Singapore Visa: ವಿದೇಶಿ ಪ್ರತಿಭೆಗಳನ್ನು ಆಕರ್ಷಿಸಲು ವೀಸಾ ನಿಯಮಗಳನ್ನೇ ಬದಲಾಯಿಸಿದ ಸಿಂಗಾಪುರ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೆಚ್ಚಿನ ವೇತನ ಇರುವ ವಲಸಿಗರಿಗೆ ಹಾಗೂ ಕೆಲವು ಅದ್ಭುತ ಪ್ರತಿಭಾವಂತರಿಗೆ ವೀಸಾ ನಿಯಮಗಳನ್ನು ಸಲೀಸು ಮಾಡುವುದಕ್ಕೆ ಸಿಂಗಾಪುರ ಸರ್ಕಾರವು ನಿರ್ಧರಿಸಿದೆ. ಮಾನವಶಕ್ತಿ ಸಚಿವಾಲಯದ ಪ್ರಕಾರ, ಹೊಸ ನಿಯಮಗಳು ತಿಂಗಳಿಗೆ ಕನಿಷ್ಠ 30 ಸಾವಿರ ($21,431) ಗಳಿಸುವ ವಿದೇಶಿಯರಿಗೆ ಐದು ವರ್ಷಗಳ ಕೆಲಸದ ಪಾಸ್ ಅನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ.

ಮುಂದೆ ಓದಿ ...
  • Share this:

ಕೋವಿಡ್ ಸಾಂಕ್ರಾಮಿಕ ರೋಗದಿಂದ ಆರ್ಥಿಕ ಹೊಡೆತ (Financial blow) ಅನುಭವಿಸಿದ್ದ ಸಿಂಗಾಪೂರ್, ವಿದೇಶಿ ಪ್ರತಿಭೆಗಳನ್ನು (Foreign talents) ಆಕರ್ಷಿಸಲು ಹೊಸ ಉದ್ಯೋಗ ವೀಸಾ ನಿಯಮಗಳನ್ನು (Employment Visa Rule) ಪ್ರಕಟಿಸಿದೆ. ಹೆಚ್ಚಿನ ವೇತನ ಇರುವ ವಲಸಿಗರಿಗೆ ಹಾಗೂ ಕೆಲವು ಅದ್ಭುತ ಪ್ರತಿಭಾವಂತರಿಗೆ ವೀಸಾ (Visa) ನಿಯಮಗಳನ್ನು ಸಲೀಸು ಮಾಡುವುದಕ್ಕೆ ಸಿಂಗಾಪುರ ಸರ್ಕಾರವು ನಿರ್ಧರಿಸಿದೆ. ಮಾನವಶಕ್ತಿ ಸಚಿವಾಲಯದ ಪ್ರಕಾರ, ಹೊಸ ನಿಯಮಗಳು ತಿಂಗಳಿಗೆ ಕನಿಷ್ಠ 30 ಸಾವಿರ ($21,431) ಗಳಿಸುವ ವಿದೇಶಿಯರಿಗೆ (foreigners) ಐದು ವರ್ಷಗಳ ಕೆಲಸದ ಪಾಸ್ ಅನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಇದರ ಜೊತೆ ಅವರ ಅವಲಂಬಿತರಿಗೆ ಉದ್ಯೋಗ ಪಡೆಯಲು ಅವಕಾಶ ನೀಡುತ್ತದೆ. 


ವೀಸಾ ನಿಯಮಗಳಲ್ಲಾದ ಬದಲಾವಣೆಗಳೇನು?
ಇದರ ಹೊರತಾಗಿ, ಕ್ರೀಡೆ, ಕಲೆ, ವಿಜ್ಞಾನ, ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರು ವೇತನದ ಮಾನದಂಡವನ್ನು ಪೂರೈಸದಿದ್ದರೂ ಸಹ ಓಷನಲ್‌ ನೆಟ್‌ ವರ್ಕ್‌ ಎಕ್ಸ್‌ ಪರ್ಟ್‌ (ONE) ಎಂದು ಕರೆಯಲಾಗುವ ‌ ದೀರ್ಘಾವಧಿ ವೀಸಾಗೆ ಅರ್ಹರಿರುತ್ತಾರೆ. ಈ ನಿಯಮವು ಜನವರಿ 1 ರಿಂದ ಜಾರಿಗೆ ಬರಲಿದೆ.


" ಹೂಡಿಕೆ, ವಾಸ್ತವ್ಯ, ಕೆಲಸಕ್ಕೆ ಸಿಂಗಾಪುರ್ ಉತ್ತಮ ಸ್ಥಳ"
ಮಾನವ ಸಂಪನ್ಮೂಲ ಸಚಿವ ಟಾನ್ ಸೀ ಲೆಂಗ್ ಮಾತನಾಡುತ್ತಾ, ಉದ್ಯಮಗಳು ಹಾಗೂ ಪ್ರತಿಭೆ ಎರಡೂ ಹೂಡಿಕೆ ಮಾಡಲು, ವಾಸಿಸಲು ಮತ್ತು ಕೆಲಸ ಮಾಡಲು ಸುರಕ್ಷಿತ ಮತ್ತು ಸ್ಥಿರವಾದ ಸ್ಥಳಗಳನ್ನು ಹುಡುಕುತ್ತಿವೆ.


ಸಿಂಗಾಪುರವು ಅಂತಹ ಸ್ಥಳವಾಗಿದೆ. ಆದ್ದರಿಂದ ಪ್ರತಿಭೆಗಳ ಜಾಗತಿಕ ಕೇಂದ್ರವಾಗಿ ಸಿಂಗಾಪುರದ ಸ್ಥಾನವನ್ನು ಭದ್ರಪಡಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಇದು ಸಮಯೋಚಿತವಾಗಿದೆ."ಎಂದು ಅವರು ತಿಳಿಸಿದರು.


ಇದನ್ನೂ ಓದಿ:  Business Idea: ಹೂಡಿಕೆ ಇಲ್ಲದೇ ಹಣ ಗಳಿಸುವ ವ್ಯವಹಾರಗಳ ಪಟ್ಟಿ ಇಲ್ಲಿದೆ


ಮಾತು ಮುಂದುವರಿಸಿದ ಸಚಿವ ಟಾನ್‌, ದೇಶವು ಕಾರ್ಮಿಕ ಮಾರುಕಟ್ಟೆಯ ಬಿಗಿತವನ್ನು ಸರಾಗಗೊಳಿಸುವುದಕ್ಕೆ ಸಾಕ್ಷಿಯಾಗುತ್ತಿದೆ. ಉತ್ಪಾದನೆ ಮತ್ತು ನಿರ್ಮಾಣದಲ್ಲಿ ಕಾರ್ಮಿಕ ಪೂರೈಕೆಯು ಇತರವುಗಳಲ್ಲಿ ಬಹುತೇಕ ಕೋವಿಡ್ ಪೂರ್ವ ಮಟ್ಟಕ್ಕೆ ಹಿಂತಿರುಗಿದೆ ಎಂದು ಹೇಳಿದರು.


ಅಂತರರಾಷ್ಟ್ರೀಯ ವ್ಯಾಪಾರವನ್ನು ಆಕರ್ಷಿಸಲು ಈ ನಿರ್ಧಾರ
ಕೋವಿಡ್ ನಂತರ, ಕಾರ್ಮಿಕ ಮಾರುಕಟ್ಟೆಯನ್ನು ಸುಧಾರಿಸಲು ಮತ್ತು ಜಾಗತಿಕ ಆರ್ಥಿಕ ಕೇಂದ್ರವಾಗಿ ನಗರ-ರಾಜ್ಯದ ಮಹತ್ವಾಕಾಂಕ್ಷೆಗಳನ್ನು ಚಾಲನೆ ಮಾಡಲು ಅಂತರರಾಷ್ಟ್ರೀಯ ವ್ಯಾಪಾರವನ್ನು ಆಕರ್ಷಿಸಲು ಈ ವರ್ಷ ಹಲವು ದೇಶಗಳು ಇಂತಹ ನಿರ್ಧಾರವನ್ನು ಕೈಗೊಂಡಿವೆ. ಇದರಲ್ಲಿ ಸಿಂಗಾಪುರ್‌‍‍ನ ಈ ಪ್ರಕಟಣೆ ಕೂಡ ಒಂದಾಗಿದೆ.


ಕೊರೊನಾ ನಂತರದಲ್ಲಿ ವೈಟ್‌ಕಾಲರ್ ಉದ್ಯೋಗಗಳಿಗೆ ವಿದೇಶಗಳಿಂದ ಬರುವವರ ಸಂಖ್ಯೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ ಆರ್ಥಿಕತೆಯ ಹಲವು ಭಾಗಗಳು ಪ್ರತಿಭೆಗಳನ್ನು ಆಕರ್ಷಿಸಲು ಈ ವರ್ಷ ವೇತನವನ್ನು ಕೂಡ ಹೆಚ್ಚಿಸಿವೆ.


ಸಿಂಗಾಪುರದ ಹೊಸ ಯೋಜನೆ ಏನು?
ಫೇರ್ ಕನ್ಸಿಡರೇಷನ್ ಫ್ರೇಮ್‌ವರ್ಕ್ ಎಂಬ ವ್ಯವಸ್ಥೆಯಡಿಯಲ್ಲಿ ವಿದೇಶಿಯರನ್ನು ನೇಮಿಸಿಕೊಳ್ಳುವ ಮೊದಲು ಸ್ಥಳೀಯವಾಗಿ ಜಾಹೀರಾತು ಮಾಡಬೇಕಾದ ಅಗತ್ಯದಿಂದ ಟಾಪ್ 10% ಎಂಪ್ಲಾಯ್‌ಮೆಂಟ್ ವೀಸಾ ಹೊಂದಿರುವವರಿಗೆ ಹೋಲಿಸಬಹುದಾದ ಉದ್ಯೋಗಗಳಿಗೆ ವಿನಾಯಿತಿ ನೀಡಲು ಸಿಂಗಾಪುರ ಯೋಜಿಸಿದೆ.


ಇತರ ಕ್ರಮಗಳ ಪೈಕಿ, ಕಡಿಮೆ ಪೂರೈಕೆಯ ಕೌಶಲ್ಯ ಹೊಂದಿರುವ ಕೆಲವು ಟೆಕ್ ವೃತ್ತಿಪರರು ಸೆಪ್ಟೆಂಬರ್ 2023 ರಿಂದ ಐದು ವರ್ಷಗಳ ವೀಸಾಗಳಿಗೆ ಅರ್ಹರಾಗಿರುತ್ತಾರೆ, ಪ್ರಸ್ತುತ ಎರಡರಿಂದ ಮೂರು ವರ್ಷಗಳವರೆಗೆ ಅವಧಿ ಇದ್ದು, ಈಗ ಸಮಯವನ್ನು ವಿಸ್ತರಿಸಿದ್ದಾರೆ.


ನಿಯಮ ಬದಲಾವಣೆಯಿಂದಾಗಿ ಹಾಂಕಾಂಗ್, ಯುಎಇ, ಆಸ್ಟ್ರೇಲಿಯಾ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನಂಥ ದೇಶಗಳ ಜತೆಗೆ ಸಿಂಗಾಪುರ ಕೂಡ ಸ್ಪರ್ಧಿಸಲು ಸಹಾಯ ಆಗುತ್ತದೆ.


ಇದನ್ನೂ ಓದಿ:  IT Company: ಉದ್ಯೋಗಿಗಳಿಗೆ ದುಪ್ಪಟ್ಟು ಸಂಬಳ ಕೊಡುವ ಐಟಿ ಕಂಪನಿಗಳಿವು!


ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಸಮತೋಲನವನ್ನು ಅಳೆಯುವ ಪ್ರಮುಖ ಮಾಪಕವು ಈ ವರ್ಷದ ಆರಂಭದಲ್ಲಿ 1998 ರಿಂದ ಅತ್ಯಧಿಕ ಮಟ್ಟಕ್ಕೆ ಏರಿತು. ಆ ಪ್ರವೃತ್ತಿಯು ಆರ್ಥಿಕತೆಯಲ್ಲಿ ಉತ್ಪಾದಕತೆಗೆ ಅಪಾಯವಾಗಿದೆ ಎನ್ನಲಾಗಿದೆ. ಇದು ಈ ವರ್ಷ 3%-4% ರಷ್ಟು ಬೆಳೆಯುತ್ತದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

top videos
    First published: