಯವಹಾರವನ್ನು ಕ್ರಮಬದ್ಧವಾಗಿ ನಡೆಸಿದ್ರೆ, ನೀವು ಕೆಲವೇ ದಿನಗಳಲ್ಲಿ ಶ್ರೀಮಂತರಾಗಬಹುದು. ನೀವು ವ್ಯಾಪಾರವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದರೆ, ನಾವು ನಿಮಗೆ ಅಂತಹ ವ್ಯವಹಾರ ಕಲ್ಪನೆಯನ್ನು (Business Idea) ನೀಡುತ್ತಿದ್ದೇವೆ. ಇದರಲ್ಲಿ ನೀವು ದಿನದಲ್ಲಿ 4,000 ರೂ.ವರೆಗೆ ಸುಲಭವಾಗಿ ಗಳಿಸಬಹುದು.  ಈ ವ್ಯವಹಾರದ ದೊಡ್ಡ ವೈಶಿಷ್ಟ್ಯವೆಂದರೆ ಇದರಲ್ಲಿ ಪ್ರತ್ಯೇಕ ತರಬೇತಿ ಅಗತ್ಯ ಇಲ್ಲ. ಇದರಲ್ಲಿ ಸುಲಭವಾಗಿ ಒಂದು ತಿಂಗಳಲ್ಲಿ 1,20,000 ರೂ. ಇದು ಕಾರ್ನ್ ಫ್ಲೇಕ್ಸ್ (Corn Flakes Business) ವ್ಯಾಪಾರ. ಈ ವ್ಯವಹಾರದ ಮೂಲಕ, ನೀವು ಒಂದು ತಿಂಗಳಲ್ಲಿ ಮಿಲಿಯನೇರ್ ಆಗಬಹುದು.

ಜೋಳದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಬಹುತೇಕ ಮನೆಗಳಲ್ಲಿ ಬೆಳಗಿನ ಉಪಾಹಾರದಲ್ಲಿ ಜೋಳದಿಂದ ತಯಾರಿದ ಅಡುಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತಿತ್ತು. ಈ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಮಾಹಿತಿ ಇಲ್ಲಿದೆ.

ಈ ವ್ಯವಹಾರ ಆರಂಭಿಸಲು ಎಷ್ಟು ಜಾಗ ಬೇಕು?

ಈ ವ್ಯವಹಾರವನ್ನು ಪ್ರಾರಂಭಿಸಲು, ಭೂಮಿಯನ್ನು ನೀವು ಹೊಂದಿರಬೇಕು. ಇದರ ಜೊತೆಗೆ ಜೋಳದ ಸಂಗ್ರಹಣೆಗೆ ಸ್ಥಳಾವಕಾಶವೂ ಬೇಕಾಗುತ್ತದೆ. ಕಚ್ಛಾವಸ್ತುಗಳ ಸಂಗ್ರಹಕ್ಕೆ ಗೋದಾಮಿನ ಅಗತ್ಯವಿರುತ್ತದೆ. ಒಟ್ಟು 2000 ರಿಂದ 3000 ಚದರ ಅಡಿ ಜಾಗವನ್ನು ಹೊಂದಿರಬೇಕು.

ಈ ವ್ಯವಹಾರಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಬೇಕಾಗುತ್ತದೆ, ಯಂತ್ರಗಳು, ವಿದ್ಯುತ್ ಸೌಲಭ್ಯ, ಜಿಎಸ್ಟಿ ಸಂಖ್ಯೆ, ಕಚ್ಚಾ ವಸ್ತು, ಸ್ಥಳಾವಕಾಶ ಮತ್ತು ದಾಸ್ತಾನು ಇರಿಸಿಕೊಳ್ಳಲು ನಿಮಗೆ ಗೋದಾಮು ಬೇಕಾಗುತ್ತದೆ.

ಎಲ್ಲಿ ವ್ಯಾಪಾರ ಮಾಡಬೇಕು?

ಈ ವ್ಯವಹಾರದಲ್ಲಿ ಬಳಸಲಾಗುವ ಈ ಯಂತ್ರಗಳನ್ನು ಜೋಳದಿಂದ ಮಾಡಿದ ಕಾರ್ನ್ ಫ್ಲೇಕ್ಸ್ ತಯಾರಿಸಲು ಬಳಸಲಾಗುವುದಿಲ್ಲ, ಆದರೆ ಗೋಧಿ ಮತ್ತು ಅಕ್ಕಿಯ ಚಕ್ಕೆಗಳನ್ನು ತಯಾರಿಸಲು ಸಹ ಬಳಸಬಹುದು. ಜೋಳದ ಹೆಚ್ಚಿನ ಇಳುವರಿ ಇರುವ ಪ್ರದೇಶದಲ್ಲಿ ವ್ಯಾಪಾರವನ್ನು ಸ್ಥಾಪಿಸಿಬೇಕು. ದೂರದ ಊರಿನಿಂದ ಮೆಕ್ಕೆಜೋಳ ತಂದು ಅವರ ಕಾರ್ನ್ ಫ್ಲೇಕ್ಸ್ ಮಾಡಿದ್ರೆ ಸಾರಿಗೆ ವೆಚ್ಚ ಸೇರುವದರಿಂದ ತುಂಬಾ ದುಬಾರಿಯಾಗುತ್ತದೆ. ಒಂದು ವೇಳೆ ನಿಮ್ಮದೇ ಜಮೀನು ಹೊಂದಿದ್ರೆ ನೀವೇ ಮೆಕ್ಕೆಜೋಳ ಬೆಳೆಯಬಹುದು. ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶವನ್ನು ನೀವೂ ಆಯ್ಕೆ ಮಾಡಿಕೊಳ್ಳೋದು ಉತ್ತಮ.

ಇದನ್ನೂ ಓದಿ:  Mudra Yojana: ಹೊಸ ಉದ್ಯಮ ಆರಂಭಿಸಬೇಕಾ? ಹಣಕಾಸಿನ ಕೊರತೆಯೇ? ಹಾಗಾದ್ರೆ ಮುದ್ರಾ ಯೋಜನೆ ಬಗ್ಗೆ ತಿಳಿದುಕೊಳ್ಳಿ

ಎಷ್ಟು ಲಾಭ ಸಿಗುತ್ತೆ?

ಮಾಧ್ಯಮ ವರದಿಗಳ ಪ್ರಕಾರ, ಒಂದು ಕೆಜಿ ಕಾರ್ನ್ ಫ್ಲೇಕ್‌ಗಳ ತಯಾರಿಕೆಯ ವೆಚ್ಚ ಸುಮಾರು 30 ರೂ.ಗಳು ಮತ್ತು ಮಾರುಕಟ್ಟೆಯಲ್ಲಿ ಕೆಜಿಗೆ 70 ರೂ.ಗೆ ಸುಲಭವಾಗಿ ಮಾರಾಟವಾಗುತ್ತದೆ. ನೀವು ಒಂದು ದಿನದಲ್ಲಿ 100 ಕೆಜಿ ಕಾರ್ನ್ ಫ್ಲೇಕ್ಸ್ ಅನ್ನು ಮಾರಾಟ ಮಾಡಿದರೆ, ನಿಮ್ಮ ಲಾಭ ಸುಮಾರು 4000 ರೂ. ಅದೇ ಸಮಯದಲ್ಲಿ, ನೀವು ತಿಂಗಳ ಅಂಕಿಅಂಶವನ್ನು ಲೆಕ್ಕ ಹಾಕಿದರೆ, ನಂತರ ನೀವು ರೂ 1,20,000 ವರೆಗೆ ಗಳಿಸುವಿರಿ.

ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?

ಪ್ರತಿದಿನ ನಾಲ್ಕು ಸಾವಿರ ಆದಾಯ ಸಿಗುತ್ತೆ ಅಂದ್ರೆ ಹೂಡಿಕೆಯ ಪ್ರಮಾಣವೂ ಹೆಚ್ಚಾಗಿರುತ್ತದೆ. ಯಂತ್ರ, ಗೋದಾಮು, ವಿದ್ಯುತ್, ಕಾರ್ಮಿಕರು ಸೇರಿದಂತೆ ಒಂದು ದೊಡ್ಡ ಮೊತ್ತದ ಅಗತ್ಯವಿರುತ್ತದೆ. ಹಾಗಾಗಿ ಈ ವ್ಯವಹಾರ ಆರಂಭಿಸಲು ಸುಮಾರು 5 ರಿಂದ 8 ಲಕ್ಷ ರೂ ಬೇಕಾಗುತ್ತದೆ.

ಇದನ್ನೂ ಓದಿ:  ಗೆಳೆತನದ ಕಮಾಲ್: 5 ತಿಂಗಳಲ್ಲಿ 4,300 ಕೋಟಿಯ ಕಂಪನಿಯ ಮಾಲೀಕರಾದ 19 ವರ್ಷದ ಹುಡುಗರು

ಕೇಂದ್ರ ಸರ್ಕಾರ ಸಹಾಯ ಮಾಡಲಿದೆ

ಮೋದಿ ಸರ್ಕಾರ ಇಂತಹ ವ್ಯವಹಾರಗಳಿಗೆ ಆರ್ಥಿಕ ಸಹಾಯವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಮುದ್ರಾ ಸಾಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಶೇ.90ರವರೆಗೂ ಸಾಲವನ್ನು ನೀಡುತ್ತದೆ. ಆರಂಭದಲ್ಲಿ ವ್ಯವಹಾರ ಆರಂಭಿಸುವವರು 50 ಸಾವಿರ ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ . ಇನ್ನುಳಿದ ಹಣವನ್ನು ಕೇಂದ್ರ ಸರ್ಕಾರ ಸಾಲದ ರೂಪದಲ್ಲಿ ಪಡೆಯುತ್ತೀರಿ.
Published by:Mahmadrafik K
First published: