Shocking News: ಒಂದು ಕಪ್ ಟೀ ಬೆಲೆ 100 ರೂ, ಕೆಜಿ ಅಕ್ಕಿಗೆ 448 ರೂ.! ಶ್ರೀಲಂಕಾದಲ್ಲಿ ಯಾವ್ದಕ್ಕೆ ಎಷ್ಟು ರೇಟ್?

ಕೆಟ್ಟ ಆರ್ಥಿಕ ಸ್ಥಿತಿಯಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ದಿನನಿತ್ಯದ ಅಗತ್ಯ ಬೆಲೆಗಳ ತಾರಾಮಾರಿ ಏರಿಕೆಯಾಗಿದೆ. ಹಾಗಾದರೆ ಮೂರು ಜನರ ಒಂದು ಕುಟುಂಬಕ್ಕೆ ಒಂದು ದಿನಕ್ಕೆ ತಗಲುವ ಖರ್ಚೆಷ್ಟು? ಇಲ್ಲಿದೆ ವಿವರ

ಕುಡಿಯುವ ನೀರಿನ ಕ್ಯಾನ್​ನಲ್ಲಿ ಪೆಟ್ರೋಲ್/ಡೀಸೆಲ್ ಸಾಗಣೆ

ಕುಡಿಯುವ ನೀರಿನ ಕ್ಯಾನ್​ನಲ್ಲಿ ಪೆಟ್ರೋಲ್/ಡೀಸೆಲ್ ಸಾಗಣೆ

  • Share this:
ಶ್ರೀಲಂಕಾದ ಆರ್ಥಿಕ ಸ್ಥಿತಿ ಬಲು ದುರಂತದ ಸ್ಥಿತಿಗೆ ತಲುಪುತ್ತಿದೆ. ತುತ್ತು ಅನ್ನಕ್ಕೂ ಪರದಾಡಬೇಕಾದ ಕಡು ಕಷ್ಟ ಸ್ಥಿತಿ ಶ್ರೀಲಂಕಾ ಪ್ರಜೆಗಳಿಗೆ ಬರುತ್ತಿದೆ. ದಿನನಿತ್ಯದ ಬದುಕು ದುಸ್ತರವಾಗುತ್ತಿದೆ. ಅಕ್ಕಿ,ಬೇಳೆ ದಿನಸಿ ಪದಾರ್ಥಗಳ ಬೆಲೆಯೂ ಗಗನವನ್ನೂ ಮೀರುವಷ್ಟು (Sri Lanka Economic Crisis) ಎತ್ತರಕ್ಕೆ ತಲುಪಿದೆ. ಇಂತಹ ಕಡು ಕಷ್ಟದ ನಡುವೆಯೇ ಇನ್ನೊಂದು ಶಾಕಿಂಗ್ ಸುದ್ದಿಯೊಂದು ಬಹಿರಂಗಗೊಂಡಿದೆ. ಶ್ರೀಲಂಕಾದಲ್ಲಿ ಒಂದು ಟೀ ಬೆಲೆ (Sri Lanka Tea Rate) ಬರೋಬ್ಬರಿ 100 ರೂ.ತಲುಪಿದೆ. ಅಯ್ಯೋ! ದಿನಾ ಬೆಳಗ್ಗೆ ಎದ್ದು ಕುಡಿಯೋ ಚಹಾಕ್ಕೇ ಇಷ್ಟೊಂದು ಬೆಲೆ ಆದರೆ ಮುಂದೇನು ಮಾಡೋದು? ಎಂದು ಇಲ್ಲಿ ಕುಳಿತ ನಮಗೇ ಅನಿಸದಿರದು. ಅಂತಾದ್ರಲ್ಲಿ ಶ್ರೀಲಂಕನ್ ಪ್ರಜೆಗಳ (Sri Lankan People) ಕಥೆಯಾದರೂ ಏನಾಗಿರಬೇಡ?

ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪರಿಗಣಿಸಿ ಒಂದು ಕಪ್ ಹಾಲಿನ ಚಹಾದ ಬೆಲೆಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ಒಂದು ಕಪ್ ಟೀ ಬೆಲೆ 100 ರೂ. ಆಗುವಷ್ಟು ತಾರಾಮಾರಿ ಏರಿಕೆಯಾಗಿದೆ ಎಂದು ಆಲ್ ಐಲ್ಯಾಂಡ್ ಕ್ಯಾಂಟೀನ್ ಮಾಲೀಕರ ಸಂಘದ ಅಧ್ಯಕ್ಷ ಅಸೇಲ ಸಂಪತ್ ತಿಳಿಸಿದ್ದಾರೆ ಪೆಟ್ರೋಲ್, ಡೀಸೆಲ್​ನಂತಹ ಅಗತ್ಯ ವಸ್ತುಗಳು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ. ಎಷ್ಟು ದುಡ್ಡು ಕೊಡುತ್ತೇನೆ ಅಂದರು ಮಾರುವವರಿಲ್ಲ. ಕೊಡಲು ಜನರ ಬಳಿ ದುಡ್ಡೂ ಇಲ್ಲ ಬಿಡಿ.

ಅಗತ್ಯ ವಸ್ತುಗಳ ಬೆಲೆ ನೋಡಿದರೆ ತಲೆ ತಿರುಗುತ್ತದೆ!ದಿನನಿತ್ಯದ ಅಗತ್ಯ ವಸ್ತುಗಳುಬೆಲೆ (ಶ್ರೀಲಂಕನ್ ರೂಪಾಯಿಗಳಲ್ಲಿ)
ಒಂದು ಕಪ್ ಚಹಾ100 ರೂ.
ಹಾಲಿನ ಪುಡಿ (1 ಕೆಜಿ ಪ್ಯಾಕ್)1945 ರೂ.
1 ಕೆಜಿ ಅಕ್ಕಿ448 ರೂ.
1 ಕೆಜಿ ಸಕ್ಕರೆ148 ರೂ.
1 ಕೆಜಿ ಗೋಧಿಹಿಟ್ಟು145 ರೂ.
1 ಕೆಜಿ ಉಪ್ಪು65 ರೂ.
1 ಕೋಳಿಮೊಟ್ಟೆ36 ರೂ.
1 ಲೀಟರ್ ನೀರಿನ ಬಾಟಲ್70 ರೂ.
1 ಲೀಟರ್ ಅಡುಗೆ ಎಣ್ಣೆ900 ರೂ.
1 ಕೆಜಿ ಆಲೂಗಡ್ಡೆ348 ರೂ.
1 ಕೆಜಿ ಈರುಳ್ಳಿ340 ರೂ.
1 ಕೆಜಿ ಬಾಳೆಹಣ್ಣು195 ರೂ.
1 ಲೀಟರ್ ಪೆಟ್ರೋಲ್303 ರೂ.
1 ಕೆಜಿ ಗಜ್ಜರಿ510 ರೂ.
ಜಾನಿ ವಾಕರ್ ವಿಸ್ಕಿ (700 ಮಿ.ಲಿ)8,800 ರೂ.

ಬಿಸಿಯಾದ ಚಹಾ ಶ್ರೀಲಂಕಾದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ವರ್ಗದ ಜನರೂ ಅತ್ಯಂತ ಪ್ರೀತಿಯಿಂದ ಸೇವಿಸುವ ನೆಚ್ಚಿನ ಪಾನೀಯವಾಗಿದೆ. ಹೀಗಾಗಿ ಶ್ರೀಲಂಕನ್ನರ ಪಾಲಿಗೆ ಈಗ ದಿನ ಕಳೆಯುವುದು ಇನ್ನಷ್ಟು ದುಸ್ತರವಾಗಿದೆ.

ಮೂರು ಜನರ ಒಂದು ಕುಟುಂಬಕ್ಕೆ ಒಂದು ದಿನಕ್ಕೆ ತಗಲುವ ಖರ್ಚಿನ ಲೆಕ್ಕ ಹೀಗಿದೆ3 ಚಹಾ300 ರೂ.
1 ಕೆಜಿ ಅಕ್ಕಿ 448 ರೂ.
100 ಗ್ರಾಂ ಸಕ್ಕರೆ15 ರೂ.
1 ಕೆಜಿ ಗೋಧಿಹಿಟ್ಟು145 ರೂ.
3 ಕೋಳಿಮೊಟ್ಟೆ108 ರೂ.
3 ಬಾಟಲ್ ನೀರು210 ರೂ.
100 ಗ್ರಾಂ ಈರುಳ್ಳಿ 34 ರೂ.
3 ಬಾಳೆಹಣ್ಣು 20 ರೂ.
100 ಗ್ರಾಂ ಆಲೂಗಡ್ಡೆ35 ರೂ.
100 ಮಿಲಿ ಲೀಟರ್ ಅಡುಗೆ ಎಣ್ಣೆ90 ರೂ
ಅಂದಾಜು 3 ಜನರಿಗೆ ಒಂದು ದಿನಕ್ಕೆ ತಗಲುವ ಖರ್ಚು1,405 ರೂ.

ತಾಜಾ ಹಾಲಿನ ಬದಲಿಗೆ ಶ್ರೀಲಂಕಾದಲ್ಲಿ ಹಾಲಿನ ಪುಡಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಅತ್ಯಗತ್ಯ ಆಹಾರ ವಸ್ತುವಾಗಿ ಗುರುತಿಸಲ್ಪಟ್ಟಿದೆ. ಶ್ರೀಲಂಕಾದಲ್ಲಿ ಅಗತ್ಯ ವಸ್ತುವಾದ ಹಾಲಿನ ಪುಡಿಯ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.    ಈಮುನ್ನ 400 ಗ್ರಾಂ ಹಾಲಿನ ಪುಡಿಗೆ 250 ರೂಪಾಯಿ, 1 ಕೆಜಿ ಪ್ಯಾಕ್​ಗೆ 600 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಬೆಲೆ ಏರಿಕೆಯ ನಂತರ 400 ಗ್ರಾಂ ಪ್ಯಾಕ್ 790 ರೂಪಾಯಿಗಳಿಗೆ ಮಾರಾಟವಾಗಲಿದ್ದು, 1 ಕೆಜಿ ಪ್ಯಾಕ್ 1,945 ರೂಪಾಯಿಗಳಿಗೆ ಮಾರಾಟವಾಗಲಿದೆ.

ಇದನ್ನೂ ಓದಿ: Halal Shares: ಷೇರು ಮಾರ್ಕೆಟ್​ನಲ್ಲೂ ಇದೆ ಹಲಾಲ್! ಹಲಾಲ್ ಷೇರು- ಹರಾಮ್ ಷೇರು ಹೇಗೆ ಗುರುತಿಸ್ತಾರೆ?

ಉದ್ದುದ್ದ ಸಾಲುಗಳು
ಶ್ರೀಲಂಕಾದ ಸದ್ಯದ ಆರ್ಥಿಕ ಬಿಕ್ಕಟ್ಟು ಆಮದು ಮಾಡಿಕೊಳ್ಳುವ ಹಾಲಿನ ಪುಡಿಯಲ್ಲಿ ಕೊರತೆಯನ್ನು ಉಂಟುಮಾಡಿದೆ.  ಹಾಲಿನ ಪುಡಿ, ಡೀಸೆಲ್ ಮುಂತಾದ ಅಗತ್ಯ ಸಾಮಾಗ್ರಿ ಖರೀದಿಗೆ  ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲು ನಿಲ್ಲುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದೆ.

ಬರೋಬ್ಬರಿ 71% ಏರಿಕೆ!
ಆಹಾರದ ಜೊತೆಗೆ ಇತರ ಅಗತ್ಯ ವಸ್ತುಗಳ ಬೆಲೆಯೂ ತೀವ್ರ ಹೆಚ್ಚಳವಾಗಿದೆ.  ಆಮದು ಮಾಡಿಕೊಳ್ಳಲು ಹಣವಿಲ್ಲದೇ ಇಂಧನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಮಾರ್ಚ್ ಮತ್ತು ಡಿಸೆಂಬರ್ ನಡುವೆ ಪೆಟ್ರೋಲ್ ಬೆಲೆ 177 ಶ್ರೀಲಂಕನ್ ರೂಪಾಯಿಗಳಿಂದ 303 ಶ್ರೀಲಂಕನ್ ರೂಪಾಯಿಗಳಿಗೆ ಏರಿಕೆಯಾಗಿದೆ! ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 45 ಭಾರತೀಯ ರೂಪಾಯಿಗಳಿಂದ 77 ರೂಪಾಯಿಗಳಿಗೆ ಏರಿಕೆಯಾಗಿದೆ. ಅಂದರೆ ಬರೋಬ್ಬರಿ 71% ಏರಿಕೆ!

ಮನೆಲಿ ಒಲೆ ಉರಿಯೋದೇ ಕಷ್ಟ!
ಅಡುಗೆ ಅನಿಲವೂ ಕೊರತೆಯಾಗಿರುವುದರಿಂದ ಕೆಲವರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. "ಅಡುಗೆ ಅನಿಲ ಸಿಗುತ್ತಲೇ ಇಲ್ಲ. ಆದ್ದರಿಂದ ಜನರು ಸೀಮೆಎಣ್ಣೆ ಮತ್ತು ಉರುವಲುಗಳಿಂದ ಅಡುಗೆ ಮಾಡುತ್ತಿದ್ದಾರೆ" ಎಂದು ಶ್ರೀಲಂಕಾದ ಬರಹಗಾರ ಇಂದ್ರಜಿತ್ ಸಮರಾಜೀವ Scroll.in ಗೆ ತಿಳಿಸಿದ್ದಾರೆ.

ಕೆಲವರು ಅಡುಗೆ ಅನಿಲದ ಬದಲು ವಿದ್ಯುತ್ ಹಾಟ್ ಪ್ಲೇಟ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ, ಈ ಏನು ಇದ್ದಂತೆಯೇ ಇಲ್ಲ.  15,000 ಶ್ರೀಲಂಕಾದ ರೂಪಾಯಿಗಳಿಂದ [ಸುಮಾರು 4,000 ಭಾರತೀಯ ರೂಪಾಯಿ] 30,000 ಶ್ರೀಲಂಕಾದ ರೂಪಾಯಿಗಳಿಗೆ [ಸುಮಾರು 8,000 ಭಾರತೀಯ ರೂಪಾಯಿ] ಈ ಹಾಟ್​ ಪ್ಲೇಟ್​ಗಳು ದುಬಾರಿಯಾಗಿವೆ.

ಇನ್ನೊಂದು ವಾರದಲ್ಲಿ ಅಕ್ಕಿಯ ಬೆಲೆ ಪ್ರತಿ ಕೆಜಿಗೆ ರೂ.500 ಮುಟ್ಟುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: Sri Lanka: ಚೀನಾದಿಂದಾಗಿ ಆರ್ಥಿಕ ಅಧಃಪತನ, ಶ್ರೀಲಂಕಾ ಆರ್ಥಿಕತೆ ಈ ಸ್ಥಿತಿಗೆ ತಲುಪಲು ಮತ್ತೇನೇನು ಕಾರಣ?

ಆಹಾರದ ಬೆಲೆಗಳ ಏರಿಕೆಯಿಂದ ರೆಸ್ಟೋರೆಂಟ್ ಮಾಲೀಕರು ಒಂದು ಕಪ್ ಹಾಲಿನ ಚಹಾದ ಬೆಲೆಯನ್ನು 100 ರೂ.ಗೆ ಏರಿಸಿದ್ದಾರೆ ಎಂದು ರಾಯಿಟರ್ಸ್ ತಿಳಿಸಿದೆ. ಬೆಲೆ ಕಡಿಮೆ ಮಾಡಲು ಹೊರ ದೇಶಗಳಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು. ಆದರೆ ಶ್ರೀಲಂಕಾದ ಬಳಿ ಹಣವೇ ಇಲ್ಲ.
Published by:guruganesh bhat
First published: