Success Story: ನಿವೃತ್ತಿ ಬಳಿಕ ದಾಳಿಂಬೆ ಹಣ್ಣು ಬೆಳೆದು 7 ಲಕ್ಷ ಗಳಿಕೆ! ಮೂಗಿನ ಮೇಲೆ ಬೆರಳಿಡುವಂಥಾ ಸುದ್ದಿ ಇದು!

ಈ ಹಣ್ಣಿನ ಕೃಷಿಯಿಂದ ಅದ್ಭುತ ಯಶಸ್ಸು ಪಡೆದಿರುವ ದಿಬಾಕರ್ ಬೆಹೆರಾ ವರ್ಷಕ್ಕೆ 6-7 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಇದಲ್ಲದೆ ತಮ್ಮ ಕೃಷಿ ಜೊತೆಗೆ ಇತರೆ ಏಳೆಂಟು ಕುಟುಂಬಗಳಿಗೆ ಉದ್ಯೋಗ ಸೃಷ್ಟಿಸುವ ಮೂಲಕ ನೆರವಾಗಿದ್ದಾರೆ.

ದಾಳಿಂಬೆ ಕೃಷಿ

ದಾಳಿಂಬೆ ಕೃಷಿ

  • Share this:
ಇತ್ತೀಚೆಗೆ ಹವ್ಯಾಸವಾಗಿಯೋ, ಆಸಕ್ತಿಯಿಂದಲೂ ಕೃಷಿ (agriculture) ಮೇಲಿನ ಒಲವು ಹೆಚ್ಚಾಗುತ್ತಿದೆ. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಅಥವಾ ನಿವೃತ್ತಿಯ (Retirement) ಸಮಯ ಕಳೆಯಲು ಜನ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಮೊನ್ನೆ ವೈದ್ಯರೊಬ್ಬರು ತಮ್ಮ ವೃತ್ತಿಯ ಜೊತೆಜೊತೆಯೇ ಲಾಭದಾಯಕ ಡ್ರ್ಯಾಗನ್ ಹಣ್ಣು ಬೆಳೆದು ಕೃಷಿಯಲ್ಲಿ ಯಶಸ್ಸು ಕಂಡಿರುವ ಸುದ್ದಿ ನಾವೆಲ್ಲಾ ಕೇಳಿರುತ್ತೇವೆ. ಈಗ ಇಲ್ಲೊಬ್ಬರು ತಮ್ಮ ನಿವೃತ್ತಿ ಜೀವನವನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ದಾಳಿಂಬೆ ಹಣ್ಣನ್ನು (Pomegranate fruit) ಬೆಳೆಯುತ್ತಿದ್ದಾರೆ. ಪ್ರಸ್ತುತ, ಈ ಹಣ್ಣಿನ ಕೃಷಿಯಿಂದ ಅದ್ಭುತ ಯಶಸ್ಸು ಪಡೆದಿರುವ ದಿಬಾಕರ್ ಬೆಹೆರಾ ವರ್ಷಕ್ಕೆ 6-7 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಇದಲ್ಲದೆ ತಮ್ಮ ಕೃಷಿ ಜೊತೆಗೆ ಇತರೆ ಏಳೆಂಟು ಕುಟುಂಬಗಳಿಗೆ ಉದ್ಯೋಗ ಸೃಷ್ಟಿಸುವ ಮೂಲಕ ನೆರವಾಗಿದ್ದಾರೆ.

ನಿವೃತ್ತಿ ಜೀವನದ ಸಮಯ ಕಳೆಯಲು ಕೃಷಿ ಆಯ್ಕೆ
ನಬರಂಗಪುರ ಜಿಲ್ಲೆಯ ಉಮರ್‌ಕೋಟ್ ಪಟ್ಟಣದ ದಿಬಾಕರ್ ಬೆಹೆರಾ, ಎನ್ನುವವರು ಇಂಜಿನಿಯರ್ ಆಗಿದ್ದು, ಸದ್ಯ ನಿವೃತ್ತಿ ಪಡೆದಿದ್ದಾರೆ. ತೋಟಗಾರಿಕೆ ಮತ್ತು ಹಣ್ಣಿನ ಕೃಷಿಯಲ್ಲಿ ಬಾಲ್ಯದಿಂದಲೂ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ನಿವೃತ್ತಿ ಸಮಯವನ್ನು ತಮ್ಮಿಷ್ಟದ ಕೆಲಸ ಮಾಡುವ ಮೂಲಕ ನಿರ್ಧರಿಸಿ ದಾಳಿಂಬೆ ಕೃಷಿ ಆರಂಭಿಸಿದರು.

ಇದಕ್ಕೆಲ್ಲಾ ಮಿಗಿಲಾಗಿ ಈ ಪ್ರದೇಶದಲ್ಲಿ ಜನ ಸಾಂಪ್ರದಾಯಿಕ ಭತ್ತದ ಕೃಷಿಯನ್ನೇ ಅವಲಂಬಿಸಿ ಕಡಿಮೆ ಆದಾಯ ಗಳಿಸುತ್ತಿದ್ದರು. ಭತ್ತದ ಜೊತೆ ಬೇರೆ ಕೃಷಿಯನ್ನು ಸಹ ಮಾಡಬಹುದೆಂಬ ಆಶಾಕಿರಣವನ್ನು ರೈತರಲ್ಲಿ ಮೂಡಿಸಿದ್ದಾರೆ.

ಮೂರು ಎಕರೆಯಲ್ಲಿ ದಾಳಿಂಬೆ ಕೃಷಿ
ಮೂರು ಎಕರೆಯಲ್ಲಿ ಹರಡಿರುವ ದಿಬಾಕರ್ ಬೆಹೆರಾ ಅವರ ಹಚ್ಚ ಹಸಿರಿನ ದಾಳಿಂಬೆ ತೋಟ ನಿರ್ಮಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಉಕ್ಕಿನಂತಹ ಇಚ್ಛೆ ಮತ್ತು ಅವಿರತ ಪ್ರಯತ್ನಗಳ ಫಲಿತಾಂಶವಾಗಿದೆ ಈ ದಾಳಿಂಬೆ ತೋಟ ಎನ್ನಬಹುದು. ಪ್ರತಿದಿನ ತನ್ನ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡುತ್ತಿದ್ದ ಅಸಿಸ್ಟೆಂಟ್ ಇಂಜಿನಿಯರ್ ಆಗಿ ನಿವೃತ್ತರಾದ ನಂತರ ಬೆಹೆರಾ ಕೃಷಿ ಬಗ್ಗೆ ಉತ್ತಮವಾಗಿ ತಿಳಿಯಲು, ಹೆಚ್ಚಿನ ಲಾಭ ಗಳಿಸಲು, ಉತ್ತಮ ಗುಣಮಟ್ಟದ ಬಗ್ಗೆ ಮಾಹಿತಿ ಪಡೆಯಲು ಆನ್ ಲೈನ್ ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:  Success Story: 85ರಲ್ಲಿ ಪತ್ನಿ ಜೊತೆ ಬ್ಯುಸಿನೆಸ್​ ಆರಂಭಿಸಿದ ಅಜ್ಜ! ಚಿಕ್ಕ ವಯಸ್ಸಿನ ಕನಸು ಕೊನೆಗೂ ನನಸಾಯಿತು

ಕೋವಿಡ್ ಸಮಯದಲ್ಲಿ, 'ಭಾರತೀಯ ಚಾಸಿ ಸಂಘ'ಕ್ಕೆ ಸೇರಿದರು ಮತ್ತು ನಂತರ ಗುಜರಾತ್ ಮೂಲದ ಪ್ರೊಫೆಸರ್ ಬಿಟಿ ಗೋರ್ ಅವರನ್ನು ಸಂಪರ್ಕಿಸಿ ದಾಳಿಂಬೆ ಕೃಷಿ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ಮತ್ತು ಮಾರ್ಗದರ್ಶನ ಪಡೆದರು.

3 ಎಕರೆ ತೋಟ, 1,050 ದಾಳಿಂಬೆ ಗಿಡ... ವರ್ಷಕ್ಕೆ 6 ರಿಂದ 7 ಲಕ್ಷ ಆದಾಯ
ಗಮನಾರ್ಹವಾಗಿ, ದಾಳಿಂಬೆ ಕೃಷಿಯ ಪ್ರಯೋಜನವೆಂದರೆ ಈ ಸಸ್ಯಗಳು ಬರ-ನಿರೋಧಕ ಮತ್ತು ಸ್ವಲ್ಪ ನೀರಿನಿಂದಲೂ ಬದುಕಬಲ್ಲದು. “ನಾನು ದಾಳಿಂಬೆ ಸಸಿಗಳನ್ನು ಖರೀದಿಸಿದೆ ಮತ್ತು ಮೂರು ಎಕರೆ ಕೃಷಿ ಭೂಮಿಯಲ್ಲಿ ಅವುಗಳನ್ನು ಕೃಷಿ ಮಾಡಿದೆ. ಸದ್ಯ ಜಮೀನಿನಲ್ಲಿ 1,050 ಗಿಡಗಳಿವೆ. ಒಂದು ವರ್ಷದ ಶುಶ್ರೂಷೆ ಮತ್ತು ಸರಿಯಾದ ಆರೈಕೆಯ ನಂತರ, ಈ ಸಸ್ಯಗಳು ಹಣ್ಣುಗಳನ್ನು ನೀಡಲು ಪ್ರಾರಂಭಿಸಿದವು, ”ಎಂದು ಯಶಸ್ವಿ ದಾಳಿಂಬೆ ಕೃಷಿಕ ತಮ್ಮ ಅನುಭವ ಹೇಳಿದರು. ಒಂದು ಸಸ್ಯ 25 ರಿಂದ 30 ದಾಳಿಂಬೆಗಳನ್ನು ಹೊಂದಿರುತ್ತದೆ ಮತ್ತು ವರ್ಷಕ್ಕೆ ಎರಡು ಬಾರಿ/ಮೂರು ಬಾರಿ ಹಣ್ಣುಗಳನ್ನು ನೀಡುತ್ತದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ, ಜಮೀನಿನಲ್ಲಿ 15 ಕ್ವಿಂಟಾಲ್ ದಾಳಿಂಬೆ ಇಳುವರಿ ಬಂದಿದೆ. 3 ಎಕರೆಯಿಂದ ವರ್ಷಕ್ಕೆ 6 ರಿಂದ 7 ಲಕ್ಷ ಆದಾಯ ಪಡೆಯಬಹುದು. ಹಣ್ಣುಗಳನ್ನು ಸಾವಯವವಾಗಿ ಬೆಳೆಯಲಾಗುತ್ತದೆ ಮತ್ತು ಯಾವುದೇ ಗೊಬ್ಬರವನ್ನು ಬಳಸುವುದಿಲ್ಲ. ಇಳುವರಿಗೆ ಉತ್ತಮ ಬೇಡಿಕೆ ಇದ್ದು, ಮಾರುಕಟ್ಟೆ ಕೂಡ ಚೆನ್ನಾಗಿದೆ ಎಂದು ದಿವಾಕರ್ ತಿಳಿಸಿದರು. “ಉತ್ಪನ್ನಗಳನ್ನು ನಬರಂಗಪುರದ ಕೆಲವು ಡೀಲರ್‌ಗಳಿಗೆ ಮಾರುತ್ತೇನೆ ಮತ್ತು ನೆರೆಯ ಛತ್ತೀಸ್‌ಗಢಗೂ ಪೂರೈಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ:   Tollywood: ಈ ರೆಸ್ಟೋರೆಂಟ್‌, ಪಬ್​ಗಳು ಟಾಲಿವುಡ್​ ಸೂಪರ್​​ ಸ್ಟಾರ್​ಗಳಿಗೆ ಸೇರಿದ್ದು! ಅಬ್ಬೋ, ಏನ್​ ದುಡ್ಡು ಗುರೂ

ದಿವಾಕರ್ ಅವರ ದಾಳಿಂಬೆ ಕೃಷಿ ಜಮೀನಿನಲ್ಲಿ ಪ್ರತಿದಿನ ಐದರಿಂದ ಏಳು ಸ್ಥಳೀಯ ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ದಿಬಾಕರ್ ತಮಗೆ ತಿಳಿದಿರುವ ದಾಳಿಂಬೆ ಕೃಷಿ ಜ್ಞಾನವನ್ನು ಇತರರಿಗೂ ತಿಳಿಸಲು ಉತ್ಸುಕರಾಗಿರುವ ಬಗ್ಗೆ ಕೂಡ ಹೇಳಿದ್ದಾರೆ.
Published by:Ashwini Prabhu
First published: