• Home
  • »
  • News
  • »
  • business
  • »
  • Startup Story: ಸೊನ್ನೆಯಿಂದ ಕೋಟಿಯತ್ತ ಸಾಫ್ಟ್‌ವೇರ್ ಉದ್ಯಮಿಯ ಫುಡ್ ಬ್ಯುಸಿನೆಸ್, ಇಲ್ಲಿದೆ ನೋಡಿ ಸಾಹಸಗಾಥೆ

Startup Story: ಸೊನ್ನೆಯಿಂದ ಕೋಟಿಯತ್ತ ಸಾಫ್ಟ್‌ವೇರ್ ಉದ್ಯಮಿಯ ಫುಡ್ ಬ್ಯುಸಿನೆಸ್, ಇಲ್ಲಿದೆ ನೋಡಿ ಸಾಹಸಗಾಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುರಳಿ ಗುಂಡಣ್ಣ ತಮ್ಮದೇ ವ್ಯಾಪಾರೋದ್ಯಮವನ್ನು ಆರಂಭಿಸುವ ಇರಾದೆ ಹೊಂದಿದ್ದರು. ಈ ಸಮಯದಲ್ಲಿ ಅವರ ಕಣ್ಣಿಗೆ ಕಂಡಿದ್ದೇ ಫುಡ್ ಬ್ಯುಸಿನೆಸ್. 25ರ ಹರೆಯದ ಮುರಳಿಗೆ ಅವರ ಕುಟುಂಬ ಪ್ರೋತ್ಸಾಹ ನೀಡಿತು. ಅವರ ಅಜ್ಜಿ ಹಾಗೂ ಚಿಕ್ಕಮ್ಮನ ಜತೆಗೂಡಿ ಬಹುದಿನಗಳಿಂದ ತಮ್ಮ ಕನಸಾಗಿದ್ದ ಆಹಾರೋದ್ಯಮವನ್ನು ಅವರು ಆರಂಭಿಸಿಯೇ ಬಿಟ್ಟರು.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

ಸಾಫ್ಟ್‌ವೇರ್ ಇಂಜಿನಿಯರಿಂಗ್ (Software Engineer)  ಆಗಿದ್ದ ವ್ಯಕ್ತಿಯೋರ್ವರು ತಮ್ಮದೇ ಆದ ಫುಡ್ ಬ್ಯುಸಿನೆಸ್ (Food Business)  ಆರಂಭಿಸಿದ ಕಥೆ (Story) ಇದು. ಸಾಫ್ಟ್‌ವೇರ್ ಉದ್ಯಮಿಯಾಗಿ ಕೈ ತುಂಬಾ ಆದಾಯ ಗಳಿಸುತ್ತಿದ್ದ ಮುರಳಿ ಗುಂಡಣ್ಣ ತಮ್ಮದೇ ವ್ಯಾಪಾರೋದ್ಯಮವನ್ನು ಆರಂಭಿಸುವ ಇರಾದೆ ಹೊಂದಿದ್ದರು. ಈ ಸಮಯದಲ್ಲಿ ಅವರ ಕಣ್ಣಿಗೆ ಕಂಡಿದ್ದೇ ಫುಡ್ ಬ್ಯುಸಿನೆಸ್. 25ರ ಹರೆಯದ ಮುರಳಿಗೆ ಅವರ ಕುಟುಂಬ (Family) ಪ್ರೋತ್ಸಾಹ ನೀಡಿತು. ಅವರ ಅಜ್ಜಿ ಹಾಗೂ ಚಿಕ್ಕಮ್ಮನ ಜತೆಗೂಡಿ ಬಹುದಿನಗಳಿಂದ ತಮ್ಮ ಕನಸಾಗಿದ್ದ ಆಹಾರೋದ್ಯಮವನ್ನು ಅವರು ಆರಂಭಿಸಿಯೇ ಬಿಟ್ಟರು.


ಕೈಗೆಟಕುವ ದರದಲ್ಲಿ ಮನೆಯಲ್ಲೇ ತಯಾರಾದ ಆಹಾರವನ್ನು ಗ್ರಾಹಕರಿಗೆ ತಲುಪಿಸುವುದೇ ಅವರ ಉದ್ದೇಶವಾಗಿತ್ತು ಹಾಗೂ ಮುರಳಿ ತಮ್ಮ ಈ ಉದ್ಯಮಕ್ಕೆ ಫುಡ್ ಬಾಕ್ಸ್ ಎಂಬ ಹೆಸರನ್ನಿರಿಸಿದರು.


ಫುಡ್ ಬಾಕ್ಸ್ ಸ್ಟಾರ್ಟಪ್ ಆರಂಭಗೊಂಡಿದ್ದು ಹೇಗೆ?


ಮುರಳಿ ಹಾಗೂ ಅವರ ಕುಟುಂಬ ಸಣ್ಣ ಗ್ಯಾರೇಜ್ ಒಂದರಲ್ಲಿ ಎರಡು ದೊಡ್ಡ ಸ್ಟವ್‌ಗಳೊಂದಿಗೆ ತಮ್ಮ ಫುಡ್ ಬ್ಯುಸಿನೆಸ್‌ಗೆ ಮುನ್ನಡಿ ಬರೆದರು.


ಮುರಳಿಗೆ ಅವರ ಅಜ್ಜಿ ಹಾಗೂ ಚಿಕ್ಕಮ್ಮಂದಿರು ಆಹಾರ ತಯಾರಿಸಲು ನೆರವಾದರೆ ಇನ್ನು ಮೆನುವಿನ ಸಿದ್ಧತೆ ಅವರ ಗೆಳೆಯರಾದ ಮಂಜು, ವಿನಯ್ ಹಾಗೂ ಸಹೋದರ ಸ್ಕಂಗ ಅವರದ್ದಾಗಿದೆ.


ಮೆನುವಿನಲ್ಲಿ ಇರುವ ಐಟಂಗಳೇನು?


ಇನ್ನು ಇವರು ತಯಾರಿಸುವ ಮೆನುವಿನಲ್ಲಿ ಪುಲಾವ್, ಮೊಸರನ್ನ, ಪಾಯಸ ಹಾಗೂ ಹಣ್ಣಿನ ಬೌಲ್‌ಗಳಿರುತ್ತವೆ. ಆರಂಭದಲ್ಲಿ ಮುರಳಿ ಹಾಗೂ ಗೆಳೆಯರು ಸೇರಿಕೊಂಡು ಇತರೆ 40 ಸ್ನೇಹಿತರು ಮತ್ತು ಪರಿಚಯಸ್ಥರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೆ ಆಹಾರ ವಿತರಿಸುವುದಕ್ಕೆ ಆರಂಭಿಸಿದರು.
ಫುಡ್ ಬಾಕ್ಸ್ ಯಾವ ಏರಿಯಾಗೆ ಫುಡ್ ಡೆಲಿವರಿ ಮಾಡುತ್ತದೆ?


ಐಟಿ ವಲಯ, ಕಾಲೇಜಿನ ಕಿರಿಯ ವಿದ್ಯಾರ್ಥಿಗಳು ಹೀಗೆ ಇತರರ ನೆರವಿನಿಂದ ಆಹಾರ ವಿತರಣೆಯನ್ನು ಮುರಳಿ ಹಾಗೂ ತಂಡಮಾಡುತ್ತಿತ್ತು ಮತ್ತು ಹೆಚ್ಚಿನ ಬ್ಯುಸಿನೆಸ್‌ಗಳನ್ನು ಪಡೆದುಕೊಳ್ಳಲಾರಂಭಿಸಿದರು.


ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾ, ಕೆಡಿ ರೋಡ್, ಚಾಮುಂಡಿ ಪುರಮ್, ಶ್ರೀರಾಂಪುರ ಮತ್ತು ಸಿದ್ಧಾರ್ಥ ಲೇಔಟ್‌ಗೆ ಆಹಾರ ಸರಬರಾಜನ್ನು ಫುಡ್‌ಬಾಕ್ಸ್ ಮಾಡುತ್ತಿದೆ.


ಇದನ್ನೂ ಓದಿ: Valentines Day ಗೆ IRCTC ಕಡೆಯಿಂದ ಬಿಗ್​ ಆಫರ್​, ಇಷ್ಟು ಕಡಿಮೆ ಬೆಲೆಗೆ ಬ್ಯಾಂಕಾಕ್​ಗೆ ಹೋಗಿ ಬನ್ನಿ!


ಮನೆಯಲ್ಲೇ ತಯಾರಾದ ಊಟ ರೂ 70 ಕ್ಕೆ


ತುಪ್ಪದ ಪಾಲಕ್ ದಾಲ್, ಕಿಚಡಿಯೊಂದಿಗೆ ರಾಯ್ತ, ಬೇಳೆಕಾಯಿ ಬಜ್ಜಿ, ಕೇಸರಿ ಭಾತ್, ಪುಳಿಯೊಗರೆ, ಪಾಯಸ ಹಾಗೂ ತಟ್ಟೆ ಇಡ್ಲಿ ಹೀಗೆ ವೈವಿಧ್ಯಮಯ ಖಾದ್ಯಗಳೊಂದಿಗೆ ಫುಡ್ ಬಾಕ್ಸ್ ಬೆಳಗ್ಗಿನ ತಿಂಡಿ, ಮಧ್ಯಾಹ್ನದೂಟ, ರಾತ್ರಿಯೂಟ ಹಾಗೂ ಮಿತ ದರದಲ್ಲಿ ಸ್ನ್ಯಾಕ್ಸ್‌ಗಳನ್ನು ಒದಗಿಸುತ್ತದೆ. ಪ್ರತಿ ಊಟವು ರೂ 70 ರಿಂದ ಆರಂಭವಾಗುತ್ತದೆ.


ಮಿತದರದಲ್ಲಿ ಪೌಷ್ಟಿಕಾಂಶವುಳ್ಳ ಖಾದ್ಯಗಳನ್ನು ಉಣಬಡಿಸುವ ಇರಾದೆಯನ್ನು ಮುರಳಿ ಹಾಗೂ ತಂಡ ಹೊಂದಿದೆ. ಮುರಳಿ ಹೇಳುವಂತೆ ಫುಡ್ ಬಾಕ್ಸ್‌ನ 30% ದಷ್ಟು ಗ್ರಾಹಕರು ವೈದ್ಯರಾಗಿದ್ದಾರೆ ಹಾಗೂ ಹೆಚ್ಚಿನವರು ಪ್ರತೀದಿನ ಫುಡ್ ಆರ್ಡರ್ ಮಾಡುತ್ತಾರೆ ಎಂದಾಗಿದೆ.


ಇನ್ನು ಗ್ರಾಹಕರು ಬೇರೆ ಬೇರೆ ರೀತಿಯ ವೆರೈಟಿ ಆಹಾರ ಖಾದ್ಯಗಳನ್ನು ಕೇಳುತ್ತಾರೆ ಅದನ್ನೂ ನಾವು ತಯಾರಿಸಿ ವಿತರಿಸುತ್ತೇವೆ ಎಂಬುದು ಮುರಳಿಯವರ ಮಾತಾಗಿದೆ.


ದಿನದಲ್ಲಿ 15-20 ಬಾಕ್ಸ್‌ನಿಂದ ಆರಂಭಿಸಿ ಇದೀಗ 2,000 ಬಾಕ್ಸ್‌ಗಳವರೆಗೆ ಬೇಡಿಕೆ ಇದೆ


ನಾರ್ತ್ ಇಂಡಿಯಾ, ಸೌತ್ ಇಂಡಿಯಾ ಖಾದ್ಯಗಳನ್ನು ತಂಡವು ವಿತರಿಸಿದರೆ ಬುಧವಾರ ಹಾಗೂ ಶುಕ್ರವಾರ ಸಾಂಪ್ರದಾಯಿಕ ಆಹಾರ ಖಾದ್ಯಗಳನ್ನು ವಿತರಿಸುತ್ತಾರೆ. ಇದೀಗ ಮುರಳಿಯವರ ಫುಡ್ ಬಾಕ್ಸ್ ವಿಸ್ತಾರಗೊಂಡಿದ್ದು 27 ವೃತ್ತಿಪರರು ಹಾಗೂ ಬಾಣಸಿಗರ ತಂಡವನ್ನೂ ಹೊಂದಿದ್ದಾರೆ.


ಮೊದಲೆಲ್ಲಾ 15 ರಿಂದ 20 ಬಾಕ್ಸ್‌ಗಳ ಆರ್ಡರ್ ಗಳನ್ನು ದಿನವೊಂದಕ್ಕೆ ಮುರಳಿ ಪಡೆದುಕೊಳ್ಳುತ್ತಿದ್ದರು, ಇದೀಗ ವಾರಕ್ಕೆ 2,000 ಬಾಕ್ಸ್‌ಗಳಿಗೆ ಆರ್ಡರ್ ದೊರೆಯುತ್ತಿದೆ ಎಂದು ಮುರಳಿ ಹೇಳುತ್ತಾರೆ.


ಮೈಸೂರು ಮತ್ತು ಸುತ್ತಮುತ್ತಲಿನ 45,000 ನೋಂದಾಯಿತ ಬಳಕೆದಾರರನ್ನು ಹೊಂದಿದ್ದಾರೆ ಮತ್ತು ಇಲ್ಲಿಯವರೆಗೆ, ಸ್ಟಾರ್ಟ್ಅಪ್ 3,00,000 ಆಹಾರ ವಿತರಣೆಗಳನ್ನು ಮಾಡಿದೆ.


ನಾರಾಯಣ ಮೂರ್ತಿ ಕೂಡ ಫುಡ್‌ಬಾಕ್ಸ್‌ನ ಗ್ರಾಹಕರು


ಇನ್ಫೋಸಿಸ್ ಸಹ ಸ್ಥಾಪಕರು ಹಾಗೂ ಬ್ಯುಸಿನೆಸ್‌ಮೆನ್ ನಾರಾಯಣ ಮೂರ್ತಿ ಕೂಡ ನಮ್ಮಿಂದ ಫುಡ್ ಆರ್ಡರ್ ಮಾಡಿಕೊಂಡಿದ್ದಾರೆ ಎಂದು ಮುರಳಿ ಹೆಮ್ಮೆಯಿಂದ ಹೇಳುತ್ತಾರೆ.


ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರೇ ಇತ್ತ ಗಮನಿಸಿ, ಫೆಬ್ರವರಿ 1ಕ್ಕೆ ಒಂದಲ್ಲ ಎರಡು ಪ್ರಮುಖ ಘೋಷಣೆ!


2019 ರಲ್ಲಿ, ಚಾಮುಂಡಿಪುರಂನಲ್ಲಿ ಫುಡ್ ಬಾಕ್ಸ್‌ನ ಮೊದಲ ಔಟ್‌ಲೆಟ್ ಅನ್ನು ಸ್ಥಾಪಿಸಿದ ನಂತರ ಮುರಳಿ ಮೈಸೂರಿನ ಮೊದಲ ಆನ್‌ಲೈನ್ ಆಹಾರ ಪೂರೈಕೆದಾರರಾದರು.


ಇವರು ಇದಕ್ಕೆ ವಿನಯೋಗಿಸಿದ ಹೂಡಿಕೆ ಶೂನ್ಯ ಎಂದು ಹೇಳುವ ಮುರಳಿ ಫುಡ್‌ಬಾಕ್ಸ್ ಇದೀಗ ವರ್ಷಕ್ಕೆ 1.5 ಕೋಟಿ ಆದಾಯ ಗಳಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

Published by:Sandhya M
First published: