ಶಿವರಾತ್ರಿಗೆ ಶ್ರೀಶೈಲ, ವೇಮುಲವಾಡ, ಕಾಳೇಶ್ವರಕ್ಕೆ ಹೋಗುತ್ತೀರಾ? ಹಾಗಾದ್ರೆ ಇಲ್ಲಿದೆ ನೋಡಿ ಉತ್ತಮ ಪ್ಯಾಕೇಜ್. ಪ್ರವಾಸೋದ್ಯಮವು ಶಿವರಾತ್ರಿಯಂದು ಶ್ರೀಶೈಲಂ, ವೇಮುಲವಾಡ, ಕಾಳೇಶ್ವರಂಗೆ ಹೋಗಲು ಬಯಸುವವರಿಗೆ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಈ ಪ್ರವಾಸಿ ಪ್ಯಾಕೇಜ್‌ಗಳು ಹೈದರಾಬಾದ್‌ನಿಂದ ಲಭ್ಯವಿವೆ.ಇನ್ನು ಮೂರು ದಿನಗಳಲ್ಲಿ ಶಿವರಾತ್ರಿ ದಿನವನ್ನು ಆಚರಿಸಲು ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಶಿವರಾತ್ರಿಯ ದಿನದಂದು ಎಲ್ಲಾ ಶಿವನ ದೇವಾಲಯಗಳು ಕಿಕ್ಕಿರಿದು ತುಂಬಿರುತ್ತವೆ. ಜನಪ್ರಿಯ ದೇಗುಲಗಳು ಭಕ್ತರಿಂದ ತುಂಬಿರುತ್ತದೆ.
ಶ್ರೀಶೈಲಂ, ವೇಮುಲವಾಡ, ಕಾಳೇಶ್ವರಂ ಮತ್ತು ಇತರ ಶೈವ ಕ್ಷೇತ್ರಗಳ ಜನಸಂದಣಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ನೀವೂ ಸಹ ಈ ಶಿವರಾತ್ರಿಗೆ ಶ್ರೀಶೈಲ, ವೇಮುಲವಾಡ, ಕಾಳೇಶ್ವರಕ್ಕೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಇದನ್ನು ಸಂಪೂರ್ಣವಾಗಿ ಓದಿ. ಈ ಪ್ರವಾಸಕ್ಕೆ ಹೋಗಲು ನಿಮಗೆ ತಗುಲುವ ವೆಚ್ಚ ಎಷ್ಟು ಎಂಬ ಬಗ್ಗೆ ಇಲ್ಲಿ ಮಾಹಿತು ನೀಡಲಾಗಿದೆ ಗಮನಿಸಿ. ಈ ಮಾಹಿತಿಯಂತೆ ಪ್ಲ್ಯಾನ್ ಮಾಡಿ.
ಪ್ರವಾಸೋದ್ಯಮ ಎಸಿ ಬಸ್ ಮೂಲಕ ಶ್ರೀಶೈಲಂಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಇದು ಎರಡು ದಿನಗಳ ಪ್ರವಾಸದ ಪ್ಯಾಕೇಜ್ ಆಗಿದೆ. ಮೊದಲ ದಿನ ಹೈದರಾಬಾದ್‌ನಿಂದ ಬೆಳಗ್ಗೆ 8.30ಕ್ಕೆ ಹೊರಟು ನೇರವಾಗಿ ಶ್ರೀಶೈಲಕ್ಕೆ ಸಂಜೆ 5 ಗಂಟೆಗೆ ತಲುಪುತ್ತದೆ. ಶ್ರೀಶೈಲದ ಸಾಕ್ಷಿ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಬಳಿಕ ಶ್ರೀಶೈಲದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ನಡೆಯಲಿದೆ. ಎರಡನೇ ದಿನ ಪಾತಾಳ ಗಂಗೆ, ಪಾಲಧಾರ, ಪಂಚಧಾರ, ಶಿಖರ, ಅಣೆಕಟ್ಟುಗಳಿಗೆ ರೋಪ್ ವೇ ಮೂಲಕ ಭೇಟಿ ನೀಡಲಾಗುವುದು.
ಇದನ್ನೂ ಓದಿ: Money Mantra: 3 ರಾಶಿಯವರು ಹೂಡಿಕೆ ಮಾಡಿದ್ರೆ ಕೆಟ್ರಿ, ನಿಧಾನವೇ ಪ್ರಧಾನ
ಅದರ ನಂತರ ಹಿಂದಿರುಗುವ ಪ್ರಯಾಣ ಆರಂಭವಾಗುತ್ತದೆ. ಸಂಜೆ 7 ಗಂಟೆಗೆಹೈದರಾಬಾದ್ ಆಗಮನದ ನಂತರ ಪ್ರವಾಸ ಕೊನೆಗೊಳ್ಳುತ್ತದೆ. ಈ ಪ್ರವಾಸ ಪ್ಯಾಕೇಜ್‌ನ ಬೆಲೆ ವಯಸ್ಕರಿಗೆ 2400 ರೂ. ಮಕ್ಕಳಿಗೆ 1920 ರೂ.
ಕಾಳೇಶ್ವರಂ ಪ್ರವಾಸ: ತೆಲಂಗಾಣ ಪ್ರವಾಸೋದ್ಯಮ ಕಾಳೇಶ್ವರಂ ಒಂದು ದಿನದ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಬೆಳಗ್ಗೆ 5 ಗಂಟೆಗೆ ಹೊರಟು ವಾರಂಗಲ್‌ನ ಹೋಟೆಲ್‌ಗೆ 8 ಗಂಟೆಗೆ ತಲುಪುತ್ತದೆ. ಉಪಹಾರದ ನಂತರ ರಾಮಪ್ಪನ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ. ಅದರ ನಂತರ ನೀವು ಮೇಡಿಗಡ್ಡ ಬ್ಯಾರೇಜ್ ಮತ್ತು ಕಣೆಪಲ್ಲಿ ಪಂಪ್ ಹೌಸ್ಗೆ ಭೇಟಿ ನೀಡಬಹುದು. ಸಂಜೆ 4 ಗಂಟೆಗೆ ಕಾಳೇಶ್ವರ ದೇವಸ್ಥಾನದ ದರ್ಶನ ನಡೆಯಲಿದೆ. ಅದರ ನಂತರ ಹಿಂದಿರುಗುವ ಪ್ರಯಾಣ ಪ್ರಾರಂಭವಾಗುತ್ತದೆ. ರಾತ್ರಿ 11 ಗಂಟೆಗೆ ಹೈದರಾಬಾದ್ ತಲುಪುತ್ತದೆ. ಈ ಪ್ರವಾಸದ ಪ್ಯಾಕೇಜ್ ಶನಿವಾರ ಮತ್ತು ಭಾನುವಾರ ಲಭ್ಯವಿದೆ. ಈ ಟೂರ್ ಪ್ಯಾಕೇಜ್‌ನ ಬೆಲೆ ವಯಸ್ಕರಿಗೆ 1850 ರೂ. ಮಕ್ಕಳಿಗೆ 1490 ರೂ.
ವೇಮುಲವಾಡ ಪ್ರವಾಸ: ತೆಲಂಗಾಣ ಪ್ರವಾಸೋದ್ಯಮವು ವೇಮುಲವಾಡಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ ಅನ್ನು ನೀಡುತ್ತಿದೆ. ಬೆಳಗ್ಗೆ 7 ಗಂಟೆಗೆ ಹೈದರಾಬಾದ್‌ನಿಂದ ಹೊರಡಬೇಕು. ಕೊಮುರವಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಆ ಬಳಿಕ ವೇಮುಲವಾಡಕ್ಕೆ ಹೊರಟರೆ ವೇಮುಲವಾಡ ರಾಜರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕೊಂಡಗಟ್ಟುಗೆ ತೆರಳಲಾಗುತ್ತದೆ. ಕೊಂಡಗಟ್ಟು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಹಿಂತಿರುಗುವ ಪ್ರಯಾಣ ಪ್ರಾರಂಭವಾಗುತ್ತದೆ. ರಾತ್ರಿ 8 ಗಂಟೆಗೆ ಹೈದರಾಬಾದ್ ತಲುಪುತ್ತದೆ. ಈ ಪ್ರವಾಸದ ಪ್ಯಾಕೇಜ್ ಶನಿವಾರ ಮತ್ತು ಭಾನುವಾರ ಲಭ್ಯವಿದೆ. ಈ ಪ್ರವಾಸದ ಪ್ಯಾಕೇಜ್‌ನ ಬೆಲೆ ವಯಸ್ಕರಿಗೆ 1200 ರೂ. ಮಕ್ಕಳಿಗೆ 960 ರೂ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ