Chinese Businessman: ಸದ್ದಿಲ್ಲದೆ ಕಣ್ಮರೆಯಾದ ಚೀನಾದ ಬ್ಯುಸಿನೆಸ್ ದೊರೆಗಳು; ಕಾರಣವೇನು ಗೊತ್ತೇ?

ಬಾವೋ ಫ್ಯಾನ್

ಬಾವೋ ಫ್ಯಾನ್

ಚೀನಾ (China) ರಿನೈಸಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ (China Renaissance Holdings) ಸ್ಥಾಪಕರಾದ ಬಾವೊ ಫ್ಯಾನ್ (Bao Fan) ದಿಢೀರ್ ಕಣ್ಮರೆಯಾಗಿದ್ದು, ಇದಕ್ಕೆ ಕಾರಣಗಳೇನು ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ದಿಢೀರ್ ಕಣ್ಮರೆ ಹಾಗೂ ಅದಕ್ಕೆ ಕಾರಣಗಳು ತಿಳಿಯದಿರುವುದು ಉದ್ಯಮ ರಂಗದಲ್ಲಿ ದೇಶಾದ್ಯಂತ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

ಹೂಡಿಕೆ ಬ್ಯಾಂಕ್ (Investment Bank) ಆದ ಚೀನಾ (China) ರಿನೈಸಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ (China Renaissance Holdings) ಸ್ಥಾಪಕರಾದ ಬಾವೊ ಫ್ಯಾನ್ (Bao Fan) ದಿಢೀರ್ ಕಣ್ಮರೆಯಾಗಿದ್ದು, ಇದಕ್ಕೆ ಕಾರಣಗಳೇನು ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ದಿಢೀರ್ ಕಣ್ಮರೆ ಹಾಗೂ ಅದಕ್ಕೆ ಕಾರಣಗಳು ತಿಳಿಯದಿರುವುದು ಉದ್ಯಮ ರಂಗದಲ್ಲಿ ದೇಶಾದ್ಯಂತ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಬಾವೊ ಕಣ್ಮರೆಯೊಂದಿಗೆ ಸಂಸ್ಥೆಯ ಷೇರು 50% ಕ್ಕೆ ಕುಸಿದಿದ್ದು ಹೂಡಿಕೆದಾರರಿಗೆ ಮುಂದೇನಾಗಬಹುದು ಎಂಬ ತಲ್ಲಣವನ್ನು ಉಂಟುಮಾಡಿದ್ದು, ಇದು ದೊಡ್ಡ ನಷ್ಟಕ್ಕೆ ಕಾರಣವಾಗಬಹುದೇ ಎಂಬ ಆತಂಕವನ್ನು ಸೃಷ್ಟಿಸಿದೆ.


ಬಾವೊ ಅಲ್ಲದೆ ದಿಢೀರ್ ಕಣ್ಮರೆಯಾಗಿರುವ ಚೀನಾದ ಬ್ಯುಸಿನೆಸ್ ದೈತ್ಯರು ಸಾಕಷ್ಟು ಜನರಿದ್ದಾರೆ. ಈ ಕಣ್ಮರೆಗೆ ಕಾರಣಗಳು ತಿಳಿದುಬಂದಿಲ್ಲವಾದರೂ ಒಂದು ರೀತಿಯ ನಿಗೂಢತೆ ಈ ಕಣ್ಮರೆಗಳ ಹಿಂದೆ ಅವಿತಿದೆ. ಕಣ್ಮರೆಯಾದವರ ವಿವರ ಇಲ್ಲಿದೆ


ಕ್ಯು ಡೆಜುನ್


ಚೀನಾದ ರಿಯಲ್ ಎಸ್ಟೇಟ್ ಡೆವಲಪರ್ ಸೀಜೆನ್ ಗ್ರೂಪ್‌ನ ಘಟಕವಾದ ಸೀಜೆನ್ ಗ್ರೂಪ್ ಸೀಜೆನ್ ಹೋಲ್ಡಿಂಗ್ಸ್‌ನ ನಿರ್ದೇಶಕ ಹಾಗೂ ಸಹ ಅಧ್ಯಕ್ಷರಾದ ಕ್ಯು ಡೆಜುನ್ ದಿಢೀರ್  ಕಣ್ಮರೆಯಾದರು ಹಾಗೂ ಅವರ ಕಚೇರಿ ವಕ್ತಾರರಿಗೆ ಸಂಪರ್ಕಿಸಲು ಸಾಧ್ಯವಾಗದಂತಹ ರೀತಿಯಲ್ಲಿ ಮಾಯವಾದರು.   ಫೆ.16 ರಂದು ಕ್ಯು ಡೆಜುನ್ ವೈಯಕ್ತಿಕ ಕಾರಣಗಳಿಂದ   ಸಂಸ್ಥೆಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


ರೆನ್ ಝಿಕಿಯಾಂಗ್


ರಾಜ್ಯ-ನಿಯಂತ್ರಿತ ಆಸ್ತಿ ಡೆವಲಪರ್ ಹುವಾಯುವಾನ್ ರಿಯಲ್ ಎಸ್ಟೇಟ್ ಗ್ರೂಪ್‌ನ ರೆನ್ ಝಿಕಿಯಾಂಗ್ ಸಾರ್ವಜನಿಕರಿಂದ ದೂರವೇ ಉಳಿದಿದ್ದಾರೆ.


ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳ ಬಗ್ಗೆ ಫೆಬ್ರವರಿ ಅಂತ್ಯದಲ್ಲಿ ಕ್ಸಿ ಮಾಡಿದ್ದ ಭಾಷಣದ ಕುರಿತು ಅವರನ್ನು ಝಿಕಿಯಾಂಗ್ ವಿದೂಷಕ ಎಂದು ಹಾಸ್ಯ ಮಾಡಿದ್ದರು.  ನಂತರ ರೆನ್ ನಾಪತ್ತೆಯಾಗಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Investment: ಈ ಉದ್ಯಮಕ್ಕೆ ಕೇವಲ 1 ಲಕ್ಷ ಹೂಡಿಕೆ ಮಾಡಿದ್ರೆ ತಿಂಗಳಿಗೆ 2 ರಿಂದ 3 ಲಕ್ಷ ಆದಾಯ ಗಳಿಸಬಹುದು!

ಯಾಂಗ್ ಜಿಹುಯಿ


ಕ್ಯಾಸಿನೊ ಮತ್ತು ರೆಸಾರ್ಟ್ ಡೆವಲಪ್‌ಮೆಂಟ್ ಲ್ಯಾಂಡಿಂಗ್ ಇಂಟರ್ನ್ಯಾಶನಲ್‌ನ ಅಧ್ಯಕ್ಷರಾದ ಯಾಂಗ್, ದಿಢೀರ್ ಆಗಿ ಕಣ್ಮರೆಯಾದ ವ್ಯಕ್ತಿಗಳಲ್ಲಿ ಒಬ್ಬರು. ಇವರ ಕಣ್ಮರೆ ಸಂಸ್ಥೆಯ ಶೇರುಗಳನ್ನು 30% ಕುಸಿಯುವಂತೆ ಮಾಡಿದೆ. ಫಿಲಿಪೈನ್ಸ್‌ನಲ್ಲಿ ಸಂಸ್ಥೆಯ $1.5 ಬಿಲಿಯನ್ ಕ್ಯಾಸಿನೊ ಯೋಜನೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ ನಂತರ ಯಾಂಗ್ ಕಣ್ಮರೆಯಾಗಿದ್ದಾರೆ.



ವು ಕ್ಸಿಯಾಹಿ – ಅನ್‌ಬಂಗ್ ಇನ್ಶೂರೆನ್ಸ್ ಗ್ರೂಪ್


ಇನ್ಶೂರೆನ್ಸ್ ಗ್ರೂಪ್‌ನ ಅಧ್ಯಕ್ಷರಾದ ವು ಕಣ್ಮರೆಯನ್ನು ಮೊದಲಿಗೆ ಸಂಸ್ಥೆ ಮರೆಮಾಚಿತು ಹಾಗೂ ಕೆಲವೊಂದು ವೈಯಕ್ತಿಕ ಕಾರಣಗಳಿಗೆ ವು ಸಂಸ್ಥೆಯಿಂದ ಹೊರಗಿದ್ದಾರೆ ಎಂದು ಮಾಹಿತಿ ನೀಡಿತು.


ಮಾರ್ಚ್ 2018 ರ ಕೊನೆಯಲ್ಲಿ, ವಂಚನೆ ಮತ್ತು ದುರುಪಯೋಗದ ಆರೋಪದ ಮೇಲೆ ವೂ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಅದೇ ವರ್ಷದ ಆಗಸ್ಟ್‌ನಲ್ಲಿ ಅವರಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಅವರ ಆಸ್ತಿಯಲ್ಲಿ 10.5 ಶತಕೋಟಿ ಯುವಾನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಯೆ ಜಿಯಾನ್ಮಿಂಗ್ - CEFC ಚೀನಾ ಎನರ್ಜಿ


CEFC ಚೀನಾ ಎನರ್ಜಿಯ ಮಾಜಿ ಅಧ್ಯಕ್ಷರಾದ ಯೆ ಕಣ್ಮರೆ ಕೂಡ ಬ್ಯುಸಿನೆಸ್ ವಲಯದಲ್ಲಿ ಹಾಹಾಕರವನ್ನು ಉಂಟುಮಾಡಿತು.  CEFC ಚೀನಾ ಎನರ್ಜಿಗೆ ಸಂಬಂಧಿಸಿದ ಷೇರುಗಳು ಮತ್ತು ಬಾಂಡ್‌ಗಳು ಯೆ ಕಣ್ಮರೆ ಸುದ್ದಿಯಿಂದ ಕುಸಿತ ಕಂಡಿವೆ. ಇದನ್ನು ಮೊದಲು ಚೀನಾದ ಮ್ಯಾಗಜೀನ್ ಕೈಕ್ಸಿನ್ ವರದಿ ಮಾಡಿದೆ.  ಈ ಬಗ್ಗೆ ತಿಳಿದಿದ್ದವರನ್ನು ವಿಚಾರಣೆಗೆ ಒಳಪಡಿಸಲಾಯಿತಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.


ಕ್ಸಿಯಾವೋ ಜಿಯಾನ್ಹುವಾ - ಟುಮಾರೊ ಹೋಲ್ಡಿಂಗ್ಸ್


ಬಿಲಿಯನೇರ್ ಕ್ಸಿಯಾವೊ ಅವರನ್ನು ಜನವರಿ 27, 2017 ರಂದು ಐಷಾರಾಮಿ ಹಾಂಗ್ ಕಾಂಗ್ ಹೋಟೆಲ್‌ನಿಂದ ಗಾಲಿಕುರ್ಚಿಯಲ್ಲಿ ಮರೆಮಾಡಿ ಕರೆದೊಯ್ಯಲಾಯಿತು ಎಂದು ಮೂಲವೊಂದು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿತು.


ಕಳೆದ ವರ್ಷ ಆಗಸ್ಟ್‌ನಲ್ಲಿ, ಚೀನಾದ ನ್ಯಾಯಾಲಯವು ಕ್ಸಿಯಾವೊಗೆ 13 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು ಮತ್ತು ಜೊತೆಗೆ  55.03 ಶತಕೋಟಿ ಯುವಾನ್‌ಗಳ ದಾಖಲೆಯ ಹೆಚ್ಚಿನ ದಂಡವನ್ನು ವಿಧಿಸಿತು.  ಸಾರ್ವಜನಿಕ ಠೇವಣಿ  ಹಣದ ಅಕ್ರಮ ಬಳಕೆ ಮತ್ತು ಲಂಚ ಸೇರಿದಂತೆ ಹಲವು ಆರೋಪಗಳು ಸಾಬೀತಾಗಿದ್ದವು.

ಗುವೋ ಗುವಾಂಗ್‌ಚಾಂಗ್ - ಫೋಸುನ್ ಇಂಟರ್‌ನ್ಯಾಶನಲ್


ಕ್ಲಬ್ ಮೆಡ್ ಮಾಲೀಕ ಫೋಸುನ್ ಇಂಟರ್‌ನ್ಯಾಶನಲ್ ಡಿಸೆಂಬರ್ 2015 ರಲ್ಲಿ ಅದರ ಸಂಸ್ಥಾಪಕ ಮತ್ತು ಅಧ್ಯಕ್ಷ ಗುವೋ ಅವರನ್ನು ಅಧಿಕಾರಿಗಳು ವಿಚಾರಣೆಗಾಗಿ  ಕರೆದುಕೊಂಡು ಹೋಗಿದ್ದರು. ಗುವೋ ತನಿಖೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಗುವೋ ಕಣ್ಮರೆ ಇನ್ನೊಂದು ಸುದ್ದಿಯಾಗಿ ಹೊರಬಂದಿತು.


ಈ ಸುದ್ದಿಯು ಹೂಡಿಕೆದಾರರಲ್ಲಿ ಭಯವನ್ನು ಹುಟ್ಟುಹಾಕಿತು ಮತ್ತು ಸ್ಟಾಕ್ ಬೆಲೆಗಳನ್ನು ಕುಸಿಯುವಂತೆ ಮಾಡಿತು. ಆದರೆ ವರದಿಗಳ ನಂತರ ಕೆಲವು ದಿನಗಳ ನಂತರ ಗುವೊ ಹಾಜರಾಗಿ ತಮ್ಮ ಕರ್ತವ್ಯಗಳನ್ನು ಪುನರ್ ಆರಂಭಿಸಿದರು ಹಾಗೂ ಶಾಂಘೈನ ಕಂಪನಿ ಸಭೆಯಲ್ಲಿ ಪಾಲ್ಗೊಂಡರು ಹಾಗೂ ಅಂತಿಮವಾಗಿ ಯುಎಸ್‌ಗೆ ತೆರಳಿದರು.


ಯಿಮ್ ಫಂಗ್ - ಗುತೈ ಜುನನ್ ಸೆಕ್ಯುರಿಟೀಸ್


ಗೌತೈ ಜುನಾನ್ ಸಂಸ್ಥೆ ನವೆಂಬರ್ 2015 ರಲ್ಲಿ ತನ್ನ ಅಧ್ಯಕ್ಷ ಮತ್ತು ಸಿಇಒ ಯಿಮ್ ಫಂಗ್ ಕಣ್ಮರೆಯ ಸುದ್ದಿಯನ್ನು ಬಹಿರಂಗಪಡಿಸಿತು. ಆದರೆ ತಿಂಗಳ ನಂತರ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂಬ ಸುದ್ದಿಯನ್ನು ಸಂಸ್ಥೆ ನೀಡಿತ್ತು.

Published by:Rajesha M B
First published: