Sonu Srinivas Gowda: ಟ್ರೋಲ್​ ಪೇಜ್​ಗಳಿಂದಲೇ ಫೇಮಸ್​ ಆದ ಸೋನು! ರೀಲ್ಸ್​​ ಮಾಡಿನೇ ತಿಂಗಳಿಗೆ ಇಷ್ಟೊಂದು ಸಂಪಾದನೆನಾ?

ಟಿಕ್​ಟಾಕ್​ ಬ್ಯಾನ್​ ಆದಮೇಲೂ ಸೋನು ಇನ್​ಸ್ಟಾಗ್ರಾಂ ರೀಲ್ಸ್​ ಮಾಡಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಹೀಗಿರುವಾಗ ಯಾವುದೇ ಕೆಲಸ ಮಾಡದೇ ಸದಾ ವಿಡಿಯೋ ಮಾಡುತ್ತಲೇ ಇರುವ ಇವರಿಗೆ ಹೇಗೆ ಇಷ್ಟೊಂದು ಹಣ ಸಿಗುತ್ತೆ? ಇವರ ತಿಂಗಳ ಗಳಿಕೆಯೆಷ್ಟು? ಎಂಬುದಂರ ಬಗ್ಗೆ ಪ್ರಶ್ನೆ ಮೂಡುತ್ತೆ. 

ಸೋನು ಶ್ರೀನಿವಾಸ್ ಗೌಡ

ಸೋನು ಶ್ರೀನಿವಾಸ್ ಗೌಡ

  • Share this:
    ಇದು ಫಾಸ್ಟ್​ ಫುಡ್ (Fast Food)​ ಯುಗ.. ಊಟ ಆರ್ಡರ್​​ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ ​(Famous) ಆಗಬಹುದು. ಇಂಟರ್​ನೆಟ್ (Internet)​ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ.  ಕೆಲವರು ತಮ್ಮ ಟ್ಯಾಲೆಂಟ್ (Talent)​ ಪ್ರದರ್ಶಿಸಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಇನ್ನೂ ಕೆಲವರು ಬಂದ ಪುಟ್ಟ ಹೋದ ಪುಟ್ಟ ಎನ್ನುವ ಹಾಗೇ ಆಗಿದ್ದಾರೆ. ಟಿಕ್​ ಟಾಕ್ (Tik Tok)​ ಬ್ಯಾನ್​ ಆಗುವುದಕ್ಕಿಂತ ಮುಂಚೆ ಕರ್ನಾಟಕದಲ್ಲೂ ಹಲವು ಪ್ರತಿಭೆಗಳು ಹೆಸರು ಮಾಡಿದ್ದರು. ರಾತ್ರೋ ರಾತ್ರಿ ಸ್ಟಾರ್​​ (Star)ಗಳ ರೇಂಜ್​ನಲ್ಲಿ ಹೆಸರು ಮಾಡಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವ ತಾಕತ್ತು ಯಾರಿಗೂ ಇರಲಿಲ್ಲ. ಇನ್ನೂ ಕೆಲವರು ಸೋಷಿಯಲ್​ ಮೀಡಿಯಾ (Social Media) ದಿಂದ ಬಂದ ಫೇಮ್ (Fame)​ ಬಳಸಿಕೊಂಡು ಉತ್ತಮ ಕಮಾಯಿ ಮಾಡುತ್ತಿದ್ದಾರೆ.

    ಇದೇ ರೀತಿ ಸಾಮಾಜಿಕ ಜಾಲತಾಣ ಬಳಸ ಲಕ್ಷಾಂತರ ಗಳಿಕೆ ಮಾಡುವುದರಲ್ಲಿ ಸೋನು ಶ್ರೀನಿವಾಸ್​ ಗೌಡ ಸಹ ಒಬ್ಬರು. ಈಕೆಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇತ್ತೀಚೆಗಂತೂ ಈಕೆಯನ್ನು ನೋಡದಿರದೇ ಇರುವವರಿಲ್ಲ. ಟಿಕ್​ಟಾಕ್​ ಬ್ಯಾನ್​ ಆದಮೇಲೂ ಸೋನು ಇನ್​ಸ್ಟಾಗ್ರಾಂ ರೀಲ್ಸ್​ ಮಾಡಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಹೀಗಿರುವಾಗ ಯಾವುದೇ ಕೆಲಸ ಮಾಡದೇ ಸದಾ ವಿಡಿಯೋ ಮಾಡುತ್ತಲೇ ಇರುವ ಇವರಿಗೆ ಹೇಗೆ ಇಷ್ಟೊಂದು ಹಣ ಸಿಗುತ್ತೆ? ಇವರ ತಿಂಗಳ ಗಳಿಕೆಯೆಷ್ಟು? ಎಂಬುದಂರ ಬಗ್ಗೆ ಪ್ರಶ್ನೆ ಮೂಡುತ್ತೆ. 

    ನಾಲ್ಕು ವರ್ಷಗಳಿಂದ ವಿಡಿಯೋ ಮಾಡ್ತಿರೋ ಸೋನು!

    ಬೇರೆಯವರ ಹಾಡುಗಳಿಗೆ, ಡೈಲಾಗ್​ಗಳಿಗೆ ಲಿಪ್ ಸಿಂಕ್ ಮಾಡಿಬಿಟ್ಟರೆ , ತಾವೂ ಕೂಡ ಸೂಪರ್​ ಸ್ಟಾರ್​ ಎಂದು ಅಂದುಕೊಂಡು ಬಿಡುತ್ತಾರೆ. ಆದರೆ, ಇದು ನಿಜವಾದ ಟ್ಯಾಲೆಂಟ್​ ಅಲ್ಲ. ಯಾರೋ ಬರೆದಿರುವ ಹಾಡಿಗೆ, ಯಾರೋ ಬಾರಿಸಿರುವ ಮ್ಯೂಸಿಕ್​ಗೆ, ಇವರು ಕುಣಿದು ಹೆಸರು ಮಾಡಿದ್ದಾರೆ. ಅದರಲ್ಲಿ ಸೋನು ಶ್ರೀನಿವಾಸ್​ ಗೌಡ ಒಬ್ಬರು. ಈ ಸೋನು ಶ್ರೀನಿವಾಸ್​ ಗೌಡ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್​ ಆಗಿಯೇ ಫೇಮಸ್​ ಆದವರು. ಟ್ರೋಲ್​ ಪೇಜ್​ಗಳಿಂದಲೇ ಈಕೆಗೆ ಇಷ್ಟು ಹೆಸರು ಬಂದಿದ್ದು. ಚೈಲ್ಡೀಸ್​ ಮಾತುಗಳಿಂದ, ಇನ್ನೂ ಅನೇಕ ವಿಚಾರಕ್ಕೆ  ಸಿಕ್ಕಾಪಟ್ಟೆ ಟ್ರೋಲ್​ ಆದವರು ಸೋನು ಶ್ರೀನಿವಾಸ್​ ಗೌಡ.ಈಗ ಸೋಷಿಯಲ್​ ಮೀಡಿಯಾ ಸ್ಟಾರ್​ ಪಟ್ಟ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಭೂಮಿ ಮೇಲೆ ಇವನಂತೆ ಬದುಕೋರು ಯಾರು ಇಲ್ಲ! ಸದಾ ಇವನ ಸುತ್ತ ಇರ್ತಾರೆ ರಂಭೆ, ಊವರ್ಶಿಯರು

    ಸೋಷಿಯಲ್​ ಮೀಡಿಯಾ ಸ್ಟಾರ್ ಸೋನು!

    ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್​ಗಳ ಪ್ರ,ಮೋಷನ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಇವರು ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾರೆ ಎಂದು ಎಲ್ಲರಿಗೂ ಒಂದು ಕುತೂಹಲ ಇರುತ್ತೆ. ತಿಂಗಳಿಗೆ ಒಂದರಿಂದ ಎರಡು ಲಕ್ಷ ವಿಡಿಯೋಗಳಿಂದ ಸೋನು ಶ್ರೀನಿವಾಸ ಗೌಡ ಗಳಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೆಲ ಜಾಹೀರಾತುಗಳು, ಪ್ರಮೋಷನ್​ ವಿಡಿಯೋ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ.

    ಇದನ್ನೂ ಓದಿ: ನಮಸ್ಕಾರ ದೇವ್ರು, ಹೀಗ್​ ಅನ್ನುತ್ತಲೇ ದುಡ್ಡು ಮಾಡ್ತಿರೋ ಯುಟ್ಯೂಬರ್​​! ವಿಡಿಯೋಗಳಿಂದಲೇ ತಿಂಗಳಿಗೆ ಇಷ್ಟೊಂದು ಸಂಪಾದನೆನಾ?

    ಇನ್ನೂ ಮುಂದಿನ ದಿನಗಳಲ್ಲಿ ಸೋನು ಶ್ರೀನಿವಾಸ ಗೌಡ ಕನ್ನಡ ಸಿನಿಮಾ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಕೆಲವರು ಈಕೆ ನಿಜಕ್ಕೂ ರೀಲ್ಸ್​ ವಿಡಿಯೋಗಳಿಂದ ಇಷ್ಟು ಹಣ ಸಂಪಾದನೆ ಮಾಡ್ತಾರಾ ?ಎಂದು ಪ್ರಶ್ನಿಸುತ್ತಾರೆ. ನಿಮಗೆ ಹೆಚ್ಚಿನ ಫಾಲೋವರ್ಸ್ ಇದ್ದರೆ, ಹೆಚ್ಚಿನ ಸಬ್​ಸ್ಕ್ರೈಬರ್​ ಇದ್ದರೆ ಇಷ್ಟು ಹಣ ಗಳಿಸುವುದು ಕಷ್ಟವೆನ್ನಲ್ಲ. ಆದರೆ, ಸೋನು ಶ್ರೀನಿವಾಸ ಗೌಡ ಅವರ ತಿಂಗಳ ಸಂಪಾದನೆ ಎಷ್ಟು ಎಂಬುಂದು ಇಷ್ಟೇ ಎಂದು ಹೇಳಲು ಸಾಧ್ಯವಿಲ್ಲ. ಇದು ಅಧಿಕೃತ ಮಾಹಿತಿ ಅಲ್ಲ. ಜನ ಮಾತನಾಡಿಕೊಳ್ಳುತ್ತಿರುವುದನ್ನು ನಾವು ಹೇಳಿದ್ದೇವೆ.
    Published by:Vasudeva M
    First published: