Business Ideas: ಹಣ ಸಂಪಾದಿಸೋ ಅತ್ಯುತ್ತಮ ಮಾರ್ಗಗಳೇನು? ಹದಿಹರೆಯದವರಿಗೆ ಇಲ್ಲಿವೆ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹದಿಹರೆಯವರು ಯಾವುದೇ ಬ್ಯುಸಿನೆಸ್ ಅನ್ನು ತಮ್ಮ ಬೆರಳ ತುದಿಯಲ್ಲಿರುವ ತಂತ್ರಜ್ಞಾನಗಳ ಸಹಾಯದಿಂದ ಆರಂಭಿಸಬಹುದಾಗಿದೆ. ಸಾಮಾಜಿಕ ತಾಣಗಳು ಇಂದು ಬ್ಯುಸಿನೆಸ್‌ಗಳನ್ನು ಸರಳವಾಗಿಸುವಲ್ಲಿ ಪ್ರಮುಖವಾಗಿವೆ. ಬರಿಯ ಫೇಸ್‌ಬುಕ್ ಪೇಜ್‌ ಅನ್ನು ನಿರ್ವಹಣೆ ಮಾಡುವ ಮೂಲಕವೇ ನೀವು ಕುಳಿತಲ್ಲಿ ಹಣ ಗಳಿಸಬಹುದಾಗಿದೆ.

ಮುಂದೆ ಓದಿ ...
  • Share this:

ಹದಿಹರೆಯದ (Teenage) ವಯಸ್ಸು ಎಂದರೆ ಅದು ಹುಚ್ಚುಕೋಡಿ ಮನಸ್ಸು ಎಂದು ಕವಿಗಳೇ ಬಣ್ಣಿಸಿದ್ದಾರೆ. ಈ ವಯಸ್ಸಿನಲ್ಲಿ ಎಲ್ಲಿಲ್ಲದ ಲವಲವಿಕೆ, ಹುರುಪು, ಉತ್ಸಾಹ (Enthusiasm) ಕಂಡುಬರುತ್ತದೆ. ಏನನ್ನೂ ಸಾಧಿಸಬಹುದು ಯಾವುದನ್ನೂ ಜಯಿಸಬಹುದು ಎಂಬ ಅತಿಯಾದ ಆತ್ಮವಿಶ್ವಾಸ (Confidence) ರೂಪುಗೊಳ್ಳುತ್ತದೆ. ಹಾಗಾಗಿಯೇ ಇಂದು ಅದೆಷ್ಟೋ ಯುವಕ ಯುವತಿಯರು ಉದ್ಯಮದತ್ತ (Business) ಮುಖ ಮಾಡುತ್ತಿದ್ದಾರೆ ಹಾಗೂ ತಮ್ಮದೇ ಆದ ಸ್ವಂತ ಸಂಸ್ಥೆಗಳನ್ನು ಹುಟ್ಟುಹಾಕಬೇಕೆಂಬ ಪಣ ತೊಟ್ಟಿದ್ದಾರೆ. ಆದರೆ ಬ್ಯುಸಿನೆಸ್ ಅಂದರೆ ಲಾಭ- ನಷ್ಟ (Profit-Loss), ಸೋಲು ಗೆಲುವು ಇದ್ದೇ ಇರುತ್ತದೆ. ಇದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅರಿತುಕೊಂಡರೆ ಮಾತ್ರವೇ ಸೋಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ.


ಇಂದಿನ ಲೇಖನದಲ್ಲಿ ಹದಿಹರೆಯವರು ಬ್ಯುಸಿನೆಸ್‌ನಲ್ಲಿ ಯಾವ ರೀತಿ ಎಚ್ಚರಿಕೆಯಿಂದಿರಬೇಕು, ಸಲಹೆಗಳೇನು? ಯಾವ ಉದ್ಯಮ ಲಾಭದಾಯಕವಾದುದು ಎಂಬುದನ್ನು ಕುರಿತು ತಿಳಿದುಕೊಳ್ಳೋಣ.


ಹದಿಹರೆಯವರು ಯಾವುದೇ ಬ್ಯುಸಿನೆಸ್ ಅನ್ನು ತಮ್ಮ ಬೆರಳ ತುದಿಯಲ್ಲಿರುವ ತಂತ್ರಜ್ಞಾನಗಳ ಸಹಾಯದಿಂದ ಆರಂಭಿಸಬಹುದಾಗಿದೆ. ಸಾಮಾಜಿಕ ತಾಣಗಳು ಇಂದು ಬ್ಯುಸಿನೆಸ್‌ಗಳನ್ನು ಸರಳವಾಗಿಸುವಲ್ಲಿ ಪ್ರಮುಖವಾಗಿವೆ. ಬರಿಯ ಫೇಸ್‌ಬುಕ್ ಪೇಜ್‌ ಅನ್ನು ನಿರ್ವಹಣೆ ಮಾಡುವ ಮೂಲಕವೇ ನೀವು ಕುಳಿತಲ್ಲಿ ಹಣ ಗಳಿಸಬಹುದಾಗಿದೆ.


ಬ್ಯುಸಿನೆಸ್ ಆರಂಭಿಸಲು ಹದಿಹರೆಯದವರಿಗೆ ಟಿಪ್ಸ್‌ಗಳು


 ಸ್ನೇಹಿತರ-ಕುಟುಂಬಸ್ಥಳ ನೆರವು


ಕ್ರಿಯಾತ್ಮಕತೆ ಎಂದರೆ ಸಾಕಷ್ಟು ಐಡಿಯಾಗಳಾಗಿವೆ. ಯಾವ ಬ್ಯುಸಿನೆಸ್ ಮಾಡಬಹುದು ಎಂಬ ವಿಚಾರಗಳ ಪೂರವೇ ಮನದಲ್ಲಿರಬೇಕು. ಇದಕ್ಕಾಗಿ ಯಾವ ಕ್ಷೇತ್ರ ನಿಮಗಿಷ್ಟ ಎಂಬುದನ್ನು ಆರಿಸಿಕೊಳ್ಳಿ ತದನಂತರ ಈ ಕ್ಷೇತ್ರದಲ್ಲಿ ಯಾವ ಉದ್ಯಮ ಆರಂಭಿಸಬಹುದು ಎಂಬ ಸಾಕಷ್ಟು ವಿಚಾರಗಳನ್ನು ಸಂಗ್ರಹಿಸಿ. ಸ್ನೇಹಿತರ ಕುಟುಂಬದ ಸದಸ್ಯರ ನೆರವನ್ನು ಪಡೆದುಕೊಳ್ಳಿ.


ಇದನ್ನೂ ಓದಿ: Business Idea: ನಿಮ್ಮ ಬ್ಯುಸಿನೆಸ್‌ ವೆಬ್‌ಸೈಟ್‌ ಎಲ್ಲರಿಗೂ ರೀಚ್ ಆಗ್ಬೇಕಾ? ಹಾಗಿದ್ರೆ ಪ್ರಮುಖ 7 SEO ಸಲಹೆಗಳು ಇಲ್ಲಿವೆ

 ರೀಸರ್ಚ್ ಅತೀ ಅಗತ್ಯ


ಐಡಿಯಾ ದೊರೆತಾಯಿತು. ಇದಾದ ನಂತರ ಸಾಧಕ ಬಾಧಕಗಳ ಕುರಿತು ಸಂಶೋಧನೆ ವಿಚಾರ ವಿರ್ಮಶೆಗಳನ್ನು ನಡೆಸಬೇಕು. ಸ್ಪರ್ಧಿಗಳು, ಸೋಲು, ಗೆಲುವು, ಲಾಭ ನಷ್ಟಗಳ ಅಂದಾಜು ಉದ್ಯಮಿಗಳಿಗಿರಬೇಕು.


ಯೋಜನೆ ಅಳವಡಿಸಿ


ಇದೆಲ್ಲಾ ವ್ಯವಸ್ಥಿತವಾಗಿ ಸಂಘಟನೆಗೊಳಿಸಿದ ನಂತರ ನಿಮ್ಮದೇ ಆದ ಬ್ಯುಸಿನೆಸ್ ಆರಂಭಿಸಲು ನೀವು ಸಿದ್ಧರಾದಂತೆ. ಸರಿಯಾದ ವ್ಯಕ್ತಿಗಳನ್ನು ನೇಮಿಸುವ ತಂಡವನ್ನು ನಿರ್ಮಿಸಿ. ಸೂಕ್ತ ಸ್ಥಳ ಆರಿಸಿ. ಬ್ಯುಸಿನೆಸ್‌ ಕುರಿತ ವೆಬ್‌ಸೈಟ್ ಆರಂಭಿಸಿ.
ಹದಿಹರೆಯದವರಿಗೆ ಬ್ಯುಸಿನೆಸ್ ಐಡಿಯಾಗಳು


 ಚೈಲ್ಡ್ ಕೇರ್ ಸೆಂಟರ್‌ಗಳು


ನಿಮ್ಮ ಬಿಡುವಿನ ವೇಳೆಯಲ್ಲಿ ಈ ಉದ್ಯಮವನ್ನು ಆಯ್ದುಕೊಳ್ಳಬಹುದಾಗಿದ್ದು, ಉತ್ತಮ ಸಂಪಾದನೆಯನ್ನು ಮಾಡಬಹುದು. ಉದ್ಯೋಗಕ್ಕೆ ತೆರಳುವ ಮಾತಾಪಿತರು ಇಂತಹ ಕೇಂದ್ರಗಳಲ್ಲಿ ಮಕ್ಕಳನ್ನು ಬಿಟ್ಟುಹೋಗುತ್ತಾರೆ. ಹಾಗಾಗಿ ಇಂತಹ ಕೇಂದ್ರಗಳು ಹೆಚ್ಚು ಬೇಡಿಕೆಯಲ್ಲಿದೆ.


ಕ್ರಾಫ್ಟ್ ಮಾರಾಟ


ಕ್ರಿಯಾತ್ಮಕವಾಗಿ ಕೈಯಿಂದಲೇ ತಯಾರಿಸಿದ ಕ್ರಾಫ್ಟ್‌ಗಳ ಮಾರಾಟವನ್ನು ಹದಿಹರೆಯದವರು ಮಾಡಬಹುದಾಗಿದೆ. ಆಭರಣ, ಗಿಫ್ಟ್ ಕಾರ್ಡ್, ಸ್ಟಿಕ್ಕರ್‌ಗಳು, ಡೆಕೊರೇಶನ್ ಐಟಮ್‌ಗಳು ಹೀಗೆ ಸಾಕಷ್ಟು ಕೈಯಿಂದಲೇ ಮಾಡಿದ ಸಾಮಾಗ್ರಿಗಳನ್ನು ತಯಾರಿಸಿ ಮಾರಬಹುದು.


ಅಕಾಡೆಮಿಕ್ ಟ್ಯೂಟರ್


ನೀವು ಯಾವುದಾದರೂ ವಿಷಯಗಳಲ್ಲಿ ಪರಿಣಿತರು ಎಂದೆನಿಸಿದರೆ ಆ ವಿಷಯವನ್ನು ಬೋಧಿಸುವ ಟ್ಯುಟೋರಿಯಲ್‌ಗಳನ್ನು ನಡೆಸಬಹುದು ಹಾಗೂ ಅಲ್ಲಿಯೇ ಟ್ಯೂಟರ್ ಆಗಿ ಸೇರಬಹುದು. ಆನ್‌ಲೈನ್, ಆಫ್‌ಲೈನ್ ಎರಡೂ ವಿಭಾಗದಲ್ಲಿಯೂ ಈ ಉದ್ಯಮವನ್ನು ನಡೆಸಬಹುದು.


ಕ್ರಾಫ್ಟ್ ಮೇಳಗಳ ಆಯೋಜಕರು


ಮನೆಯಿಂದಲೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವುದು. ಇಷ್ಟವಿಲ್ಲದಿದ್ದರೆ ಇಂತಹ ಉತ್ಪನ್ನಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಆಯೋಜಕರಾಗಿ ಉದ್ಯಮ ಮಾಡಬಹುದು.


ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್


ಇನ್‌ಫ್ಲುಯನ್ಸರ್ ಆಗಿ ಉದ್ಯಮ ಆರಂಭಿಸುವುದು ಅಷ್ಟು ಸುಲಭವಲ್ಲ. ನಿಮ್ಮನ್ನು ಜನರು ತಾಣಗಳಲ್ಲಿ ಫಾಲೋ ಮಾಡಬೇಕು ಎಂದರೆ ಅದೇ ರೀತಿ ನೀವು ನಿಮ್ಮನ್ನು ಪ್ರಸ್ತುತಪಡಿಸಬೇಕು. ಇದರಲ್ಲಿ ಯಶಸ್ವಿಯಾದರೆ ನೀವು ಬ್ರಾಂಡ್​ಗಳ ಜೊತೆ ಕೆಲಸ ಮಾಡಬಹುದು ಹಾಗೂ ಅವುಗಳ ಪ್ರಮೋಟ್​ ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು.


ಇದನ್ನೂ ಓದಿ: Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!


ಯೂಟ್ಯೂಬ್ ವ್ಲಾಗರ್


ಅಂಕಿಅಂಶಗಳ ಪ್ರಕಾರ 86% ದಷ್ಟು ವ್ಲಾಗಿಂಗ್ ವಿಷಯಗಳು ಯೂಟ್ಯೂಬ್‌ನಿಂದ ಬರುತ್ತವೆ ಎಂದಾಗಿದೆ. ಹಾಗಾಗಿ ಯೂಟ್ಯೂಬ್ ವ್ಲಾಗರ್ ಆಗಿ ನೀವು ಉದ್ಯಮ ಆರಂಭಿಸಬಹುದು. ಯೂಟ್ಯೂಬ್​ನಲ್ಲಿ ನಿಮ್ಮ ಹಳ್ಳಿ, ನಗರದ ವಿಶೇಷತೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬಹುದು.


ಬ್ಲಾಗರ್


ನಿಮಗೆ ಬರಣಿಗೆ ಇಷ್ಟವೇ? ಹಾಗಿದ್ದರೆ ವೆಬ್‌ಸೈಟ್ ಆರಂಭಿಸಿ ಬ್ಲಾಗ್ ಬರೆಯಲು ಆರಂಭಿಸಬಹುದು. ತಮ್ಮ ಮೊದಲ ವೃತ್ತಿಯಾಗಿ ಹದಿಹರೆಯದವರು ಬ್ಲಾಗಿಂಗ್ ಅನ್ನು ಆಯ್ದುಕೊಳ್ಳುವುದು ಒಳ್ಳೆಯ ಐಡಿಯಾ ಆಗಿದೆ. ನಿಮ್ಮ ವೆಬ್‌ಸೈಟ್‌ನಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ವಿಷಯವನ್ನು ಮಾತ್ರ ನೀವು ಪೋಸ್ಟ್ ಮಾಡಿದರ ಬೇಗ ಪ್ರಚಲಿತಕ್ಕೆ ಬರಬಹುದು.


ಪೋಡ್‌ಕಾಸ್ಟರ್


ನಿಮ್ಮ ಪೋಡ್‌ಕಾಸ್ಟ್ ಅಥವಾ ವೆಬ್‌ಸೈಟ್‌ನಲ್ಲಿ ಜಾಹೀರಾತುಗಳನ್ನು ಇರಿಸುವ ಮೂಲಕ ಆದಾಯ ಗಳಿಸಬಹುದು. ಮನೆಯಿಂದ ಇದು ಅತ್ಯುತ್ತಮ ಸಣ್ಣ ವ್ಯಾಪಾರ ಕಲ್ಪನೆಗಳಲ್ಲಿ ಒಂದಾಗಿದೆ.


ಕೇಕ್ ಡೆಕೊರೇಟರ್


ಈವೆಂಟ್, ಬೇಕರಿಗಳು, ಇಲ್ಲದಿದ್ದರೆ ಇನ್ನಿತರ ಗ್ರಾಹಕರಿಗಾಗಿ ಕೇಕ್ ಡೆಕೊರೇಟರ್ ಆಗಿ ಉದ್ಯಮ ಆರಂಭಿಸಬಹುದು. ಹದಿಹರೆಯದ ಹುಡುಗಿಯರಿಗೆ ಇದು ಅತ್ಯುತ್ತಮ ಸಣ್ಣ ವ್ಯಾಪಾರ ಕಲ್ಪನೆಗಳಲ್ಲಿ ಒಂದಾಗಿದೆ.


ಹೌಸ್‌ಕೀಪರ್


ಹೌಸ್‌ಕೀಪರ್ ಆಗಿ ಹದಿಹರೆಯದವರು ಒಳ್ಳೆಯ ಹಣ ಸಂಪಾದಿಸಬಹುದು. ವಾರಾಂತ್ಯದಲ್ಲಿ ಬಿಡುವಿನ ವೇಳೆಯಲ್ಲಿ ಇದು ಉತ್ತಮ ಆದಾಯಗಳಿಸುವ ಉದ್ಯಮವಾಗಿದೆ. ನಿಮ್ಮ ನೆರೆಹೊರೆಯಲ್ಲಿ ಮತ್ತು ಅದರಾಚೆಗೆ ಸಾಧ್ಯವಾದಷ್ಟು ಗ್ರಾಹಕರನ್ನು ಪಡೆದುಕೊಳ್ಳುವುದು ನಿಮ್ಮ ಮೊದಲ ಹೆಜ್ಜೆಯಾಗಿರಬೇಕು.


ಆನ್‌ಲೈನ್ ಫ್ಯಾಶನ್ ರಿಸೆಲ್ಲರ್


ವಸ್ತ್ರಗಳ ವಿನ್ಯಾಸ ನಿಮಗೆ ಇಷ್ಟ ಎಂದಾದರೆ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದಾಗಿದೆ. ಸಾಮಾಜಿಕ ತಾಣಗಳ ಸಹಾಯವನ್ನು ಪಡೆಯಬಹುದು.


ಫೋಟೋಗ್ರಾಫರ್ ಅಥವಾ ವಿಡಿಯೋಗ್ರಾಫರ್


ಫೋಟೋಗ್ರಫಿಯಲ್ಲಿ ಉತ್ತಮ ಕೌಶಲ್ಯವುಳ್ಳವರಾದರೆ ಬ್ಯುಸಿನೆಸ್ ಆರಂಭಿಸಬಹುದು. ಅಂತೆಯೇ ವಿವಾಹ ಇನ್ನಿತರ ಕಾರ್ಯಕ್ರಮಗಳಲ್ಲಿ ಫೋಟೋಗ್ರಾಫರ್, ವಿಡಿಯೋಗ್ರಾಫರ್ ಆಗಿ ಕೆಲಸ ಮಾಡಬಹುದು.


ಮೇಕಪ್ ಆರ್ಟಿಸ್ಟ್


ಮೇಕಪ್ ಮಾಡುವುದು ಇಷ್ಟ ಎಂದಾದರೆ, ಮೇಕಪ್ ಆರ್ಟಿಸ್ಟ್ ಬ್ಯುಸಿನೆಸ್ ಕೂಡ ಆರಂಭಿಸಬಹುದು. ಟಿಕ್‌ಟಾಕ್, ಫೇಸ್‌ಬುಕ್, ಯೂಟ್ಯೂಬ್‌ಗಳ ಸಹಾಯವನ್ನು ಪಡೆದುಕೊಂಡು ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಬಹುದು.


ಕಂಪ್ಯೂಟರ್ ಟ್ಯೂಟರ್


ಕಂಪ್ಯೂಟರ್‌ಗಳ ಬಗ್ಗೆ ಪರಿಣಿತಿ ಯುವಜನರಿಗೆ ಸಾಕಷ್ಟಿರುತ್ತದೆ. ಹಾಗಾಗಿ ಕಂಪ್ಯೂಟರ್ ಟ್ಯೂಟರ್ ಆಗಿ ಉದ್ಯಮ ಆರಂಭಿಸಬಹುದು.


ಮ್ಯೂಸಿಷಿಯನ್


ಯಾವುದೇ ಸಂಗೀತ ಉಪಕರಣಗಳಲ್ಲಿ ಒಲವಿದೆ ಹಾಗೂ ಪರಿಣಿತಿ ಹೊಂದಿರುವಿರಿ ಎಂದರೆ ಅದನ್ನು ನುಡಿಸುವ ಮೂಲಕ ಆದಾಯ ಸಂಪಾದಿಸಬಹುದು. ವಿವಾಹ, ಶುಭ ಕಾರ್ಯಕ್ರಮಗಳಿಗೆ ಸಂಗೀತ ವಾದಕರಿಗೆ ಬೇಡಿಕೆ ಇದ್ದೇ ಇದೆ.


ವೆಬ್‌ಸೈಟ್ ಡೆವಲಪರ್


ವರ್ಡ್‌ಪ್ರೆಸ್ ಬಗ್ಗೆ ಜ್ಞಾನ ಹೊಂದಿದ್ದರೆ, ಕೋಡಿಂಗ್ ಬಗ್ಗೆ ಅರಿತಿದ್ದರೆ ವೆಬ್ ಡೆವಲಪ್‌ಮೆಂಟ್ ಬ್ಯುಸಿನೆಸ್ ಆರಂಭಿಸಬಹುದು.


ಗ್ರಾಫಿಕ್ ಡಿಸೈನರ್


ವಿನ್ಯಾಸದ ಬಗ್ಗೆ ಮೂಲ ಜ್ಞಾನವಿದ್ದರೆ ಈ ಉದ್ಯಮ ಸೂಕ್ತವಾಗಿದೆ. ಗ್ರಾಫಿಕ್ಸ್ ಡಿಸೈನಿಂಗ್ ಕೂಡ ಬೇಡಿಕೆಯ ಕ್ಷೇತ್ರವಾಗಿದೆ.


ಬರಹಗಾರರು


ಆನ್‌ಲೈನ್ ಬ್ಯುಸಿನೆಸ್ ನಿಮ್ಮ ಆದ್ಯತೆಯಾಗಿದ್ದರೆ ಬರಹಗಾರರಾಗಿ ಉದ್ಯೋಗ ಆರಂಭಿಸಬಹುದು. ವೆಬ್‌ಸೈಟ್, ಯೂಟ್ಯೂಬ್ ವಿಡಿಯೋಗಳು, ಸ್ಕ್ರಿಪ್ಸ್ ಮೊದಲಾದ ವಿಷಯಗಳಲ್ಲಿ ಬರವಣಿಗೆ ಆರಂಭಿಸಬಹುದು.


ಸ್ಕ್ರಿಪ್ಟ್‌ವ್ರೈಟರ್


ಸ್ಕ್ರಿಪ್ಟ್ ಬರೆಯುವುದರಲ್ಲಿ ನೀವು ನಿಷ್ಣಾತರು ಎಂದರೆ ಸಿನಿಮಾ, ಧಾರವಾಹಿ ಕ್ಷೇತ್ರದಲ್ಲಿ ಬ್ಯುಸಿನೆಸ್ ಸಾಕಷ್ಟು ಅವಕಾಶಗಳಿದ್ದು, ಯುವಕರಿಗೆ ಉತ್ತಮ ಕ್ಷೇತ್ರವಾಗಿದೆ.

Published by:Rajesha M B
First published: