• Home
  • »
  • News
  • »
  • business
  • »
  • EMI Tips: ಇಎಂಐ ಕಟ್ಟೋಕಾಗದೇ ಟೆನ್ಶನ್​ ಹೆಚ್ಚಾಗಿದ್ಯಾ? ಹೀಗ್​ ಮಾಡಿ ಸಲಿಸಾಗಿ ಸಾಲ ತೀರಿಸಿಕೊಳ್ಳಿ

EMI Tips: ಇಎಂಐ ಕಟ್ಟೋಕಾಗದೇ ಟೆನ್ಶನ್​ ಹೆಚ್ಚಾಗಿದ್ಯಾ? ಹೀಗ್​ ಮಾಡಿ ಸಲಿಸಾಗಿ ಸಾಲ ತೀರಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರೆಪೋ ದರ (Repo Rate) ಏರಿಕೆ ಎಂದರೆ ಸಾಲದ ಬಡ್ಡಿ ದರ (Interest Rate) ಏರಿಕೆ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ದೇಶದಲ್ಲಿ ಹಣದುಬ್ಬರವು ಶೇಕಡಾ ಆರರ ಆಸುಪಾಸಿನಲ್ಲಿದೆ.

  • Share this:

ಕೈಯಲ್ಲಿ ಕಾಸ್ (Money)​ ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಹೂ ಎಂಬ ಗಾದೆಯನ್ನು ಕೇಳಿರುತ್ತೇವೆ. ಹೌದು, ಈ ಫಾಸ್ಟ್​ ಫುಡ್ (Fast Food) ಯುಗದಲ್ಲಿ ಎಲ್ಲರೂ ರೀತಿ ಬದುಕಿತ್ತಿದ್ದಾರೆ. ಕೈಯಲ್ಲಿ ಕಾಸ್​ ಇಲ್ಲದಿದ್ದರೂ ಕಾಸ್ಟ್ಲಿ  ಜೀವನ ನಡೆಸುತ್ತಿದ್ದಾರೆ. ಮೊದಲೆಲ್ಲಾ ಕಷ್ಟದಲ್ಲಿ ಸಾಲ (Loans) ಪಡೆಯುತ್ತಿದ್ದರು. ಆದರೆ, ಈಗ ಕೈಯಲ್ಲಿ ಹಣವಿದ್ದರೂ ಹೈಫೈ  ಜೀವನ ಮಾಡಬೇಕೆಂಬ ಆಸೆ ಎಲ್ಲರಿಗೂ ಇದೆ. ಹಾಗೂ ಎಲ್ಲರೂ ಅದೇ ರೀತಿಯಲ್ಲಿ ಬಾಳುತ್ತಿದ್ದಾರೆ ಕೂಡ. ಅದು ಹೇಗೆ ಅಂತೀರಾ. ಇಎಂಐ (EMI) ಎಂಬುಂದು ಪ್ರತಿಯೊಬ್ಬರ ಜೀವನದಲ್ಲೂ ಸ್ಥಾನ ಪಡೆದುಕೊಂಡಿದೆ. ಪ್ರತಿ ತಿಂಗಳು ಒಂದಲ್ಲ ಒಂದು  ಐಎಂಐ ಕಟ್ಟಬೇಕು ಎಂಬ ಟೆನ್ಶನ್  (Tension)​ ಪ್ರತಿಯೊಬರಿಗೂ ಇದೆ. ಮನೆಯಲ್ಲಿ ಕಾಸ್ಟ್ಲಿ (Costly) ಐಟಂ ತೆಗೆದುಕೊಳ್ಳಲು ಐಎಂಐ ಮೊರೆ ಹೋಗುತ್ತಾರೆ. ರೆಪೋ ದರ (Repo Rate) ಏರಿಕೆ ಎಂದರೆ ಸಾಲದ ಬಡ್ಡಿ ದರ (Interest Rate) ಏರಿಕೆ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ದೇಶದಲ್ಲಿ ಹಣದುಬ್ಬರವು ಶೇಕಡಾ ಆರರ ಆಸುಪಾಸಿನಲ್ಲಿದೆ.


ಆರ್​​ಬಿಐ ದರ ಏರಿಕೆ ಅಂದ್ರೆ ಬಡ್ಡಿ ದರ ಏರಿಕೆ!


ಹೀಗಾಗಿ ಏರುತ್ತಿರುವ ಬೆಲೆ ಏರಿಕೆ ನಿಯಂತ್ರಣಕ್ಕೆ ಆರ್​ಬಿಐ ರೆಪೋ ದರ ಏರಿಕೆ ಮಾಡಿದೆ. ಕಳೆದ ಕೆಲ ವರ್ಷಗಳಿಂದ ಆರ್​ಬಿಐ ರೆಪೋ ದರದಲ್ಲಿ ಏರಿಕೆ ಮಾಡಿರಲಿಲ್ಲ. ಜನರ ಕೈಯಲ್ಲಿ ಹಣದ ಹರಿವು ಹೆಚ್ಚಾಗಲು ಇದು ಒಂದು ಕಾರಣವಾಗಿತ್ತು. ಸಾಲಗಾರರು ಉಳಿತಾಯ ಮತ್ತು ಹೂಡಿಕೆ ಯೋಜನೆಗಳನ್ನು ಯೋಜಿಸುವ ಮೂಲಕ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಬೇಕಿದೆ. ಸ್ಥಿರ ಠೇವಣಿದಾರರಿಗೆ ಇದು ವರದಾನವಾಗಿದ್ದರೂ, ಸಾಲಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಮಾಡಿದೆ. ಮೊದಲೇ ದಿನ ನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.


ಇಐಂಐ ಕಟ್ಟೋದಕ್ಕೆ ಕಷ್ಟವಾಗುತ್ತಿದೆಯಾ?

ಹಣಕಾಸು ಸಂಸ್ಥೆಗಳು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಹೀಗಾಗಿ ಸಹಜವಾಗೇ ಸಾಲದ ಮೇಲಿನ EMI ದರ ಹೆಚ್ಚಾಗುವಂತೆ ಮಾಡಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ರೆಪೋ ದರಗಳು ಮತ್ತಷ್ಟು ಏರಿಕೆಯಾಗುವ ಸೂಚನೆಗಳಿವೆ. ಇದರಿಂದ ಜನ ಸಾಮನ್ಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಜೋಶ್​ನಲ್ಲಿ ಇಎಂಐ ಕಟ್ಟುತ್ತೇನೆ ಎಂದು ಸಾಲ ಮಾಡಿಕೊಂಡು ಬಿಡುತ್ತಾರೆ. ಇತ್ತ ಹೆಚ್ಚಿನ ಬಡ್ಡಿ ದರ ಕಟ್ಟಲಾಗದೇ ಪ್ರತಿ ತಿಂಗಳು ಕಷ್ಟ ಅನುಭವಿಸುತ್ತಾರೆ. ನೀವೇನಾದರೂ ಇಎಂಐ ಕಟ್ಟೋದು ಹೇಗಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದೀರಾ? ನಿಮಗಾಗಿ ಕೆಲ ಟಿಪ್ಸ್ ಇಲ್ಲಿದೆ ನೋಡಿ


ಇದನ್ನೂ ಓದಿ: 11ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಹಾಗಿದ್ರೆ ನೀವು ಹೀಗ್​ ದೂರು ನೀಡ್ಬಹುದು


ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ!


ಹೌದು, ಮೊದಲೇ ನೀವು ಇಎಂಐ ಕಟ್ಟಬೇಕಾದ ಸ್ಥಿತಿ ಎದುರಾಗಿದೆ ಎಂದರೆ. ಮತ್ತೆ ಮತ್ತೆ ಅನಗತ್ಯ ಖರ್ಚುಗಳನ್ನು ಮಾಡುವುದನ್ನು ಕಡಿಮೆ ಮಾಡಿ. ಇಲ್ಲದಿದ್ದರೂ ಒಂದು ಸಮಸ್ಯೆಗೆ ಮತ್ತೊಂದು ಸಮಸ್ಯೆ ಉಂಟಾಗಿ ಇಎಂಐ ಕಟ್ಟಲಾಗದತಂಹ ಸ್ಥಿತಿ ಎದುರಾಗಬಹುದು.ನಿಮ್ಮ ಮಾಸಿಕ ಗಳಿಕೆಯ ಒಂದು ಭಾಗವನ್ನು ಇಎಂಐ ಕಟ್ಟಲು ಮೀಸಲಿಡಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.


ಸಾಲದ ಅವಧಿಯನ್ನು ವಿಸ್ತರಿಸಿಕೊಳ್ಳಿ!


ಸಾಮಾನ್ಯವಾಗಿ ಬ್ಯಾಂಕುಗಳು EMI ಗಳನ್ನು ಹೆಚ್ಚಿಸುವ ಬದಲು ಸಾಲದ ಅವಧಿಯನ್ನು ವಿಸ್ತರಿಸುತ್ತವೆರೆ, ಅವಧಿ ವಿಸ್ತರಿಸುವುದರಿಂದ ಬಡ್ಡಿಯ ಹೊರೆ ಪ್ರಮಾಣಾನುಗುಣವಾಗಿ ಹೆಚ್ಚಾಗುತ್ತದೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ.


ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಗುಡ್​ನ್ಯೂಸ್​! ಇಲ್ಲಿ ನಿಮಗೆ ಸಿಗಲಿದೆ ಹೆಚ್ಚಿನ ಬಡ್ಡಿ ದರ


ನಿಮ್ಮ ಸಾಲವನ್ನು ಪುನರ್​​ ರಚಿಸಲು ನೀವು ಬ್ಯಾಂಕ್ ಕೇಳಬಹುದು. ನಂತರ ಬ್ಯಾಂಕ್ ನಿಮಗೆ ಹೊಸ ಮತ್ತು ಕೈಗೆಟುಕುವ EMI ಆಯ್ಕೆಯನ್ನು ನೀಡುತ್ತದೆ. ಇಲ್ಲವಾದರೆ, ನೀವು ಕಡಿಮೆ ಬಡ್ಡಿ ದರಗಳೊಂದಿಗೆ ಸಾಲಗಳನ್ನು ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಹೆಚ್ಚಿನ ಬಡ್ಡಿದರದ ಸಾಲಗಳು. ಒಂದಕ್ಕಿಂತ ಹೆಚ್ಚು ಸಾಲ ಇದ್ದರೆ ಆಗ ನಾವು ಎಚ್ಚರಿಕೆಯಿಂದ ಇರಬೇಕು. ಅದಕ್ಕಾಗಿ ಉತ್ತಮ ಯೋಜನೆಯನ್ನು ರೂಪಿಸಿಕೊಳ್ಳಬೇಕು.

Published by:Vasudeva M
First published: