Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ

ಬಹಳಷ್ಟು ಉದ್ಯಮಿಗಳನ್ನು (Businessman) ಪರದಾಡುವಂತೆ ಮಾಡಿದ ಪ್ಯಾಂಡಮಿಕ್ ಸಮಯದಲ್ಲಿ ಶ್ರೀಜಿತ್ ಶ್ರೀಕುಮಾರ್ ಅವರು ಕೊಚ್ಚಿ ಮೂಲದ ಎರಡು ' ಟಿ-ದಿ ಬ್ರಾಂಡ್ ಹಾಗು ಬೇರ್ ಬ್ರೌನ್ ' ಎಂಬ ಬಟ್ಟೆಗಳ ಬ್ರಾಂಡ್ ಅನ್ನು (Brand of Clothes) ನಿರ್ಮಿಸಿದರು.

ಶ್ರೀಜಿತ್ ಶ್ರೀಕುಮಾರ್

ಶ್ರೀಜಿತ್ ಶ್ರೀಕುಮಾರ್

  • Share this:
ಬಹಳಷ್ಟು ಉದ್ಯಮಿಗಳನ್ನು (Businessman) ಪರದಾಡುವಂತೆ ಮಾಡಿದ ಪ್ಯಾಂಡಮಿಕ್ ಸಮಯದಲ್ಲಿ ಶ್ರೀಜಿತ್ ಶ್ರೀಕುಮಾರ್ ಅವರು ಕೊಚ್ಚಿ ಮೂಲದ ಎರಡು ' ಟಿ-ದಿ ಬ್ರಾಂಡ್ ಹಾಗು ಬೇರ್ ಬ್ರೌನ್ ' ಎಂಬ ಬಟ್ಟೆಗಳ ಬ್ರಾಂಡ್ ಅನ್ನು (Brand of Clothes) ನಿರ್ಮಿಸಿದರು. ತದನಂತರ ಆ ಎರಡೂ ಬ್ರಾಂಡ್ ಗಳು ತಮ್ಮ ಗುಣಮಟ್ಟ ಹಾಗು ಕೈಗೆಟುಕುವ ಬೆಲೆಯ ಮೂಲಕ ಕೇರಳವಲ್ಲದೆ (Kerala) ಅದರ ಆಚೆಗೂ ತನ್ನ ಹೆಸರನ್ನು ವಿಸ್ತರಿಸಿಕೊಂಡಿವೆ. ಈ ಮೂಲಕ ಶ್ರೀಜಿತ್ ಶ್ರೀಕುಮಾರ್ ಅವರು ಅಲೆಯ ವಿರುದ್ಧ ಈಜುವುದನ್ನು (Swim) ಇಷ್ಟಪಡುತ್ತಾರೆ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.

ಮೂಲತಃ ಅವರ ಕುಟುಂಬದವರು ಅವರನ್ನು ವೈದ್ಯರಾಗಬೇಕೆಂದು ಬಯಸಿದ್ದರು, ಕೇರಳಾದ ಕೊಲ್ಲಮ್ ನಲ್ಲಿ ಬೆಳೆದ ಶ್ರೀಜಿತ್ ಶ್ರೀಕುಮಾರ್ ಅವರು ಆಕಸ್ಮಿಕವಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ ಫ್ಯಾಶನ್ ಕೋರ್ಸ್ ಅನ್ನು ತೆಗೆದುಕೊಂಡರು. ಈ ಮೂಲಕ ಅವರು ತಮ್ಮನ್ನು ತಾವು ಈ ಉದ್ಯಮಕ್ಕೆ ಪರಿಚಯಿಸಿಕೊಂಡರು.

ಉಡುಪಿನ ಉದ್ಯಮ ಶುರು ಮಾಡಿದ ಕೇರಳ ಮೂಲದ ವ್ಯಕ್ತಿ 
2020 ರಲ್ಲಿ ಕೋವಿಡ್ ಬಿಕ್ಕಟ್ಟು ಎಲ್ಲೆಡೆ ಉಂಟಾದಾಗ ಸಾಕಷ್ಟು ವ್ಯವಹಾರಗಳನ್ನು ಸ್ಥಗಿತಗೊಂಡು ಸಹಸ್ರಾರು ಜನರು ಬದುಕಲು ಪರದಾಡಿದರು. ಇಂತಹ ಸಂಧರ್ಭದಲ್ಲಿ ಶ್ರೀಜಿತ್ ಹಿಂಜರಿಯಲಿಲ್ಲ ಹಾಗೂ ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತ ಅವರು ಭಾರಿ ಸ್ಪರ್ಧಾತ್ಮಕವಾದ ಉಡುಪಿನ ಉದ್ಯಮವನ್ನು ಶುರು ಮಾಡಿದರು.

ಇವರು ಗಿಯಾಕ ಹಾಗು ಅಭಿಟೋ ಸಾರ್ಟೋರಿಯಲ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್ (Giacca and Abito Sartorial Fashion Pvt Ltd) ಅನ್ನು ಪ್ರಾರಂಭಿಸಿದರು, ಕೊಚ್ಚಿ ಮೂಲದ ಈ ಸ್ಟಾರ್ಟಪ್ ಸಂಸ್ಥೆಯು ಬ್ರಾಂಡ್ ಗಳಾದ ಟಿ-ಬ್ರಾಂಡ್ ಹಾಗು ಬೇರ್ ಬ್ರೌನ್ ಅನ್ನು ಹೊರತಂದು ಅವು ಈಗ ಬಹುಕೋಟಿ ವ್ಯಾಪಾರ ವಹಿವಾಟುಗಳನ್ನು ನಡೆಸುವಂತಾಗಿದೆ.

ಬ್ರಾಂಡ್ ನಿರ್ಮಾಣ
ಶ್ರೀಜಿತ್ ತನ್ನ ಕುಟುಂಬದವರ ಆಸೆಗೆ ವಿರುದ್ಧವಾಗಿ ಫ್ಯಾಶನ್ ಇಂಡಸ್ಟ್ರಿ ಅನ್ನು ಆರಿಸಿಕೊಂಡರು. ರೇಮಂಡ್ಸ್ ಹಾಗೂ ಅರವಿಂದ್ ಲೈಫ್ ಸ್ಟೈಲ್ಸ್ ಅಂತಹ ಪ್ರಮುಖ ಉಡುಪಿನ ಕಂಪನಿಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಾಗ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. 2008 ರಲ್ಲಿ ಪ್ರಾರಂಭಿಸಿದ ತಮ್ಮ ವೃತ್ತಿಯನ್ನು ಶ್ರೀಜಿತ್ ಅವರು ಸುಮಾರು ಒಂದು ದಶಕಗಳ ಕಾಲ ಈ ಕಂಪನಿಗಳ ಪ್ರಮುಖ ಬ್ರಾಂಡ್ ಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಪಡೆದುಕೊಂಡರು.

ಇದನ್ನೂ ಓದಿ: Suniel Shetty: ಬರೀ ಸಿನಿಮಾ ಅಲ್ಲ, ಇಲ್ಲಿಂದಲೂ ಸಿಕ್ಕಾಪಟ್ಟೆ ದುಡ್ಡ್​ ಮಾಡ್ತಿದ್ದಾರೆ ಸುನೀಲ್​ ಶೆಟ್ಟಿ! ವರ್ಷಕ್ಕೆ 100 ಕೋಟಿ ಆದಾಯ

ಫ್ಯಾಶನ್ ಹಾಗೂ ವ್ಯಾಪಾರದಲ್ಲಿ ಆಸಕ್ತಿ 
ಈ ಕೆಲಸಗಳಲ್ಲಿ ಅವರಿಗೆ ಜಾಗತಿಕ ಮಾನ್ಯತೆ ಸಿಕ್ಕಿತು ಹಾಗೂ ಇಟಲಿಯಲ್ಲಿ ಉನ್ನತ ಅಧ್ಯಯನ ಮುಂದುವರೆಸಲು ಅವಕಾಶ ಮಾಡಿಕೊಟ್ಟಿತು. ಆದರೆ ಶ್ರೀಜಿತ್ ಅವರ ಆಸಕ್ತಿಯು ಡಿಸೈನಿಂಗ್ ಅಲ್ಲಿ ಇರಲಿಲ್ಲ ಬದಲಾಗಿ ಫ್ಯಾಶನ್ ಹಾಗೂ ವ್ಯಾಪಾರದಲ್ಲಿತ್ತು. ಇದು ಅವರಿಗೆ ಸೂಟ್ಸ್ ಹಾಗೂ ಬ್ಲೇಝರ್ ವಿಭಾಗದಲ್ಲಿ ಆಸಕ್ತಿಯನ್ನು ಉಂಟು ಮಾಡಿತು.

ಬ್ರಾಂಡ್ ಗಳನ್ನು ನಿರ್ಮಿಸಿ ಬೆಳೆಸಿದ ಅನುಭವ ಹೊಂದಿದ್ದ ಶ್ರೀಜಿತ್ ಅವರಿಗೆ ಸ್ವಂತವಾಗಿ ಏನಾದರೂ ಮಾಡಬೇಕೆಂಬ ತುಡಿತವಿತ್ತು. ಅವರು ಉಡುಪಿನ ಉದ್ಯಮದಲ್ಲಿರುವ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಂಡಿದ್ದರು. ಹಾಗೂ ಈ ಚಿಕ್ಕದಾದ ಜಾಗದಲ್ಲಿ ಗೂಡು ನಿರ್ಮಿಸಲು ತಾಳ್ಮೆಯಿಂದ ಇರಬೇಕೆಂಬುದನ್ನು ಅರಿತುಕೊಂಡಿದ್ದರು.

"ಬ್ರಾಂಡ್ ಅನ್ನು ನಿರ್ಮಿಸುವುದು ತುಂಬಾ ನಿಧಾನವಾದ ಪ್ರಕ್ರಿಯೆ ಆಗಿದೆ ಹಾಗೂ ಗ್ರಾಹಕರು ಅದು ಆಫ್ ಲೈನ್ ಅಲ್ಲಿ ಇದ್ದರೆ ಮಾತ್ರ ವಿಶ್ವಾಸ ತೋರುತ್ತಾರೆ." ಎಂದು ಗಿಯಾಕ ಹಾಗು ಅಭಿಟೋ ಸಾರ್ಟೋರಿಯಲ್ ಫ್ಯಾಶನ್ ಸಂಸ್ಥಾಪಕ ಮತ್ತು ಸಿ.ಇ.ಒ ಆಗಿರುವ ಅವರು ಅಭಿಪ್ರಾಯ ಪಡುತ್ತಾರೆ.

ಗಿಯಾಕ ಹಾಗೂ ಅಭಿಟೋ ಸಾರ್ಟೋರಿಯಲ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್
ಗಿಯಾಕ ಹಾಗೂ ಅಭಿಟೋ ಸಾರ್ಟೋರಿಯಲ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್ ಎಂಬ ಇಟಾಲಿಯನ್ ಹೆಸರನ್ನು ಕಂಪನಿಗೆ ಇಡಲು ಅವರು ನಿರ್ಧರಿಸಿದ್ದರು. ಈ ಇಟಾಲಿಯನ್ ಪದಗಳು ಸೂಟುಗಳು, ಜ್ಯಾಕೆಟ್ಟುಗಳು ಹಾಗೂ ಟೈಲರಿಂಗ್ ಇತ್ಯಾದಿ ಅಂಶಗಳೊಂದಿಗೆ ಹೊಂದಿಕೊಳ್ಳುವಂತೆ ಇರುವುದನ್ನು ಗಮನಿಸಬಹುದು. ಹೆಸರು ಕೇಳಲು ವಿಚಿತ್ರ ಎನಿಸಿದರೂ ಜನರ ಮನಸ್ಸಿಗೆ ಅಂಟಿ ಕೊಳ್ಳುತ್ತದೆ ಎಂದು ಸಂಸ್ಥಾಕರು ಹೇಳುತ್ತಾರೆ.

ಪ್ರತ್ಯೇಕ ವಿಭಾಗದಲ್ಲಿ ಗಮನ
ಶ್ರೀಜಿತ್ ಆರಂಭದಲ್ಲಿ ಸೂಟ್ ಗಳು ಹಾಗು ಬ್ಲೇಝರ್ಗಳ ವಿಭಾಗಕ್ಕೆ ಪ್ರವೇಶಿಸಲು ನಿರ್ಧರಿಸಿದ್ದರು. ಇದು ಅವರ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ಇದು ಸೀಸನ್ ಪ್ರಕಾರ ಸೆಲ್ ಆಗುವ ವಸ್ತುಗಳು. ಆದರೆ ಇದರಲ್ಲಿ ಕೆಲವು ಬದಲಾವಣೆಗಳಾಗಿವೆ ಎಂಬುದನ್ನು ಅವರು ಗಮನಿಸಿದರು. ಸೂಟ್ಸ್ ಗಳನ್ನು ಸೀಸನ್ ಗಳಲ್ಲಿ ಮಾತ್ರ ಜನ ಖರೀದಿಸುತ್ತಾರೆ. ಆದರೆ ಬ್ಲೇಝರ್ ಗಳನ್ನು ಮಾತ್ರ ಜನ ವರ್ಷವಿಡೀ ಖರೀದಿಸುತ್ತಾರೆ ಎಂಬುದನ್ನು ಮನಗಂಡರು. "ಬ್ಲೇಝರ್ಗಳ ಬಳಕೆ ಹೆಚ್ಚು ಸುಲಭವಾಗಿದೆ. ಧರಿಸಲು ಸುಲಭ ಮತ್ತು ಅದನ್ನು ನೋಡಿಕೊಳ್ಳುವುದು ಸರಳ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಅದೇ ಸಮಯದಲ್ಲಿ, ಶ್ರೀಜಿತ್ ಉಡುಪು ಉದ್ಯಮದ ಮಾರುಕಟ್ಟೆಯ ಡೈನಾಮಿಕ್ಸ್ ಅನ್ನು ಗಮನಿಸಿದರು ಹಾಗೂ ಆನ್ ಲೈನ್ ಅಲ್ಲಿ ತೊಡಗಿಕೊಳ್ಳುವ ಮೊದಲು ಆಫ್ ಲೈನ್ ವಿಭಾಗಕ್ಕೆ ಪ್ರವೇಶಿಸಲು ನಿರ್ಧರಿಸಿದರು. ಕಾರಣ ತುಂಬಾ ಸರಳವಾಗಿತ್ತು ಆನ್ ಲೈನ್ ಉಡುಪು ವ್ಯಾಪಾರದಲ್ಲಿ ಬಟ್ಟೆಗಳು ಹಿಂತಿರುಗಿ ಬರುವ ಸಾಧ್ಯತೆಗಳು ಜಾಸ್ತಿ ಇತ್ತು ಹಾಗೂ ಯುವ ಆರಂಭಿಕನಾಗಿ ಅವರು ಅದನ್ನು ಭರಿಸಲು ಸಾಧ್ಯ ವಾಗುತ್ತಿರಲಿಲ್ಲ.

ರಿಟೇಲ್ ಔಟ್ಲೆಟ್ಸ್ ಗಳೊಂದಿಗೆ ತೊಡಗಿಸಿಕೊಂಡು ಹೆಚ್ಚಿನ ಅನುಭವ 
ಉಡುಪು ಉದ್ಯಮದಲ್ಲಿನ ಅವರ ಅನುಭವ ಹಾಗೂ ಕೆಲ ಕಾಲ ಅವರು ತಮ್ಮನ್ನು ಹಲವು ರಿಟೇಲ್ ಔಟ್ಲೆಟ್ಸ್ ಗಳೊಂದಿಗೆ ತೊಡಗಿಸಿಕೊಂಡಿದ್ದರಿಂದ ಶ್ರೀಜಿತ್ ತಮ್ಮ ಉತ್ಪನ್ನಗಳನ್ನು ಇರಿಸಲು ಮಲ್ಟಿ-ಬ್ರಾಂಡ್ ಔಟ್ಲೆಟ್ (MBO ) ಅನ್ನು ತಲುಪಿದರು.

MBOಗಳು ಪ್ರಮುಖ ಬ್ರಾಂಡ್ ಗಳನ್ನು ಆರ್ಡರ್ ತೆಗೆದುಕೊಂಡಾಗ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶ್ರೀಜಿತ್ ಪ್ರಕಾರ mbo ಗಳ ಆ ಸೀಸನ್ ನಲ್ಲಿರುವ ಕಲೆಕ್ಷನ್ ಗಳನ್ನು ಇರಿಸಲು ಶೇಕಡಾ 80-90 ರಷ್ಟು ಹಣವನ್ನು ಮುನ್ನವೇ ಪಾವತಿಸಬೇಕು. ಅಂದರೆ ಅವರು ಆ ಉತ್ಪನ್ನಗಳನ್ನು ಬಹಳ ಕಾಲ ತಮ್ಮಲ್ಲೆ ಇಟ್ಟುಕೊಳ್ಳಬೇಕು ಹಾಗೂ ಆ ಸ್ಟಾಕ್ ಗಳನ್ನು ರಿಪ್ಲೇಸ್ ಮಾಡಲು 25 -30 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಎಂದು ಶ್ರೀಜಿತ್ ಹೇಳುತ್ತಾರೆ.

ಶ್ರೀಜಿತ್ ತಮ್ಮ ಉತ್ಪನ್ನಗಳನ್ನು ಇತರ ಬ್ರಾಂಡ್ಗಳ ಜೊತೆಗೆ ಇರಿಸಲು ಮತ್ತು ಖಚಿತವಾಗಿ ಬೆಲೆಯನ್ನು ನಿಗದಿಪಡಿಸಲು ಪ್ರಸ್ತಾಪಿಸಿದರು. ಅಲ್ಲದೆ ಅವರು ಇನ್ನು ಸ್ಟಾರ್ಟಪ್ ನಡೆಸುತ್ತಿರುವುದರಿಂದ ಮುಂಗಡವಾಗಿ ಸ್ವಲ್ಪ ಹಣವನ್ನು ಪಾವತಿಸುವಂತೆ mbo ಗಳಿಗೆ ವಿನಂತಿಸಿದರು. ನಮ್ಮ ಉತ್ಪನ್ನ ಗಳನ್ನು ಇತರ ಪ್ರಮುಖ ಬ್ರಾಂಡುಗಳೊಂದಿಗೆ ಇರಿಸಲಾಗಿದೆ, ಆದರೆ ನಾವು ಇನ್ನು ತಾಜಾ ಬ್ರಾಂಡ್ ಆಗಿದ್ದೇವೆ, ಎಂದು ಶ್ರೀಜಿತ್ ಹೇಳುತ್ತಾರೆ. ಶ್ರೀಜಿತ್ ತಮ್ಮ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಸಾಕಷ್ಟು ಗಮನ ಹರಿಸಿದ್ದರು. 45-60 ದಿನ ರೀಪ್ಲೇಸ್ಮೆಂಟ್ ತೆಗೆದುಕೊಳ್ಳುವ ಜಾಗದಲ್ಲಿ 24 -48 ಗಂಟೆಗಳಲ್ಲಿ ರಿಪ್ಲೇಸ್ ಮಾಡುವಂತೆ ಮಾಡಿದರು.

ಆದಾಗ್ಯೂ, ಮುಖ್ಯ ವಿಷಯ ಎಂದರೆ ಉತ್ಪನ್ನದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು. ನಮ್ಮ ಸ್ಟಾರ್ಟಪ್ ಅಲ್ಲಿರುವ ತಂಡವು ನಂಗೆ ತುಂಬಾ ಮುಖ್ಯವಾಗಿದೆ ಹಾಗೂ ನಾವು ಗುಣಮಟ್ಟದಲ್ಲಿ ಇಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಶ್ರೀಜಿತ್ ಹೇಳುತ್ತಾರೆ.

ಬ್ಲೇಝರ್ಗಳ ವಿಶೇಷತೆ 
ಒಂದು ಉದಾಹರಣೆಯನ್ನು ನೀಡುತ್ತಾ, ಅವರ ಬ್ಲೇಝರ್ಗಳು ವಿಶೇಷವಾಗಿ ತಯಾರಿಸಿರುವ ಪೆನ್ ಪ್ಯಾಕೆಟ್ಗಳನ್ನು ಹಾಗೂ ಕನ್ನಡಕ ಒರೆಸಲು ಬಳಸುವ ಬಟ್ಟೆ ಇಡಲು ಜಾಗವನ್ನು ಹೊಂದಿವೆ ಎಂದು ಅವರು ಹೇಳುತ್ತಾರೆ. ಈ ಸಣ್ಣ ವಿಷಯಗಳು ದೊಡ್ಡ ವೆತ್ಯಾಸವನ್ನು ಮಾಡುತ್ತವೆ ಎಂಬುದು ಅವರ ನಂಬಿಕೆಯಾಗಿದೆ.

ಕೋವಿಡ್ ಪ್ಯಾಂಡಮಿಕ ಸಮಯ ಶ್ರೀಜಿತ್ ಅವರಿಗೆ ಬಹಳ ಉಪಯೋಗವಾಯಿತು. ಅವರು ಆ ಸಮಯದಲ್ಲಿ ಭಾರತದಲ್ಲಿ ಕೆಲಸ ಇಲ್ಲದೆ ಖಾಲಿ ಕುಳಿತಿದ್ದ ಗಾರ್ಮೆಂಟ್ಸ್ ಗಳಿಗೆ ಔಟ್ ಸೋರ್ಸ್ ನೀಡಿ ತಮ್ಮ ಎಲ್ಲಾ ಉತ್ಪಾದನೆಯ ಕೆಲಸವನ್ನು ಅವರಿಗೆ ವಹಿಸಿದರು.

ಇದನ್ನೂ ಓದಿ: Multilayer Farming: ಬಹುಪದರ ಕೃಷಿ ಪದ್ಧತಿ ಅಳವಡಿಸಿಕೊಂಡ ಪ್ರಶಸ್ತಿ ವಿಜೇತ ರೈತ: ವರ್ಷಕ್ಕೆ ಇವರ ಆದಾಯ ಎಷ್ಟು ಗೊತ್ತಾ?

ಗಾರ್ಮೆಂಟ್ಸ್ ಸಂಸ್ಥೆಗಳು ಸಾಮಾನ್ಯವಾಗಿ ಸ್ಟಾರ್ಟಪ್ ಕಂಪನಿಗಳನ್ನು ಹಚ್ಚಿಕೊಳ್ಳುವುದಿಲ್ಲ, ಆದರೆ ನಾವು ನಗದು ನೀಡಿದೆವು ಹಾಗೂ ಅವರಿಗೆ ಪ್ರತಿ ತಿಂಗಳು ಕೆಲಸ ನೀಡುವ ವಿಶ್ವಾಸ ಕೊಟ್ಟೆವು ಎಂದು ಶ್ರೀಜಿತ್ ಹೇಳುತ್ತಾರೆ. ಪ್ರಸ್ತುತ ಅವರು ಉಡುಪುಗಳನ್ನು ತಾವೇ ವಿನ್ಯಾಸಗೊಳಿಸುತ್ತಾರೆ. ಆದರೆ ಉಳಿದ ಪ್ರಕ್ರಿಯ್ರೆಗಳನ್ನು ಹೊರಗುತ್ತಿಗೆ ನೀಡಲಾಗುತ್ತದೆ.

ಜಿತ್ ಸ್ಥಾಪಿಸಿದ ಮೊದಲ ಬ್ರಾಂಡ್
ಗಿಯಕಾ ಮತ್ತು ಆಭಿಟೋ ಸಾರ್ಟೋರಿಯಲ್ ಫ್ಯಾಶನ್ ಅಡಿಯಲ್ಲಿ ಶ್ರೀಜಿತ್ ಸ್ಥಾಪಿಸಿದ ಮೊದಲ ಬ್ರಾಂಡ್ ಟಿ ಡಿ ಬ್ರಾಂಡ್ - ಪುರುಷರ ಉಡುಪುಗಳಾದ ಸೂಟ್ ಗಳು ,ಬ್ಲೇಝರ್ಗಳು, ಶರ್ಟುಗಳು ಹಾಗು ಚರ್ಮದ ಪರಿಕರಗಳನ್ನು ಇದು ಒಳಗೊಂಡಿದೆ. ಆದರೆ ಬೇರ್ ಬ್ರೌನ್ ಸಂಪೂರ್ಣವಾಗಿ ಕಾಶುಯಲ್ ಉಡುಪುಗಳನ್ನು ಪರಿಚಯಿಸುತ್ತವೆ.

ಈ ಉತ್ಪನ್ನಗಳ ಮೊತ್ತವು ಈ ರೀತಿಯಾಗಿವೆ. ಸೂಟುಗಳು 8 ರಿಂದ 9 ಸಾವಿರದ ದರದಲ್ಲಿ ದೊರೆಯುತ್ತವೆ. ಬ್ಲೇಝರ್ಗಳು 4 ರಿಂದ 6 ಸಾವಿರದ ದರದಲ್ಲಿ ದೊರೆಯುತ್ತವೆ. ಶರ್ಟುಗಳು 1500 ರಿಂದ 2000 ರೂ. ದರದಲ್ಲಿ ದೊರೆಯುತ್ತವೆ.

ವಿವಿಧ ದೇಶಗಳಲ್ಲಿ ಮಾರಾಟವಾಗುತ್ತಿರುವ ಬ್ರಾಂಡ್
ಕೇರಳದಿಂದ ಶುರುವಾಗಿ, ಜಯಲಕ್ಷ್ಮಿ ಹಾಗೂ ಕಲ್ಯಾಣ್ ಸಿಲ್ಕ್ಸ್ ಅಂತಹ mbo ಗಳಲ್ಲಿ ಶ್ರೀಜಿತ್ ತಮ್ಮ ಉತ್ಪನ್ನಗಳನ್ನು ಇರಿಸಿದ್ದಾರೆ. ಈಗ ಕಂಪನಿಯು ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಹಾಗೂ ಪಂಜಾಬ್ ಸೇರಿದಂತೆ ಪ್ಯಾನ್ ಇಂಡಿಯಾದಲ್ಲಿ ಮಾರಾಟವಾಗುತ್ತಿದೆ. ಕೇರಳ ಒಂದರಲ್ಲೇ ಇದು 100 ಕ್ಕೂ ಹೆಚ್ಚು ಔಟ್ಲೆಟ್ಸ್ ಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ನಾವು ಮಲ್ಟಿ ಬ್ರಾಂಡ್ ಇರುವ ದೊಡ್ಡ ಮಾರುಕಟ್ಟೆಯನ್ನು ನೋಡುತ್ತಿದ್ದೇವೆ ಎಂದು ಶ್ರೀಜಿತ್ ಹೇಳಿದ್ದಾರೆ.

ಗಿಯಾಕ ಹಾಗು ಅಭಿಟೋ ಸಾರ್ಟೋರಿಯಲ್ ಈಗ ಒಂದು ಸ್ವಾವಲಂಬಿ ವ್ಯಾಪಾರವಾಗಿದೆ, ಆರಂಭವಾದ ಮೊದಲ ವರ್ಷದಲ್ಲೇ 80 ಲಕ್ಷಗಳ ವಹಿವಾಟು ಮಾಡಿದೆ. ಆರ್ಥಿಕ ವರ್ಷ 22 ರಲ್ಲಿ 5 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಿರುವ ಈ ಸಂಸ್ಥೆಯು ಕೇವಲ ತನ್ನಲ್ಲಿರುವ 22 ಉದ್ಯೋಗಿಗಳ ಮೂಲಕ ಆರ್ಥಿಕ ವರ್ಷ 23 ರಲ್ಲಿ ಸುಮಾರು 20 ಕೋಟಿ ರೂಪಾಯಿಗಳ ವ್ಯಾಪಾರದ ಗುರಿಯನ್ನು ಹೊಂದಿದೆ

ಸ್ಟಾರ್ಟಪ್ ಎದುರಿಸುವ ದೊಡ್ಡ ಸವಾಲೆಂದರೆ ಹಣದ ಸಮಸ್ಯೆ
ಶ್ರೀಜಿತ್ ಮಾರಾಟಗಾರರಿಂದ ಕ್ರೆಡಿಟ್ ಪಡೆಯುತ್ತಿದ್ದಾರೆ, ಅದು ಅವರ ವ್ಯವಹಾರದ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಶ್ರೀಜಿತ್ ಕೊಚ್ಚಿಯನ್ನು ಬೇಸ್ ಆಗಿ ಇಟ್ಟುಕೊಂಡು ಕೇರಳದಲ್ಲಿ ಏನಾದರೂ ಮಾಡಬೇಕೆಂದು ಕೊಂಡಿದ್ದರು. ಹೆಚ್ಚು ಪ್ರಯೋಜನವೆಂದರೆ, ಅವರು ಕಡಿಮೆ ವೆಚ್ಚದಲ್ಲಿ ಕೆಲಸ ನಿರ್ವಹಿಸಬಹುದು.

ಸ್ಟಾರ್ಟಪ್ ಎದುರಿಸುವ ದೊಡ್ಡ ಸವಾಲೆಂದರೆ ಹಣದ ಸಮಸ್ಯೆ. ಈ ವಿಭಾಗದಲ್ಲಿ ನಡೆಯುವ ಏರುಪೇರು ಸ್ಟಾರ್ಟಪ್ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ ಎಂದು ಅವರು ಹೇಳುತ್ತಾರೆ. ಶ್ರೀಜಿತ್ ಎತ್ನಿಕ್ ವೇರ್ ವಿಭಾಗಕ್ಕೆ ಪ್ರವೇಶಿಸಲು ಯೋಚಿಸಿದ್ದಾರೆ. ಮತ್ತು ಆನ್ ಲೈನ್ ನಲ್ಲಿ ವ್ಯಾಪಾರ ಮಾಡಲು ಯೋಚಿಸುತ್ತಿದ್ದಾರೆ. ಈ ವಿಭಾಗವು ಅಮೆಜಾನ್, ಫ್ಲಿಪ್ಕಾರ್ಟ್ ಅಂತಹ ಇಕಾಮರ್ಸ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಇದನ್ನೂ ಓದಿ:  Fertilizer Business: ಮನೆಯಲ್ಲಿಯೇ ಗೊಬ್ಬರದ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡ ಮಹಿಳೆ, ವರ್ಷಕ್ಕೆ ಇವರ ಸಂಪಾದನೆ ಎಷ್ಟು ಗೊತ್ತಾ?

ಮೆಕ್ಸಿನ್ ಹಾಗೂ ಕಂಪನಿಯ ವರದಿಯ ಪ್ರಕಾರ, ಭಾರತದ ಉಡುಪು ಮಾರುಕಟ್ಟೆಯು 2022 ರಲ್ಲಿ $ 59.3 ಬಿಲಿಯನ್ ಆಗಿರುತ್ತದೆ. ಇದು ವಿಶ್ವದ ಆರನೇ ಅತಿ ದೊಡ್ಡ ವ್ಯಾಪಾರವಾಗಿದೆ. ಈ ಸ್ಟಾರ್ಟಪ್ ಸಹ ಪ್ರಮುಖ ಬ್ರಾಂಡ್ ಗಳಾದ ಲೂಯಿಸ್ ಫಿಲಿಪ್, ವ್ಯಾನ್ ಹುಸೇನ್ ಹಾಗೂ ಆರೋ ಗಳಜೊತೆ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.
Published by:Ashwini Prabhu
First published: