• Home
  • »
  • News
  • »
  • business
  • »
  • Business Idea: ಅಮೇಜಾನ್​ನಲ್ಲಿ 4 ಗಂಟೆ ಕೆಲಸ ಮಾಡಿ, ತಿಂಗಳಿಗೆ 60 ಸಾವಿರ ಆದಾಯ ಗಳಿಸಿ!

Business Idea: ಅಮೇಜಾನ್​ನಲ್ಲಿ 4 ಗಂಟೆ ಕೆಲಸ ಮಾಡಿ, ತಿಂಗಳಿಗೆ 60 ಸಾವಿರ ಆದಾಯ ಗಳಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ವಸ್ತುಗಳವರೆಗೆ ತಮಗೆ ಬೇಕಾದುದನ್ನು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಆದ್ದರಿಂದ, ಈ ವಾಣಿಜ್ಯ ಕಂಪನಿಗಳಿಗೆ ಪ್ರತಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಡೆಲಿವರಿ ಬಾಯ್‌ಗಳ ಅಗತ್ಯವಿದೆ.

  • Share this:

ನೀವು ಎಲ್ಲಾದರೂ ಕೆಲಸ (Job) ಹುಡುಕುತ್ತಿದ್ದೀರಾ? ಈಗ ನೀವು ಮಾಡುತ್ತಿರುವ ಕೆಲಸದಿಂದ ಬರುವ ಸಂಬಳ (Salary) ಸಾಲುತ್ತಿಲ್ವಾ? ಪಾರ್ಟ್ ಟೈಮ್​ ಜಾಬ್​ (Part-time Job) ಹುಡುಕುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ದಿನಕ್ಕೆ ಜಸ್ಟ್​ 4 ಗಂಟೆಗಳ ಕಾಲ ಕೆಲಸ ಮಾಡಿ, ತಿಂಗಳಿಗೆ 60 ಸಾವಿರ ಸುಲಭವಾಗಿ ಗಳಿಸಲು ಒಂದು ಮಾರ್ಗವಿದೆ. ಈ ಅದ್ಭುತ ಅವಕಾಶವನ್ನು ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ನೀಡಿದೆ. ಇದರಲ್ಲಿ ನೀವು ಅರೆಕಾಲಿಕ ಕೆಲಸ ಮಾಡುವ ಮೂಲಕ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ (Online Shopping) ಕ್ರೇಜ್ ಹೆಚ್ಚುತ್ತಿದೆ. ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ವಸ್ತುಗಳವರೆಗೆ ತಮಗೆ ಬೇಕಾದುದನ್ನು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಆದ್ದರಿಂದ, ಈ ವಾಣಿಜ್ಯ ಕಂಪನಿಗಳಿಗೆ ಪ್ರತಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಡೆಲಿವರಿ ಬಾಯ್‌ಗಳ (Delivery Boys) ಅಗತ್ಯವಿದೆ.


ಜಸ್ಟ್​ 4 ಗಂಟೆ ಕೆಲಸ ಮಾಡಿ 60 ಸಾವಿರಗಳಿಸಿ!


ಡೆಲಿವರಿ ಬಾಯ್ಸ್​​ ಅಮೆಜಾನ್(Amazon) ಗೋದಾಮಿನಿಂದ ಪಾರ್ಸೆಲ್ ತೆಗೆದುಕೊಂಡ ನಂತರ ಅವುಗಳನ್ನು ಬುಕ್ ಮಾಡಿದವರಿಗೆ ತಲುಪಿಸಬೇಕು. ಒಬ್ಬ ಡೆಲಿವರಿ ಬಾಯ್ ಒಂದು ದಿನದಲ್ಲಿ 100 ರಿಂದ 150 ಪ್ಯಾಕೇಜ್‌ಗಳನ್ನು ತಲುಪಿಸಬಹುದು. ಅಮೆಜಾನ್ ದೆಹಲಿಯಲ್ಲಿ ಸುಮಾರು 20 ಕೇಂದ್ರಗಳನ್ನು ಹೊಂದಿದೆ. ದೆಹಲಿ ಜೊತೆಗೆ ಚೆನ್ನೈ,ಹೈದರಾಬಾದ್, ಮುಂಬೈ, ಬೆಂಗಳೂರು, ಕೋಲ್ಕತ್ತಾದಂತಹ ದೊಡ್ಡ ನಗರಗಳಲ್ಲಿ ತಮ್ಮ ಕೇಂದ್ರಗಳನ್ನು ಹೊಂದಿದೆ. ಅಲ್ಲಿಂದ ಪ್ಯಾಕೇಜ್‌ಗಳನ್ನು ತೆಗೆದುಕೊಂಡು ಹೋಗಿ ಸರಿಯಾದ ವಿಳಾಸಕ್ಕೆ ತಲುಪಿಸುವುದು ಡೆಲಿವರಿ ಬಾಯ್‌ಗಳ ಕೆಲಸ. ಇದಕ್ಕಾಗಿ ದಿನವಿಡೀ ಕೆಲಸ ಮಾಡುವ ಅಗತ್ಯವಿಲ್ಲ.


ಅಮೇಜಾನ್​ ಡೆಲಿವರಿ ಬಾಯ್​ ಕೆಲಸ ಮಾಡಿ!


ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ.. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಿತರಣೆಯನ್ನು ಪಡೆಯಬಹುದು. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಸ್​​ ದಿನಕ್ಕೆ 4 ಗಂಟೆಗಳಲ್ಲಿ 100 ಪ್ಯಾಕೇಜ್‌ಗಳನ್ನು ತಲುಪಿಸುತ್ತಾರೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ನಿಮಗೆ ವಿಶೇಷ ಪದವಿ ಅಗತ್ಯವಿಲ್ಲ. ಬೈಕ್, ಪರವಾನಗಿ ಸಾಕು. ನೀವು ಪ್ರದೇಶದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರೆ, ನೀವು ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ಯಾಕೇಜ್‌ಗಳನ್ನು ತಲುಪಿಸಬಹುದು.


ಇದನ್ನೂ ಓದಿ: ಏನಿದು ಬಿಮಾ ಸುಗಮ್​? ಇದ್ರಿಂದ ಜನಸಾಮಾನ್ಯರಿಗೇನು ಲಾಭ? ಇಲ್ಲಿದೆ ನೋಡಿ


ತಿಂಗಳಿಗೆ 60 ಸಾವಿರ ದುಡ್ಡು ಮಾಡ್ಬಹುದು!


ಡೆಲಿವರಿ ಬಾಯ್ಸ್​​ ಉದ್ಯೋಗಕ್ಕಾಗಿ ಅಮೆಜಾನ್ ಫ್ಲೆಕ್ಸ್ ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ ತಿಂಗಳಿಗೆ 60,000 ರೂಪಾಯಿಗಳವರೆಗೆ ಗಳಿಸಬಹುದು. ಅವರಿಗೆ ಸುಮಾರು 15 ಸಾವಿರ ರೂಪಾಯಿ ನಿಗದಿತ ವೇತನವಿದೆ. ಇದಲ್ಲದೇ ನೀವು ಪ್ರತಿ ಡೆಲಿವರಿಯಲ್ಲಿ 10 ರಿಂದ 15 ರೂಪಾಯಿ ಹೆಚ್ಚುವರಿ ಪಡೆಯುತ್ತೀರಿ. ವಿತರಣಾ ಸೇವಾ ಪೂರೈಕೆದಾರರ ಪ್ರಕಾರ, ಪ್ರತಿದಿನ 100 ಪ್ಯಾಕೇಜ್‌ಗಳನ್ನು ವಿತರಿಸಿದರೆ ತಿಂಗಳಿಗೆ  ರೂ. 55000 ರಿಂದ 60 ಸಾವಿರ ಸುಲಭವಾಗಿ ಗಳಿಸಬಹುದು.


ಇದನ್ನೂ ಓದಿ: ಮಾರುತಿ ಸುಜುಕಿ ಕಡೆಯಿಂದ ಕಂಡು ಕೇಳರಿಯದ ಬಂಪರ್​ ಆಫರ್​, ಈಗ ಬಿಟ್ರೆ ಮುಂದೆಂದೂ ಸಿಗಲ್ಲ!


(ಈ ಲೇಖನವನ್ನು ವರದಿಗಳು, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮಾತ್ರ ನೀಡಲಾಗಿದೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಆಳವಾದ ಅಧ್ಯಯನವನ್ನು ಮಾಡಲು ಸಲಹೆ ನೀಡಲಾಗುತ್ತದೆ, ಸಂಬಂಧಿತ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ)

Published by:ವಾಸುದೇವ್ ಎಂ
First published: