ಇನ್ಮುಂದೆ ವ್ಯವಹಾರ ಮತ್ತಷ್ಟು ಸುಲಭ: E-Bill Processing System ಪ್ರಾರಂಭ

ಪೂರೈಕೆದಾರರು ಮತ್ತು ಗುತ್ತಿಗೆದಾರರು ಈಗ ತಮ್ಮ ಕ್ಲೈಮ್(Claim) ಅನ್ನು ಆನ್‌ಲೈನ್‌(Online)ನಲ್ಲಿ ಸಲ್ಲಿಸಲು ಸಾಧ್ಯವಾಗುತ್ತದೆ, ಅದನ್ನು ನೈಜ-ಸಮಯದ ಆಧಾರದ ಮೇಲೆ ಟ್ರ್ಯಾಕ್ ಮಾಡಬಹುದು ”ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನಿರ್ಮಲಾ ಸೀತಾರಾಮನ್​

ನಿರ್ಮಲಾ ಸೀತಾರಾಮನ್​

  • Share this:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Union Finance Minister Nirmala Sitharaman) ಅವರು ಮಾರ್ಚ್​ 1ರಂದು ಎಲೆಕ್ಟ್ರಾನಿಕ್ ಬಿಲ್(Electronic Bill ) (ಇ-ಬಿಲ್) ಸಂಸ್ಕರಣಾ ವ್ಯವಸ್ಥೆಯನ್ನು ಸುಲಭ ವ್ಯಾಪಾರ ಮತ್ತು ಡಿಜಿಟಲ್ ಇಂಡಿಯಾ(Digital India) ಪರಿಸರ ವ್ಯವಸ್ಥೆಯ ಭಾಗವಾಗಿ ಪ್ರಾರಂಭಿಸಲಿದ್ದಾರೆ. ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ 2022-23 ರಲ್ಲಿ(Union Budget 2022-23), ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ಅವರು ಈ ಪ್ರಮುಖ ಇ-ಬಿಲ್​ ಉಪಕ್ರಮವನ್ನು ಘೋಷಿಸಿದ್ದರು.“2022-23 ರ ಬಜೆಟ್ ಘೋಷಣೆ, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಇ-ಬಿಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಪಾರದರ್ಶಕತೆ(Transparency), ದಕ್ಷತೆ(Efficiency) ಮತ್ತು ಮುಖರಹಿತ-ಕಾಗದರಹಿತ(Faceless- Paperless)  ಪಾವತಿ ವ್ಯವಸ್ಥೆಯನ್ನು ಹೆಚ್ಚಿಸಲು ಇದು ಮುಂದಿನ ಹೆಜ್ಜೆಯಾಗಿದೆ. ಪೂರೈಕೆದಾರರು ಮತ್ತು ಗುತ್ತಿಗೆದಾರರು ಈಗ ತಮ್ಮ ಕ್ಲೈಮ್(Claim) ಅನ್ನು ಆನ್‌ಲೈನ್‌(Online)ನಲ್ಲಿ ಸಲ್ಲಿಸಲು ಸಾಧ್ಯವಾಗುತ್ತದೆ, ಅದನ್ನು ನೈಜ-ಸಮಯದ ಆಧಾರದ ಮೇಲೆ ಟ್ರ್ಯಾಕ್ ಮಾಡಬಹುದು ”ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

46ನೇ ಸಿವಿಲ್​ ಅಕೌಂಟ್ಸ್​ ಡೇ ಸೆಲೆಬ್ರೇಷನ್​!

ಎಲೆಕ್ಟ್ರಾನಿಕ್ ಬಿಲ್ ಸಂಸ್ಕರಣಾ ವ್ಯವಸ್ಥೆ ಬಿಡುಗಡೆಯು ರಾಷ್ಟ್ರ ರಾಜಧಾನಿಯಲ್ಲಿ 46 ನೇ ನಾಗರಿಕ ಖಾತೆಗಳ ದಿನಾಚರಣೆಯ ಭಾಗವಾಗಿದೆ. ನವದೆಹಲಿಯ ಡಾ ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತರಾಮ್​ ಈ ಕಾರ್ಯಕ್ಕೆ ಚಾಲನೆ ನೀಡಿಲಿದ್ದಾರೆ. ಈ ಇ-ಬಿಲ್​ ವ್ಯವಸ್ಥೆಯಿಂದ ಎಲ್ಲಾ ರೀತಿಯ ಬ್ಯುಸಿನೆಸ್​ಗಳಿಗೆ ಬಹಳ ಉಪಯೋಗವಾಗಲಿದೆ. ಯಾವುದೇ ಮುಚ್ಚು ಮರೆಯಿಲ್ಲದೇ ವ್ಯವಹಾರ ನಡೆಯಲಿದೆ.

ಇದನ್ನೂ ಓದಿ: ಸೆಬಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಮಾಧವಿ ಪುರಿ ಬುಚ್ ನೇಮಕ

20.79 ಲಕ್ಷ ಕೋಟಿ ಆದಾಯದ ನಿರೀಕ್ಷೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸಕ್ತ ಹಣಕಾಸು ವರ್ಷದಲ್ಲಿ 20.79 ಲಕ್ಷ ಕೋಟಿ ಆದಾಯದ ನಿರೀಕ್ಷೆ ಹೊಂದಿದ್ದಾರೆ. ಈ ವರ್ಷದ ಓಟ್ಟು ಖರ್ಚು,ವೆಚ್ಚ 37.7 ಲಕ್ಷ ಕೋಟಿ ಎಂದು ಪರಿಷ್ಕೃತವಾಗಿ ಅಂದಾಜಿಸಲಾಗಿದೆ.ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 9.38 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಕೊರತೆ ಎದುರಾಗಲಿದೆ ಎಂದು ನಿಯಂತ್ರಕ ಜನರಲ್ ಆಫ್ ಅಕೌಂಟ್ಸ್-ಸಿಜಿಎ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಏರಿಕೆ ಕಂಡ ಎಲ್​ಪಿಜಿ ಗ್ಯಾಸ್, ಮುಂದಿನ ವಾರ ಕಾದಿದೆ ಮತ್ತೊಂದು ಶಾಕ್!

ವಿತ್ತ ಸಚಿವರು ಈ ಹಿಂದೆ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು 15.07 ಲಕ್ಷ ಕೋಟಿ ರೂ. ಅಂದರೆ ಜಿಡಿಪಿಯ ಶೇ.6.8ರಷ್ಟು ಎಂದು ಅಂದಾಜಿಸಿದ್ದರು. ಪರಿಷ್ಕೃತ ಅಂದಾಜಿನಲ್ಲಿ, ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯನ್ನು 19.91 ಲಕ್ಷ ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ, ಇದು ಜಿಡಿಪಿಯ ಶೇ. 6.9ರಷ್ಟು ಆಗಿದೆ. ವಿತ್ತೀಯ ಕೊರತೆಯು ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸವಾಗಿದೆ. ಈ ವರ್ಷದ ಪರಿಷ್ಕೃತ ಅಂದಾಜಿನಲ್ಲಿ ಖರ್ಚು, ವೆಚ್ಚಗಳು 34.83 ಲಕ್ಷ ಕೋಟಿ ರೂ. ಆಗಲಿದೆ. ಆದರೆ, ಹಣಕಾಸು ಸಚಿವರು ತಮ್ಮ ಬಜೆಟ್‌ನಲ್ಲಿ 37.7 ಲಕ್ಷ ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಬಜೆಟ್‌ ಗಾತ್ರದ ಮೊತ್ತ 2.87 ಲಕ್ಷ ಕೋಟಿ ರೂ.ಹೆಚ್ಚಾಗಲಿದೆ.


ಉಕ್ರೇನ್‌ ಬಿಕ್ಕಟ್ಟು ರಫ್ತು ಬಗ್ಗೆ ಸೀತಾರಾಮನ್‌ ಆತಂಕ

ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ರಫ್ತು ವಹಿವಾಟಿನ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎನ್ನುವ ಆತಂಕವು ಭಾರತಕ್ಕೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.ಬಿಕ್ಕಟ್ಟಿನಿಂದಾಗಿ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿವೆಯೇ ಎನ್ನುವ ಬಗ್ಗೆ ಉದ್ಯಮ ವಲಯದ ಪ್ರತಿಕ್ರಿಯೆಯನ್ನೂ ಅವರು ಹೇಳಿದ್ದಾರೆ.
Published by:Vasudeva M
First published: