ಎಲ್ಲರ ಚಿತ್ತ LIC IPO ಷೇರಿನತ್ತ! ಮೇ 12ರಂದು ನಡೆಯಲಿದೆ ಷೇರು ಹಂಚಿಕೆ

ಭಾರತೀಯ ಜೀವ ವಿಮಾ ನಿಗಮದ ಐಪಿಒ ಮೇ 9ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಎಲ್ಲರ ಚಿತ್ತ ಷೇರು ಹಂಚಿಕೆಯತ್ತ ಇದೆ. ಸದ್ಯ ಎಲ್‌ಐಸಿಯ ಮೆಗಾ ಇನಿಶಿಯಲ್ ಪಬ್ಲಿಕ್ ಆಫರ್‌ನಲ್ಲಿ (ಐಪಿಒ) ಬಿಡ್‌ದಾರರಿಗೆ ಷೇರು ಹಂಚಿಕೆ ಮೇ 12 ರಂದು ನಡೆಯಲಿದೆ.

ಎಲ್ಐಸಿ, ಐಪಿಒ

ಎಲ್ಐಸಿ, ಐಪಿಒ

  • Share this:
ಭಾರತೀಯ ಜೀವ ವಿಮಾ ನಿಗಮದ (Indian Life Insurance Corporation) ಐಪಿಒ (IPO) ಮೇ 9ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಎಲ್ಲರ ಚಿತ್ತ ಷೇರು ಹಂಚಿಕೆಯತ್ತ ಇದೆ. ಸದ್ಯ ಎಲ್‌ಐಸಿಯ ಮೆಗಾ ಇನಿಶಿಯಲ್ ಪಬ್ಲಿಕ್ ಆಫರ್‌ನಲ್ಲಿ (ಐಪಿಒ) ಬಿಡ್‌ದಾರರಿಗೆ ಷೇರು ಹಂಚಿಕೆ ಮೇ 12 ರಂದು ನಡೆಯಲಿದೆ ಮತ್ತು ಮೇ 17 ರಂದು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ (Stock Exchange) ವಿಮೆಯನ್ನು ಪಟ್ಟಿ ಮಾಡಲಾಗುವುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ (Public property) ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಪತ್ರಿಕಾಗೋಷ್ಠಿಯಲ್ಲಿ (Press conference) ತಿಳಿಸಿದ್ದಾರೆ.

ಎಲ್‌ಐಸಿ ಐಪಿಒ ಆಫರ್
ಆರು ದಿನಗಳ ಕಾಲ ನಡೆದ ಐಪಿಒ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಎಲ್‌ಐಸಿ ಐಪಿಒ ಆಫರ್ ಮೇ 4 ರಂದು ಪ್ರಾರಂಭವಾಗಿ ಸೋಮವಾರ ಮೇ 9 ರಂದು ಸಂಜೆ 7 ಗಂಟೆಗೆ ಕೊನೆಗೊಂಡಿತು. ಎಲ್ಐಸಿ ಐಪಿಒ ಎಲ್ಲಾ ವಿಭಾಗಗಳಲ್ಲಿ ಪ್ರಚಂಡ ಯಶಸ್ಸನ್ನು ಕಂಡಿದೆ ಮತ್ತು ಎಲ್ಲಾ ವರ್ಗದ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಪಾಂಡೆ ಹೇಳಿದರು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಕಡಿಮೆ ಭಾಗವಹಿಸುವಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ''ದೇಶೀಯ ಹೂಡಿಕೆದಾರರು ಎಲ್ಐಸಿ ಐಪಿಒವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದು ಆತ್ಮನಿರ್ಭರ ಭಾರತಕ್ಕೆ ಉದಾಹರಣೆಯಾಗಿದೆ” ಎಂದು ಹೇಳಿದರು. ಐಪಿಒ ಬಂಡವಾಳ ಮಾರುಕಟ್ಟೆಗಳನ್ನು ಆಳಗೊಳಿಸುವ ನಿರೀಕ್ಷೆಯಿದೆ. ನಾವು ಕೇವಲ ವಿದೇಶಿ ಹೂಡಿಕೆದಾರರನ್ನು ಅವಲಂಬಿಸಿಲ್ಲ ಎಂದರು.

ಹೂಡಿಕೆದಾರರಿಗೆ ಷೇರುಗಳ ಹಂಚಿಕೆ
ಹೂಡಿಕೆದಾರರಿಗೆ ಷೇರುಗಳ ಹಂಚಿಕೆಯನ್ನು ಮೇ12 ರಂದು ಮಾಡಲಾಗುವುದು ಮತ್ತು ಮರುಪಾವತಿಯನ್ನು ಶೀಘ್ರದಲ್ಲೇ ಪ್ರಕ್ರಿಯೆಗೊಳಿಸಲಾಗುವುದು ಎಂದು ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ತಿಳಿಸಿದರು.

ದೇಶದ ಅತಿದೊಡ್ಡ ಸಾರ್ವಜನಿಕ ಕೊಡುಗೆಯಾದ ಜೀವ ವಿಮಾ ನಿಗಮದ ಐಪಿಒ
ದೇಶದ ಅತಿದೊಡ್ಡ ಸಾರ್ವಜನಿಕ ಕೊಡುಗೆಯಾದ ಜೀವ ವಿಮಾ ನಿಗಮದ ಐಪಿಒ, ಕೊಡುಗೆ ಅವಧಿಯ ಕೊನೆಯ ದಿನದಂದು ಸೋಮವಾರ 2.95 ಬಾರಿ ಚಂದಾದಾರಿಕೆಯಾಗಿದೆ, ಇದರಲ್ಲಿ ಸರ್ಕಾರದ ಸುಮಾರು 21,000 ಕೋಟಿ ರೂಪಾಯಿಯ 16,20,78,067 ಷೇರುಗಳಿಗೆ ವಿರುದ್ಧವಾಗಿ, 47,83,25,760 ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಸಂಜೆ 7 ಗಂಟೆಗೆ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ:  Drone Pilot: ಪಿಯುಸಿ ಆದ್ರೆ ಸಾಕು, ಡ್ರೋನ್ ಪೈಲಟ್​ ಆಗಿ ತಿಂಗಳಿಗೆ 30 ಸಾವಿರ ದುಡಿಯಬಹುದು!

ಅರ್ಹ ಸಾಂಸ್ಥಿಕ ಖರೀದಿದಾರರು (QIBs) ವರ್ಗವು 2.83 ಬಾರಿ ಚಂದಾದಾರರಾಗಿದ್ದಾರೆ. ಈ ವಿಭಾಗಕ್ಕೆ ಮೀಸಲಿಟ್ಟ 3.95 ಕೋಟಿ ಷೇರುಗಳಿಗೆ 11.20 ಕೋಟಿ ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ (NIIs) ಸಂಬಂಧಿಸಿದಂತೆ, ವರ್ಗಕ್ಕೆ ಕಾಯ್ದಿರಿಸಿದ 2,96,48,427 ಷೇರುಗಳಿಗೆ ಒಟ್ಟು 8,61,93,060 ಬಿಡ್‌ಗಳನ್ನು ಸ್ವೀಕರಿಸಲಾಗಿದೆ, ಇದು 2.91 ಬಾರಿ ಚಂದಾದಾರಿಕೆಯನ್ನು ಪ್ರತಿಬಿಂಬಿಸುತ್ತದೆ.

ಚಿಲ್ಲರೆ ವೈಯಕ್ತಿಕ ಹೂಡಿಕೆದಾರರು 13.77 ಕೋಟಿ ಷೇರುಗಳಿಗೆ ಬಿಡ್ ಮಾಡಿದರು. ಈ ವಿಭಾಗಕ್ಕೆ 6.9 ಕೋಟಿ ಷೇರುಗಳನ್ನು ನೀಡಲಾಯಿತು, ಇದು 1.99 ಪಟ್ಟು ಹೆಚ್ಚಿನ ಚಂದಾದಾರಿಕೆ ಪ್ರತಿನಿಧಿಸುತ್ತದೆ. ಪಾಲಿಸಿದಾರರ ಭಾಗದಲ್ಲಿ 6 ಪಟ್ಟು ಹೆಚ್ಚು ಚಂದಾದಾರರಾಗಿದ್ದರೆ, ಉದ್ಯೋಗಿಗಳಿಂದ 4.4 ಬಾರಿ ಚಂದಾದಾರಿಕೆಯಾಗಿದೆ.

ಅರ್ಹ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಮೀಸಲಾತಿ
ಎಲ್‌ಐಸಿಯ ಪ್ರತಿ ಇಕ್ವಿಟಿ ಷೇರಿನ ಬೆಲೆಯನ್ನು 902-949 ರೂ ಎಂದು ಹೇಳಲಾಗಿದೆ. ಅರ್ಹ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಮೀಸಲಾತಿಯನ್ನು ಒಳಗೊಂಡಿದೆ. ಚಿಲ್ಲರೆ ಹೂಡಿಕೆದಾರರು ಮತ್ತು ಅರ್ಹ ಉದ್ಯೋಗಿಗಳು ಪ್ರತಿ ಈಕ್ವಿಟಿ ಷೇರಿಗೆ 45 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಪಾಲಿಸಿದಾರರು ಪ್ರತಿ ಷೇರಿಗೆ 60 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಾರೆ.

ಇದನ್ನೂ ಓದಿ: Gold Price Today: ಅಗ್ಗವಾಯ್ತು ಚಿನ್ನ, ಬೆಳ್ಳಿ ದರ; ಇನ್ನೇಕೆ ತಡ ಮನೆಗೆ ಬರಮಾಡಿಕೊಳ್ಳಿ ಹಳದಿ ಲೋಹ; ಇಲ್ಲಿದೆ ಇವತ್ತಿನ ಬೆಲೆ

ಒಟ್ಟಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಇನಿಷಿಯಲ್ ಪಬ್ಲಿಕ್ ಆಫರಿಗ್ ಪ್ರಕ್ರಿಯೆಗೆ ಹೆಚ್ಚಿನ ಯಶಸ್ಸು ದೊರೆತಿದೆ ಎನ್ನಲಾಗಿದ್ದು ಇದು ಜನರು ಸಂಸ್ಥೆಯ ಬಗ್ಗೆ ಹೊಂದಿರುವ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ ಎಂದು ಹೇಳಬಹುದಾಗಿದೆ. ದೀರ್ಘಾವಧಿಯಲ್ಲಿ ಇದು ಹಣ ಹೂಡಿಕೆದಾರರಿಗೆ ಉತ್ತಮ ಆದಾಯ ತಂದುಕೊಡಬಹುದೆಂದು ಹಲವು ಪರಿಣಿತರ ಅಭಿಪ್ರಾಯವಾಗಿದೆ.
Published by:Ashwini Prabhu
First published: