Small Business: ಸಣ್ಣ ವ್ಯಾಪಾರೋದ್ಯಮಗಳನ್ನು ಹೇಗೆ ಆರಂಭಿಸಬಹುದು? ಪಾಲಿಸಬೇಕಾದ ಸಲಹೆ ಸೂಚನೆಗಳೇನು?

ಸಾಂದರ್ಬಿಕ ಚಿತ್ರ

ಸಾಂದರ್ಬಿಕ ಚಿತ್ರ

ಹೊಸದಾಗಿ ವ್ಯಾಪಾರ ಕ್ಷೇತ್ರಕ್ಕೆ ಕಾಲಿಡುವವರು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ನಷ್ಟಗಳಿಗೂ ಒಳಗಾಗುವ ಪ್ರಮೇಯ ಕೂಡ ಬರುತ್ತದೆ.

  • Trending Desk
  • 5-MIN READ
  • Last Updated :
  • Share this:

ಹೊಸದಾಗಿ ವ್ಯಾಪರ (Business) ಆರಂಭಿಸುವ ವ್ಯಾಪಾರಸ್ಥರು ಮಾರುಕಟ್ಟೆಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಹೊಸದಾಗಿ ವ್ಯಾಪಾರ ಕ್ಷೇತ್ರಕ್ಕೆ ಕಾಲಿಡುವವರು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ನಷ್ಟಗಳಿಗೂ ಒಳಗಾಗುವ ಪ್ರಮೇಯ ಕೂಡ ಬರುತ್ತದೆ. ಈ ಸಮಯದಲ್ಲಿ (Time) ಮುನ್ನುಗ್ಗುವ ಛಲ ಅವರಲ್ಲಿರಬೇಕು ಹಾಗೂ ನಷ್ಟವನ್ನೇ ಲಾಭವನ್ನಾಗಿ ಪರಿವರ್ತಿಸುವ ತಂತ್ರ ಅವರಿಗೆ ಗೊತ್ತಿರಬೇಕು ಎಂಬುದು ವ್ಯಾಪಾರ ಪರಿಣಿತರ ಸಲಹೆಯಾಗಿದೆ. ವ್ಯಾಪಾರದಲ್ಲಿ ಎದುರಾಗುವ ಅಡ್ಡಿಗಳು ಡಾರ್ಲಿಂಗ್ & ಕೊ. (Darlyng & Co.) ಸಹ ಸ್ಥಾಪಕರು ಹಾಗೂ ಸಿಇಒ (CEO) ತಾರಾ ಡಾರ್ನ್ಲಿ, ಉದ್ಯಮದಾರರಿಗೆ ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.


ಅವರು ಹೇಳುವ ಪ್ರಕಾರ ಸಣ್ಣ ವ್ಯಾಪಾರಗಳಿಗೆ ಸಾಲ ಪಡೆದುಕೊಳ್ಳುವುದು ಒಮ್ಮೊಮ್ಮೆ ಕಷ್ಟಕರ ಎಂದೆನಿಸುತ್ತದೆ. ತಮ್ಮ ಉದ್ಯಮದ ಅನಿಸಿಕೆಗಳನ್ನು ಹಂಚಿಕೊಂಡಿರುವ ಡಾರ್ನ್ಲಿ ತಾವು 2014 ರಲ್ಲಿ ಮೊದಲ ಉತ್ಪನ್ನವನ್ನು ಆರಂಭಿಸಿದಾಗ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.


ಶಿಶುಗಳಿಗಾಗಿ ಮಿಟ್ ಎಂಬ ಹಲ್ಲುಜ್ಜುವ ಕೈವಸಿನ ಉದ್ಯಮವನ್ನು ಆರಂಭಿಸಿದ ಸಮಯದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳಲು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಬರೋಬ್ಬರಿ 40 ಲಕ್ಷಕ್ಕೆ ಮಾರಾಟವಾಗಿದೆ ಈ ತೇಗದ ಮರ, ಸಾರ್ವಕಾಲಿಕ ದಾಖಲೆ ಬೆಲೆ ಪಡೆದ ಮರದ ವಿಶೇಷತೆಯೇನು?


ಸಣ್ಣ ವ್ಯಾಪಾರಗಳಿಗೆ ಯಾರೂ ಸಾಲ ನೀಡಲು ಮುಂದೆ ಬರುವುದಿಲ್ಲ. ಹಾಗಾಗಿ ವ್ಯಾಪಾರಕ್ಕೆ ಬೇಕಾದ ಹಣ ಹೊಂದಿಕೆಯನ್ನು ಒಮ್ಮೊಮ್ಮೆ ವ್ಯಾಪಾರಸ್ಥರೇ ಮಾಡಬೇಕಾಗುತ್ತದೆ ಎಂಬುದು ತಾರಾ ಡಾರ್ನ್ಲಿ ಅನುಭವವಾಗಿದೆ. ಇನ್ನು ತಾರಾ ಡಾರ್ನ್ಲಿ ಹೊಸ ವ್ಯಾಪಾರಸ್ಥರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.


ನಿಮ್ಮ ಮಾರುಕಟ್ಟೆ ಹಾಗೂ ಮಾರಾಟ ಮಾಧ್ಯಮಗಳನ್ನು ಅರಿತುಕೊಳ್ಳಿ


ಇನ್‌ಸ್ಟಾದಂತಹ ಸಾಮಾಜಿಕ ತಾಣಗಳ ಸಹಾಯವನ್ನು ಪಡೆದುಕೊಂಡು ಉತ್ಪನ್ನಗಳನ್ನು ಪ್ರಚಾರಪಡಿಸಬಹುದು ಎಂಬುದು ತಾರಾ ಅಭಿಮತವಾಗಿದೆ.


ಮಾರಾಟಕ್ಕೂ ಮೊದಲು ಗ್ರಾಹಕರ ಕಮ್ಯುನಿಟಿಯನ್ನು ಮಾಡಿಕೊಳ್ಳಿ ಎಂಬುದು ಅವರ ಸಲಹೆಯಾಗಿದೆ ಇದರಿಂದ ಕೂಡಲೇ ಉತ್ಪನ್ನಗಳನ್ನು    ಪ್ರಚಾರಪಡಿಸಬಹುದು ಎಂಬುದು ಅವರ ಸಲಹೆಯಾಗಿದೆ.


ಅಮೆಜಾನ್‌ನಂತಹ ರಿಟೇಲ್ ತಾಣಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಕೂಡ ಗೆಲುವಿನ ಕೀಲಿ ಕೈಯಾಗಿದೆ ಎಂದು ತಾರಾ ಸಲಹೆ ನೀಡಿದ್ದಾರೆ.


ಉತ್ಪನ್ನಗಳನ್ನು ಮರುಖರೀದಿಸುವಂತೆ ಮಾಡುವುದು


ಡಾರ್ನ್ಲಿಯವರು ಶಿಶು ಉತ್ಪನ್ನವಾದ ಯಮ್ಮಿ ಮಿಟ್ ಅನ್ನು ಪ್ರಸ್ತುತಪಡಿಸಿದಾಗ ಆರಂಭದಲ್ಲಿ ಇದ್ದಂತಹ ಹೆದರಿಕೆ ಹಿಂಜರಿಕೆ ಮಾಯವಾಯಿತು ಎಂದು ತಿಳಿಸಿದ್ದಾರೆ.


ಗ್ರಾಹಕರು ಈ ಉತ್ಪನ್ನಕ್ಕಾಗಿ ಪುನಃ ಪುನಃ ಅವರ ಬಳಿ ಬರುತ್ತಿದ್ದರು ಎಂದು ತಿಳಿಸಿದ್ದಾರೆ. ಗ್ರಾಹಕರು ನಿಮ್ಮಿಂದ ಉತ್ಪನ್ನಗಳನ್ನು ಖರೀದಿಸುವಂತೆ ಏನಾದರೊಂದು ಕಾರಣವನ್ನು ಸೃಷ್ಟಿಸಿ ಎಂದು ತಾರಾ ಸಲಹೆ ನೀಡುತ್ತಾರೆ.


ಅಮೆಜಾನ್‌ನ ಸೆಲ್ಲರ್ ಸೆಂಟ್ರಲ್ ಬೋರ್ಡ್‌ನ ವಿಡಿಯೋಗಳನ್ನು ಪರಿಶೀಲಿಸುವುದು


ಅಮೆಜಾನ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದಾಗ ತಾರಾ ಡಾರ್ನ್ಲಿ ಮೊದಲಿಗೆ ಹಿಂಜರಿಯುತ್ತಿದ್ದರು ಎಂಬುದನ್ನು ಸಮ್ಮತಿಸಿದ್ದಾರೆ. ಈ ಸಮಯದಲ್ಲಿ ಅಮೆಜಾನ್‌ನ ಸೆಲ್ಲರ್ ಸೆಂಟರ್ ಬೋರ್ಡ್‌ನಲ್ಲಿನ ಮಾರಾಟಗಾರರ ವಿಡಿಯೋಗಳನ್ನು ನೋಡಿಕೊಂಡೇ ಸಲಹೆ ಸೂಚನೆಗಳನ್ನು ಪಡೆದುಕೊಂಡರು ಎಂಬುದನ್ನು ತಿಳಿಸಿದ್ದಾರೆ.


ಹೊಸ ಮಾರಾಟಗಾರರಿಗೆ ವ್ಯಾಪಾರ ಆರಂಭಿಸುವುದು ಹೇಗೆ ಹಾಗೂ ವ್ಯಾಪಾರವು ಗ್ರಾಹಕರಿಗೆ ತಲುಪುವಂತೆ ಮಾಡುವುದು ಹೇಗೆ ಎಂಬ ಟ್ರಿಕ್‌ಗಳನ್ನು ಒದಗಿಸುತ್ತದೆ ಎಂಬುದು ತಾರಾ ಸಲಹೆಯಾಗಿದೆ. ಇದೇ ವಿಡಿಯೋಗಳನ್ನು ನೋಡಿ ನಿಮ್ಮ ವ್ಯಾಪಾರಗಳನ್ನು ಅಭಿವೃದ್ಧಿಪಡಿಸಿ ಎಂಬುದು ತಾರಾ ಅವರ ಸಲಹೆಯಾಗಿದೆ.


ಅಮೆಜಾನ್ ಲೆಂಡಿಂಗ್ ಬಗ್ಗೆ ಅನ್ವೇಷಿಸಿ


ಅಮೆಜಾನ್ ಲೆಂಡಿಂಗ್ ವ್ಯಾಪಾರಿಗಳಿಗೆ ಸಾಲ ನೀಡುವ ವ್ಯವಸ್ಥೆಯಾಗಿದೆ. ಮಾರಾಟಗಾರರ ಗುರಿಗಳನ್ನು ಅವಲಂಬಿಸಿ ಹಲವಾರು ವಿಭಿನ್ನ ಸಾಲದ ಆಯ್ಕೆಗಳನ್ನು ಒದಗಿಸುತ್ತದೆ.


ಕಾಲಾವಧಿಯ ಲೋನ್‌ಗಳನ್ನು ವ್ಯಾಪಾರಿಗಳು ಈ ವಿಭಾಗದಲ್ಲಿ ಪಡೆದುಕೊಂಡು ಅದನ್ನು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳಬಹುದು ಎಂಬುದು ತಾರಾ ಸಲಹೆಯಾಗಿದೆ.


ತಮ್ಮ ಸಂಸ್ಥೆಯಾದ ಡಾರ್ಲಿಂಗ್ & ಕೊ ಕೂಡ ಅಮೆಜಾನ್ ಲೆಂಡಿಂಗ್‌ನಿಂದ ಸಾಲವನ್ನು ಪಡೆದುಕೊಂಡಿರುವುದಾಗಿ ತಿಳಿಸುವ ತಾರಾ ಅವರು ಅಮೆಜಾನ್ಸಂ ಸ್ಥೆಗೆ ಸಾಲ ಪಡೆದುಕೊಳ್ಳುವ ಉದ್ದೇಶ ಹಾಗೂ ಪಾವತಿಯ ವಿವರಗಳನ್ನು ವಿವರವಾಗಿ ತಿಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೆಲವೇ ಗಂಟೆಗಳಲ್ಲಿ ಬ್ಯಾಂಕ್ ಖಾತೆಗೆ ಈ ಸಾಲ ದೊರೆಯುತ್ತದೆ ಎಂದು ತಾರಾ ಡಾರ್ನ್ಲಿ ತಿಳಿಸಿದ್ದಾರೆ.
ಯಾವುದೇ ಮುಂಗಡ ಮೇಲಾಧಾರವಿಲ್ಲದೆ ತಮ್ಮ ವ್ಯಾಪಾರವನ್ನು ಬೆಳೆಸಲು ಬಯಸುವ ಅರ್ಹ ಹೊಸ ಮಾರಾಟಗಾರರು ವ್ಯಾಪಾರಿ ನಗದು ಮುಂಗಡದ ಲಾಭವನ್ನು ಪಡೆಯಬಹುದು ಎಂದು ತಾರಾ ಸಲಹೆ ನೀಡುತ್ತಾರೆ.

First published: