Star Rating: ಕಾರುಗಳಿಗೆ ಸ್ಟಾರ್ ರೇಟಿಂಗ್! ಪ್ರಯಾಣಿಕರ ಸುರಕ್ಷತೆ, ಆತ್ಮನಿರ್ಭರ ಭಾರತವೇ ಉದ್ದೇಶ

ಭಾರತ್ ಎನ್‌ಸಿಎಪಿ ಪ್ರಯಾಣಿಕರ ಸುರಕ್ಷತೆ, ದೇಶದ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತವನ್ನು ವಿಶ್ವದ ಅಗ್ರ ಆಟೋಮೊಬೈಲ್ ಹಬ್ ಮಾಡುವ ಉದ್ದೇಶ ಹೊಂದಿದೆ.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

  • Share this:
    ದೆಹಲಿ: ಭಾರತದ ಮಾರುಕಟ್ಟೆಯಲ್ಲಿರುವ ಕಾರುಗಳಿಗೆ ಸ್ಟಾರ್ ರೇಟಿಂಗ್ (Star Rating) ನೀಡುವ ಹೊಸ ಪ್ರಸ್ತಾಪವೊಂದನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ. ಕಾರುಗ ಳ ಹೊಸ ಮೌಲ್ಯಮಾಪನ ಕಾರ್ಯಕ್ರಮ  Bharat NCAP  ಮೂಲಕ  ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತದಲ್ಲಿನ ಆಟೋಮೊಬೈಲ್‌ಗಳಿಗೆ 'ಸ್ಟಾರ್ ರೇಟಿಂಗ್'ಗಳನ್ನು ನೀಡುವ ಕಾರ್ಯವಿಧಾನ ಇದಾಗಿದೆ.  ಸರಣಿ ಟ್ವೀಟ್‌ಗಳ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಕಾರುಗಳ ಹೊಸ ಮೌಲ್ಯಮಾಪನ ಪದ್ಧತಿ  ಭಾರತ್ ಎನ್‌ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಗ್ರಾಹಕರು ತಮ್ಮ ಸ್ಟಾರ್-ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಮೂಲ ಉಪಕರಣಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿ ತಯಾರಕರು ಈ ನಿಯಮಗಳನ್ನು ಅನುಸರಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

    ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆ ನಿರ್ಧಾರ
    "ನಾನು ಕಾರುಗಳ ಹೊಸ ಅಸೆಸ್‌ಮೆಂಟ್ ಪ್ರೋಗ್ರಾಂ ಭಾರತ್ ಎನ್‌ಸಿಎಪಿಯನ್ನು ಪರಿಚಯಿಸಲು ಕರಡು ಜಿಎಸ್‌ಆರ್ ಅಧಿಸೂಚನೆಯನ್ನು ಅನುಮೋದಿಸಿದ್ದೇನೆ. ಇದರಲ್ಲಿ ಭಾರತದಲ್ಲಿನ ಆಟೋಮೊಬೈಲ್‌ಗಳು ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್‌ಗಳನ್ನು ನೀಡಲಾಗುವುದು" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ಪ್ರಯಾಣಿಕರ ಸುರಕ್ಷತೆಯೇ ಗಮನ
    ಕ್ರ್ಯಾಶ್ ಟೆಸ್ಟ್‌ಗಳ ಆಧಾರದ ಮೇಲೆ ಭಾರತೀಯ ಕಾರುಗಳ ಸ್ಟಾರ್ ರೇಟಿಂಗ್‌ಗಳು ಕಾರುಗಳಲ್ಲಿ ರಚನಾತ್ಮಕ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾತ್ರವಲ್ಲದೆ ಭಾರತೀಯ ಆಟೋಮೊಬೈಲ್‌ಗಳ ರಫ್ತು-ಯೋಗ್ಯತೆಯನ್ನು ಹೆಚ್ಚಿಸಲು ಅತ್ಯಂತ ನಿರ್ಣಾಯಕವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತಿ ಹೇಳಿದ್ದಾರೆ.

    ಇದನ್ನೂ ಓದಿ: Electric Car Fire: ಎಲೆಕ್ಟ್ರಿಕ್ ಕಾರಿಗೂ ಬಿತ್ತು ಬೆಂಕಿ! ಯಾವ ಕಾರದು? ನೋಡಿ ವಿಡಿಯೋ





    ಭಾರತವನ್ನು ವಿಶ್ವದ ಅಗ್ರ ಆಟೋಮೊಬೈಲ್ ಹಬ್ ಆಗುವ ಉದ್ದೇಶ?ಭಾರತ್ ಎನ್‌ಸಿಎಪಿಯ ಪರೀಕ್ಷಾ ಪ್ರೋಟೋಕಾಲ್ ಅನ್ನು ಅಸ್ತಿತ್ವದಲ್ಲಿರುವ ಭಾರತೀಯ ನಿಯಮಾವಳಿಗಳಲ್ಲಿ ಜಾಗತಿಕ ಕ್ರ್ಯಾಶ್-ಟೆಸ್ಟ್ ಪ್ರೋಟೋಕಾಲ್‌ಗಳೊಂದಿಗೆ ಜೋಡಿಸಲಾಗುತ್ತದೆ. ಒಇಎಮ್‌ಗಳು ತಮ್ಮ ವಾಹನಗಳನ್ನು ಭಾರತದ ಸ್ವಂತ ಆಂತರಿಕ ಪರೀಕ್ಷಾ ಸೌಲಭ್ಯಗಳಲ್ಲಿ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ. 

    ಇದನ್ನೂ ಓದಿ: PAN Card Alert: 1000 ರೂ. ದಂಡ ಕಟ್ಟಬೇಡಿ, ಮೊದಲು ಈ ಕೆಲಸ ಮಾಡಿ

    ಅಲ್ಲದೇ ಭಾರತ್ ಎನ್‌ಸಿಎಪಿ ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತವನ್ನು ವಿಶ್ವದ ಅಗ್ರ ಆಟೋಮೊಬೈಲ್ ಹಬ್ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಉದ್ದೇಶವನ್ನು ಸಾಧಿಸಿ ತೋರಿಸಲು ಆಟೊಮೊಬೈಲ್ ಉದ್ಯಮದಲ್ಲಿ ಕ್ರಾಶ್ ಕಾರು ಟೆಸ್ಟಿಂಗ್ ಆಧರಿಸಿ ಸ್ಟಾರ್ ರೇಟಿಂಗ್ ನೀಡುವುದು ನಿರ್ಣಾಯಕ ಸಾಧನವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವ್ಯಾಖ್ಯಾನಿಸಿದ್ದಾರೆ.
    Published by:guruganesh bhat
    First published: