• Home
  • »
  • News
  • »
  • business
  • »
  • Ayurveda Day 2022: ನಿಮ್ಮ ಟ್ಯಾಲೆಂಟ್​ಗೊಂದು ಸಣ್ಣ ಸವಾಲ್​, ವಿಡಿಯೋ ಮಾಡಿ 75 ಸಾವಿರ ಹಣ ಗೆಲ್ಲಿ!

Ayurveda Day 2022: ನಿಮ್ಮ ಟ್ಯಾಲೆಂಟ್​ಗೊಂದು ಸಣ್ಣ ಸವಾಲ್​, ವಿಡಿಯೋ ಮಾಡಿ 75 ಸಾವಿರ ಹಣ ಗೆಲ್ಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

MyGov.in, ಭಾರತ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಸ್ಪರ್ಧಿಗಳು 5 ನಿರ್ದಿಷ್ಟ ವಿಷಯಗಳ ಕುರಿತು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 03 ನಿಮಿಷಗಳಿಗಿಂತ ಹೆಚ್ಚಿನ ವೀಡಿಯೊಗಳನ್ನು ಕಳುಹಿಸಬಹುದು.

  • Share this:

ಭಾರತ ಸರ್ಕಾರದ ಆಯುಷ್ ಸಚಿವಾಲಯವು (Ministry of Ayush, Government of India) 2022 ರ ಆಯುರ್ವೇದ (Ayurveda) ದಿನಕ್ಕೆ ಸಂಬಂಧಿಸಿದಂತೆ ಸ್ಪರ್ಧೆಯನ್ನು ಆಯೋಜಿಸಲಿದೆ. ಇದರಲ್ಲಿ ಯಾರಾದರೂ ಭಾಗವಹಿಸಬಹುದು. ಜೊತೆಗೆ ನಗದು ಬಹುಮಾನಗಳನ್ನು ಗೆಲ್ಲಬಹುದು. ಇದಕ್ಕಾಗಿ ಆಯುಷ್ ಸಚಿವಾಲಯ ‘ಹರ್ ದಿನ್ ಹರ್ ಘರ್ ಆಯುರ್ವೇದ’ (Har Din Har Ghar Ayurveda Competition) ಎಂಬ ಥೀಮ್ ಇಟ್ಟುಕೊಂಡಿದೆ. ಅದರಂತೆ, ಜನರು ಸಣ್ಣ ವೀಡಿಯೊಗಳನ್ನು ಮಾಡಬೇಕಾಗುತ್ತದೆ. ಈ ವಿಡಿಯೋಗಳನ್ನು ನೀವು ಆಯುಷ್ ಸಚಿವಾಲಯಕ್ಕೆ ಕಳುಹಿಸಿಕೊಡನಬೇಕು. ಇವುಗಳಲ್ಲಿ ಆಯ್ದ 15 ವಿಡಿಯೋಗಳಿಗೆ ಬಹುಮಾನ ನೀಡಲಾಗುವುದು. MyGov.in, ಭಾರತ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಸ್ಪರ್ಧಿಗಳು 5 ನಿರ್ದಿಷ್ಟ ವಿಷಯಗಳ ಕುರಿತು ಹಿಂದಿ (Hindi) ಮತ್ತು ಇಂಗ್ಲಿಷ್ (English) ಭಾಷೆಗಳಲ್ಲಿ 03 ನಿಮಿಷಗಳಿಗಿಂತ ಹೆಚ್ಚಿನ ವೀಡಿಯೊಗಳನ್ನು ಕಳುಹಿಸಬಹುದು.


ಈ 5 ವಿಷಯಗಳನ್ನಿಟ್ಟುಕೊಂಡು ವಿಡಿಯೋ ಮಾಡಿ!


ಆಯುರ್ವೇದ ದಿನದ ಮುಖ್ಯ ವಿಷಯವಾದ ಆಯುರ್ವೇದದ ಪ್ರಕಾರ ಈ 5 ವಿಷಯಗಳಲ್ಲಿ ಪ್ರತಿದಿನ ವಿಡಿಯೋಗಳನ್ನು ಮಾಡಬಹುದು.


ಥೀಮ್ 1: ನನ್ನ ದಿನ ಮತ್ತು ಆಯುರ್ವೇದ


ಥೀಮ್ 2: ನನ್ನ ಅಡುಗೆಮನೆಯಲ್ಲಿ ಆಯುರ್ವೇದ


ಥೀಮ್ 3: ನನ್ನ ತೋಟದಲ್ಲಿ ಆಯುರ್ವೇದ


ಥೀಮ್ 4: ನನ್ನ ಕ್ಷೇತ್ರದಲ್ಲಿ ಆಯುರ್ವೇದ


ಥೀಮ್ 5: ನನ್ನ ಆಹಾರದಲ್ಲಿ ಆಯುರ್ವೇದ


75 ಸಾವಿರ ಹಣ ನಿಮ್ಮದಾಗಿಸಿಕೊಳ್ಳಿ!


ಆಯುಷ್ ಸಚಿವಾಲಯದ ಪ್ರಕಾರ, ಪ್ರತಿ ಥೀಮ್‌ನಿಂದ ಮೂರು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ, ಅಂದರೆ ಒಟ್ಟು 15 ವಿಜೇತರು ರೂ. 75,000/- ರಿಂದ ರೂ. 25,000/- ವರೆಗೆ ಬಹುಮಾನಗಳನ್ನು ನೀಡಲಾಗುವುದು. ಈ ಸ್ಪರ್ಧೆಯು 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಮುಕ್ತವಾಗಿದೆ. ಇದರ ಅಂತಿಮ ದಿನಾಂಕ 10 ಅಕ್ಟೋಬರ್ 2022 ಆಗಿದೆ. ಸ್ಪರ್ಧೆ ಮತ್ತು ವೀಡಿಯೊ ಸಲ್ಲಿಕೆ ಪ್ರಕ್ರಿಯೆಯ ಕುರಿತು ಹೆಚ್ಚಿನ ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ಕಾಣಬಹುದುhttps://innovateindia.mygov.in/ayurveda-video-contest/ನಿಂದ ಕೂಡ ಪಡೆಯಬಹುದು


ಇದನ್ನೂ ಓದಿ: ಕೇವಲ 5 ಸಾವಿರ ಹೂಡಿಕೆ, ತಿಂಗಳಿಗೆ 60 ಸಾವಿರ ಆದಾಯ! ಇದು ಬೆಸ್ಟ್​ ಬ್ಯುಸಿನೆಸ್​ ಗುರೂ


ಆಯುರ್ವೇದವನ್ನು ಅತ್ಯಂತ ಪುರಾತನ ಮತ್ತು ಸಂಸ್ಕರಿಸಿದ ವೈದ್ಯಕೀಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ, ಇದು ಆಧುನಿಕ ಕಾಲದಲ್ಲಿ ಸಮಾನವಾಗಿ ಉಪಯುಕ್ತವಾಗಿದೆ. ಆಯುಷ್ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರದ ಇತರ ಸಚಿವಾಲಯಗಳು ಮತ್ತು ಇಲಾಖೆಗಳು ಆಯುರ್ವೇದದ ಪ್ರಯೋಜನಗಳನ್ನು ತಳ ಮಟ್ಟಕ್ಕೆ ಹರಡಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.


23 ಅಕ್ಟೋಬರ್ 2022 ಆಯುರ್ವೇದ ದಿನ!



ಆಯುಷ್ ಸಚಿವಾಲಯವು ಈ ಕಾರ್ಯಕ್ರಮಗಳಿಗೆ ನೋಡಲ್ ಸಂಸ್ಥೆಯಾಗಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA) ವಿವಿಧ ವಿಷಯಗಳ ಕುರಿತು ಆರು ವಾರಗಳ ಕಾರ್ಯಕ್ರಮವನ್ನು (ಸೆಪ್ಟೆಂಬರ್ 12-ಅಕ್ಟೋಬರ್ 23) ಉದ್ಘಾಟಿಸಿತ್ತು. 3ಜೆ ಅಂದರೆ ಸಾರ್ವಜನಿಕ ಸಂದೇಶ, ಸಾರ್ವಜನಿಕ ಸಹಭಾಗಿತ್ವ ಮತ್ತು ಸಾರ್ವಜನಿಕ ಆಂದೋಲನದ ಉದ್ದೇಶದಡಿಯಲ್ಲಿ ಈ ಕಾರ್ಯಕ್ರಮದಲ್ಲಿ ಜನರನ್ನು ಸೇರಿಸಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಪೋಸ್ಟ್ ಆಫೀಸ್ ಖಾತೆಯಿಂದ ಹಣವನ್ನು ಹಿಂಪಡೆಯಲು ಹೊಸ ನಿಯಮ!



ಆಯುಷ್ ಸಚಿವಾಲಯವು 2016 ರಿಂದ ಪ್ರತಿ ವರ್ಷ ಧನ್ವಂತರಿ ಜಯಂತಿಯಂದು (ಧನ್ತೇರಸ್) ಆಯುರ್ವೇದ ದಿನವನ್ನು ಆಚರಿಸುತ್ತದೆ. ಈ ವರ್ಷ ಈ ದಿನವನ್ನು 23 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ.


ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಆರ್ಯುವೇದ ಶಾಸ್ತ್ರಕ್ಕೆ ವಿಶೇಷ ಮನ್ನಣೆ ಇದೆ. ಆದರೆ ಆರ್ಯುವೇದದಲ್ಲಿ ಇರುವ ದೊಡ್ಡ ಸಮಸ್ಯೆ ಎಂದರೆ ಇದರ ಔಷಧಗಳಿಗೆ ಬೇಕಾದ ಗಿಡಮೂಲಿಕೆ, ಸಸಿಗಳ ಕೊರತೆಯಿಂದ ಆರ್ಯುವೇದ ಔಷಧ ತಯಾರಕರ ಜತೆಗೆ ವೈದ್ಯರು ಕೂಡ ಕಷ್ಟಪಡುತ್ತಿದ್ದಾರೆ.

Published by:ವಾಸುದೇವ್ ಎಂ
First published: