Amazon Sale: ಅಮೆಜಾನ್ ಸೇಲ್‍ನಲ್ಲಿ ಮಹಿಳೆಯರ ಈ ಏಳು ಬ್ಯಾಗುಗಳ ಮೇಲೆ ಭರ್ಜರಿ ಆಫರ್! ಈಗಲೇ ಶಾಪಿಂಗ್ ಶುರು ಮಾಡಿ

ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಬಟ್ಟೆಗಳಿಗೇನು ಬರವಿರುವುದಿಲ್ಲ. ಬ್ಯಾಗ್ ಬಗ್ಗೆ ಹೇಳೋದಾದ್ರೆ ಮಹಿಳೆಯರು ಎಲ್ಲೇ ಹೋಗಲಿ, ಯಾವುದೇ ಡ್ರೆಸ್ ಹಾಕಿದರೂ ಬ್ಯಾಗ್ ಅಂತೂ ಬೇಕೆ ಬೇಕು.

ಅಮೆಜಾನ್ ಸೇಲ್‍ನಲ್ಲಿ ಮಹಿಳೆಯರ ಬ್ಯಾಗ್

ಅಮೆಜಾನ್ ಸೇಲ್‍ನಲ್ಲಿ ಮಹಿಳೆಯರ ಬ್ಯಾಗ್

  • Share this:
ಮಹಿಳೆಯರ (Woman)  ವಾರ್ಡ್‌ರೋಬ್‌ನಲ್ಲಿ (Wardrobe) ಬಟ್ಟೆಗಳಿಗೇನು (Clothes) ಬರವಿರುವುದಿಲ್ಲ. ಒಂದು ಜೊತೆ ಡ್ರೆಸ್ (Dress) ಖರೀದಿ ಮಾಡಿದರೆ ಅದಕ್ಕೆ ಮ್ಯಾಚಿಂಗ್ ಸ್ಲಿಪರ್ (Matching Slipper), ಅಕ್ಸೆಸೆರಿಸ್ (Accessories) ಜೊತೆಗೆ ಅದಕ್ಕೆ ಹೊಂದಿಕೊಳ್ಳುವ ಬ್ಯಾಗ್ (Bag) ಸಹ ತೆಗೆದುಕೊಳ್ಳುತ್ತಾರೆ. ಬ್ಯಾಗ್ ಬಗ್ಗೆ ಹೇಳೋದಾದ್ರೆ ಮಹಿಳೆಯರು ಎಲ್ಲೇ ಹೋಗಲಿ, ಯಾವುದೇ ಡ್ರೆಸ್ ಹಾಕಿದರೂ ಬ್ಯಾಗ್ ಅಂತೂ ಬೇಕೆ ಬೇಕು. ಕೆಲವು ಮುಖ್ಯ ವಸ್ತುಗಳನ್ನು (Things) ಇಟ್ಟುಕೊಳ್ಳಲು ಅಥವಾ ಹಾಕಿರುವ ಔಟ್ ಫಿಟ್ಗೆ (Out fit) ಮ್ಯಾಚ್ ಮಾಡಲು ತಮ್ಮ ಲುಕ್ ಕಂಪ್ಲೀಟ್ ಮಾಡಲು ಬ್ಯಾಗ್ ಬೇಕು. ಬ್ಯಾಗ್ ಅಂದ್ರೆ ಯಾವುದ್ಯಾವುದೋ ಬ್ಯಾಗ್ ಯಾವುದೋ ಡ್ರೆಸ್ಗೆ ಮ್ಯಾಚ್ (Match) ಮಾಡುವುದಲ್ಲ. ವೆಸ್ಟರ್ನ್ (Western), ಟ್ರೆಡಿಷನ್ (Tradition) ಯಾವ ಬಟ್ಟೆಗೆ ಯಾವುದು ಸೂಕ್ತವೋ ಅದನ್ನು ಹಾಕಿದರೆ ನಿಮ್ಮ ಲುಕ್ ಪೂರ್ತಿ ಆಗುತ್ತದೆ.

ಹಾಗಾದರೆ ಮಹಿಳೆಯರು ತಮ್ಮ ವಾರ್ಡ್‌ರೋಬ್‌ನಲ್ಲಿ ಇಟ್ಟುಕೊಳ್ಳಬೇಕಾದ 7 ಬ್ಯಾಗುಗಳ ಬಗ್ಗೆ ಮಾಹಿತಿ ಇಲ್ಲಿದೆ. ಹಾಗೇ ಅಮೆಜಾನಿನಲ್ಲಿ ಸಮ್ಮರ್ ಸೇಲ್ ನಡೆಯುತ್ತಿದ್ದು, ನಿಮ್ಮಿಷ್ಟದ ಬ್ಯಾಗುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಬಹುದು.

ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ 7 ಬ್ಯಾಗ್‌ಗಳು

1) ಶೋಲ್ಡರ್ ಬ್ಯಾಗ್ – ರೂ 364
ಶೋಲ್ಡರ್ ಬ್ಯಾಗ್ ಪ್ರತಿಯೊಬ್ಬ ಮಹಿಳೆಯರಿಗೂ ಅಗತ್ಯವಾದ ಬ್ಯಾಗ್. ಹಿಂದಿನ ಕಾಲದಿಂದಲೂ ಕ್ಲಾಸಿಕ್ ಶೋಲ್ಡರ್ ಫ್ಯಾಶನ್ ಪ್ರಿಯರ ಹಾಟ್ ಫೇವ್ರೇಟ್ ಆಗಿದೆ. ಈ ಬ್ಯಾಗ್ ಪಾರ್ಟಿ, ಆಫೀಸ್, ಹೊರಗಡೆ ಎಲ್ಲಾದರೂ ಹೋಗುವಾಗ ತುಂಬಾ ಅನುಕೂಲಕಾರಿಯಾಗಿರುತ್ತದೆ. ಮಹಿಳೆಯರು ತಮ್ಮ ಸ್ಟಫ್ಗಳನ್ನು ಬ್ಯಾಗ್ನಲ್ಲಿ ಇರಿಸಿಕೊಳ್ಳಲು ಇದು ಸಹಕಾರಿ ಮತ್ತು ಚೆಂದವಾಗಿ ಸಹ ಕಾಣುತ್ತದೆ. ಭುಜ, ತೋಳು ಅಥವಾ ಕ್ಲಚ್‌ನಂತೆ ಇಟ್ಟುಕೊಳ್ಳಲು ಸುಲಭವಾಗಿದೆ.

ಇದನ್ನೂ ಓದಿ: Coconut Water Benefits: ಕೂದಲು ಮತ್ತು ತ್ವಚೆಯ ಆರೈಕೆಗೆ ಎಳನೀರನ್ನು ಹೀಗೆ ಬಳಸಿ, ಪ್ರಯೋಜನ ಪಡೆಯಿರಿ

2) ಡೇ ಕ್ಲಚ್ - ರೂ. 375
ಎನ್ವಲಪ್ ಕ್ಲಚ್ ನಿಮ್ಮ ದೈನಂದಿನ ಕ್ಯಾಶುಯಲ್ ಲುಕ್ ಅನ್ನು ಪೂರ್ಣಗೊಳಿಸುತ್ತದೆ. ನಿಮಗೆ ಅಗತ್ಯವಿರುವ ವಸ್ತುಗಳನ್ನು ಇರಿಸಿಕೊಳ್ಳಲು ಮತ್ತು ನೀವು ನಿಮ್ಮ ಸ್ನೇಹಿತರೊಂದಿಗೆ ಕಾಫಿ ಕುಡಿಯಲು ಹೊರಗೆ ಹೋದಾಗ, ಅಥವಾ ಊಟಕ್ಕೆ ಹೋಗುವಾಗ ಇವುಗಳನ್ನು ಬಳಸಬಹುದು. ವೆಸ್ಟರ್ನ್ ಮತ್ತು ಟ್ರೆಡೀಷನ್ ಲುಕ್ಕಿಗೆ ಈ ಬ್ಯಾಗ್ ಹೊಂದಿಕೊಳ್ಳುತ್ತದೆ.

3) ಇವನಿಂಗ್ ಕ್ಲಚ್ - ರೂ. 331
ನೀವು ಸಂಜೆ, ರಾತ್ರಿ ಎಲ್ಲದರೂ ಹೊರಗೆ ಹೋಗುವಾಗ ಈ ಫ್ಯಾಶನ್ ಕ್ಲಚ್ಗಳು ನಿಮ್ಮ ಉಡುಗೆಗೆ ಸರಿಹೊಂದುತ್ತದೆ. ಇವನಿಂಗ್ ಕ್ಲಚ್ ಪ್ರತಿ ಮಹಿಳೆ ಹೊಂದಿರಬೇಕಾದ ಬ್ಯಾಗ್. ಇವು ವಿವಿಧ ವಿನ್ಯಾಸಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ, ಆದ್ದರಿಂದ ನಿಮಗೆ ಸೂಕ್ತವಾದದನ್ನು ನೀವು ಆರಿಸಿ ತೆಗೆದುಕೊಳ್ಳಬಹುದು.

4) ಡಫಲ್ ಬ್ಯಾಗ್ - ರೂ. 1115
ಡಫಲ್ ಬ್ಯಾಗ್ ಪ್ರವಾಸಕ್ಕೆ ಹೋಗುವಾಗ, ಜಿಮ್‍ಗೆ ಹೋಗುವಾಗ, ವೀಕೆಂಡ್ ಟ್ರಿಪ್‍ಗೆ ಹೋಗುವಾಗ ಸೂಕ್ತವಾಗಿದೆ. ನಿಮಗೆ ಎರಡು ದಿನಗಳವರೆಗೆ ಅಗತ್ಯವಿರುವ ವಸ್ತುಗಳಿಗೆ ಸರಿಹೊಂದುವಷ್ಟು ಸ್ಥಳಾವಕಾಶವನ್ನು ಡಪಲ್ ಬ್ಯಾಗ್ ಹೊಂದಿರುತ್ತದೆ. ಇದು ನಿಮ್ಮ ಲಗ್ಗೇಜ್ ತೆಗೆದುಕೊಳ್ಳುವುದರ ಜೊತೆಗೆ ಸಖತ್ ಸ್ಟೈಲಿಶ್ ಆಗಿ ಸಹ ಇರುತ್ತದೆ.

ಇದನ್ನೂ ಓದಿ:  Health Care: ಊಟದ ಬಳಿಕ ಸಿಹಿ ತಿನ್ನೋ ಅಭ್ಯಾಸವಿದ್ರೆ ಇಂದೇ ಬದಲಿಸಿ, ಇಲ್ಲವಾದ್ರೆ ಅನಾರೋಗ್ಯ ಕಾಡುತ್ತೆ

5) ಟೋಟ್ ಬ್ಯಾಗ್ - ರೂ .1118
ಟೋಟ್ ಬ್ಯಾಗ್ ಹೆಚ್ಚಿನ ಮಹಿಳೆಯರು ಹೊಂದಿರುವ ಬ್ಯಾಗ್ ಆಗಿದೆ. ಮಹಿಳೆಯರು ಎಲ್ಲಿಗಾದರೂ ಹೋಗುವಾಗ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಈ ಬ್ಯಾಗ್ ಸೂಕ್ತವಾಗಿದೆ. ಅಮೆಜಾನ್ನಲ್ಲಿ ಈ ಬ್ಯಾಗ್ ಮೇಲೆ ಉತ್ತಮ ಆಫರ್ ಇದ್ದು, ಇದನ್ನು ಕೊಳ್ಳಲು ಇದು ಸೂಕ್ತ ಸಮಯ.

6) ಸ್ಲಿಂಗ್ ಬ್ಯಾಗ್ - ರೂ. 753
ಮಹಿಳೆಯ ಕಪಾಟಿನಲ್ಲಿ ಕಡ್ಡಾಯವಾಗಿ ಇರಬೇಕಾದ ಮತ್ತೊಂದು ಬ್ಯಾಗ್ ಇದು. ಸಿಂಪಲ್ ಆಗಿ ಎಲ್ಲಿಗಾದರೂ ಹೋಗಲು ಬಯಸಿದರೆ ಅಥವಾ ಬಹಳಷ್ಟು ವಸ್ತುಗಳನ್ನು ತೆಗೆದುಕೊಂಡು ಹೋಗದೇ ಇದ್ದಾಗ ನೀವು ಈ ಜೋಲಿ ಚೀಲವನ್ನು ಆರಿಸಿಕೊಳ್ಳಬಹುದು. ನಿಮ್ಮ ಫೋನ್, ಕೀಗಳು ಮತ್ತು ಹಣವನ್ನು ನೀವು ಸರಳವಾಗಿ ಸಾಗಿಸಲು ಬಯಸಿದಾಗ ಸ್ಲಿಂಗ್ ಬ್ಯಾಗ್ ಸೂಕ್ತ ಆಯ್ಕೆಯಾಗಿದೆ.

ಇದನ್ನೂ ಓದಿ:  Weight loss: ತೂಕ ಇಳಿಸಲು ಆಯುರ್ವೇದದ ಸಲಹೆ ಪಾಲಿಸಿ; ಸುಲಭವಾಗಿ ಬೊಜ್ಜು ಕರಗಿಸಬಹುದು

7) ಬಟ್ಟೆ ಚೀಲ – ರೂ- 449
ಯಾವುದೇ ಮಹಿಳೆ ತಮ್ಮ ಕಪಾಟಿನಲ್ಲಿ ಹೊಂದಿರಬಹುದಾದ ಅತ್ಯಂತ ಮೂಲಭೂತ ಮತ್ತು ಕ್ಯಾಶುಯಲ್ ಬ್ಯಾಗ್ ಇದು. ಶಾಪ್ಪಿಂಗಿಗೆ ಹೋಗುವಾಗ ಈ ಬ್ಯಾಗುಗಳು ಸೂಕ್ತ. ಹಗುರವಾದ, ಸೊಗಸಾದ ಮತ್ತು ವಿಶಾಲವಾದ ಈ ಬ್ಯಾಗ್ಗಳು ಶಾಪ್ಪಿಂಗಿಗೆ ಬೆಸ್ಟ್ ಆಯ್ಕೆಯಾಗಿದೆ.
Published by:Ashwini Prabhu
First published: