Business Startup: ಮೀನಿನ ಚರ್ಮದಿಂದಲೂ ತಯಾರಾಗುತ್ತೆ ಬ್ಯಾಗುಗಳು; ಹೇಗಿವೆ ನೀವೂ ನೋಡಿ

ಸೋಲಾಪುರದ ಯುವತಿಯ ಬಾಳಿನಲ್ಲಿ ಒಂದು ಅಗಾಧ ಅವಕಾಶವನ್ನೇ ಸೃಷ್ಟಿಸಲು ಕಾರಣವಾಯಿತೆಂದರೆ ತಪ್ಪಾಗಲಿಕ್ಕಿಲ್ಲ. ಹೌದು, ಇಂದು ಅವರು ನಡೆಸುವ ಮಯು ಎಂಬ ಸಂಸ್ಥೆಯು ಸುಸ್ಥಿರವಾದ ಹಾಗೂ ಅದ್ಭುತವಾದ ಹಲವಾರು ವಸ್ತುಗಳನ್ನು ತಯಾರಿಸುತ್ತಿರುವುದಲ್ಲದೆ ಆ ವಸ್ತುಗಳು ಪ್ಯಾರಿಸ್ ಮತ್ತು ಹಂಗೇರಿಯ ರ್‍ಯಾಂಪುಗಳ ಮೇಲೆಯೂ ತಮ್ಮ ಉಪಸ್ಥಿತಿ ಇರುವಂತೆ ಮಾಡಿಕೊಂಡಿವೆ.

ಮಯು ಬ್ರ್ಯಾಂಡಿನ ಹಿಟ್ ಉತ್ಪನ್ನ

ಮಯು ಬ್ರ್ಯಾಂಡಿನ ಹಿಟ್ ಉತ್ಪನ್ನ

  • Share this:
2015 ರಲ್ಲಿ ಅದೊಂದು ದಿನ ಐಸ್ಲ್ಯಾಂಡಿನಲ್ಲಿ ಥ್ಯಾಂಕ್ಸ್ ಗಿಂವಿಂಗ್ ದಿನ. ಭಾರತೀಯ ಯುವತಿಯಾದ (Indian Women) ಮಯೂರಾ ದಾವ್ಡಾ ಶಾ (Mayura Davda Shah) ಎಂಬುವವರು ತಮ್ಮ ಕೆಲಸದಿಂದ ಕೊಂಚ ವಿಶ್ರಾಂತಿ ಪಡೆದು ಆ ದೇಶದಲ್ಲಿ ತಮ್ಮ ಸ್ನೇಹಿತರೊಂದಿಗೆ (Friends) ಹಾಗೆ ಸುತ್ತಾಡುತ್ತಿದ್ದರು. ಹೀಗೆ ಮಾರುಕಟ್ಟೆಯಲ್ಲಿ (Market) ಸುತ್ತಾಡುವಾಗ ಅವರ ಕಣ್ಣಿಗೆ ಬ್ರೇಸ್ಲೆಟ್ ಒಂದು ಬಿದ್ದಿತು. ಅದು ಸಾಮಾನ್ಯವಾದುದಾಗಿರಲಿಲ್ಲ ಮತ್ತೆ ಮುಂದೊಂದು ದಿನ ಮಯೂರಾ ಅವರಿಗೆ ಇದರಿಂದ ಉದ್ದಿಮೆಯೊಂದನ್ನು (Business) ಸ್ಥಾಪಿಸಬಹುದೆಂಬ ಅರಿವೂ ಇರಲಿಲ್ಲ. ಆದರೆ ಆ ಒಂದು ಕ್ಷಣ ಈ ಸೋಲಾಪುರದ ಯುವತಿಯ ಬಾಳಿನಲ್ಲಿ ಒಂದು ಅಗಾಧ ಅವಕಾಶವನ್ನೇ ಸೃಷ್ಟಿಸಲು ಕಾರಣವಾಯಿತೆಂದರೆ ತಪ್ಪಾಗಲಿಕ್ಕಿಲ್ಲ.

ಹೌದು, ಇಂದು ಅವರು ನಡೆಸುವ ಮಯು ಎಂಬ ಸಂಸ್ಥೆಯು ಸುಸ್ಥಿರವಾದ ಹಾಗೂ ಅದ್ಭುತವಾದ ಹಲವಾರು ವಸ್ತುಗಳನ್ನು ತಯಾರಿಸುತ್ತಿರುವುದಲ್ಲದೆ ಆ ವಸ್ತುಗಳು ಪ್ಯಾರಿಸ್ ಮತ್ತು ಹಂಗೇರಿಯ ರ್‍ಯಾಂಪುಗಳ ಮೇಲೆಯೂ ತಮ್ಮ ಉಪಸ್ಥಿತಿ ಇರುವಂತೆ ಮಾಡಿಕೊಂಡಿವೆ.

ಉದ್ದಿಮೆಯ ಸ್ಥಾಪನೆ

ಮಯೂರಾ ಅವರು ಮೊದಲ ಬಾರಿಗೆ ಆ ಬ್ರೇಸ್ಲೆಟ್ ಅನ್ನು ನೋಡಿದಾಗ ಅದು ಯಾವುದಾದರೂ ಗುಣಮಟ್ಟದ ವಸ್ತುವೊಂದರಿಂದ ಮಾಡಲ್ಪಟ್ಟಿದೆ ಎಂದುಕೊಂಡಿದ್ದರು. ಆದರೆ, ಆ ಸ್ಟೋರಿನ ಮಾಲೀಕ ಅವರಿಗೆ ಅದು ಎಸೆಯಲ್ಪಟ್ಟ ಮೀನಿನ ಚರ್ಮದಿಂದ ಮಾಡಲ್ಪಟ್ಟಿದೆ ಎಂದಾಗ ಅವರಿಗೆ ಅದು ಅಚ್ಚರಿ ಮೂಡಿಸಿತ್ತು. ತದಂತರ ಅವರಿಗೆ ಸ್ಥಳೀಯರಿಂದ ಗೊತ್ತಾದ ವಿಷಯವೆಂದರೆ ಸಲ್ಮೋನ್ ಎಂಬ ಮೀನುಗಳ ಚರ್ಮದಿಂದ ಸುಸ್ಸ್ಥಿರವಾದ ವಸ್ತುಗಳನ್ನು ಮಾಡಲಾಗುವ ವಿಚಾರ.

ಇದನ್ನೂ ಓದಿ: Success Story: ಡೆಲಿವರಿ ಬಾಯ್‌ ಆಗಿದ್ದವ ಈಗ ಪ್ರತಿಷ್ಠಿತ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್! ರೋಚಕ ಜೀವನವೇ ಸ್ಪೂರ್ತಿ

ಮೀನಿನ ಚರ್ಮದಿಂದ ವಸ್ತುಗಳ ತಯಾರಿ ಭಾರತಕ್ಕೆ ಪರಿಚಯ

ನಾರ್ಡಿಕ್ ಸಂಸ್ಕೃತಿಯುಳ್ಳ ದೇಶಗಳಲ್ಲಿ ಮೀನುಗಳ ಚರ್ಮಗಳಿಂದ ವಸ್ತುಗಳನ್ನು ಮಾಡುವ ಪದ್ಧತಿ ಶತಮಾನಗಳಿಂದಲೂ ರೂಢಿಯಲ್ಲಿ ಬಂದಿರುವ ವಿಷಯವಾಗಿದ್ದರೂ ಮಯೂರಾ ಅವರ ಪಾಲಿಗೆ ಇದೊಂದು ವಿನೂತನ ಪದ್ಧತಿಯೇ ಆಗಿತ್ತು.

ಆ ಕ್ಷಣದಲ್ಲೇ ಮಯೂರಾ ಅವರ ತಲೆಯಲ್ಲಿ ಮೂಡಿದ ವಿಚಾರವೆಂದರೆ ಈ ಮೀನಿನ ಚರ್ಮದ ವಸ್ತುಗಳ ಪರಿಕಲ್ಪನೆಯನ್ನು ಭಾರತಕ್ಕೆ ಪರಿಚಯಿಸುವುದು. ಏಕೆಂದರೆ, ಭಾರತದಲ್ಲಿ ಸಾಮಾನ್ಯವಾಗಿ ಚರ್ಮದ ವಸ್ತುಗಳು ಎಂದಾಗ ಅವು ಪ್ರಾಣಿಗಳ ಚರ್ಮವೇ ಆಗಿರುತ್ತದೆ.

'ಮಯು' ಬ್ರ್ಯಾಂಡ್
ಈ ಪರಿಕಲ್ಪನೆಯಿಂದ ಪ್ರಭಾವಿತರಾದ ಮಯೂರಾ, ತಾವು ಮಾಡುತ್ತಿದ್ದ ಎಂಜಿನಿಯರಿಂಗ್ ವೃತ್ತಿರಂಗ ಕೆಲಸವನ್ನು ತ್ಯಜಿಸಿ 2018 ರಲ್ಲಿ 'ಮಯು' ಎಂಬ ಸಂಸ್ಥೆಯನ್ನು ಪ್ರಾರಂಭಿಸಿಯೇ ಬಿಟ್ಟರು. ಈ ಮೂಲಕ ಅವರು ಸಲ್ಮೋನ್ ಮತ್ತು ವೋಲ್ಫ್ ಮೀನುಗಳ ಚರ್ಮದ ಮೇಲೆ ಆದ್ಯತೆ ನೀಡಿ ಹ್ಯಾಂಡ್ ಬ್ಯಾಗುಗಳನ್ನು ಉತ್ಪಾದಿಸಿದರು.ಇಂದು ತಮ್ಮ ಸಂಸ್ಥೆಯ ಕ್ರಿಯೇಟಿವ್ ನಿರ್ದೇಶಕರಾಗಿರುವ ಮಯೂರಾ ಹೇಳುತ್ತಾರೆ, ಮೊದಲಿಗೆ ಅವರು ತಮ್ಮ ಕರಿಯರ್ ಅನ್ನು ಓದು ಪೂರ್ಣಗೊಳಿಸಿರುವಂತೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ವೃತ್ತಿರಂಗದಲ್ಲೇ ಪ್ರಾರಂಭಿಸಿದರಾದರೂ ಅವರಲ್ಲಿ ಅಡಗಿದ್ದ ಅವರ ಸೃಜನಶೀಲತೆಯ ಪ್ರತಿಭೆ ಇಂದು ಅವರನ್ನು ಇತರರಿಗಿಂತ ಭಿನ್ನವಾಗಿ ಎದ್ದು ನಿಲ್ಲುವಂತೆ ಮಾಡಿದೆ ಎಂದ. ಅವರು ಹೇಳುವ ಹಾಗೆ ಕೇವಲ ಋತುಮಾನಾಧಾರಿತ ವಸ್ತುಗಳ ವಿನ್ಯಾಸಕ್ಕೆ ಒಳಪಡದೆ ಅವರ ಸಂಸ್ಥೆಯಲ್ಲಿ ಎಲ್ಲ ಕಾಲಮಾನಗಳಲ್ಲೂ ಸ್ವೀಕರಿಸಲಾಗುವ ವಿವಿಧ ವಸ್ತುಗಳು ಹಾಗೂ ಬ್ಯಾಗುಗಳ ವಿನ್ಯಾಸಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತದೆ.

ಎರಡು ಮುಖ್ಯ ಸವಾಲುಗಳು

ಅಷ್ಟಕ್ಕೂ ಮಯು ನಲ್ಲಿ ಮೀನಿನ ಚರ್ಮ ಪಡೆದು ವಸ್ತುಗಳನ್ನು ವಿನ್ಯಾಸಗೊಳಿಸಿ ಉತ್ಪಾದಿಸುವುದು ಅಷ್ಟೊಂದು ಸುಲಭವಲ್ಲ. ಈ ನಿಟ್ಟಿನಲ್ಲಿ ಸಂಸ್ಥೆಯು ಎರಡು ಮುಖ್ಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಂದನೇ ಸವಾಲು ಮೀನಿನ ಚರ್ಮದ ಅಳೆತೆಗಳಾದರೆ ಎರಡನೇ ಸವಾಲು ಅದರ ಸ್ಥಿರತೆ.

ಪ್ರಾಣಿಗಳ ಚರ್ಮದಿಂದ ವಸ್ತುಗಳನ್ನು ತಯಾರಿಸುವವರಿಗೆ ಇದು ದೊಡ್ಡ ಸವಾಲಲ್ಲ, ಕಾರಣ ಆ ಚರ್ಮಗಳು ಅಳತೆಯಲ್ಲಿ ದೊಡ್ಡದಾಗಿರುತ್ತವೆ ಹಾಗೂ ವಿನ್ಯಾಸಗಾರರು ಸುಲಲಿತವಾಗಿ ವಿನ್ಯಾಸಗಳನ್ನು ಮಾಡಿ ಉತ್ಪನ್ನಗಳನ್ನು ತಯಾರಿಸಬಹುದು. ಆದರೆ ಮೀನುಗಳ ಚರ್ಮಗಳು ದೊಡ್ಡದಾಗಿರಲ್ಲ, 15*10 ಸಿಎಂ ಇರುವ ಅಳತೆಯ ಚರ್ಮದಲ್ಲಿ ವಿನ್ಯಾಸ ಮಾಡುವುದು ಒಂದು ದೊಡ್ಡ ಸವಾಲೇ ಆಗಿರುತ್ತದೆ ಎಂದು ಮಯೂರಾ ಹೇಳುತ್ತಾರೆ.

ಹೈಡ್ರೋಫೋಬಿಕ್ ಚರ್ಮ

ಹಾಗಾಗಿ, ಹಲವು ಚಿಕ್ಕ ಚಿಕ್ಕ ಮೀನಿನ ಚರ್ಮಗಳನ್ನು ಒಂದು ದೊಡ್ಡ ಆಕಾರದಲ್ಲಿ ಒಟ್ಟುಗೂಡಿಸಿ ಹೊಲಿದಾಗ ಮಾತ್ರವೇ ಏನಾದರೂ ವಿನ್ಯಾಸ ಮಾಡಲು ಅನುಕೂಲಕರವಾಗುತ್ತದೆ ಮತ್ತು ಎರಡನೇಯದಾಗಿ ಮೀನಿನ ಚರ್ಮದ ಸ್ಥಿರತೆಯ ಬಗ್ಗೆ ಅಪಾರ ಕಾಳಜಿವಹಿಸಬೇಕಾಗಿರುತ್ತದೆ ಎಂದು ಮಯೂರಾ ನುಡಿಯುತ್ತಾರೆ.ಈ ನಿಟ್ಟಿನಲ್ಲಿ ಮಯೂರಾ ತಮ್ಮದೆ ಆದ ಒಂದು ಉಪಾಯ ಹುಡುಕಿಕೊಂಡಿದ್ದಾರೆ. ಹಲವು ಮೀನಿನ ಚರ್ಮಗಳನ್ನು ಒಗ್ಗೂಡಿಸಿ ಹೊಲಿದಾಗ ಹಗುರವಾಗಿ ಉಚ್ಚುವ ಚರ್ಮಗಳು ಹಾಗೂ ಇತರೆ ಪೋಲಾದ ವಸ್ತುಗಳನ್ನು ಅವರು ಬ್ಯಾಗುಗಳಿಗೆ ಉತ್ತಮ ಶೇಪ್ ನೀಡಲು ಫಿಲ್ಲರ್ ವಸ್ತುಗಳಾಗಿ ಬಳಸಿಕೊಳ್ಳುತ್ತಾರೆ. ಮಯೂರಾ ಹೇಳುವಂತೆ ಕೆಲವು ಮೀನಿನ ಚರ್ಮಗಳು ಹೈಡ್ರೋಫೋಬಿಕ್ ಆಗಿರುವುದರಿಂದ ಅವುಗಳನ್ನು ಜಲನಿರೋಧ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಾರೆ.ಯುರೋಪ್ ನಲ್ಲಿರುವ ಸರಬರಾಜುದಾರರೊಬ್ಬರು ಈ ಮೀನಿನ ಚರ್ಮಗಳನ್ನು ಸಂಸ್ಕರಿಸಿ ಇವರಿಗೆ ತಲುಪಿಸಿದರೆ ಚೆನ್ನೈನಲ್ಲಿರುವ ಕುಶಲಕರ್ಮಿಗಳು ಈ ಚರ್ಮಗಳನ್ನು ಒಂದಕ್ಕೊಂದು ಬೆಸೆದು ಹೊಲಿದು ದೊಡ್ಡ ಪ್ಯಾನೆಲ್ ಗಳನ್ನಾಗಿ ಮಾಡಿಕೊಡುತ್ತಾರೆ. ತದನಂತರ ಇದರಲ್ಲಿ ಹಲವು ವಿನ್ಯಾಸಗಳನ್ನು ಮಾಡಿ ಅಂತಿಮವಾಗಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಸುಸ್ಥಿರತೆಯ ಕಾರ್ಯಾಚರಣೆ‘

ಮಯುಗಾಗಿ ಮಾರ್ಕೆಟಿಂಗ್ ಅನ್ನು ನಿರ್ವಹಿಸುವ ಮೆಹಕ್ ಚೌಧರಿ ಹೇಳುತ್ತಾರೆ, “ನಾವು ನಮ್ಮ ಉತ್ಪನ್ನಗಳಲ್ಲಿ ಮಾತ್ರವಲ್ಲದೆ ಕಾರ್ಯಾಚರಣೆಗಳಲ್ಲಿಯೂ ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ್ದೇವೆ. ನಾವು ಚೆನ್ನೈನಲ್ಲಿರುವ ಶೂನ್ಯ-ತ್ಯಾಜ್ಯ-ಪ್ರಮಾಣೀಕೃತ ಸೌಲಭ್ಯದಲ್ಲಿ ಕಾರ್ಯನಿರ್ವಹಿಸುತ್ತೇವೆ

ಇದು ಭಾರತೀಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣೀಕೃತ 'ಬಿಳಿ' ವರ್ಗದ ಕಾರ್ಖಾನೆಯಾಗಿದೆ. ಇದರರ್ಥ ನಮ್ಮ ಕಾರ್ಯಾಚರಣೆಗಳು ಗಾಳಿ, ನೀರು ಅಥವಾ ಪರಿಸರವನ್ನು ಯಾವುದೇ ರೀತಿಯಲ್ಲಿ ಮಾಲಿನ್ಯಗೊಳಿಸುವುದಿಲ್ಲ.ಕಾರ್ಖಾನೆಯ ಜೈವಿಕ ವಿಘಟನೀಯ ತ್ಯಾಜ್ಯವನ್ನು ಜೈವಿಕ ಪ್ರಕ್ರಿಯೆಯ ಮೂಲಕ ಗೊಬ್ಬರಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ಸುಸ್ಥಿರತೆಯ ಜೊತೆಗೆ, ಮಯು ಬ್ರ್ಯಾಂಡ್ ತಮ್ಮ ಕೆಲಸದ ಮೂಲಕ ಮಹಿಳೆಯರು ಇನ್ನಷ್ಟು ಮೇಲಕ್ಕೇರಬೇಕೆಂಬ ನಂಬಿಕೆ ಹೊಂದಿದೆ. "ನಮ್ಮ ನಿರ್ಮಾಣ ತಂಡವು ಕಡಿಮೆ ಪ್ರಾತಿನಿಧ್ಯ ಮತ್ತು ಹಿಂದುಳಿದ ಹಿನ್ನೆಲೆಯಿಂದ 90 ಪ್ರತಿಶತದಷ್ಟು ಮಹಿಳೆಯರನ್ನು ಹೊಂದಿದೆ" ಎಂದು ಮಯೂರಾ ಹೇಳುತ್ತಾರೆ.

ಮಹಿಳೆಯರ ನೇತೃತ್ವದ ಬ್ರ್ಯಾಂಡ್
"ಚರ್ಮದ ಉದ್ಯಮದಲ್ಲಿ ಬಹುಪಾಲು ಪುರುಷ ಉದ್ಯೋಗಿಗಳಿರುವುದು ಸಾಮಾನ್ಯ ಹಾಗೂ ಇಂತಹ ಸಂದರ್ಭದಲ್ಲಿ ಮಹಿಳೆಯರ ನೇತೃತ್ವದ ಬ್ರ್ಯಾಂಡ್ ಆಗಿ, ನಾವು ಇದನ್ನು ಬದಲಾಯಿಸುವ ಗುರಿಯನ್ನು ಹೊಂದಿದ್ದೇವೆ" ಎಂದು ಮಯೂರಾ ನುಡಿಯುತ್ತಾರೆ.

ಇದನ್ನೂ ಓದಿ:  Organic farming: ಸಾವಯವ ಕೃಷಿ ಮೂಲಕ ವರ್ಷಕ್ಕೆ 35 ಲಕ್ಷ ಆದಾಯ, ಮೈಸೂರಿನ ದಂಪತಿಗಳ ಸಾಧನೆ

ಮಯು ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುವ ಮುಖ್ಯ ಆಲೋಚನೆಯು ಸಮರ್ಥನೀಯ ದೃಷ್ಟಿಕೋನದಿಂದ ಉತ್ತಮವಾದ ಉತ್ಪನ್ನಗಳೊಂದಿಗೆ ಬರುತ್ತಿದೆ. ಮಯು ಈಗ ಉನ್ನತ-ಮಟ್ಟದ ಮತ್ತು ಕ್ಲಾಸಿಯಾಗಿ ಕಾಣುವ ಉತ್ಪನ್ನಗಳನ್ನು ಹೊಂದಿದೆ. "ಸೌಂದರ್ಯ ಮತ್ತು ಕ್ರಿಯಾತ್ಮಕತೆಗಾಗಿ ಅಥವಾ ಪ್ರತಿಯಾಗಿ ನೀವು ಸಮರ್ಥನೀಯತೆಯನ್ನು ರಾಜಿ ಮಾಡಿಕೊಳ್ಳಬೇಕಾದ ದಿನಗಳು ಕಳೆದುಹೋಗಿವೆ" ಎಂದು ಮಯೂರಾ ಹೇಳುತ್ತಾರೆ.

ಅಂತಾರಾಷ್ಟ್ರೀಯ ಫ್ಯಾಶನ್ ರನ್ವೇಗಳನ್ನು ಸಹ ತಲುಪಿದ ಬ್ರಾಂಡ್

ಮಯುನ ಕೈಚೀಲಗಳು ಎಷ್ಟು ಗಮನಸೆಳೆದಿವೆ ಎಂದರೆ ಅವು ಈಗ ಬುಡಾಪೆಸ್ಟ್, ಹಂಗೇರಿ (ಫೆಬ್ರವರಿ 2020), ಮತ್ತು ಟ್ರಾನೋಯ್ ಪ್ಯಾರಿಸ್ (ಸೆಪ್ಟೆಂಬರ್ 2019) ಗ್ಲೋಬಲ್ ಸಸ್ಟೈನಬಲ್ ಫ್ಯಾಶನ್ ವೀಕ್ ಸೇರಿದಂತೆ ಅಂತಾರಾಷ್ಟ್ರೀಯ ಫ್ಯಾಶನ್ ರನ್ವೇಗಳನ್ನು ಸಹ ತಲುಪಿವೆ.

ಈಗ ಈ ಬ್ರ್ಯಾಂಡ್ ಅಂತಾರಾಷ್ಟ್ರೀಯವಾಗಿ ರಿಟೇಲ್ ವ್ಯಾಪಾರ ಮಾಡುತ್ತಿದ್ದು ಇದರ ಪ್ರಮುಖ ಮಾರುಕಟ್ಟೆಗಳು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿವೆ ಎಂದು ಮಯೂರಾ ಹೇಳುತ್ತಾರೆ.ಮಯು ಬ್ರ್ಯಾಂಡಿನ ಹಿಟ್ ಉತ್ಪನ್ನಗಳೆಂದರೆ ಲೈಯಾ ಕ್ರಾಸ್‌ಬಾಡಿ ಬ್ಯಾಗ್, ಅರೋರಾ ವಾಲೆಟ್ ಆನ್ ಚೈನ್ ಮತ್ತು ಲಿವಾ ಪೌಚ್, ನೀವು ವಿಶಾಲವಾದ ಆಯ್ಕೆಯ ಮೂಲಕ ಬ್ರೌಸ್ ಮಾಡಬಹುದು, ಇದು 500 ರೂ.ಗಳಿಂದ ಹಿಡಿದು 90,000 ರೂ.ವರೆಗಿನ ಉತ್ಪನ್ನಗಳನ್ನು ಹೊಂದಿದೆ ಎನ್ನುತ್ತಾರೆ ಮಯೂರಾ.

ಮಯು ಉದ್ದಿಮೆಯು ಸ್ವಯಂ-ಧನಸಹಾಯವಾಗಿದೆ ಮತ್ತು ಪ್ರಾರಂಭವಾದಾಗಿನಿಂದ ವರ್ಷದಿಂದ ವರ್ಷಕ್ಕೆ ಶೇಕಡಾ 10 ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಮಯೂರಾ ಹೇಳುತ್ತಾರೆ.

ಇದನ್ನೂ ಓದಿ:  Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ!

ಸದ್ಯ ಮಯು ಬ್ರ್ಯಾಂಡ್ ಪಿನಾಟೆಕ್ಸ್™ ತಯಾರಿಸುವ ಸಸ್ಯಾಹಾರಿ ಆಧಾರಿತ ಜವಳಿ (ಇದು ಅನಾನಸ್ ಎಲೆಯ ನಾರುಗಳ ಉಪಉತ್ಪನ್ನದಿಂದ ನವೀನ ನೈಸರ್ಗಿಕ ಜವಳಿಯಾಗಿದೆ) ಯಿಂದ ತಯಾರಿಸಲಾದ ಬ್ಯಾಗ್‌ಗಳು, ಪೌಚ್‌ಗಳು ಮತ್ತು ಫೋನ್ ಕೇಸ್‌ಗಳನ್ನು ಹೊಂದಿದೆ.

ಮುಂದಿನ ತ್ರೈಮಾಸಿಕದಲ್ಲಿ ನಿರ್ದಿಷ್ಟ ರೀತಿಯ ಹಣ್ಣುಗಳನ್ನು (ಈ ಹಂತದಲ್ಲಿ ಅವರು ಪಾಲ್ಗೊಳ್ಳಲು ಬಯಸದ ವಿವರಗಳನ್ನು) ಬಳಸುವ ಮೂಲಕ ಪರ್ಯಾಯ ಚರ್ಮದೊಂದಿಗೆ ಬರಲು ಮಯು ತನ್ನ ಹಾದಿಯಲ್ಲಿ ನಡೆಯುತ್ತಿದೆ.
Published by:Ashwini Prabhu
First published: