Savings Scheme: ಹಿರಿಯ ನಾಗರಿಕರು ಮಾಸಿಕ 70,500 ರೂಪಾಯಿ ಗಳಿಸಬಹುದು! ಅದು ಹೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಜೆಟ್ ನಲ್ಲಿ ಕೆಲ ಯೋಜನೆಗಳಿಗೆ ಇನ್ನಷ್ಟು ಮೆರುಗು ನೀಡುವ ಮೂಲಕ ಖಚಿತ ಆದಾಯ ನೀಡುವಂತಹ ಅಪಾಯ-ಮುಕ್ತ ಹೂಡಿಕೆಗಳನ್ನು ನೋಡುತ್ತಿರುವ ಹಿರಿಯ ನಾಗರಿಕರಿಗೆ ಬಲು ಉಪಯುಕ್ತ ಬಜೆಟ್ ಆಗಿ ಹೊರಹೊಮ್ಮಿದೆ ಎಂದು ಹೇಳಬಹುದು.

  • Trending Desk
  • 3-MIN READ
  • Last Updated :
  • Share this:

2023ರ ಭಾರತದ ಹೊಸ ಬಜೆಟ್ ಅನ್ನು ಈಗಾಗಲೇ ಮಂಡಿಸಿಯಾಗಿದೆ. ಈ ಬಾರಿಯ ಬಜೆಟ್ ಹಲವು ವಿಶೇಷತೆಗಳಿಂದ ಕೂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅಲ್ಲದೆ ಈ ಬಾರಿಯ ಬಜೆಟ್ ಹಿರಿಯ ನಾಗರಿಕರ ಪಾಲಿಗೆ ಸೂಪರ್ ಹಿಟ್ ಬಜೆಟ್ ಎನ್ನುವಂತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹೌದು, ಈ ಬಜೆಟ್ ನಲ್ಲಿ ಕೆಲ ಯೋಜನೆಗಳಿಗೆ ಇನ್ನಷ್ಟು ಮೆರುಗು ನೀಡುವ ಮೂಲಕ ಖಚಿತ ಆದಾಯ ನೀಡುವಂತಹ ಅಪಾಯ-ಮುಕ್ತ ಹೂಡಿಕೆಗಳನ್ನು ನೋಡುತ್ತಿರುವ ಹಿರಿಯ ನಾಗರಿಕರಿಗೆ ಬಲು ಉಪಯುಕ್ತ ಬಜೆಟ್ ಆಗಿ ಹೊರಹೊಮ್ಮಿದೆ ಎಂದು ಹೇಳಬಹುದು.


ಹಿರಿಯ ನಾಗರಿಕರಿಗೆ ಬಂಪರ್!


ಈ ಬಾರಿಯ ಬಜೆಟ್ ನಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆ, ಪೋಸ್ಟ್ ಆಫಿಸ್ ಮಾಸಿಕ ಆದಾಯ ಯೋಜನೆಗಳಂತಹ ಕೆಲವು ಯೋಜನೆಗಳಿಗೆ ಫೇಸ್ ಲಿಫ್ಟ್ ನೀಡಲಾಗಿದೆ. ಇವುಗಳಲ್ಲದೆ ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಎಲ್ಲ ವಯಸ್ಸಿನ ಮಹಿಳೆಯರಿಗೆ ಅನ್ವಯವಾಗುವಂತಹ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಎಂಬ ಹೊಸ ಯೋಜನೆಯನ್ನೂ ಸಹ ಘೋಷಿಸಿದ್ದಾರೆ. ಈಗಾಗಲೇ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಎಂಬುದು ಹಿರಿಯ ನಾಗರಿಕಗಾಗಿ ಚಾಲ್ತಿಯಲ್ಲಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.


ಈ ಎಲ್ಲ ಯೋಜನೆಗಳನ್ನು ಒಗ್ಗೂಡಿಸಿದಾಗ ಹಿರಿಯ ದಂಪತಿಗಳು ಸುಮಾರು 1.1 ಕೋಟಿ ರೂಗಳಷ್ಟು ಹೂಡಿಕೆಯ ಮೇಲೆ ಮಾಸಿಕವಾಗಿ ರೂ. 70,500 ಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಈ ಆದಾಯ ನಿಶ್ಚಿತವಾಗಿ ಕೈತಲುಪುವ ಆದಾಯವಾಗಲಿದೆ.


ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ?


ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಈ ಮೊದಲು ಗರಿಷ್ಠ 15 ಲಕ್ಷ ಹೂಡಬಹುದಾಗಿತ್ತು, ಅದನ್ನು ಈ ಬಾರಿ ಏರಿಸಿದ್ದು ಈಗ ಗರಿಷ್ಠ 30 ಲಕ್ಷ ರೂಗಳಷ್ಟು ಹೂಡಿಕೆ ಮಾಡಬಹುದಾಗಿದೆ. ಅಂದರೆ ಹಿರಿಯ ವಯಸ್ಸಿನ ದಂಪತಿಗಳು ಒಟ್ಟಾಗಿ 60 ಲಕ್ಷ ರೂಗಳನ್ನು ಹೂಡಿಕೆ ಮಾಡಬಹುದು ಎಂದಾಗಿದೆ. ಈ ಯೋಜನೆ ಭಾರತೀಯ ಅಂಚೆ ಕಚೇರಿ, ವಾಣಿಜ್ಯ ಬ್ಯಾಂಕುಗಳಲ್ಲಿ ಐದು ವರ್ಷಗಳ ಅವಧಿಗೆ ಲಭ್ಯವಿದೆ.


ಮ್ಯಾಚ್ಯೂರಿಟಿ ಆಗುವ ಸಂದರ್ಭದಲ್ಲಿ ಇದನ್ನು ಮತ್ತೆ ಮೂರು ವರ್ಷಗಳಷ್ಟು ಅವಧಿಗೆ ಏರಿಸಬಹುದಾಗಿದೆ. ಇಲ್ಲಿ ಇತರೆ ಸಣ್ಣ ಹೂಡಿಕೆ ಉಳಿತಾಯ ಯೋಜ್ನೆಗಳಂತೆ ಪ್ರತಿ ತ್ರೈಮಾಸಿಕಕ್ಕೆ ಇದರ ಬಡ್ಡಿದರ ಪರಿಷ್ಕರಣೆ ಆಗುತ್ತಿರುತ್ತದೆ. ಆದರೆ ಇದನ್ನು ಹೂಡುವ ಸಂದರ್ಭದಲ್ಲಿ ಆಶ್ವಾಸಿಸಲಾದ ಬಡ್ಡಿದರವನ್ನು ಅವಧಿಯ ಮುಕ್ತಾಯದ ಸಂದರ್ಭದಲ್ಲಿ ಖಚಿತವಾಗಿ ಪಾವತಿಸಲಾಗುತ್ತದೆ. ಪ್ರಸ್ತುತ ಈ ಯೋಜನೆಯು 8% ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪಾವತಿಸುತ್ತದೆ.


ಪೋಸ್ಟ್ ಆಫಿಸ್ ಮಂತ್ಲಿ ಇನ್ಕಮ್ ಸ್ಕೀಮ್!


ಇನ್ನು ಪೋಸ್ಟ್ ಆಫಿಸ್ ಮಂತ್ಲಿ ಇನ್ಕಮ್ ಸ್ಕೀಮ್ ಅಡಿಯಲ್ಲಿ ಒಬ್ಬರಿಗೆ ನೀಡಲಾಗಿದ್ದ ಗರಿಷ್ಠ ಹೂಡಿಕೆಯ ಮೊತ್ತವಾದ 4.5 ಲಕ್ಷವನ್ನು ಏರಿಸಿ 9 ಲಕ್ಷ ಮಾಡಲಾಗಿದೆ. ಅಂದರೆ ಹಿರಿಯ ದಂಪತಿಗಳಿಬ್ಬರು ಒಟ್ಟಾಗಿ 18 ಲಕ್ಷಗಳಷ್ಟು ಠೇವಣಿ ಇಡಬಹುದು. ಇದರಡಿಯಲ್ಲಿ ಬಡ್ಡಿದರವು 7.1% ರಷ್ಟಿದ್ದು ಐದು ವರ್ಷಗಳ ಕಾಲ ಇದನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ.


ಮಹಿಳಾ ಸಮ್ಮಾನ್ ಯೋಜನೆ!


ಈಗ ಹೊಸದಾಗಿ ಘೋಷಿಸಲಾದ ಮಹಿಳಾ ಸಮ್ಮಾನ್ ಯೋಜನೆಯು ಎಲ್ಲ ವಯೋಮಾನದ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವೇ ಅನ್ವಯವಾಗಲಿದ್ದು ಇದರಲ್ಲಿ ಗರಿಷ್ಠ ಹೂಡಿಕೆ ಎರಡು ಲಕ್ಷಗಳಾಗಿದ್ದು ಎರಡು ವರ್ಷಗಳ ಅವಧಿಗೆ ಇದನ್ನು ಇಡಬಹುದಾಗಿದೆ. ಈ ಯೋಜನೆಯು ಮಾರ್ಚ 2025ರ ವರೆಗೆ ಲಭ್ಯವಿದ್ದು 7.5% ರಷ್ಟು ಬಡ್ಡಿಯನ್ನು ಇದು ನೀಡುತ್ತದೆ.


ಪ್ರಧಾನ್ ಮಂತ್ರಿ ವಯ ವಂದನಾ ಯೋಜನೆ!


ಇವೆಲ್ಲವುಗಳ ಜೊತೆಗೆ ಲೈಫ್ ಇನ್ಶುರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ನಡೆಸಲ್ಪಡುತ್ತಿರುವ ಪ್ರಧಾನ್ ಮಂತ್ರಿ ವಯ ವಂದನಾ ಯೋಜನೆಯೂ ಹಿರಿಯ ನಾಗರಿಕರಿಗೆ ಲಭ್ಯವಿದ್ದು ಅದರಡಿಯಲ್ಲಿ ಗರಿಷ್ಠ ಹೂಡಿಕೆ 15 ಲಕ್ಷಗಳಾಗಿದ್ದು 10 ವರ್ಷಗಳ ಅವಧಿಗೆ ಇಡಬಹುದಾಗಿದೆ ಹಾಗೂ ಇದರಲ್ಲಿ 7.4% ರಷ್ಟು ಬಡ್ಡಿ ಸಿಗುತ್ತದೆ. ಇದರಡಿಯಲ್ಲಿ ಹಿರಿಯ ದಂಪತಿಗಳು 30 ಲಕ್ಷಗಳಷ್ಟು ಹೂಡಿಕೆ ಮಾಡಬಹುದಾಗಿದೆ.




ಮೇಲಿನ ಎಲ್ಲ ನಾಲ್ಕು ಯೋಜನೆಗಳು ಹಿರಿಯರಿಗೆ ಅನ್ವಯವಾಗಲಿದ್ದು ಈ ಮೂಲಕ ಹಿರಿಯ ದಂಪತಿಗಳು ಒಟ್ಟಾರೆಯಾಗಿ ಎಲ್ಲವನ್ನೂ ಸೇರಿಸಿದಾಗ ಸುಮಾರು 1.1 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಬಹುದಾಗಿದೆ. ಅಲ್ಲದೆ ಹಳೆಯ ತೆರಿಗೆ ಕಾಯ್ದೆಯಲ್ಲಿದ್ದರೆ ಅವರಿಗೆ 80C ಅಡಿಯಲ್ಲಿ 1.5 ಲಕ್ಷದಷ್ಟು ಕಡಿತದ ಸೌಲಭ್ಯವೂ ಸಿಗಲಿದೆ.

Published by:ವಾಸುದೇವ್ ಎಂ
First published: