Savings: ಹತ್ತು ವರ್ಷಗಳಲ್ಲಿ ಹತ್ತು ಕೋಟಿ ಹಣ ಉಳಿಸಲು ಹೀಗೆ ಮಾಡಿ

SIP Calculator: ಹೀಗೆ ಮಾಡುವುದರಿಂದ ಹೂಡಿಕೆದಾರರು 15% ಸರಾಸರಿ ರಿಟರ್ನ್‌ನೊಂದಿಗೆ 2.3 ಲಕ್ಷದಷ್ಟು ಹೂಡಿಕೆ ಮಾಡಿ ಹತ್ತು ವರ್ಷಗಳಲ್ಲಿ 10.5 ಕೋಟಿ ಹಣ ಸಂಗ್ರಹಣೆ ಮಾಡಬಹುದು ಎಂಬುದು ಪರಿತೋಷ್ ಶರ್ಮಾ ಅಭಿಪ್ರಾಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

35ರ ಹರೆಯದ ತಂತ್ರಜ್ಞಾನ ಉದ್ಯೋಗದಲ್ಲಿರುವ ಸೈನಾ(Saina) ಮುಂದಿನ ಹತ್ತು ವರ್ಷಗಳಲ್ಲಿ ನಿವೃತ್ತಿ(Retierment) ಹೊಂದಿ ತನ್ನ ಮೆಚ್ಚಿನ ಚಿತ್ರಕಲೆಯ ವೃತ್ತಿಯತ್ತ ಗಮನ ಹರಿಸಲು ಬಯಸಿದ್ದಾರೆ. ಆದರೆ ತನ್ನ ಭವಿಷ್ಯಕ್ಕಾಗಿ ಆಕೆ ಸುಮಾರು 10 ಕೋಟಿ ರೂ. ಉಳಿಸಲು ಬಯಸಿದ್ದಾರೆ. ಸೈನಾ ಉದಾಹರಣೆಯಲ್ಲಿ ನಾವು ಬಹಿರಂಗಪಡಿಸಲಿರುವ ವಿಷಯ ಮಹತ್ವದ್ದಾಗಿದೆ. ಹೌದು ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬೇಕು ಎಂದಾದಲ್ಲಿ ಇಂದಿನ ದಿನಗಳಲ್ಲಿ ಅದಕ್ಕಾಗಿ ಹಲವಾರು ಮಾರ್ಗೋಪಾಯಗಳಿವೆ. ಸೈನಾಳಂತೆ ಹಲವಾರು ಜನರು ತಮ್ಮ ಹವ್ಯಾಸದಲ್ಲಿ ಮುಂದುವರಿಯಲು ಬಯಸುವವರಿದ್ದಾರೆ. ಆದರೆ ಅದಕ್ಕೂ ಮುನ್ನ ಭವಿಷ್ಯ ಭದ್ರಪಡಿಸುವ ಅನಿವಾರ್ಯತೆಯನ್ನು ಹೊಂದಿದ್ದಾರೆ ಹಾಗೂ ಇಂದಿನ ದಿನಗಳಲ್ಲಿ ಇದು ಅತ್ಯಂತ ಅವಶ್ಯಕವಾದುದು.


Psquare LLPಯ ಸ್ಥಾಪಕರು ಹಾಗೂ ಯೋಜಕರಾಗಿರುವ ಪರಿತೋಷ್ ಶರ್ಮಾ ಹೇಳುವಂತೆ ಸಮಯದ ಮಿತಿಯು ಸೈನಾರ ವಿಷಯದಲ್ಲಿ ದೀರ್ಘವಾಗಿರುವುದರಿಂದ ಆಕೆ ಮ್ಯೂಚುವಲ್ ಫಂಡ್‌ಗಳಂತಹ ಈಕ್ವಿಟಿ ಸಂಪರ್ಕಿತ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ದೀರ್ಘ ಅವಧಿಯಲ್ಲಿ ಈಕ್ವಿಟಿ ಸಂಯೋಜಿತ ಮ್ಯೂಚುವಲ್ ಫಂಡ್‌ಗಳು ನೀವು ಆರಿಸುವ ಫಂಡ್‌ಗಳನ್ನು ಆಧರಿಸಿ 10 ರಿಂದ 15%ನಷ್ಟು ರಿಟರ್ನ್‌ಗಳನ್ನು ಒದಗಿಸಬಹುದು.


ಇದನ್ನೂ ಓದಿ: 7 ಲಕ್ಷ ಉಚಿತ ವಿಮೆ, ಪಿಂಚಣಿ ಪಡೆಯಲು Online ಮೂಲಕ ಈ ರೀತಿ ಅರ್ಜಿ ಸಲ್ಲಿಸುವುದು ಕಡ್ಡಾಯ

ರಿಟರ್ನ್ ದರವು 10% ಆಗಿದ್ದರೆ, ಹೂಡಿಕೆದಾರರು ಪ್ರತಿ ತಿಂಗಳು 5 ಲಕ್ಷದಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಹೀಗೆ ಹೂಡಿಕೆ ಮೊತ್ತವು 6 ಕೋಟಿಯಂತೆ, 10.32 ಕೋಟಿ ಹಣ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಪರಿತೋಷ್ ಶರ್ಮಾ ಹೇಳುತ್ತಾರೆ. ಇದೇ ಸಮಯದಲ್ಲಿ 15% ಸರಾಸರಿ ರಿಟರ್ನ್‌ಗಳಿಗಾಗಿ, ಪ್ರತಿ ತಿಂಗಳು 3.6 ಲಕ್ಷದಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಒಟ್ಟು ಹೂಡಿಕೆ ಮೊತ್ತ 4.3 ಕೋಟಿಯಲ್ಲಿ 10.4 ಕೋಟಿ ಸಂಗ್ರಹಣೆ ಮಾಡಬಹುದು.


ಇಂತಹ ಹೂಡಿಕೆಗಳಿಗಾಗಿ ಹೂಡಿಕೆದಾರರು ಹೆಚ್ಚು ಸಾಮರ್ಥ್ಯದ ಯೋಜನೆಗಳು, ಫ್ಲೆಕ್ಸಿ ಕ್ಯಾಪ್ ಯೋಜನೆಗಳು ಅಥವಾ ಇಂಡೆಕ್ಸ್ ಫಂಡ್ ಆರಿಸುವುದು ಉತ್ತಮ ಎಂದು ಶರ್ಮಾ ತಿಳಿಸುತ್ತಾರೆ. ಇನ್ನು ಈ ಮೂರು ಯೋಜನೆಗಳ ಸಂಯೋಜನೆಯಲ್ಲಿ ಕೂಡ ಹೂಡಿಕೆದಾರರು ಹೂಡಿಕೆ ಮಾಡಲು ಆಯ್ಕೆಮಾಡಿಕೊಳ್ಳಬಹುದು. ಹೆಚ್ಚಿನ ಆದಾಯದೊಂದಿಗೆ SIP (ವ್ಯವಸ್ಥಿತಿ ಹೂಡಿಕೆ ಯೋಜನೆಗಳು) ಗಳಲ್ಲಿ ಕೂಡ ಹೂಡಿಕೆದಾರರು ಹೂಡಿಕೆ ನಡೆಸಬಹುದು ಎಂಬುದಾಗಿ ಆರ್ಥಿಕ ಸಲಹೆಗಾರರಾಗಿರುವ ಶರ್ಮಾ ತಿಳಿಸುತ್ತಾರೆ.


SIP ಎಂಬುದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಆರ್ಥಿಕ ಶಿಸ್ತಿನೊಂದಿಗೆ ಭವಿಷ್ಯಕ್ಕಾಗಿ ಸುಲಭವಾಗಿ ಸಂಪತ್ತನ್ನು ನಿರ್ಮಿಸಲು ಈ ವಿಧಾನ ಸೂಕ್ತವಾಗಿದೆ. ಈ ಯೋಜನೆಯಲ್ಲಿ ಪ್ರತೀತಿ ವರ್ಷ SIP ಮೊತ್ತವನ್ನು 10%ನಷ್ಟು ಹೆಚ್ಚಿಸಬೇಕಾಗುತ್ತದೆ. ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಇದು ಹೆಚ್ಚು ವೇಗವಾದ ವಿಧಾನವಾಗಿದೆ ಎಂದು ಶರ್ಮಾ ಹೇಳುತ್ತಾರೆ.


ಇದನ್ನೂ ಓದಿ:ವಾಟ್ಸಾಪ್​​​ನಲ್ಲಿ ಕೇವಲ ಒಂದು ಮೆಸೇಜ್ ಕಳುಹಿಸಿ ₹10 ಲಕ್ಷದವರೆಗೆ ಸಾಲ ಪಡೆಯಿರಿ; ಸಂಪೂರ್ಣ ಮಾಹಿತಿ ಇಲ್ಲಿದೆ

ಹೀಗೆ ಮಾಡುವುದರಿಂದ ಹೂಡಿಕೆದಾರರು 15% ಸರಾಸರಿ ರಿಟರ್ನ್‌ನೊಂದಿಗೆ 2.3 ಲಕ್ಷದಷ್ಟು ಹೂಡಿಕೆ ಮಾಡಿ ಹತ್ತು ವರ್ಷಗಳಲ್ಲಿ 10.5 ಕೋಟಿ ಹಣ ಸಂಗ್ರಹಣೆ ಮಾಡಬಹುದು ಎಂಬುದು ಪರಿತೋಷ್ ಶರ್ಮಾ ಅಭಿಪ್ರಾಯವಾಗಿದೆ.


Published by:Sandhya M
First published: