ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ? ಹೊಸಾ ರೂಲ್ಸ್!

2020ರಲ್ಲಿ ಹಿರಿಯ ಪ್ರಯಾಣಿಕರಿಗೆ (Senior Citizens) ನೀಡಲಾಗುತ್ತಿದ್ದ, ಟಿಕೆಟ್ ದರ(Ticket Price)ದಲ್ಲಿನ ವಿನಾಯ್ತಿ ರದ್ದುಗೊಳಿಸಲಾಗಿತ್ತು. ಆದ್ರೆ ಈವರೆಗೂ ಸೇವೆಯನ್ನು ರೈಲ್ವೇ ಇಲಾಖೆ ಆರಂಭಿಸಿಲ್ಲ. ಈ ಸಂಬಂಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnav)  ಉತ್ತರ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಎರಡನೇ ಅಲೆಯ (Corona second Wave) ಬಳಿಕ ಒಂದೊಂದೇ ಆರ್ಥಿಕ ಚಟುವಟಿಕೆಗಳು (Financial Activities) ತೆರೆದುಕೊಳ್ಳುತ್ತಿವೆ. ಭಾರತೀಯ ರೈಲ್ವೇ (Indian Railways) ಸಹ ಕ್ಯಾಂಟಿನ್, ಹೊದಿಕೆ (Canteen, Bedroll Kit) ನೀಡುವಂತಹ ಸೇವೆಗಳನ್ನು ಆರಂಭಿಸುತ್ತಿವೆ, ಆದ್ರೆ 2020ರಲ್ಲಿ ಹಿರಿಯ ಪ್ರಯಾಣಿಕರಿಗೆ (Senior Citizens) ನೀಡಲಾಗುತ್ತಿದ್ದ, ಟಿಕೆಟ್ ದರ(Ticket Price)ದಲ್ಲಿನ ವಿನಾಯ್ತಿ ರದ್ದುಗೊಳಿಸಲಾಗಿತ್ತು. ಆದ್ರೆ ಈವರೆಗೂ ಸೇವೆಯನ್ನು ರೈಲ್ವೇ ಇಲಾಖೆ ಆರಂಭಿಸಿಲ್ಲ. ಈ ಸಂಬಂಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnav)  ಉತ್ತರ ನೀಡಿದ್ದಾರೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಪ್ರಸ್ತುತ ಟಿಕೆಟ್ ದರದಲ್ಲಿ ಕೆಲವು ವರ್ಗದ ಜನರಿಗೆ ನೀಡಲಾದ ವಿನಾಯಿತಿ ಅಥವಾ ರಿಯಾಯಿತಿಗಳನ್ನು ಮರು ಆರಂಭಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಪ್ರಯಾಣಿಕರಿಗೆ ನೀಡಲಾಗಿದ್ದ ರಿಯಾಯಿತಿಯನ್ನು ಹಿಂಪಡೆಯಲಾಗಿದೆ. ಹಾಗೆ ಈ ವಿಶೇಷ ವಿನಾಯ್ತಿಯನ್ನು ನಾವು ಯಾವುದೇ ಪರಿಗಣನೆಯನ್ನು ನೀಡಲಾಗಿಲ್ಲ ಎಂದು ರೈಲ್ವೆ ಸಚಿವರು ಹೇಳಿದರು

20 ಮಾರ್ಚ್ 2020ರಿಂದ ವಿನಾಯ್ತಿ ರದ್ದು

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಇದಕ್ಕೂ ಮುನ್ನ, ರೈಲು ಪ್ರಯಾಣ ದರದಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು 20 ಮಾರ್ಚ್ 2020 ರಿಂದ ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ. ಆದಾಗ್ಯೂ, ನಾಲ್ಕು ವರ್ಗದ ಅಂಗವಿಕಲರು, 11 ವರ್ಗದ ರೋಗಿಗಳು ಮತ್ತು ವಿದ್ಯಾರ್ಥಿಗಳು ಈ ಟಿಕೆಟ್ ದರದ ವಿನಾಯ್ತಿಯನ್ನು ಪಡೆಯುತ್ತಿದ್ದಾರೆ ಎಂದು ಸಚಿವರು ಸಂಸತ್ತಿಗೆ ತಿಳಿಸಿದರು.

ಇದನ್ನೂ ಓದಿ:  Credit Card: ಟ್ರಿಪ್ ಹೋಗೋಕೆ ಈ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಭಾರೀ ಆಫರ್​ಗಳಿವೆ

ಹಿರಿಯ ನಾಗರಿಕರಿಗೆ ಎಷ್ಟು ರಿಯಾಯಿತಿ ನೀಡಲಾಗುತ್ತಿತ್ತು?

ಭಾರತೀಯ ರೈಲ್ವೆಯ ಎಲ್ಲಾ ರೈಲುಗಳಲ್ಲಿ, ಹಿರಿಯ ನಾಗರಿಕರು ಕೊರೊನಾ ಮೊದಲು ಟಿಕೆಟ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದರು. 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರನ್ನು ರೈಲ್ವೇಯಲ್ಲಿ ಹಿರಿಯ ನಾಗರಿಕರ ವಿಭಾಗದಲ್ಲಿ ಇರಿಸಲಾಗಿದೆ.

ಕೊರೊನಾ ಆರಂಭಕ್ಕೂ ಮೊದಲು, ರಾಜಧಾನಿ, ಶತಾಬ್ದಿ, ದುರಂತೋ ಸೇರಿದಂತೆ ಎಲ್ಲಾ ಮೇಲ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ, ಪುರುಷರಿಗೆ ಮೂಲ ದರದಲ್ಲಿ 40 ಪ್ರತಿಶತ ಮತ್ತು ಮಹಿಳೆಯರಿಗೆ ಮೂಲ ದರದಲ್ಲಿ 50 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುತ್ತಿತ್ತು.

ಬಾರಿಯೂ ರೈಲ್ವೇಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ ಸಂಬಳ

ವರ್ಷಗಳಿಂದ ಪ್ರೊಡೆಕ್ಟಿವಿಟಿ ಲಿಂಕ್ ಬೋನಸ್ ( productivity-linked bonus )ರೈಲ್ವೇಯ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ (non-gazetted railway employees) ಸಿಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ರೈಲ್ವೇಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನದ ಸಂಬಳಕ್ಕೆ ಸಮವಾದ ಬೋನಸ್ ಸಿಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:  FD: ಫಿಕ್ಸೆಡ್ ಡೆಪಾಸಿಟ್ ಮಾಡುವ ಪ್ಲಾನ್ ಇದೆಯಾ? ಹಾಗಿದ್ರೆ ಸ್ವಲ್ಪ ದಿನ ವೇಟ್ ಮಾಡಿ

2019-20ರಲ್ಲಿ ನೀಡಲಾದ ಬೋನಸ್ 11.58 ಲಕ್ಷ ಜನ ಪಡೆದುಕೊಂಡಿದ್ದರು. ಸರ್ಕಾರ ಬೋನಸ್ ರೂಪದಲ್ಲಿ ಒಟ್ಟು 2,081.68 ಕೋಟಿ ರೂಪಾಯಿ ಮೀಸಲಿರಿತ್ತು. ಈ ವರ್ಷ 1984.73  ಕೋಟಿ ರೂ. ಖರ್ಚು ಮಾಡಲಿದೆ.

ರಫ್ತಿನಲ್ಲಿ ದಾಖಲೆ

ಕೋವಿಡ್ ಹೊಡೆತದ ನಡುವೆಯೂ ಉತ್ಪಾದನಾ ವಲಗಳಲ್ಲಿ ಹೊಸ ಹೊಸ ಸುಧಾರಣೆಗಳನ್ನು ತರಲಾಗುತ್ತಿದೆ. ಕೇವಲ ಟೆಕ್ಸಟೈಲ್ ಅಲ್ಲದೇ ಎಲ್ಲ ವಲಯಗಳಲ್ಲಿ ಉತ್ಪಾದನೆ ಹೆಚ್ಚಾಗುತ್ತಿದೆ. ಉತ್ಪಾದನ ವಲಯಗಳಿಗೆ ಉತ್ತೇಜನ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ಪ್ರೊಡೆಕ್ಷನ್ ಲಿಂಕ್ ಬೋನಸ್ ನೀಡಲಾಗುತ್ತಿದೆ. ಕಳೆದ ಆರು ತಿಂಗಳಲ್ಲಾದ ರಫ್ತು ಇದುವರೆಗಿನ ದಾಖಲೆಯಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಶೀಘ್ರದಲ್ಲಿಯೇ ಪಿಎಂ ಮಿತ್ರ (MITRA- Mega Investment Textiles Region and Apparel Park) ಯೋಜನೆಯನ್ನು ಆರಂಭಿಸಲಾಗುವುದು. ಇದರಿಂದ ಟೆಕ್ಸಟೈಲ್ ಮತ್ತು ಗಾರ್ಮೆಂಟ್ ಕ್ಷೇತ್ರಗಳಿಗೆ ದೊಡ್ಡ ಯೋಗದಾನ ಸಿಗಲಿದೆ.
Published by:Mahmadrafik K
First published: