ಸಿಂಗಾಪುರದ (Singapore) ಜಿಐಸಿ ಪಿಟಿಇಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಿಮ್ ಚೌ ಕಿಯಾಟ್ ಅವರು ವಿಶ್ವದ ಆರ್ಥಿಕತೆಯ ಸ್ಥಿತಿಯ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ವಿಶ್ವವು ಚೇತರಿಸಿಕೊಳ್ಳುತ್ತಿದೆ ಎಂಬ ಆಶಾವಾದವನ್ನು ಹೊಂದಲು ಕಷ್ಟವಾಗುತ್ತಿದೆ ಎಂದು ಲಿಮ್ ತಿಳಿಸಿದ್ದಾರೆ. ಕೋವಿಡ್‌ನಿಂದ (Covid) ಚೇತರಿಸಿಕೊಂಡಿರುವ ಚೀನಾ ತನ್ನ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸಿದ್ದರೂ ಇದು ಅಷ್ಟೊಂದು ಪರಿಣಾಮಕಾರಿಯಾಗಿ ಕಂಡುಬರುತ್ತಿಲ್ಲ. ಯುಎಸ್ ಕೂಡ ಚೇತರಿಕೆ ಕಂಡಿದ್ದರೂ ಅಪಾಯದ ಸೂಚನೆ ಇದ್ದೇ ಇದೆ. ಜಗತ್ತು ಒಂದು ರೀತಿಯ ಸ್ಪರ್ಧೆಯಲ್ಲಿ (Computation) ಮುಂದುವರಿಯುತ್ತಿದೆ ಎಂದು ಲಿಮ್ ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಸಾರ್ವಭೌಮ ಸಂಪತ್ತಿನ ನಿಧಿಗಳ ಮುಖ್ಯಸ್ಥರು ಒಂದು ವಿಷಯವನ್ನು ಇಲ್ಲಿ ಮನದಟ್ಟು ಮಾಡಿದ್ದು ಮಾರುಕಟ್ಟೆಗಳು ಹಣದುಬ್ಬರದಂತಹ ಪರಿಸ್ಥಿತಿಗಳಿಂದ ಇನ್ನಷ್ಟು ಭೀಕರವಾಗಲಿದ್ದು ಹೂಡಿಕೆದಾರರು ಅನಿಶ್ಚಿತ ಭವಿಷ್ಯವನ್ನು ಎದುರಿಸಬಹುದೆಂಬ ಮುನ್ಸೂಚನೆಯನ್ನು ನೀಡಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಸೂಚನೆ ನೀಡಿದ ಸಿಂಗಾಪುರ್
ಹೂಡಿಕೆದಾರರು ತಮ್ಮ ನೆಲೆಯನ್ನು ಕಂಡುಕೊಳ್ಳಲು ಕೊಂಚ ಕಷ್ಟಪಡುತ್ತಾರೆ ಎಂದು ಲಿಮ್ ತಿಳಿಸಿದ್ದಾರೆ. ಹೆಚ್ಚುತ್ತಿರುವ ಅನಿಶ್ಚಿತತೆಯನ್ನು ಎದುರಿಸುತ್ತಾರೆ ಅದೇ ರೀತಿ ಆದಾಯದ ತೊಡಕನ್ನು ಅನುಭವಿಸಬಹುದು ಅಂತೆಯೇ ಕೆಲವು ಕ್ರಮಗಳ ಮೂಲಕ, ಆರ್ಥಿಕ ನಿರೀಕ್ಷೆಗಳ ಬಗ್ಗೆ ಅನಿಶ್ಚಿತತೆಯು ಪ್ರಸ್ತುತ ದಾಖಲೆಯಲ್ಲಿ ಅತ್ಯಧಿಕವಾಗಿದೆ ಎಂದು ಲಿಮ್ ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ಅಧ್ಯಯನ
ಪ್ರಪಂಚದಾದ್ಯಂತದ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ಏಕಕಾಲದಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವುದರಿಂದ ಪ್ರಪಂಚವು 2023 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದೊಂದಿಗೆ ಸಾಗಲಿದೆ ಹಾಗೂ ಪ್ರಪಂಚವು ಆರ್ಥಿಕ ಬಿಕ್ಕಟ್ಟಿನಂತಹ ಸಂಕಷ್ಟದಲ್ಲಿ ಸಿಲುಕಬಹುದೆಂಬ ಅಂಶವನ್ನು ವಿಶ್ವ ಬ್ಯಾಂಕ್ ಅಧ್ಯಯನ ತಿಳಿಸಿದೆ.
ಸಿಂಗಾಪುರದ ಹಣಕಾಸು ಪ್ರಾಧಿಕಾರವು ಜಾಗತಿಕ ಹಾಗೂ ದೇಶೀಯ ಹಣಕಾಸು ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ್ದು ಹಿಂದಿನ ಮೂರು ತಿಂಗಳಿನಿಂದ ದೇಶೀಯ ಉತ್ಪನ್ನವು 0.7% ದಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ನೀಡಿದೆ.
ಇದನ್ನೂ ಓದಿ: Crime News: ಪ್ರಿಯತಮೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ; ಒಪ್ಪದ ಯುವತಿ ಕಿರುಕುಳಕ್ಕೆ ಬಲಿ!
ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಅತ್ಯಂತ ಕೆಟ್ಟ ಫಲಿತಾಂಶ ಇದಾಗಿದೆ ಎಂದು ಪ್ರಾಧಿಕಾರ ಬಣ್ಣಿಸಿದೆ. ವಿನಿಮಯ ದರವನ್ನು ತನ್ನ ಪ್ರಾಥಮಿಕ ನೀತಿ ಸಾಧನವಾಗಿ ಬಳಸುವ ಹಣಕಾಸು ಪ್ರಾಧಿಕಾರ ಹಣದುಬ್ಬರದ ಅನಿಶ್ಚಿತತೆಯ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.
ಕ್ರಮಗಳು ಪರಿಣಾಮಕಾರಿಯಾಗಿಲ್ಲ
ಏರುತ್ತಿರುವ ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ 2021 ರಲ್ಲಿ ನೀತಿಗಳನ್ನು ಬಿಗಿಗೊಳಿಸಿದ ಮೊದಲ ದೇಶಗಳಲ್ಲಿ ಸಿಂಗಾಪುರವೂ ಒಂದು. ಆರ್ಥಿಕ ಹಿಂಜರಿತದ ನಿರೀಕ್ಷೆಯ ಬಗ್ಗೆ ಕಳೆದ ವರ್ಷದ ಕೊನೆಯಲ್ಲಿ ಪೂರ್ವಭಾವಿ ಎಚ್ಚರಿಕೆಗಳನ್ನು ನೀಡಿತು.
ಚೀನಾದ ಪ್ರವಾಸಿಗರು ಮರಳಿ ಸಿಂಗಾಪುರಕ್ಕೆ ಮರಳುತ್ತಿರುವುದು ದೇಶದ ಆರ್ಥಿಕತೆಯನ್ನು ಮೇಲೆತ್ತುವ ಕ್ರಮವಾಗಿ ಸಹಕಾರಿಯಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯು ಹಣಕಾಸಿನ-ವಲಯದ ಒತ್ತಡದ ಪ್ರಭಾವದ ಬಗ್ಗೆ ಎಚ್ಚರಿಸಿದೆ. ಚೀನಾ ಕೋವಿಡ್ ನಿರ್ಬಂಧಗಳಿಂದ ಬಿಡುಗಡೆಗೊಂಡು ಚೇತರಿಕೆಯನ್ನು ಕಾಣುತ್ತಿದ್ದರೂ ನಿರಾಶದಾಯಕ ಪ್ರಗತಿಯನ್ನು ಸೂಚಿಸಿದೆ. ಅಲ್ಲಿನ ಪ್ರಜೆಗಳು ದರಕಡಿತದ ನೀತಿಗಳ ಬಗ್ಗೆ ಊಹಿಸುತ್ತಿದ್ದಾರೆ.
ಬದಲಾಗುತ್ತಿರುವ ಜಾಗತಿಕ ಆರ್ಥಿಕತೆ
ಜಾಗತಿಕ ಆರ್ಥಿಕತೆಯು ಕಳೆದ ಕೆಲವು ದಶಕಗಳಲ್ಲಿ ಗಮನಾರ್ಹವಾಗಿ ಬದಲಾಗಿದೆ, ಅದು ಸಂಘಟಿತವಾಗಿರುವ ಮತ್ತು ಸಹಯೋಗದ ರಾಷ್ಟ್ರಗಳಿಂದ ಆಡಳಿತ ನಡೆಸುವ ರೀತಿಯಲ್ಲಿ ಮುಂದುವರಿದಿದೆ. ಕಳೆದ ಶತಮಾನದಲ್ಲಿ ನಾವು ನೋಡಿದಂತೆ, ಈ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ತುಂಬಾ ದೊಡ್ಡ ಏರಿಳಿತವು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಜಾಗತಿಕ ಆರ್ಥಿಕತೆಯು ಹೆಚ್ಚಿನ ದೇಶಗಳ ನಡುವೆ ನಡೆಯುವ ವಿಶ್ವಾದ್ಯಂತದ ಆರ್ಥಿಕ ಚಟುವಟಿಕೆಗಳನ್ನು ಸೂಚಿಸುತ್ತದೆ. ಈ ಆರ್ಥಿಕ ಚಟುವಟಿಕೆಗಳು ಒಳಗೊಂಡಿರುವ ದೇಶಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಹುದು. ಜಾಗತೀಕರಣವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಆರ್ಥಿಕತೆಗಳು, ಸಮಾಜಗಳು ಮತ್ತು ಸಂಸ್ಕೃತಿಗಳು ವ್ಯಾಪಾರ, ಸಂವಹನ, ವಲಸೆ ಮತ್ತು ಸಾರಿಗೆಯ ಜಾಗತಿಕ ಜಾಲದ ಮೂಲಕ ಏಕೀಕರಿಸಲ್ಪಟ್ಟ ಪ್ರಕ್ರಿಯೆಯನ್ನು ವಿವರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ