Film Ticket Free: ಸಿನಿಮಾ ಪ್ರೇಮಿಗಳೇ ಕೇಳಿ, ಒಂದು ಸಿನಿಮಾ ಟಿಕೆಟ್ ಖರೀದಿಸಿದ್ರೆ ಇನ್ನೊಂದು ಟಿಕೆಟ್ ಫ್ರೀ!

ಕೆಲವು ಕ್ರೆಡಿಟ್ ಕಾರ್ಡ್​ಗಳ ವಿಶೇಷ ಏನೆಂದ್ರೆ ಒಂದು ಟಿಕೆಟ್ ಖರೀದಿಸಿದರೆ, ನೀವು ಇನ್ನೊಂದು ಟಿಕೆಟ್ ಅನ್ನು ಉಚಿತವಾಗಿ ಪಡೆಯಬಹುದು. ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿ ಕೊಡುಗೆಗಳೂ ಇವೆ. ಆ ಕಾರ್ಡ್‌ಗಳು ಯಾವುವು ಮತ್ತು ಯಾವ ಕೊಡುಗೆಗಳು ಲಭ್ಯವಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಯಶ್ ಅವರ ಮುಂದಿನ ಸಿನಿಮಾಗಳನ್ನೂ ಈ ಆಫರ್​ನಲ್ಲಿ ನೋಡಬಹುದು!

ಯಶ್ ಅವರ ಮುಂದಿನ ಸಿನಿಮಾಗಳನ್ನೂ ಈ ಆಫರ್​ನಲ್ಲಿ ನೋಡಬಹುದು!

  • Share this:
    ನೀವು ಸಿನಿಮಾ ಪ್ರೇಮಿಗಳೇ? ಬಹಳಷ್ಟು ಚಲನಚಿತ್ರಗಳನ್ನು ನೋಡುತ್ತೀರಾ? ಪ್ರತಿ ಶುಕ್ರವಾರ ಚಿತ್ರಮಂದಿರ, ಮಲ್ಟಿಫ್ಲೆಕ್ಸ್​ಗಳಿಗೆ ದಾಂಗುಡಿ ಇಡುತ್ತೀರಾ? ಹಾಗಾದರೆ ನಿಮಗಾಗಿ ಎಂದೇ ವಿಶೇಷ ಕ್ರೆಡಿಟ್ ಕಾರ್ಡ್‌ಗಳನ್ನು (Credit Cards) ಹಲವು ಬ್ಯಾಂಕುಗಳು ಒದಗಿಸುತ್ತವೆ. ವಿವಿಧ ವರ್ಗಗಳು ಮತ್ತು ವಿವಿಧ ಅಗತ್ಯಗಳಿಗಾಗಿ ವಿಶೇಷ ಕ್ರೆಡಿಟ್ ಕಾರ್ಡ್‌ಗಳನ್ನು(Special Credit Cards For Movie Lovers) ಬ್ಯಾಂಕ್​ಗಳು ಬಿಡುಗಡೆ ಮಾಡುತ್ತವೆ. ಅಲ್ಲದೇ ಸಿನಿಮಾ ಪ್ರಿಯರಿಗೆ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್​ಗಳ (Cash Back Offers) ಜೊತೆಗೆ ಸಿನಿಮಾ ನೋಡುವವರಿಗೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ.  ನೀವು ಬ್ಯಾಂಕ್‌ಗಳು ನೀಡುವ ವಿಶೇಷ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ಕಡಿಮೆ ಬಜೆಟ್​ನಲ್ಲಿ ಸಿನಿಮಾ ನೋಡಬಹುದು!

    ಒಂದಾದ ಮೇಲೊಂದರಂತೆ ನೋಡಲೇಬೇಕಾದ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬೇಸಿಗೆಯಲ್ಲಿ ದೊಡ್ಡ ಸಿನಿಮಾಗಳ ಸರಣಿ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ದಿನವೇ, ಬಿಡುಗಡೆ ಆದ ವಾರವೇ ಅಂತಹ ಸಿನಿಮಾಗಳಿಗೆ ಹೋಗಬೇಕಾದರೆ ಸ್ವಲ್ಪ ಹೆಚ್ಚು ಬಜೆಟ್ ಇರಲೇಬೇಕು.

    ಒಂದು ಟಿಕೆಟ್ ಖರೀದಿಸಿದರೆ ಇನ್ನೊಂದು ಟಿಕೆಟ್ ಉಚಿತ!
    ಇಂತಹ ಕೆಲವು ಕ್ರೆಡಿಟ್ ಕಾರ್ಡ್​ಗಳ ವಿಶೇಷ ಏನೆಂದ್ರೆ ಒಂದು ಟಿಕೆಟ್ ಖರೀದಿಸಿದರೆ, ನೀವು ಇನ್ನೊಂದು ಟಿಕೆಟ್ ಅನ್ನು ಉಚಿತವಾಗಿ ಪಡೆಯಬಹುದು. ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿ ಕೊಡುಗೆಗಳೂ ಇವೆ. ಆ ಕಾರ್ಡ್‌ಗಳು ಯಾವುವು ಮತ್ತು ಯಾವ ಕೊಡುಗೆಗಳು ಲಭ್ಯವಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

    ಕೊಟಕ್ ಡಿಲೈಟ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್
    ಕೊಟಕ್ ಡಿಲೈಟ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ ಚಲನಚಿತ್ರ ಟಿಕೆಟ್‌ಗಳ ಮೇಲೆ 10% ಕ್ಯಾಶ್ ಬ್ಯಾಕ್ ಪಡೆಯಬಹುದು. ಆದರೆ ಈ ಆಫರ್‌ಗಳು ಊಟ ಮತ್ತು ಮನರಂಜನಾ ವಿಭಾಗಗಳಲ್ಲಿ 10,000 ರೂ.ಗಿಂತ ಹೆಚ್ಚು ಖರ್ಚು ಮಾಡುವವರಿಗೆ ಮಾತ್ರ. ನಾಲ್ಕು PVR ಟಿಕೆಟ್‌ಗಳು ಉಚಿತ. ಅಥವಾ ವರ್ಷಕ್ಕೆ 1,25,000 ರೂಪಾಯಿ ಖರ್ಚು ಮಾಡಿದರೆ 750 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತದೆ. ವಾರ್ಷಿಕ ಶುಲ್ಕ 299 ರೂ. ಆಗಿದೆ.

    Axis My Zone ಕ್ರೆಡಿಟ್ ಕಾರ್ಡ್:
    Axis Myzone ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ Movies ನಲ್ಲಿ ಎರಡನೇ ಚಲನಚಿತ್ರ ಟಿಕೆಟ್‌ಗಳಲ್ಲಿ Paytm100% ರಿಯಾಯಿತಿ ಪಡೆಯಬಹುದು. ಜೊತೆಗೆ ಸೋನಿಲೈವ್ ಪ್ರೀಮಿಯಂ ವಾರ್ಷಿಕ ಚಂದಾದಾರಿಕೆ ಉಚಿತವಾಗಿ ದೊರೆಯುತ್ತದೆ. ನೀವು Agio ನಲ್ಲಿ ರೂ 2,000 ಬಿಲ್ ಮಾಡಿದರೆ, ನಿಮಗೆ ರೂ 600 ರಿಯಾಯಿತಿ ಸಿಗುತ್ತದೆ. ಪಾಲುದಾರ ರೆಸ್ಟೋರೆಂಟ್‌ಗಳಲ್ಲಿ 20% ರಿಯಾಯಿತಿ ಪಡೆಯಬಹುದು. ಚಲನಚಿತ್ರ ಟಿಕೆಟ್‌ಗಳು ಮತ್ತು ಮನರಂಜನಾ ವಿಭಾಗಗಳಲ್ಲಿ ಆಫರ್‌ಗಳು ಲಭ್ಯವಿವೆ. ವಾರ್ಷಿಕ ಶುಲ್ಕ 500 ರೂ. ಆಗಿದೆ.

    HDFC ಬ್ಯಾಂಕ್ ಪ್ಲಾಟಿನಂ ಟೈಮ್ಸ್ ಕ್ರೆಡಿಟ್ ಕಾರ್ಡ್:
    HDFC ಬ್ಯಾಂಕ್ ಪ್ಲಾಟಿನಂ ಟೈಮ್ಸ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಬುಕ್ ಮೈ ಶೋನಲ್ಲಿ ಚಲನಚಿತ್ರ ಟಿಕೆಟ್‌ಗಳ ಮೇಲೆ ರಿಯಾಯಿತಿಗಳನ್ನು ಬುಕ್ ಮಾಡಬಹುದಾಗಿದೆ. ಪ್ರತಿ ವಹಿವಾಟಿನ ಮೇಲೆ ರೂ.350 ರಿಯಾಯಿತಿ ಪಡೆಯಬಹುದಾಗಿದೆ.

    ಇದನ್ನೂ ಓದಿ: SBI Employee Error: ಕಾಪಿ ಪೇಸ್ಟ್ ತಪ್ಪಿನಿಂದ 1.5 ಕೋಟಿ ಹಣ ತಪ್ಪು ಖಾತೆಗೆ ಜಮೆ! ಪ್ಲೀಸ್, ಹಣ ಹಿಂತಿರುಗಿಸಿ ಎಂದ ಬ್ಯಾಂಕ್

    ವಾರದಲ್ಲಿ ಡೈನಿಂಗ್ ಬಿಲ್‌ಗಳಲ್ಲಿ ಪ್ರತಿ ರೂ.150 ಕ್ಕೆ 10 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದಾಗಿದೆ. ಇತರ ವಿಭಾಗಗಳಲ್ಲಿ ನೀವು ಪ್ರತಿ ರೂ.150 ಕ್ಕೆ 3 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದಾಗಿದೆ. ವಾರ್ಷಿಕ ಶುಲ್ಕ 1,000 ರೂ. ಆಗಿದ್ದು . 2,50,000 ರೂ. ವೆಚ್ಚ ಮಾಡಿದರೆ ವಾರ್ಷಿಕ ಶುಲ್ಕ ವಿನಾಯಿತಿ ಲಭ್ಯವಿದೆ.

    ಎಸ್​ಬಿಐ ಎಲೈಟ್ ಕ್ರೆಡಿಟ್ ಕಾರ್ಡ್:
    ಎಸ್‌ಬಿಐ ಕಾಂಪ್ಲಿಮೆಂಟರಿ ಮೂವಿ ಟಿಕೆಟ್‌ಗಳು ರೂ 6,000 ಮೌಲ್ಯದ ಎಲೈಟ್ ಕಾರ್ಡ್‌ನಲ್ಲಿ ಪ್ರತಿ ವರ್ಷವೂ ಲಭ್ಯವಿವೆ. ಇದನ್ನು ಹೊಂದಿರುವ ಗ್ರಾಹಕರು ಡೈನಿಂಗ್, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ದಿನಸಿ ಬಿಲ್‌ಗಳಲ್ಲಿ 5 ಬಾರಿ ರಿವಾರ್ಡ್ ಪಾಯಿಂಟ್‌ಗಳನ್ನು ಸ್ವೀಕರಿಸಬಹುದಾಗಿದೆ. ಕಾಂಪ್ಲಿಮೆಂಟರಿ ಕ್ಲಬ್ ವಿಸ್ತಾರಾ ಸಿಲ್ವರ್ ಸದಸ್ಯತ್ವ ಲಭ್ಯವಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರು ಬಾರಿ ಮತ್ತು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಎರಡು ಬಾರಿ ಲೌಂಜ್ ಪ್ರವೇಶ ಲಭ್ಯವಿದೆ. ವಾರ್ಷಿಕ ಶುಲ್ಕ 4,999 ರೂ. ಆಗಿದೆ.

    ಇದನ್ನೂ ಓದಿ: 25X25 Work Model: ಏನಿದು 25X25 ಕೆಲಸದ ಮಾದರಿ? ಉದ್ಯೋಗಿಗಳಿಗೆ ಲಾಭವೇ ನಷ್ಟವೇ?

    ಎಚ್ಚರಿಕೆ,ಈ ವಿಷಯ ಮರೆಯಬೇಡಿ
    ಇಷ್ಟೆಲ್ಲ ಆಫರ್​ಗಳಿದ್ದರೂ ಸಹ ಕ್ರೆಡಿಟ್ ಕಾರ್ಡ್‌ನ ಅತಿಯಾದ ಬಳಕೆ ಮಾಡುವಾಗ ಕೆಲವು ವಿಷಯಗಳನ್ನು ನೆನಪಿಡಲೇಬೇಕು. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿಸಲು ವಿಫಲವಾದರೆ 28% ರಿಂದ 49% ರಷ್ಟು ಬಡ್ಡಿದರವನ್ನು ತುಂಬಬೇಕಾಗುತ್ತದೆ ಎಂಬುದನ್ನು ಎಂದಿಗೂ ಮರೆಯಬೇಡಿ!
    Published by:guruganesh bhat
    First published: