Spider Man: ಸ್ಪೈಡರ್ ಮ್ಯಾನ್ ಕಾಮಿಕ್ ಪುಸ್ತಕದ ಕೇವಲ ಒಂದು ಪುಟ ದಾಖಲೆ ಮೊತ್ತಕ್ಕೆ ಹರಾಜು!!! ಎಷ್ಟಕ್ಕೆ ಗೊತ್ತಾ..?

ಡಲ್ಲಾಸ್‌ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾಮಿಕ್ ಕಾರ್ಯಕ್ರಮದ ಪರಂಪರಾಗತ ಹರಾಜು ಪ್ರಕ್ರಿಯೆಯ ಮೊದಲ ದಿನದಂದು ದಾಖಲೆಯ 3.3 ಲಕ್ಷ ಡಾಲರ್‌ನೊಂದಿಗೆ ಶುರುವಾಗಿ 3 ಮಿಲಿಯನ್ ಡಾಲರ್ ಗಡಿಯನ್ನೂ ದಾಟಿತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಪೈಡರ್ ಮ್ಯಾನ್ (Spider-Man) ಕಾಮಿಕ್ ಸರಣಿ (Comic Series) ಪುಟ್ಟ ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಆನಂತರ ಹಾಲಿವುಡ್‌ನಲ್ಲಿ(Hollywood) ನಿರ್ಮಾಣಗೊಂಡ ಸ್ಪೈಡರ್ ಮ್ಯಾನ್ ಚಲನಚಿತ್ರ ಸರಣಿಯೂ ಜಗತ್ತಿನಾದ್ಯಂತ ಗಲ್ಲಾಪೆಟ್ಟಿಗೆಯನ್ನು ಸೂರೆ ಮಾಡಿತು. ಇಂತಹ ಅಪೂರ್ವ ದಾಖಲೆಗಳನ್ನು ನಿರ್ಮಾಣ ಮಾಡಿರುವ ಸ್ಪೈಡರ್ ಮ್ಯಾನ್ ಕಾಮಿಕ್ ಈಗ ಮತ್ತೆ ಸುದ್ದಿಯಲ್ಲಿದೆ. 1984ರಲ್ಲಿ ರಚಿಸಲಾಗಿದ್ದ ಸ್ಪೈಡರ್ ಮ್ಯಾನ್ ಕಾಮಿಕ್ ಪುಸ್ತಕದ ಕೇವಲ ಒಂದು ಪುಟ ಹರಾಜಿನಲ್ಲಿ ದಾಖಲೆಯ 3.36 ಮಿಲಿಯನ್ ಡಾಲರ್ ಬೆಲೆಗೆ ಮಾರಾಟವಾಗಿ ಮತ್ತೊಂದು ಇತಿಹಾಸ(History) ನಿರ್ಮಿಸಿದೆ!!

ವೀನಮ್ ಎಂಬ ಪಾತ್ರದ ಉದ್ಭವ
ಮೈಕ್ ಜೆಕ್, ಮಾರ್ವೆಲ್ ಕಾಮಿಕ್ಸ್ ಸೀಕ್ರೆಟ್ ವಾರ್ ನಂಬರ್ 8ನ 25ನೇ ಪುಟಕ್ಕೆ ರಚಿಸಿದ್ದ ವರ್ಣಚಿತ್ರವು ಪ್ರಪ್ರಥಮ ಬಾರಿಗೆ ಕಪ್ಪು ಸೂಟುಧಾರಿ ಸ್ಪೈಡರ್ ಮ್ಯಾನ್ ಅನ್ನು ಪರಿಚಯಿಸಿತ್ತು. ಈ ಸಾಂಕೇತಿಕ ಸೂಟು ಕಟ್ಟಕೊನೆಗೆ ವೀನಮ್ ಎಂಬ ಪಾತ್ರದ ಉದ್ಭವಕ್ಕೆ ದಾರಿಯಾಗಿತ್ತು.

ಮೂರು ಜನರ ಸಮಿತಿಯು ರಚಿಸಿದ್ದ ಸ್ಪೈಡರ್ ಮ್ಯಾನ್ ಸರಣಿಯ ಮಾರ್ವೆಲ್ ಸೂಪರ್ ಹೀರೋಸ್ ಸೀಕ್ರೆಟ್ ವಾರ್ಸ್ ನಂಬರ್ 8 ಕಾಮಿಕ್ ಪುಸ್ತಕದ 25ನೇ ಪುಟದಲ್ಲಿ ಸೂಪರ್ ಹೀರೋ ಕೆಲ ತಿಂಗಳ ಮುಂಚಿತವಾಗಿಯೇ ಹೇಗೆ ತನ್ನ ತಂಪಾದ ಹಾಗೂ ಕಪ್ಪು ಸೂಟನ್ನು ಪಡೆಯುತ್ತಾನೆ ಎಂದು ವಿವರಿಸಲಾಗಿತ್ತು. ಈ ಕ್ಷಣವು ಹೇಗೆ ಆ ಪಾತ್ರದ ಹೊಸ ತಿರುವಿನ ಸಂಗತಿಯಾಗುತ್ತದೆ ಎಂಬ ಬಗ್ಗೆ ಆ ಕಾಮಿಕ್ ಪುಸ್ತಕದ ಅಭಿಮಾನಿಗಳಿಗೆ ತಿಳಿದೇ ಇದೆ.

ಇದನ್ನೂ ಓದಿ: Brain Health: ಹೆಚ್ಚು ಓದುವುದರಿಂದ ನಿಮ್ಮ ಮೆದುಳಿಗೆ ಏನಾಗತ್ತೆ ಗೊತ್ತಾ? ನರ ವಿಜ್ಞಾನ ಹೇಳೋದೇನು ?

ಹೊಸ ತಿರುವು
ಈ ಕಾಮಿಕ್ ಪುಸ್ತಕದ ಸೂಪರ್ ಹೀರೊ ಸ್ಪೈಡರ್ ಮ್ಯಾನ್ ಕಾಳಗವೊಂದರಲ್ಲಿ ತನ್ನನ್ನು ಮರೆಮಾಚಿರುವ ವಸ್ತ್ರದ ಹಾನಿ ಅನುಭವಿಸುತ್ತಾನೆ. ಇದಾದ ನಂತರ ಆತ ತನಗಾಗಿ ಸೂಟೊಂದನ್ನು ವಿನ್ಯಾಸಗೊಳಿಸುವ ಪ್ರಯತ್ನಕ್ಕಿಳಿಯುತ್ತಾನೆ. ಅದು ಭವಿಷ್ಯದಲ್ಲಿ ಪ್ರತಿಫಲನಗೊಳ್ಳಲಿರುವ ವಸ್ತ್ರ ಸಾಧನವಾಗಿರಬೇಕು ಎಂಬುದು ಆತನ ಬಯಕೆಯಾಗಿರುತ್ತದೆ. ಆದರೆ, ಹೊಲಿಗೆ ಯಂತ್ರದಿಂದ ಕಪ್ಪು ಸುರುಳಿ ಸೃಷ್ಟಿಯಾದಾಗ ಆಘಾತಕ್ಕೊಳಗಾಗುತ್ತಾನೆ. ಅದನ್ನು ಧರಿಸಿದಾಗ ಸ್ಪೈಡರ್ ಮ್ಯಾನ್ ಮೇಲಕ್ಕೆ ಹಾರತೊಡಗಿ ಅದು ಆತನ ನೂತನ ಹೊರಕವಚವಾಗಿ ಬದಲಾಗುತ್ತದೆ. ಇದು ಸ್ಪೈಡರ್ ಮ್ಯಾನ್ ಕಾಮಿಕ್ ಪುಸ್ತಕದಲ್ಲಿ ದೊರೆಯುವ ಹೊಸ ತಿರುವು.

ಒಟ್ಟು 3.7 ಮಿಲಿಯನ್ ಡಾಲರ್
ಕಪ್ಪು ಸೂಟು ಬಹಿರಂಗಗೊಂಡಾಗ, "ಈ ವಸ್ತ್ರವು ಹರಡಿಕೊಂಡು, ಈ ಪ್ರಕ್ರಿಯೆಯಲ್ಲಿ ಇದು ನನ್ನ ಹಳೆಯ ಗುರುತುಗಳನ್ನೇ ಕರಗಿಸಿ ನನ್ನ ವಸ್ತ್ರವಿನ್ಯಾಸವಾಗಿ ಹೋಯಿತು" ಎಂದು ಸ್ಪೈಡರ್ ಮ್ಯಾನ್ ಉದ್ಗರಿಸುತ್ತಾನೆ. ಈ ಪುಟಕ್ಕೂ ಮುನ್ನ ಬದಲಾವಣೆ ಪ್ರಕ್ರಿಯೆ ಶುರುವಾಗುವ ವರ್ಣಚಿತ್ರಗಳನ್ನು ಹೊಂದಿರುವ ಪುಟವು ಮತ್ತೊಂದು ಹರಾಜು ಪ್ರಕ್ರಿಯೆಯಲ್ಲಿ 288000 ಡಾಲರ್ ಬೆಲೆಗೆ ಮಾರಾಟವಾಯಿತು. ಇದರೊಂದಿಗೆ ಈ ಎರಡು ಪುಟಗಳ ಹರಾಜಿನಿಂದ ಒಟ್ಟು 3.7 ಮಿಲಿಯನ್ ಡಾಲರ್ ದೊರೆಯಿತು.

ಕಾಮಿಕ್ ಕಾರ್ಯಕ್ರಮ
ಡಲ್ಲಾಸ್‌ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾಮಿಕ್ ಕಾರ್ಯಕ್ರಮದ ಪರಂಪರಾಗತ ಹರಾಜು ಪ್ರಕ್ರಿಯೆಯ ಮೊದಲ ದಿನದಂದು ದಾಖಲೆಯ 3.3 ಲಕ್ಷ ಡಾಲರ್‌ನೊಂದಿಗೆ ಶುರುವಾಗಿ 3 ಮಿಲಿಯನ್ ಡಾಲರ್ ಗಡಿಯನ್ನೂ ದಾಟಿತು. ಕೊನೆಗೆ 3.36 ಮಿಲಿಯನ್ ಡಾಲರ್ ಬೆಲೆಗೆ ಮಾರಾಟವಾಯಿತು. ಇದಕ್ಕೂ ಮುನ್ನ 1974ರಲ್ಲಿ ಪ್ರಕಟಗೊಂಡಿದ್ದ ಅಮೆರಿಕಾದ ಕಾಮಿಕ್ ಪುಸ್ತಕವಾದ 'ದ ಇನ್‌ಕ್ರೆಡಿಬಲ್ ಹಲ್ಕ್'ನ ಒಳಪುಟವೊಂದು 657250 ಡಾಲರ್ ಬೆಲೆಯ ಮಾರಾಟವನ್ನು ದಾಖಲಿಸಿತ್ತು.

ಆ ಪುಟದಲ್ಲಿ ವೋಲ್ವೆರಿನ್ ಪಾತ್ರದ ಪ್ರಥಮ ಪ್ರವೇಶದ ಕುರಿತು ಜಾಹೀರಾತು ನೀಡಲಾಗಿತ್ತು. ಗುರುವಾರದಂದು ಸೂಪರ್ ಮ್ಯಾನ್ ಪ್ರವೇಶವಿರುವ ಆ್ಯಕ್ಷನ್ ಕಾಮಿಕ್ಸ್ ನಂಬರ್ 1 ಕಾಮಿಕ್ ಪುಸ್ತಕದಲ್ಲಿ ಇಲ್ಲಿಯವರೆಗೂ ಉಳಿದಿದ್ದ ಕೆಲವು ಪ್ರತಿಗಳೂ 3.18 ಮಿಲಿಯನ್ ಡಾಲರ್ ಬೆಲೆಗೆ ಹರಾಜಾಗುವ ಮೂಲಕ ಈವರೆಗೆ ಹರಾಜಿಗೀಡಾಗಿರುವ ದುಬಾರಿ ಬೆಲೆಯ ಪುಸ್ತಕಗಳ ಸಾಲಿಗೆ ಸೇರಿದವು.

ಇದನ್ನೂ ಓದಿ: 73 ವರ್ಷಗಳ ನಂತರ Library ಪುಸ್ತಕ ಹಿಂತಿರುಗಿಸಿದಾಗ, ದಂಡ ಎಷ್ಟು ಲಕ್ಷ ರೂ. ಆಗಿತ್ತು ಗೊತ್ತೇ?

ಆದರೆ, ಈ ಪುಸ್ತಕಗಳ ಮಾರಾಟಗಾರರನ್ನಾಗಲಿ ಅಥವಾ ಖರೀದಿದಾರರನ್ನಾಗಲಿ ಈವರೆಗೆ ಗುರುತಿಸಲಾಗಿಲ್ಲ. ಈ ಹರಾಜು ಪ್ರಕ್ರಿಯೆಯ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ಪರಂಪರೆಯ ನಿರ್ದೇಶಕ ಜೋ ಮನ್ನಾರಿನೊ, "ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ: ಕ್ಯಾನ್ವಾಸ್ ಮೇಲೆ ಮೂಡಿಸುವ ವರ್ಣಚಿತ್ರಗಳಷ್ಟೇ ಕಾಮಿಕ್ ಪುಸ್ತಕದ ಕಲೆಯೂ ಪ್ರೀತಿಪಾತ್ರ ಹಾಗೂ ಮೌಲ್ಯಯುತವೆಂದು" ಎಂದು ಹೇಳಿದ್ದಾರೆ.
Published by:vanithasanjevani vanithasanjevani
First published: