• Home
 • »
 • News
 • »
 • business
 • »
 • Small Business: ಸಣ್ಣ ಪ್ರಮಾಣದ ವ್ಯಾಪಾರ ಐಡಿಯಾ: ಹಸಿರು ಬಟಾಣಿ ವ್ಯಾಪಾರವನ್ನು ಹೀಗೆ ಪ್ರಾರಂಭಿಸಿ

Small Business: ಸಣ್ಣ ಪ್ರಮಾಣದ ವ್ಯಾಪಾರ ಐಡಿಯಾ: ಹಸಿರು ಬಟಾಣಿ ವ್ಯಾಪಾರವನ್ನು ಹೀಗೆ ಪ್ರಾರಂಭಿಸಿ

ಹಸಿರು ಬಟಾಣಿ

ಹಸಿರು ಬಟಾಣಿ

ಕಡಿಮೆ ಹೂಡಿಕೆ ಹೆಚ್ಚಿನ ಲಾಭ ಪಡೆಯಲು ನೀವು ಭಾರತದಲ್ಲಿ ಆಹಾರಕ್ಕೆ ಸಂಬಂಧಿಸಿದ ವ್ಯವಹಾರ ತೆರೆಯುವುದು ಸೂಕ್ತ. ಅದರಲ್ಲಿ ಮುಖ್ಯವಾಗಿ ಈ ಅಮುಲ್‌ ಪ್ರಾಂಚೈಸಿಯ ಹಾಲಿನ ವ್ಯಾಪಾರ ಹೀಗೆ ಇವೆಲ್ಲಾ ಬರುತ್ತವೆ. ಅದೇ ರೀತಿ ಫ್ರೋಜನ್​ ಆಹಾರ ಕೂಡ ಒಂದೊಳ್ಳೆಯ ಉದ್ಯಮದ ಕಲ್ಪನೆಯಾಗಿದೆ.

 • Share this:

  ಕಡಿಮೆ ಹೂಡಿಕೆ (Investment) ಹೆಚ್ಚಿನ ಲಾಭ (Profit) ಪಡೆಯಲು ನೀವು ಭಾರತದಲ್ಲಿ ಆಹಾರಕ್ಕೆ ಸಂಬಂಧಿಸಿದ ವ್ಯವಹಾರ ತೆರೆಯುವುದು ಸೂಕ್ತ. ಅದರಲ್ಲಿ ಮುಖ್ಯವಾಗಿ ಈ ಅಮುಲ್‌ ಪ್ರಾಂಚೈಸಿಯ (Amul Franchise) ಹಾಲಿನ ವ್ಯಾಪಾರ ಹೀಗೆ ಇವೆಲ್ಲಾ ಬರುತ್ತವೆ. ಅದೇ ರೀತಿ ಫ್ರೋಜನ್​ ಆಹಾರ ಕೂಡ ಒಂದೊಳ್ಳೆಯ ಉದ್ಯಮದ ಕಲ್ಪನೆಯಾಗಿದೆ. ಈ ಉದ್ಯಮದಲ್ಲಿ ಹಸಿರು ಬಟಾಣಿಯೂ (Green Pea Business) ಒಂದು ಎಷ್ಟೋ ಮಂದಿ ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಮೂಲಕ ಹೆಚ್ಚು ಹಣಗಳಿಸುವವರಿದ್ದಾರೆ. ಇವೆಲ್ಲವೂ ಮಾರ್ಕೆಟಿಂಗ್ ಪ್ಲ್ಯಾನ್​ಗಖಿಂದ ಮಾತ್ರ ಸಾಧ್ಯ. ಯಾವುದೇ ಉದ್ಯಮವನ್ನು ಪ್ರಾರಂಭಿಸಬೇಕಾದರು ಅದನ್ನು ಹೇಗೆ ನಡೆಸುವುದೆಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಆಗ ಒಂದು ಉದ್ಯಮ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ.


  ಇದೀಗ ಸಣ್ಣ ಉದ್ಯಮಗಳಲ್ಲಿ ಘನೀಕೃತ ಹಸಿರು ಬಟಾಣಿ ತಯಾರಿಕೆ ಉದ್ಯಮವೂ ಒಂದು. ಇದೀಗ ಈ ಉದ್ಯಮವನ್ನು ಹೇಗೆ ಪ್ರಾರಂಭಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ


  ಘನೀಕೃತ ಆಹಾರ ಉದ್ಯಮ


  ಈ ಫ್ರೋಜನ್‌ ಫುಡ್‌ ಅಥವಾ ಘನೀಕೃತ ಆಹಾರ ಎಂಬುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯ ಆಹಾರವಾಗಿದೆ. ಈ ಪೂರ್ವ ನಿರ್ಮಿತ ಘನೀಕೃತ ಆಹಾರ ಪದಾರ್ಥಗಳನ್ನು ನೀವು ಹಲವಾರು ಚಿಲ್ಲರೆ ಸಂಸ್ಥೆಗಳು ಮತ್ತು ಸೂಪರ್​​ ಮಾರ್ಕೆಟ್​​ಗಳಲ್ಲಿ ನೋಡಬಹುದು. ಸಣ್ಣ-ಪ್ರಮಾಣದ ವ್ಯಾಪಾರ ಆರಂಭಿಸಲು ಈ ಫ್ರೋಜನ್‌ ಫುಡ್‌ ಉತ್ತಮವಾಗಿದ್ದು, ಅದರಲ್ಲೂ ಈ ಫ್ರೋಜನ್‌ ಹಸಿರು ಬಟಾಣಿಯ ವ್ಯಾಪಾರ ಹೆಚ್ಚು ಲಾಭದಾಯಕವಾಗಿದೆ.


  ಇದನ್ನೂ ಓದಿ: ಕಾಲೇಜು ಪದವೀಧರರಿಗೆ ಸಣ್ಣ ವ್ಯಾಪಾರ ಶುರು ಮಾಡಲು ಇಲ್ಲಿವೆ 7 ಸಲಹೆಗಳು!

   ಭಾರತದಲ್ಲಿ ಹೆಪ್ಪುಗಟ್ಟಿದ ಆಹಾರ ಉದ್ಯಮವು 2019 ರಲ್ಲಿ 85.27 ಶತಕೋಟಿ ಮಾತ್ರ ಇತ್ತು ಆದರೆ ಈಗ ಉದ್ಯಮ ಬೆಳೆಯುತ್ತಿದ್ದು, 2024ರ ವೇಳೆಗೆ 192.96 ಶತಕೋಟಿ ತಲುಪುವ ನಿರೀಕ್ಷೆಯಿದೆ.


  ಘನೀಕೃತ ಹಸಿರು ಬಟಾಣಿ ಮಾರುಕಟ್ಟೆ


  ಹಸಿರು ಬಟಾಣಿ ಕಾಳುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ನಾವು ಮನೆಗಳಲ್ಲಿ ತಯಾರು ಮಾಡುವ ಪೀಸ್‌ ಪಲಾವ್‌, ಪಲ್ಯ, ಉಸುಳಿ ಹೀಗೆ ವಿಶೇಷ ಬಗೆಯ ಅಡುಗೆಗಳಿಗೆ ಹಸಿರು ಬಟಾಣಿ ಕಾಳುಗಳನ್ನು ಬಳಕೆ ಮಾಡುತ್ತೇವೆ. ಕೇವಲ ಅಡುಗೆಯ ಸ್ವಾದ ಮಾತ್ರವಲ್ಲದೆ ನಮ್ಮ ಆರೋಗ್ಯದ ವಿಚಾರದಲ್ಲೂ ಕೂಡ ಹಸಿ ಬಟಾಣಿ ಕಾಳುಗಳು ಕೊಡುಗೆ ನೀಡುತ್ತವೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಹಸಿರು ಬಟಾಣಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಅದರಲ್ಲೂ ಘನೀಕೃತ ಹಸಿರು ಬಟಾಣಿ ಮಾರುಕಟ್ಟೆ ಗಣನೀಯವಾಗಿ ಬೆಳೆಯುತ್ತಲೇ ಇದೆ. ಹೆಪ್ಪುಗಟ್ಟಿದ ಹಸಿರು ಬಟಾಣಿಗಳ ಮಾರುಕಟ್ಟೆಯು 2025 ರ ವೇಳೆಗೆ ವಿಸ್ತರಿಸುವ ನಿರೀಕ್ಷೆಯಿದೆ ಹೀಗಾಗಿ ತಮ್ಮ ಸಂಸ್ಥೆಗಳನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳಿಗೆ ಘನೀಕೃತ ಬಟಾಣಿಗಳು ಅದ್ಭುತ ಉದ್ಯಮವಾಗಿದೆ ಎನ್ನಬಹುದು.


  ಹಸಿರು ಬಟಾಣಿ


  ಹೆಚ್ಚಿನ ಲಾಭದ ಉದ್ಯಮ


  ಈ ವಲಯದಲ್ಲಿ ಕಡಿಮೆ ಪೈಪೋಟಿ ಇರುವುದರಿಂದ, ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಮಾರುಕಟ್ಟೆ ತಂತ್ರಗಳು ಮತ್ತು ಆಕರ್ಷಕವಾದ ಪ್ಯಾಕೇಜಿಂಗ್‌ನಲ್ಲಿ ನಾವು ಪ್ರೀಮಿಯಂ ಹೆಪ್ಪುಗಟ್ಟಿದ ಬಟಾಣಿಗಳನ್ನು ನೀಡಿದ್ದಲ್ಲಿ ಹೆಚ್ಚಿನ ಗ್ರಾಹಕರನ್ನು ನೀವು ಸೆಳೆದುಕೊಳ್ಳಬಹುದು.


  ಘನೀಕೃತ ಬಟಾಣಿ ವ್ಯಾಪಾರವನ್ನು ಹೇಗೆ ಪ್ರಾರಂಭಿಸುವುದು?


  • ಹೆಪ್ಪುಗಟ್ಟಿದ ಹಸಿರು ಬಟಾಣಿಗಳು ವರ್ಷಪೂರ್ತಿ ಬೇಡಿಕೆಯಲ್ಲಿರುತ್ತವೆ. ಆದರೆ ಬೆಳೆಗಳು ಮಾರುಕಟ್ಟೆಗೆ ಬರುವುದು ಮಾತ್ರ ಚಳಿಗಾಲದಲ್ಲಿ. ಹೀಗಾಗಿ ಚಳಿಗಾಲದಲ್ಲಿ ಮಾತ್ರ ಸಿಗುವ ಬಟಾಣಿಯನ್ನು ವರ್ಷಪೂರ್ತಿ ಸಂಗ್ರಹಿಸಿ ಗ್ರಾಹಕರಿಗೆ ನೀಡುವುದೇ ಈ ಉದ್ಯಮ.

  • ಫ್ರೋಜನ್‌ ಹಸಿ ಬಟಾಣಿ ವ್ಯಾಪಾರ ಪ್ರಾರಂಭಿಸಲು ಬಹಳಷ್ಟು ಹೆಪ್ಪುಗಟ್ಟಿದ ಹಸಿರು ಬಟಾಣಿಗಳನ್ನು ಸಗಟು ಬೆಲೆಯಲ್ಲಿ ಖರೀದಿಸಿ ಅದನ್ನು ಉತ್ತಮವಾಗಿ ಪ್ಯಾಕಿಂಗ್‌ ಮಾಡಿ ಘನೀಕರಿಸಿ ಇಟ್ಟು ವ್ಯಾಪಾರ ಮಾಡಬೇಕಾಗುತ್ತದೆ. ಸಗಟು ಬೆಲೆಯಲ್ಲಿ ಖರೀದಿಸುವಾಗ ನೀವು ಗ್ರಾಹಕರ ಆದ್ಯತೆ, ಮಾರುಕಟ್ಟೆಯನ್ನು ನೋಡಿ ಎಷ್ಟು ಪ್ರಮಾಣ ಬೇಕೋ ಅಷ್ಟು ಖರೀದಿಸಬೇಕಾಗುತ್ತದೆ.

  •  ಹಸಿರು ಬಟಾಣಿ ವ್ಯಾಪಾರವನ್ನು ಪ್ರಾರಂಭಿಸಲು ನಿಮ್ಮ ಮನೆಯಲ್ಲಿ 300 ರಿಂದ 500 ಚದರ ಅಡಿಗಳ ಜಾಗ ಬೇಕಾಗುತ್ತದೆ. ಆದಾಗ್ಯೂ, ನೀವು ದೊಡ್ಡ ಪ್ರಮಾಣದ ಹೆಪ್ಪುಗಟ್ಟಿದ ಹಸಿರು ಬಟಾಣಿ ವ್ಯಾಪಾರವನ್ನು ನಿರ್ವಹಿಸಲು ಬಯಸಿದರೆ ನಿಮಗೆ 3000 ಮತ್ತು 4000 ಚದರ ಅಡಿ ಪ್ರದೇಶದ ಅಗತ್ಯವಿದೆ.


  ಹಸಿರು ಬಟಾಣಿotehr


  •  ಹೆಪ್ಪುಗಟ್ಟಿದ ಹಸಿರು ಬಟಾಣಿಗಳನ್ನು ಮಾರಾಟ ಮಾಡುವ ವ್ಯವಹಾರಕ್ಕೆ ಕೆಲವು ಪರವಾನಗಿಗಳ ಅಗತ್ಯವಿರುತ್ತದೆ.

  • ಹಸಿರು ಬಟಾಣಿಯನ್ನು ರೈತರಿಂದ ಕಿಲೋಗ್ರಾಂಗೆ 10–12 ರೂ.ಗೆ ಖರೀದಿಸಬೇಕು. ನಂತರ ಅವುಗಳನ್ನು ಸಂಸ್ಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಕಿಲೋಗ್ರಾಂಗೆ 100–120 ರೂ.ಗೆ ಮಾರಾಟ ಮಾಡಬಹುದು.

  • ನೀವು ಅವುಗಳನ್ನು ನೇರವಾಗಿ ಅಂಗಡಿಗೆ ಮಾರಾಟ ಮಾಡಿದರೆ ನೀವು ಪ್ರತಿ ಕಿಲೋಗ್ರಾಂ ಘನೀಕೃತ ಹಸಿರು ಬಟಾಣಿಯನ್ನು ರೂ 200ಗೆ ಮಾರಾಟ ಮಾಡಬಹುದು.


  ಹೆಪ್ಪುಗಟ್ಟಿದ ಹಸಿರು ಬಟಾಣಿಯನ್ನು ಹೇಗೆ ತಯಾರಿಸುವುದು?


  ಮೊದಲಿಗೆ, ಬಟಾಣಿಗಳನ್ನು ಫ್ರೀಜ್ ಮಾಡುವ ಮೊದಲು ಸಿಪ್ಪೆ ತೆಗೆಯಬೇಕು. ಸಿಪ್ಪೆ ಸುಲಿದ ನಂತರ ಸುಮಾರು 90 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಬೇಯಿಸಲಾಗುತ್ತದೆ. ಬಟಾಣಿಗಳನ್ನು ಸರಿಯಾಗಿ ಬೇಯಿಸಿದ ನಂತರ, ಅದರ ಮೇಲಿನ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಧಾನ್ಯಗಳನ್ನು 3 ರಿಂದ 5 ಡಿಗ್ರಿ ಸೆಲ್ಸಿಯಸ್ ನಡುವಿನ ತಣ್ಣನೆಯ ನೀರಿನಲ್ಲಿ ಸಂಗ್ರಹಿಸಲಾಗುತ್ತದೆ. ಅದರ ನಂತರ, ಹಸಿರು ಬಟಾಣಿಯನ್ನು 40 ಡಿಗ್ರಿ ತಾಪಮಾನದಲ್ಲಿರಿಸಿ ವಿವಿಧ ತೂಕದ ಪ್ಯಾಕೇಜ್‌ಗಳಲ್ಲಿ ಪ್ಯಾಕ್ ಮಾಡಬಹುದು ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.

  Published by:Prajwal B
  First published: