Business Tips: ಸಣ್ಣ ವ್ಯಾಪಾರ ಆರಂಭಿಸುವ ಮುನ್ನ ಈ ಆರು ಅಂಶಗಳನ್ನು ತಿಳಿದುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಂಡವಾಳ ಹೂಡಿಕೆ ಇಲ್ಲದೆ ಯಾವುದೇ ಬ್ಯುಸಿನೆಸ್ ಕೂಡ ಲಾಭಕರವಾಗಿ ಸಾಗದು. ಹಾಗಾಗಿ ಹಣದ ಪೂರೈಕೆ ಬ್ಯುಸಿನೆಸ್‌ಗೆ ಅತ್ಯಗತ್ಯವಾಗಿದೆ. ಹಣ ಅಗತ್ಯವಾದರೂ ಹಣದ ಮೂಲವನ್ನು ಅರಿತುಕೊಂಡು ಅದನ್ನು ಬಳಸಿಕೊಳ್ಳುವುದು ಒಳಿತಾಗಿದೆ.

  • Share this:

ಸಾಂಕ್ರಾಮಿಕದ ಸಮಯದಲ್ಲಿ (Pandemic) ಅನೇಕ ಬ್ಯುಸಿನೆಸ್‌ಗಳು ಸಂಸ್ಥೆಗಳು ನಷ್ಟಕ್ಕೊಳಗಾದವು (Loss) ಹಾಗೂ ಇನ್ನು ಕೆಲವನ್ನು ಮುಚ್ಚಲೇಬೇಕಾಯಿತು. ಅದಾಗ್ಯೂ ಒಂದು ಸಮೀಕ್ಷೆಯ (Survey) ಪ್ರಕಾರ ಸಣ್ಣ ವ್ಯವಹಾರಗಳು ನಷ್ಟಕ್ಕೆ (Business Loss) ಒಳಗಾದರೂ ಅದರ ಪ್ರಮಾಣ ಅತ್ಯಂತ ಕಡಿಮೆ ಮಟ್ಟದ್ದು ಎಂಬುದು ತಿಳಿದು ಬಂದಿದೆ. ಕೋವಿಡ್ ಸಮಯದಲ್ಲಿ (COVID Pandemic) ನಷ್ಟಕ್ಕೊಳಗಾದರೂ ಸಮತೋಲಿತ ನೆಲೆಯಲ್ಲಿ ನಿರ್ವಹಣೆ ನಡೆಸಲು ಈ ಸಣ್ಣ ಉದ್ಯಮಗಳು (Small Business) ಕೆಲವೊಂದು ತಂತ್ರಗಳನ್ನು ಅನುಸರಿಸಿದ್ದವು ಹಾಗೆಯೇ ಅವುಗಳನ್ನು ನೀತಿ ಮಂತ್ರದಂತೆ ತಮ್ಮ ವ್ಯವಹಾರದಲ್ಲಿ ಅಳವಡಿಸಿಕೊಂಡಿದ್ದವು.


ಸಣ್ಣ ಉದ್ಯಮಗಳು ಅನುಸರಿಸುವ ತಂತ್ರಗಳು


ಹಾಗಿದ್ದರೆ ಆ ಸಲಹೆಗಳೇನು ಮತ್ತು ಇನ್ನು ಹೊಸದಾಗಿ ಕುಡಿಯೊಡೆಯುತ್ತಿರುವ ಸಂಸ್ಥೆಗಳು ಇದರಿಂದ ಏನು ಅರಿತುಕೊಳ್ಳಬಹುದು ಹಾಗೂ ನಷ್ಟವನ್ನು ಹೇಗೆ ಸರಿದೂಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.


ನಿಯಮ ಅತೀ ಅಗತ್ಯ


ವಹಿವಾಟು ವ್ಯಾಪಾರ ಎಂದಾಗ ಅದರದ್ದೇ ಆದ ಅಡ್ಡಿ ಆತಂಕಗಳು ಲಾಭ ನಷ್ಟಗಳು ಇದ್ದೇ ಇರುತ್ತದೆ. ಆದರೆ ಇವುಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಒಬ್ಬ ವ್ಯಾಪಾರೋದ್ಯಮಿಗಿರಬೇಕು. ನಿಮ್ಮ ಉದ್ಯಮ ಸಣ್ಣದಾಗಿರಲಿ ದೊಡ್ಡದಾಗಿರಲಿ ಕೆಲವೊಂದು ನಿಯಮಗಳನ್ನು ರೂಪಿಸಿಕೊಂಡು ಅದಕ್ಕೆ ತಕ್ಕಂತೆ ಅನುಸರಿಸಬೇಕು.


ನಿಮಗೆ ನೀವೇ ಪ್ರಶ್ನೆಗಳನ್ನು ಹಾಕಿಕೊಳ್ಳಿ


ಅಂದರೆ ಯಾವುದೇ ಉದ್ಯಮ ಆರಂಭಿಸುವ ಮುನ್ನ ನಿಮ್ಮಲ್ಲಿಯೇ ಕೆಲವೊಂದು ಪ್ರಶ್ನೆಗಳನ್ನು ಹಾಕಿಕೊಳ್ಳಿ. ಈ ಬ್ಯುಸಿನೆಸ್ ಅನ್ನು ಏಕೆ ಆರಂಭಿಸುತ್ತಿದ್ದೇನೆ? ಉದ್ದೇಶವೇನು? ಲಾಭ ನಷ್ಟಗಳನ್ನು ಹೇಗೆ ಎದುರಿಸುವುದು? ಮೊದಲಾದ ಲೆಕ್ಕಾಚಾರಗಳನ್ನು ಹಾಕಿಕೊಂಡೇ ವ್ಯಾಪಾರಕ್ಕೆ ಇಳಿಯಿರಿ. ನೀವು ಹೂಡಿದಷ್ಟು ಬಂಡವಾಳ ಮೊದಲ ಬಾರಿಗೆ ದೊರೆಯದೇ ಇರಬಹುದು ಆದರೆ ಪ್ರಯತ್ನ ನಿರಂತರವಾಗಿರಬೇಕು.


Six tips for small business Owners stg mrq
ಸಾಂದರ್ಭಿಕ ಚಿತ್ರ


ನಿಮ್ಮ ಬ್ಯುಸಿನೆಸ್ ಯೋಜನೆಯನ್ನು ಪರಿಶೀಲಿಸಿ


ಯಾವುದೇ ಬ್ಯುಸಿನೆಸ್ ಮಾಡಬೇಕಾದರೂ ಅದಕ್ಕೂ ಮುನ್ನ ಸರಿಯಾದ ಪ್ಲಾನಿಂಗ್‌ನ ಅಗತ್ಯವಿರುತ್ತದೆ. ಉದ್ಯಮಕ್ಕೆ ಕೈಹಾಕಿದ ಮೇಲೆ ಹಿಂದಕ್ಕೆ ಬರುವ ಮಾತಿರಬಾರದು ಬರೀ ಮುಂದಕ್ಕೆ ಅಭಿವೃದ್ಧಿ ಕಂಡುಕೊಳ್ಳುವುದೇ ಧ್ಯೇಯವಾಗಿರಬೇಕು.


ಹಾಗಾಗಿ ಉದ್ಯಮ ಆರಂಭಿಸುವ ಮುನ್ನ ಸರಿಯಾದ ರೀಸರ್ಚ್‌ಗಳನ್ನು ನಡೆಸಿ. ಸ್ನೇಹಿತರ, ಕುಟುಂಬಸ್ಥರ, ಮಾರುಕಟ್ಟೆ ಪರಿಣಿತರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ.


ಸಣ್ಣದಾಗಿ ಬ್ಯುಸಿನೆಸ್ ಆರಂಭಿಸಿ ಇದರಿಂದ ಲಾಭ ನಷ್ಟಗಳ ಸರಿಯಾದ ಲೆಕ್ಕಾಚಾರ ಅರಿವಿಗೆ ಬರುತ್ತದೆ ಅಂತೆಯೇ ಬ್ಯುಸಿನೆಸ್ ಹೇಗೆ ಮಾಡಬೇಕು ಎಂಬ ಟೆಕ್ನಿಕ್ ಗೊತ್ತಾಗುತ್ತದೆ ಎಂಬುದು ತಜ್ಞರ ಸಲಹೆಯಾಗಿದೆ.


ಸಂಪರ್ಕ


ಬ್ಯುಸಿನೆಸ್‌ನಲ್ಲಿ ಸಂಪರ್ಕಗಳ ಅಗತ್ಯ ಅತ್ಯಂತ ಮಹತ್ವವಾದುದು. ನೀವು ಹೆಚ್ಚು ಹೆಚ್ಚು ಸಂಪರ್ಕಗಳನ್ನು ರಚಿಸಿಕೊಂಡಂತೆ ನಿಮ್ಮ ಬ್ಯುಸಿನೆಸ್ ಕೂಡ ವೃದ್ಧಿಯಾಗುತ್ತದೆ ಹಾಗೂ ವ್ಯವಹಾರ ಜ್ಞಾನ ಕೂಡ ಅಪಾರವಾಗುತ್ತದೆ.
ಬ್ಯುಸಿನೆಸ್‌ನಲ್ಲಿ ಹೆಸರು ಮಾಡಬೇಕು ಎಂದಾದರೆ ನೆಟ್‌ವರ್ಕಿಂಗ್ ಅತೀ ಅಗತ್ಯವಾದುದು. ಇದುವೇ ನಿಮ್ಮನ್ನು ವ್ಯವಹಾರದಲ್ಲಿ ಮುಂದಿನ ಸ್ತರಕ್ಕೆ ಕೊಂಡೊಯ್ಯುತ್ತದೆ.


ಬ್ಯುಸಿನೆಸ್ ಬ್ಯಾಂಕರ್‌ನೊಂದಿಗೆ ಮರುಸಂಪರ್ಕ ಸಾಧಿಸುವುದು


ಬ್ಯುಸಿನೆಸ್‌ಗೆ ಬ್ಯಾಂಕ್‌ಗಳು ಹಣ ಸಹಾಯ ಮಾಡುತ್ತವೆ. ಇದೇ ಸಮಯದಲ್ಲಿ ನಿಮ್ಮ ಬ್ಯಾಂಕ್‌ನೊಂದಿಗೆ ಆಗಾಗ್ಗೆ ಬದಲಾಗುವ ಪ್ಲಾನ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಿ. ಲೋನ್‌ಗಳನ್ನು ಆದಷ್ಟು ಮುಗಿಸಿಕೊಳ್ಳುವಂತೆ ಯೋಜಿಸಿಕೊಳ್ಳಿ. ಬ್ಯಾಂಕ್‌ಗಳಲ್ಲಿ ಬಡ್ಡಿದರ ಹೆಚ್ಚಿದ್ದರೆ ನಿಮ್ಮ ಪರಿಚಯಸ್ಥರ ಬಳಿ ಸಾಲವಾಗಿ ಹಣ ಪಡೆದುಕೊಳ್ಳಿ


ಪರಿಣಿತರ ನೆರವಿನಿಂದ ಜ್ಞಾನ ವೃದ್ಧಿಸಿಕೊಳ್ಳಿ


ವ್ಯಾಪಾರದಲ್ಲಿ ನಿಷ್ಣಾತನಾಗಿರಬೇಕು ಎಂದಾದರೆ ಆತ ಸಾಕಷ್ಟು ಅನುಭವ ಗಳಿಸಿದವನಾಗಿರಬೇಕು. ಸೋಲುಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಗೆಲುವಿನ ಮಹಲ್ ಕಟ್ಟಿದವರಾಗಿರಬೇಕು. ಇಂತಹ ನಿಪುಣರ ಸಂಪರ್ಕ ನಿಮ್ಮ ಬ್ಯುಸಿನೆಸ್‌ಗೆ ಉತ್ತಮ ಬೇಸ್ ಪಾಯಿಂಟ್ ಆಗಿರುತ್ತದೆ.


ಇದನ್ನೂ ಓದಿ: Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!


ಆರ್ಥಿಕ ಯೋಜನೆಗಳನ್ನು ವಿಮರ್ಶಿಸಿಕೊಳ್ಳಿ


ಬಂಡವಾಳ ಹೂಡಿಕೆ ಇಲ್ಲದೆ ಯಾವುದೇ ಬ್ಯುಸಿನೆಸ್ ಕೂಡ ಲಾಭಕರವಾಗಿ ಸಾಗದು. ಹಾಗಾಗಿ ಹಣದ ಪೂರೈಕೆ ಬ್ಯುಸಿನೆಸ್‌ಗೆ ಅತ್ಯಗತ್ಯವಾಗಿದೆ. ಹಣ ಅಗತ್ಯವಾದರೂ ಹಣದ ಮೂಲವನ್ನು ಅರಿತುಕೊಂಡು ಅದನ್ನು ಬಳಸಿಕೊಳ್ಳುವುದು ಒಳಿತಾಗಿದೆ.


ಸಾಂದರ್ಭಿಕ ಚಿತ್ರ


ಇಂದು ಅನೇಕ ಬ್ಯಾಂಕ್‌ಗಳು, ಹೂಡಿಕೆ ಸಂಸ್ಥೆಗಳು, ಫಿನಾನ್ಸ್ ಕಂಪನಿಗಳು ಉದ್ಯೋಗಗಳಿಗಾಗಿ ಆಕರ್ಷಕ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಆದರೆ ಇಂತಹ ಕಡೆಗಳಿಂದ ಹಣ ಪಡೆದುಕೊಳ್ಳುವ ಮೊದಲು


ವಿಚಾರ ವಿಮರ್ಶೆ ನಡೆಸಿ ನಂತರವೇ ಹಣವನ್ನು ಪಡೆದುಕೊಳ್ಳಿ. ಸಾಲಗಳನ್ನು ಆದಷ್ಟು ಬೇಗನೇ ಮುಗಿಸಿಕೊಳ್ಳಿ.

Published by:Mahmadrafik K
First published: