Sony-Zee Merger: ಸೋನಿ-ಜೀ ವಿಲೀನದಿಂದ ಲಾಭವೋ, ನಷ್ಟವೋ? ಈ ಬಗ್ಗೆ ತಜ್ಞರು ಹೇಳುವುದೇನು?

ಭಾರತದ ಸ್ಫರ್ಧಾತ್ಮಕ ಆಯೋಗ (CCI) ಎರಡೂ ಕಂಪನಿಗಳಿಗೆ (Companies) ಸೂಚನೆ ನೀಡಿದ್ದು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ರಾಯಿಟರ್ಸ್ ವರದಿಯ (Reuters reports) ಪ್ರಕಾರ ಗುರುವಾರದ ಬೆಳಗಿನ ವಹಿವಾಟಿನಲ್ಲಿ ಜೀ ಎಂಟರ್‌ಟೈನ್‌ಮೆಂಟ್‌ನ ಷೇರುಗಳು ಸುಮಾರು 5% ರಷ್ಟು ಕುಸಿದಿವೆ.

ಸೋನಿ-ಝೀ ವಿಲೀನ

ಸೋನಿ-ಝೀ ವಿಲೀನ

  • Share this:
ಜಪಾನ್‌ನ ಸೋನಿ (6758.T) ಹಾಗೂ ಜೀ ಎಂಟರ್‌ಟೈನ್‌ಮೆಂಟ್ (ZEE.NS) ಭಾರತೀಯ ಘಟಕದ ವಿಲೀನವು (Merger) $10 ಬಿಲಿಯನ್ ಟಿವಿ ಉದ್ಯಮವನ್ನು (TV industry) ಉತ್ಪಾದಿಸಲು ನಡೆಸಿದ ಸಮಾನತೆ ಇಲ್ಲದ ಮಾತುಕತೆಗಳು ಪೈಪೋಟಿಯಲ್ಲಿ ಸಂಭಾವ್ಯ ಹಾನಿಯನ್ನುಂಟು ಮಾಡಬಹುದು ಎಂಬುದಾಗಿ ಆರಂಭಿಕ ವಿಮರ್ಶೆಯಲ್ಲಿ (review) ಕಂಡುಬಂದಿದೆ ಎಂದು ರಾಯಿಟರ್ಸ್ ವೀಕ್ಷಣೆ ನಡೆಸಿದ ಅಧಿಕೃತ ಸೂಚನೆಯಲ್ಲಿದೆ. ಭಾರತದ ಸ್ಫರ್ಧಾತ್ಮಕ ಆಯೋಗ (CCI) ಎರಡೂ ಕಂಪನಿಗಳಗೆ (Companies) ಸೂಚನೆ ನೀಡಿದ್ದು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ರಾಯಿಟರ್ಸ್ ವರದಿಯ (Reuters reports) ಪ್ರಕಾರ ಗುರುವಾರದ ಬೆಳಗಿನ ವಹಿವಾಟಿನಲ್ಲಿ ಜೀ ಎಂಟರ್‌ಟೈನ್‌ಮೆಂಟ್‌ನ ಷೇರುಗಳು ಸುಮಾರು 5% ರಷ್ಟು ಕುಸಿದಿವೆ.

ವಾಲ್ಟ್ ಡಿಸ್ನಿಗೆ ಪ್ರತಿಸ್ಪರ್ಧೆಯೊಡ್ಡಿದ ಸಂಸ್ಥೆಗಳು
ಸೋನಿ ಹಾಗೂ ಜೀ ಡಿಸೆಂಬರ್‌ನಲ್ಲಿ ತಮ್ಮ ಟೆಲಿವಿಷನ್ ಚಾನಲ್‌ಗಳು, ಚಲನಚಿತ್ರ ಸ್ವತ್ತುಗಳು ಹಾಗೂ ಸ್ಟ್ರೀಮಿಂಗ್ ಪ್ಲ್ಯಾಟ್‌ಫಾರ್ಮ್‌ಗಳನ್ನು ವಿಲೀನಗೊಳಿಸುವ ಸಲುವಾಗಿ 1.4 ಶತಕೋಟಿ ಜನರ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಬೆಳವಣಿಗೆಯ ಮಾರುಕಟ್ಟೆಯಲ್ಲಿ ಪವರ್ ಹೌಸ್ ಸ್ಥಾಪಿಸಲು ನಿರ್ಧರಿಸಿ, ವಾಲ್ಟ್ ಡಿಸ್ನಿ ಕೋ (DIS.N) ನಂತಹ ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದರು.

CCI ನ ಪತ್ತೆಹಚ್ಚುವಿಕೆಗಳು ಒಪ್ಪಂದದ ನಿಯಂತ್ರಕ ಅನುಮೋದನೆಯನ್ನು ವಿಳಂಬಗೊಳಿಸುತ್ತದೆ ಹಾಗೂ ಅದರ ರಚನೆಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಲು ಕಂಪನಿಗಳನ್ನು ಒತ್ತಾಯಿಸಬಹುದು ಎಂದು ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಮೂವರು ಭಾರತೀಯ ವಕೀಲರು ಹೇಳಿದ್ದಾರೆ. ಈ ಕಂಡುಹಿಡಿಯುವಿಕೆಗಳು CCI ಗೆ ತೃಪ್ತಿದಾಯಕವಲ್ಲದಿದ್ದರೆ ಇದು ದೀರ್ಘಾವಧಿಯ ಅನುಮೋದನೆ ಮತ್ತು ತನಿಖಾ ಪ್ರಕ್ರಿಯೆಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ವಿಲೀನಕ್ಕೆ ಅಗತ್ಯವಿರುವ ಕ್ರಮ ಕೈಗೊಂಡಿರುವ ಝೀ ಸಂಸ್ಥೆ
ಪ್ರಸ್ತಾವಿತ ವಿಲೀನಕ್ಕೆ ಅಗತ್ಯವಿರುವ ಎಲ್ಲಾ ಅನುಮೋದನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಸಂಸ್ಥೆ ಮುಂದುವರೆಸಿದೆ ಎಂದು ಝೀ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿರುವ CCI ಮತ್ತು ಸೋನಿ, ಕಾಮೆಂಟ್‌ಗಳ ವಿನಂತಿಗೆ ಪ್ರತಿಕ್ರಿಯಿಸಲಿಲ್ಲ ಅಂತೆಯೇ ಜಪಾನ್‌ನ ಸೋನಿಯ ಪ್ರತಿನಿಧಿಗಳು ಸಹ ಪ್ರತಿಕ್ರಿಯಿಸಲಿಲ್ಲ.

ಇದನ್ನೂ ಓದಿ:  Zomato: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಝೊಮ್ಯಾಟೋ, ಎಲ್ಲಿಂದ ಏನ್ ಬೇಕಾದ್ರೂ ಆರ್ಡರ್​ ಮಾಡಿ!

ತನ್ನ 21 ಪುಟಗಳ ಸೂಚನೆಯಲ್ಲಿ, CCI ತನ್ನ ಆರಂಭಿಕ ಪರಿಶೀಲನೆಯು ಪ್ರಸ್ತಾವಿತ ಒಪ್ಪಂದವು ಸಂಯೋಜಿತ ಘಟಕವನ್ನು ಭಾರತದಲ್ಲಿ ಸುಮಾರು 92 ಚಾನಲ್‌ಗಳೊಂದಿಗೆ "ಬಲವಾದ ಸ್ಥಾನದಲ್ಲಿ" ಇರಿಸುತ್ತದೆ ಎಂದು ತೋರಿಸುತ್ತದೆ, ಸೋನಿಯ ಜಾಗತಿಕ ಆದಾಯ $ 86 ಶತಕೋಟಿ ಮತ್ತು $ 211 ಶತಕೋಟಿ ಆಸ್ತಿಯನ್ನು ಉಲ್ಲೇಖಿಸುತ್ತದೆ. ಬೃಹತ್ ಮಾರುಕಟ್ಟೆಯ ಸ್ಥಾನವು ಸಮಾನವಲ್ಲದ ಮಾತುಕತೆಯ ಅಧಿಕಾರವನ್ನು ಆನಂದಿಸಲು ಸಂಯೋಜಿತ ಒಪ್ಪಂದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಸಿಸಿಐ ತನ್ನ ಸೂಚನೆಯಲ್ಲಿ ಉಲ್ಲೇಖಿಸಿದೆ.

ಸಂಯೋಜಿತ ಘಟಕವು ಚಾನಲ್ ಪ್ಯಾಕೇಜ್‌ಗಳ ಬೆಲೆಯನ್ನು ಹೆಚ್ಚಿಸಬಹುದು. ಪ್ರತಿಕ್ರಿಯೆ ನೀಡಲು ಎರಡೂ ಕಂಪೆನಿಗಳಿಗೆ ಆಗಸ್ಟ್ 3 ರಿಂದ 30 ದಿನಗಳ ಕಾಲಾವಾಕಾಶವನ್ನು ನೀಡಿತ್ತು. ಆರಂಭಿಕ ಪರಿಶೀಲನೆಯಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಈ ಒಪ್ಪಂದವು ಪೈಪೋಟಿಯ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯನ್ನು ತೋರಿಸಿದೆ ಹಾಗಾಗಿ ಈ ಒಪ್ಪಂದದ ಕುರಿತು ಹೆಚ್ಚಿನ ವಿಚಾರಣೆ ನಡೆಸುವುದು ಸೂಕ್ತ ಎಂಬುದಾಗಿ ಪರಿಗಣಿಸಲಾಗಿದೆ ಎಂದು ವರದಿ ತಿಳಿಸಿದೆ.

ವಿಲೀನದಿಂದ ಎರಡೂ ಸಂಸ್ಥೆಗಳಿಗೆ ಹೆಚ್ಚುವರಿ ಆದಾಯ
ಜೀ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪುನಿತ್ ಗೋಯೆಂಕಾ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಸಂಯೋಜಿತ ಘಟಕದ ಸಾಪೇಕ್ಷ ಮೌಲ್ಯವನ್ನು "$10 ಬಿಲಿಯನ್‌ಗೆ ಸಮೀಪದಲ್ಲಿದೆ" ಎಂದು ತಿಳಿಸಿದ್ದರು ಮತ್ತು ಈ ವರ್ಷದ ಅಕ್ಟೋಬರ್‌ನೊಳಗೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ನಿರೀಕ್ಷಿಸಲಾಗಿದೆ ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ: Starbucks: ಕಾಫಿ ದೈತ್ಯ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಆಗಿ ಭಾರತೀಯನ ಆಯ್ಕೆ! ನಿಜಕ್ಕೂ ಇದು ನಾವು ಹೆಮ್ಮೆ ಪಡುವ ವಿಚಾರ

ಈ ಒಪ್ಪಂದದಿಂದ ಎರಡೂ ಕಂಪೆನಿಗಳಿಗೆ ಸ್ಟ್ರೀಮಿಂಗ್ ಸೇವೆಗಳು ಹಾಗೂ ಟಿವಿ ಪ್ರಸಾರಗಳಿಂದ ಹೆಚ್ಚುವರಿ ಜಾಹೀರಾತು ಆದಾಯ ದೊರೆಯಲಿದೆ ಎಂಬುದರ ಉದ್ಯಮದ ಅಧಿಕಾರಿಗಳು ವಿಶ್ಲೇಷಿಸಿದ್ದು, ಡಜನ್‌ಗಟ್ಟಲೆ ಜನಪ್ರಿಯ ಮನರಂಜನಾ ಹಾಗೂ ಕ್ರೀಡಾ ಚಾನಲ್‌ಗಳನ್ನು ಹೊಂದಿರುವ ಸ್ಟಾರ್ ಇಂಡಿಯಾ ನೆಟ್‌ವರ್ಕ್ ಡಿಸ್ನಿಯೊಂದಿಗೆ ಸ್ಪರ್ಧಿಸುತ್ತಿದೆ. ಪ್ರಾಥಮಿಕ ಸಿಸಿಐ ವೀಕ್ಷಣೆಯ ಪ್ರಕಾರ, ಸ್ಪರ್ಧೆಯ ಮೌಲ್ಯಮಾಪನವು ವಿಲೀನಗೊಂಡ ಘಟಕವು ಹಿಂದಿ ಭಾಷೆಯ ವಿಭಾಗದಲ್ಲಿ ಸುಮಾರು 45% ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ತೋರಿಸಿದೆ. ಇದು ಸ್ಪರ್ಧೆಯ ವೆಚ್ಚದಲ್ಲಿ ಅಂತಹ ವಿಭಾಗಗಳನ್ನು ಮತ್ತಷ್ಟು ಕೇಂದ್ರೀಕರಿಸುತ್ತದೆ ಎಂದು CCI ತನ್ನ ಸೂಚನೆಯಲ್ಲಿ ತಿಳಿಸಿದೆ.
Published by:Ashwini Prabhu
First published: