• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Home Loan: ಗೃಹ ಸಾಲ ಪಡೆಯಲು ನಿರ್ಧರಿಸಿದ್ದೀರಾ? ಹಾಗಿದ್ದರೆ ಈ ಬ್ಯಾಂಕ್‌ಗಳು ನಿಮಗೆ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತೆ ಲೋನ್‌

Home Loan: ಗೃಹ ಸಾಲ ಪಡೆಯಲು ನಿರ್ಧರಿಸಿದ್ದೀರಾ? ಹಾಗಿದ್ದರೆ ಈ ಬ್ಯಾಂಕ್‌ಗಳು ನಿಮಗೆ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತೆ ಲೋನ್‌

ಗೃಹ ಸಾಲ

ಗೃಹ ಸಾಲ

 • Trending Desk
 • 4-MIN READ
 • Last Updated :
 • Bangalore, India
 • Share this:

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ರೆಪೊ ದರಗಳನ್ನು ಹೆಚ್ಚಿಸಿದ ಸುದ್ದಿ ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಇದಕ್ಕೆ ಅನುಗುಣವಾಗಿ ಹಲವಾರು ಬ್ಯಾಂಕುಗಳು (Banks) ತಮ್ಮ ಗ್ರಾಹಕರಿಗೆ ನೀಡುವ ಗೃಹ ಸಾಲಗಳ (Home Loan) ಮೇಲಿನ ಬಡ್ಡಿದರಗಳನ್ನು ಸಹ ಕೊಂಚ ಮಟ್ಟಿಗೆ ಜಾಸ್ತಿ ಮಾಡಿದ್ದವು.


ಅಕ್ಟೋಬರ್ 1, 2019 ರ ನಂತರ ಬ್ಯಾಂಕುಗಳು ಮಂಜೂರು ಮಾಡಿದ ಎಲ್ಲಾ ಫ್ಲೋಟಿಂಗ್-ರೇಟ್ ಚಿಲ್ಲರೆ ಗೃಹ ಸಾಲಗಳು ಹೊರಗಿನ ಮಾನದಂಡಗಳೊಂದಿಗೆ ಸಂಪರ್ಕ ಹೊಂದಿದ್ದು, ಇದರಲ್ಲಿ ಹೆಚ್ಚಿನದ್ದು ಎಂದರೆ ಬದಲಾಗುವ ರೆಪೊ ದರ ಅಂತ ಹೇಳಬಹುದು. ಆದ್ದರಿಂದ, ಎಲ್ಲಾ ಬ್ಯಾಂಕುಗಳು ಸಂಪೂರ್ಣ ದರ ಹೆಚ್ಚಳವನ್ನು ಅಸ್ತಿತ್ವದಲ್ಲಿರುವ ಗೃಹ ಸಾಲಗಾರರಿಗೆ ವರ್ಗಾಯಿಸುತ್ತವೆ.


ಬಡ್ಡಿ ಮತ್ತು ಇಎಂಐ ಹೊರೆ ತೀವ್ರವಾಗಿ ಜಾಸ್ತಿ ಆಗುತ್ತಿದ್ದರೂ, ಕೆಲವು ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಬ್ಯಾಂಕುಗಳು ತಮ್ಮ ಕೊಡುಗೆಗಳ ಮೇಲೆ ಶೇಕಡಾ 8.75 ಕ್ಕಿಂತ ಕಡಿಮೆ ಬಡ್ಡಿದರಗಳನ್ನು ನೀಡುತ್ತಿವೆ ಎಂದು ಬ್ಯಾಂಕ್ ಬಜಾರ್ ಸಂಗ್ರಹಿಸಿದ ಅಂಕಿ ಅಂಶಗಳು ಹೇಳುತ್ತಿವೆ.


ಇದನ್ನೂ ಓದಿ: RBI Repo ದರ ಏರಿಕೆ ನಿಮ್ಮ ಮನೆ-ವಾಹನ ಸಾಲಗಳ EMI ಅನ್ನು ಎಷ್ಟು ದುಬಾರಿ ಮಾಡಿದೆ ನೋಡಿ


ಜಿಐಸಿ ಹೌಸಿಂಗ್ ಫೈನಾನ್ಸ್


ಇದು ಪ್ರಸ್ತುತ ಗೃಹ ಸಾಲಗಳ ಮೇಲೆ ಶೇಕಡಾ 8.10 ರಷ್ಟು ಕಡಿಮೆ ಬಡ್ಡಿದರವನ್ನು ನೀಡುತ್ತದೆ. 20 ವರ್ಷಗಳ ಅವಧಿಯ 75 ಲಕ್ಷ ರೂಪಾಯಿಗಳ ಗೃಹ ಸಾಲದ ಇಎಂಐ 63,201 ರೂಪಾಯಿಯಾಗುತ್ತದೆ. ಅಗ್ಗದ ಸಾಲದಾತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಎಚ್ಎಫ್‌ಸಿ ಗಳು ಪಡೆದಿವೆ, ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ ರೆಪ್ಕೊ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಶೇಕಡಾ 8.3 ರಷ್ಟು ಬಡ್ಡಿದರವನ್ನು ನೀಡುತ್ತದೆ ಮತ್ತು ಇದಕ್ಕೆ ಇಎಂಐ 64,141 ರೂಪಾಯಿಯಾಗುತ್ತದೆ.


ಪ್ರಸ್ತುತ ಶೇಕಡಾ 8.45 ರಷ್ಟು ಬಡ್ಡಿದರವನ್ನು ನೀಡುತ್ತಿದೆಯಂತೆ ಎಚ್‌ಡಿಎಫ್‌ಸಿ


ಭಾರತದ ಅತಿದೊಡ್ಡ ಅಡಮಾನ ಸಾಲದಾತ ಎಚ್‌ಡಿಎಫ್‌ಸಿ ಪ್ರಸ್ತುತ ಶೇಕಡಾ 8.45 ರಷ್ಟು ಬಡ್ಡಿದರವನ್ನು ನೀಡುತ್ತದೆ. 20 ವರ್ಷಗಳ ಅವಧಿಯ 75 ಲಕ್ಷ ರೂಪಾಯಿಗಳ ಸಾಲದ ಮೇಲಿನ ಇಎಂಐ 64,850 ರೂಪಾಯಿಯಾಗುತ್ತದೆ.


ಪಿಎನ್‌ಬಿ ಹೌಸಿಂಗ್ ಫೈನಾನ್ಸ್


ಸರ್ಕಾರಿ ಸ್ವಾಮ್ಯದ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಪ್ರಸ್ತುತ ಶೇಕಡಾ 8.5 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಈ ಸಂದರ್ಭದಲ್ಲಿ ಇಎಂಐ 65,087 ರೂಪಾಯಿಯಾಗುತ್ತದೆ.


ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ


ಸಾರ್ವಜನಿಕ ವಲಯದ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲೆ ಶೇಕಡಾ 8.55 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದರ ಇಎಂಐ 65,324 ರೂಪಾಯಿಯಾಗುತ್ತದೆ.


ಇದನ್ನೂ ಓದಿ: Karnataka Budget 2023: ಬಜೆಟ್​ನಲ್ಲಿ ಅನ್ನದಾತರಿಗೆ ಬಂಪರ್ ನ್ಯೂಸ್, ಶೂನ್ಯ ಬಡ್ಡಿದರಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!


ಈ ಬ್ಯಾಂಕುಗಳು ನೀಡುವ ಸಾಲದ ಮೇಲೆ 8.6 ರಷ್ಟಿದೆ ಬಡ್ಡಿದರ


ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಬಜಾಜ್ ಫಿನ್ ಸರ್ವ್ ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಗೃಹ ಸಾಲದ ಬಡ್ಡಿದರಗಳು ಶೇಕಡಾ 8.6 ರಷ್ಟಿದೆ. 20 ವರ್ಷಗಳ ಅವಧಿಯ 75 ಲಕ್ಷ ರೂಪಾಯಿಗಳ ಸಾಲದ ಮೇಲಿನ ಇಎಂಐ 65,562 ರೂಪಾಯಿಯಾಗಿರುತ್ತದೆ.


ಕೋಟಕ್ ಮಹೀಂದ್ರಾ ಮತ್ತು ಎಲ್ಐಸಿ ಹೌಸಿಂಗ್ ಫೈನಾನ್ಸ್ ನ ಬಡ್ಡಿದರ ಒಂದೇ ಆಗಿದೆ


ಕೋಟಕ್ ಬ್ಯಾಂಕ್ ಪ್ರಸ್ತುತ ಗೃಹ ಸಾಲದ ಮೇಲೆ ಶೇಕಡಾ 8.65 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. 20 ವರ್ಷಗಳ ಅವಧಿಯೊಂದಿಗೆ 75 ಲಕ್ಷ ರೂಪಾಯಿಗಳ ಗೃಹ ಸಾಲದ ಮೇಲಿನ ಇಎಂಐ 65,801 ರೂಪಾಯಿ ಆಗಿರುತ್ತದೆ. ಸರ್ಕಾರಿ ಸ್ವಾಮ್ಯದ ಹೌಸಿಂಗ್ ಫೈನಾನ್ಸ್ ದೈತ್ಯ ಎಲ್ಐಸಿ ಹೌಸಿಂಗ್ ಫೈನಾನ್ಸ್ ನ ಬಡ್ಡಿದರಗಳು ಸಹ ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತೆಯೇ ಇವೆ.


ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್


ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಪ್ರಸ್ತುತ ತನ್ನ ಗೃಹ ಸಾಲಗಳ ಮೇಲೆ ಶೇಕಡಾ 8.75 ರಷ್ಟು ಬಡ್ಡಿಯನ್ನು ವಿಧಿಸುತ್ತಿದೆ. 75 ಲಕ್ಷ ರೂಪಾಯಿ ಸಾಲಕ್ಕೆ ಇಎಂಐ 66,278 ರೂಪಾಯಿ ಆಗಿರುತ್ತದೆ.


ಎಲ್ಲಾ ಪಟ್ಟಿ ಮಾಡಲಾದ (ಬಿಎಸ್ಇ) ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಮತ್ತು 75 ಲಕ್ಷ ರೂಪಾಯಿವರೆಗಿನ ಗೃಹ ಸಾಲವನ್ನು ನೀಡುವ ನ್ಯಾಷನಲ್ ಹೌಸಿಂಗ್ ಬ್ಯಾಂಕಿನ ವೆಬ್ಸೈಟ್‌ನಲ್ಲಿ ಪಟ್ಟಿ ಮಾಡಲಾದ ಹೌಸಿಂಗ್ ಫೈನಾನ್ಸ್ ಕಂಪನಿಗಳ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ದತ್ತಾಂಶ ಸಂಕಲನಕ್ಕಾಗಿ ಪರಿಗಣಿಸಲಾಗಿದೆ. ತಮ್ಮ ವೆಬ್ಸೈಟ್ ಗಳಲ್ಲಿ ಡೇಟಾ ಲಭ್ಯವಿಲ್ಲದ ಬ್ಯಾಂಕುಗಳು, ಎಚ್ಎಫ್‌ಸಿಗಳನ್ನು ಇಲ್ಲಿ ಪರಿಗಣಿಸಲಾಗಿಲ್ಲ.


ಬ್ಯಾಂಕುಗಳು ಮತ್ತು ಎಚ್ಎಫ್‌ಸಿ ಗಳನ್ನು ಬಡ್ಡಿದರದ ಆಧಾರದ ಮೇಲೆ ಆರೋಹಣ ಕ್ರಮದಲ್ಲಿ ಪಟ್ಟಿ ಮಾಡಲಾಗಿದೆ. 20 ವರ್ಷಗಳ ಅವಧಿಗೆ 75 ಲಕ್ಷ ರೂಪಾಯಿಗಳ ಸಾಲಕ್ಕೆ ಆಯಾ ಬ್ಯಾಂಕ್ ಗಳು ಉಲ್ಲೇಖಿಸಲಾದ ಬಡ್ಡಿದರದ ಆಧಾರದ ಮೇಲೆ ಇಎಂಐ ಲೆಕ್ಕಹಾಕಲಾಗಿರುತ್ತದೆ. ಈ ದತ್ತಾಂಶವನ್ನು ಬ್ಯಾಂಕ್ ಬಜಾರ್ ಮತ್ತು ಮನಿಕಂಟ್ರೋಲ್ ರಿಸರ್ಚ್ ತಂಡ ಇದನ್ನು ಸಂಗ್ರಹಿಸಿದೆ.

First published: