• Home
  • »
  • News
  • »
  • business
  • »
  • Vatsal Nahata: ಛಲ ಬಿಡದ ಪರಿಶ್ರಮ, ಕೊನೆಗೂ ಗೆದ್ದ ತ್ರಿವಿಕ್ರಮ! ವರ್ಲ್ಡ್ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಈತ ಯಾರು ಗೊತ್ತಾ?

Vatsal Nahata: ಛಲ ಬಿಡದ ಪರಿಶ್ರಮ, ಕೊನೆಗೂ ಗೆದ್ದ ತ್ರಿವಿಕ್ರಮ! ವರ್ಲ್ಡ್ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಈತ ಯಾರು ಗೊತ್ತಾ?

ವತ್ಸಲ್ ನಹತಾ

ವತ್ಸಲ್ ನಹತಾ

ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಮತ್ತು ಇನ್ನೂ ಕೆಲವರು ಎರಡು ವರ್ಷಗಳು ತಮ್ಮ ಹೊಸ ಉದ್ಯೋಗಕ್ಕಾಗಿ ಕಾದು ಕುಳಿತರು ಮತ್ತು ಸತತವಾದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಹೀಗೆ ಬಿಟ್ಟುಬಿಡದೆ ಪ್ರಯತ್ನ ಮಾಡಿ ಇಲ್ಲೊಬ್ಬ ವ್ಯಕ್ತಿ ‘ವರ್ಲ್ಡ್ ಬ್ಯಾಂಕ್’ ನಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ಜೀವನ (Life) ನಾವು ಅಂದು ಕೊಂಡಷ್ಟು ಸುಲಭವಾಗಿರಲ್ಲ ಮತ್ತು ಇಲ್ಲಿ ನಾವು ಅಂದು ಕೊಂಡಿದ್ದೆಲ್ಲಾ ನಡೆಯೊಲ್ಲ ಅಂತ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಬಹುತೇಕರಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ಜೀವನದಲ್ಲಿ ಏನೇ ಸಾಧಿಸಬೇಕಾದರೂ ತಾಳ್ಮೆ (Patience) ಮತ್ತು ಬಿಟ್ಟುಬಿಡದ ಪ್ರಯತ್ನ ತುಂಬಾನೇ ಮುಖ್ಯವಾಗಿರುತ್ತವೆ. ನಮ್ಮ ಪ್ರಯತ್ನದ (Effort) ಜೊತೆಗೆ ಅದೃಷ್ಟವು ಕೆಲವು ಬಾರಿ ಕೆಲಸ ಮಾಡುತ್ತದೆ. ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕರು ತಮ್ಮ ಉದ್ಯೋಗಗಳನ್ನು (Employment) ಕಳೆದುಕೊಂಡರು ಮತ್ತು ಇನ್ನೂ ಕೆಲವರು ಎರಡು ವರ್ಷಗಳು ತಮ್ಮ ಹೊಸ ಉದ್ಯೋಗಕ್ಕಾಗಿ ಕಾದು ಕುಳಿತರು ಮತ್ತು ಸತತವಾದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಹೀಗೆ ಬಿಟ್ಟುಬಿಡದೆ ಪ್ರಯತ್ನ ಮಾಡಿ ಇಲ್ಲೊಬ್ಬ ವ್ಯಕ್ತಿ ‘ವರ್ಲ್ಡ್ ಬ್ಯಾಂಕ್’ ನಲ್ಲಿ (World Bank) ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ ನೋಡಿ.


2020 ರಲ್ಲಿ ಕೋವಿಡ್ ಸಮಯದಲ್ಲಿ ಶುರುವಾದ ಕಥೆ ಇದು
2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿದ್ದಾಗ ವತ್ಸಲ್ ನಹತಾ ಅವರ ದೃಢನಿರ್ಧಾರದ ಕಥೆ ಪ್ರಾರಂಭವಾಗುತ್ತದೆ. ಏಪ್ರಿಲ್ 2020 ರಲ್ಲಿ ಯೇಲೆ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಉತ್ಸುಕರಾಗಿದ್ದರೂ, ಆದರೆ ಓದು ಮುಗಿದ ಮೇಲೆ ಉದ್ಯೋಗದ ಬಗ್ಗೆ ಅವರಿಗಿದ್ದ ಅನಿಶ್ಚಿತತೆಗಳು ಅವರಿಗೆ ಸರಿಯಾಗಿ ಎಷ್ಟೋ ರಾತ್ರಿಗಳು ನಿದ್ರೆಯಿಲ್ಲದಂತೆ ಮಾಡಿದವು.


"ನಾನು ಹೇಗೆ ವರ್ಲ್ಡ್ ಬ್ಯಾಂಕ್ ನಲ್ಲಿ ಕೆಲಸ ಗಿಟ್ಟಿಸಿಕೊಂಡೆ ಅಂತ ನೆನಪು ಮಾಡಿಕೊಂಡಾಗಲೆಲ್ಲಾ ನಾನು ನಡುಗುತ್ತೇನೆ" ಎಂದು ಆ ಸಮಯದಲ್ಲಿ 23 ವರ್ಷದ ನಹತಾ ಇತ್ತೀಚೆಗೆ ಲಿಂಕ್ಡ್ಇನ್ ನ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದ್ದಾರೆ. "2020 ರ ಮೊದಲಾರ್ಧವು ಎಲ್ಲರಿಗೂ ಒಂದು ರೀತಿಯ ಕಷ್ಟದ ಸಮಯವಾಗಿತ್ತು. ಜನರು ಆಗ ಸಾಂಕ್ರಾಮಿಕ ರೋಗಕ್ಕೆ ಹೊಂದಿಕೊಳ್ಳಲು ತುಂಬಾನೇ ಕಠಿಣವಾಗಿತ್ತು ಮತ್ತು ಉದ್ಯೋಗದ ಸನ್ನಿವೇಶವು ಸಾಕಷ್ಟು ಮಂಕಾಗಿತ್ತು.


ಇದನ್ನೂ ಓದಿ: Ravi Modi: ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ರವಿ ಮೋದಿ; ಇವರ ಆಸ್ತಿ ಬಗ್ಗೆ ಗೊತ್ತಾದ್ರೆ ಶಾಕ್ ಆಗ್ತೀರಾ!


ಕೋವಿಡ್-19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ ನಂತರ, ಅನೇಕ ಸಂಸ್ಥೆಗಳು ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನೋಡುತ್ತಿದ್ದವು. ಪ್ರತಿಯೊಂದು ಕಂಪನಿಯೂ ಅತ್ಯಂತ ಕೆಟ್ಟ ಸಮಯವನ್ನು ಎದುರಿಸಲು ತಯಾರಿ ನಡೆಸುತ್ತಿದ್ದವು ಮತ್ತು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಐತಿಹಾಸಿಕ ಆರ್ಥಿಕ ಹಿಂಜರಿತವು ಮೇಲ್ನೋಟಕ್ಕೆ ಗೋಚರಿಸುತ್ತಿತ್ತು" ಎಂದು ನಹತಾ ಹೇಳಿದರು.


ಈ ಯಶಸ್ಸು ಅಷ್ಟು ಸುಲಭವಾಗಿ ಬಂದದ್ದಲ್ಲ
ವತ್ಸಲ್ ಅವರು ಮೇ 2020 ರಲ್ಲಿ ಯೇಲೆ ವಿಶ್ವವಿದ್ಯಾಲಯದಲ್ಲಿ ‘ಇಂಟರ್ನ್ಯಾಷನಲ್ ಆಂಡ್ ಡವಲಪ್ಮೆಂಟ್ ಎಕಾನಾಮಿಕ್ಸ್’ ನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಪಡೆಯಲು ಸಿದ್ಧರಾಗಿದ್ದರು, ಆದರೆ ಅದು ಅಡೆತಡೆಯನ್ನುಂಟು ಮಾಡಿತು. ಅದೇ ವರ್ಷ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ನೀತಿಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಸ್ಪಷ್ಟಪಡಿಸಿದ್ದರು.


ವೀಸಾವನ್ನು ಪ್ರಾಯೋಜಿಸುವ ಕಂಪನಿಗಳನ್ನು ಕಂಡು ಹಿಡಿಯುವುದು ಕಷ್ಟವೆಂದು ಭಾವಿಸಿದ ಯುಎಸ್ ನ ಅನೇಕ ಭಾರತೀಯ ಪ್ರತಿಭೆಗಳಲ್ಲಿ ನಹತಾ ಕೂಡ ಒಬ್ಬರು. ಅವರು ಸಂದರ್ಶನಗಳ ಅಂತಿಮ ಸುತ್ತುಗಳನ್ನು ತಲುಪುತ್ತಾರೆ ಆದರೆ ಅವರ ವೀಸಾವನ್ನು ಪ್ರಾಯೋಜಿಸಲು ಸಾಧ್ಯವಾಗದ ಕಾರಣ ನಂತರ ಅವರನ್ನು ತಿರಸ್ಕರಿಸಲಾಗುತ್ತದೆ.


"ವಲಸೆ ಬಗ್ಗೆ ಟ್ರಂಪ್ ಅವರ ನಿಲುವು ಯುಎಸ್ ವಲಸೆ ನೀತಿಯನ್ನು ನ್ಯಾವಿಗೇಟ್ ಮಾಡಲು ಮತ್ತು ಊಹಿಸಲು ಕಂಪನಿಗಳಿಗೆ ತುಂಬಾ ಅನಿಶ್ಚಿತವಾಗಿದೆ. ಪ್ರತಿಯೊಬ್ಬರೂ ಅದನ್ನು ಸುರಕ್ಷಿತವಾಗಿ ಎದುರಿಸಲು ಮತ್ತು ಯುಎಸ್ ನಾಗರಿಕರನ್ನು ನೇಮಿಸಿಕೊಳ್ಳಲು ಬಯಸಿದ್ದರು" ಎಂದು ಯೇಲೆ ಪದವೀಧರ ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ.


ಕೆಲಸ ಸಿಗದೇ ಪರದಾಡಿದ ಆ ಸಮಯವನ್ನು ಮೆಲುಕು ಹಾಕಿದ ವತ್ಸಲ್
ಯೇಲೆ ವಿಶ್ವವಿದ್ಯಾಲಯದ ಪದವಿಯು ಒಂದು ಸಾಮಾನ್ಯ ಕಾಗದದಂತೆ ನನಗೆ ಅನ್ನಿಸಲು ಶುರುವಾಯಿತು. ಮುಂದಿನ ಎರಡು ತಿಂಗಳಲ್ಲಿ ಅವರು ಪದವಿ ಪಡೆಯಲು ಸಿದ್ಧರಾಗಿದ್ದರು ಆದರೆ, ಕೈಯಲ್ಲಿ ಯಾವುದೇ ಕೆಲಸವಿರಲಿಲ್ಲ. "ನಾನು ನನ್ನಷ್ಟಕ್ಕೆ ನಾನೇ ಯೋಚಿಸಿದೆ, 'ನನಗೆ ಇಲ್ಲಿ ಕೆಲಸವೂ ಸಿಗದಿದ್ದಾಗ ಯೇಲೆ ಯಲ್ಲಿ ಇರುವುದರ ಅರ್ಥವೇನು? ನನ್ನ ಹೆತ್ತವರು ಕರೆ ಮಾಡಿ ನಾನು ಹೇಗೆ ಮಾಡುತ್ತಿದ್ದೇನೆ ಎಂದು ಕೇಳಿದಾಗ ಅವರಿಗೆ ಸಂಪೂರ್ಣವಾಗಿ ಸಹ ನನಗೆ ಉತ್ತರಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು.


ಆದರೆ, ನಹತಾ ಈಗ ಪ್ರಸ್ತುತ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸಂಶೋಧನಾ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಖಚಿತವಾಗಿ ಮನದಲ್ಲಿದ್ದ ಎರಡು ಸಂಗತಿಗಳೆಂದರೆ ಭಾರತಕ್ಕೆ ಮತ್ತೆ ಮರಳುವ ಆಯ್ಕೆ ಹೊಂದದೆ ಇರುವುದು ಹಾಗೂ ತಮ್ಮ ಮೊದಲ ಸಂಬಳ ಅಮೆರಿಕನ್ ಡಾಲರ್ ಗಳಲ್ಲಿರಬೇಕೆನ್ನುವುದು.


ಏನಿದು ನೆಟ್ವರ್ಕಿಂಗ್?
ಅವರು ತಮ್ಮ ಜೀವನದ ಅತ್ಯಂತ ನಿರ್ಣಾಯಕ ನಿರ್ಧಾರಗಳಲ್ಲಿ ಒಂದನ್ನು ಮಾಡಿದರು. ಅವರು ಉದ್ಯೋಗ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವುದನ್ನು ಅಥವಾ ನೇಮಕಾತಿ ಪೋರ್ಟಲ್ ಗಳನ್ನು ಸ್ಕ್ಯಾನ್ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದರು. ಅವರು 'ನೆಟ್ವರ್ಕಿಂಗ್' ಅನ್ನು ಪ್ರಯತ್ನಿಸಲು ನಿರ್ಧರಿಸಿದರು. ನೆಟ್ವರ್ಕಿಂಗ್ ಅನ್ನು ಇನ್ನೂ ಪ್ರಯತ್ನಿಸದ ಜನರಿಗೆ, ಇದು ಹಲವಾರು (Random) ಇ-ಮೇಲ್ ಗಳನ್ನು ಕಳುಹಿಸುವುದು ಮತ್ತು ಒಬ್ಬರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವ ಭರವಸೆಯೊಂದಿಗೆ ಅಪರಿಚಿತರಿಗೆ ಕರೆಗಳನ್ನು ಮಾಡುವುದನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ:  Traditional Pottery: ಸಾವಯವ ಕುಂಬಾರಿಕೆಯಿಂದ ಯಶಸ್ಸು ಕಂಡ ಯುವಕ; ತಿಂಗಳಿಗೆ 2 ಲಕ್ಷ ಆದಾಯ


ಕೋಲ್ಡ್-ಇಮೇಲ್ ಅನ್ನು ಸಂವಹನದ ಕಠಿಣ ಪ್ರಕಾರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನಿಮಗೆ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಯ ಬಗ್ಗೆ ಏನು ತಿಳಿದಿರುವುದಿಲ್ಲ ಅಥವಾ ಮುಂದಿನ ಬಾರಿ ನಿಮ್ಮ ವಿಧಾನವನ್ನು ಸುಧಾರಿಸಲು ಬಳಸಬಹುದಾದ ಯಾವುದೇ ಪ್ರತಿಕ್ರಿಯೆಯನ್ನು ಸಹ ಇದರಲ್ಲಿ ನೀವು ಪಡೆಯುವುದಿಲ್ಲ. ನಹತಾ ತಮ್ಮ ನೆಟ್ವರ್ಕ್ ವ್ಯಾಪಿಸಿಕೊಳ್ಳಲು ಸುಮಾರು ಎರಡು ತಿಂಗಳು ಸಮಯ ಕಳೆದರು. ಅವರು 1500 ಕ್ಕೂ ಹೆಚ್ಚು ಸಂಪರ್ಕ ವಿನಂತಿಗಳನ್ನು ಕಳುಹಿಸಿದರು, 600 ಕೋಲ್ಡ್ ಇ-ಮೇಲ್ ಗಳನ್ನು ಬರೆದರು ಮತ್ತು ಆ ಅವಧಿಯಲ್ಲಿ ಅಪರಿಚಿತರೊಂದಿಗೆ 80 ಕೋಲ್ಡ್ ಕರೆಗಳನ್ನು ಮಾಡಿದರು.


"ನಾನು ದಿನಕ್ಕೆ ಸುಮಾರು 2 ಕೋಲ್ಡ್ ಕರೆಗಳನ್ನು ಮಾಡುತ್ತಿದ್ದೆ ಮತ್ತು ನಾನು ಇದುವರೆಗೆ ಅನುಭವಿಸಿದ ಅತ್ಯಧಿಕ ಸಂಖ್ಯೆಯ ತಿರಸ್ಕಾರಗಳನ್ನು ಎದುರಿಸಿದೆ. ನಾನು ಹಾಗೆಯೇ ನನ್ನ ಪ್ರಯತ್ನ ಮುಂದುವರೆಸಿದೆ ಮತ್ತು ಮನೆ ಬಿಟ್ಟು ನಾನು ಎಲ್ಲೂ ಹೊರಗೆ ಹೋಗುತ್ತಿರಲಿಲ್ಲ" ಎಂದು ಹೇಳಿದರು. “ನೀವು ಬೆಳಿಗ್ಗೆ 4 ಗಂಟೆಗೆ ನನ್ನನ್ನು ಎಬ್ಬಿಸಿದರೂ ಸಹ ನಾನು ನನ್ನ ಕೌಶಲ್ಯಗಳನ್ನು ಸುಲಲಿತವಾಗಿ ನೆಟ್ವರ್ಕ್ ಮಾಡಬಹುದು ಮತ್ತು ನನ್ನ ಕೌಶಲ್ಯಗಳನ್ನು ಅತ್ಯಂತ ಅನುಭವಿ ಅಮೆರಿಕನ್ ಎಕ್ಸಿಕ್ಯೂಟಿವ್ ಮುಂದೆ ಹೇಳಿಕೊಳ್ಳಬಹುದು. ಆಗ ವಿಷಯಗಳು ಎಷ್ಟು ಹತಾಶಗೊಂಡವು ಎಂದರೆ ನಾನು ಆಗಾಗ್ಗೆ ನನ್ನ ಕನಸಿನಲ್ಲಿ ಜನರನ್ನು ಕರೆಯುತ್ತಿದ್ದೆ" ಎಂದು ಅವರ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.


ಪಡೆದ ನಾಲ್ಕು ಕೆಲಸಗಳ ಪ್ರಸ್ತಾಪದಲ್ಲಿ ವರ್ಲ್ಡ್ ಬ್ಯಾಂಕ್ ಕೆಲಸ ಸಹ ಒಂದು
ಹಲವಾರು ಪ್ರಯತ್ನಗಳ ನಂತರ, ನಹತಾ ಅವರ ಪ್ರಯತ್ನವು ಫಲ ನೀಡಿತು. ಮೇ ಮೊದಲ ವಾರದ ಹೊತ್ತಿಗೆ ಅವರು ನಾಲ್ಕು ಉದ್ಯೋಗದ ಪ್ರಸ್ತಾಪಗಳನ್ನು ಪಡೆದರು ಮತ್ತು ಅದರಲ್ಲಿ ವರ್ಲ್ಡ್ ಬ್ಯಾಂಕ್ ನ ಉದ್ಯೋಗ ಸಹ ಒಂದಾಗಿತ್ತು.


ಅವರ ಐಚ್ಛಿಕ ಪ್ರಾಯೋಗಿಕ ತರಬೇತಿ ಮುಗಿದ ನಂತರ ಅವರ ವೀಸಾವನ್ನು ಪ್ರಾಯೋಜಿಸಲು ಅವರು ಸಿದ್ಧರಿದ್ದರು. ಇದಲ್ಲದೆ, ಅವರ ವ್ಯವಸ್ಥಾಪಕರು ಅವರಿಗೆ ವರ್ಲ್ಡ್ ಬ್ಯಾಂಕ್ ನ ಪ್ರಸ್ತುತ ಸಂಶೋಧನಾ ನಿರ್ದೇಶಕರೊಂದಿಗೆ ಯಂತ್ರ ಕಲಿಕೆ ಪತ್ರಿಕೆಯ ಸಹ-ಲೇಖಕತ್ವವನ್ನು ನೀಡಿದರು. ಅವರು ವರ್ಲ್ಡ್ ಬ್ಯಾಂಕ್ ಕೆಲಸವನ್ನು ತೆಗೆದುಕೊಂಡರು.


ದೆಹಲಿಯಲ್ಲಿ ಪದವಿ ಮುಗಿಸಿದ್ದ ವತ್ಸಲ್ ನಹತಾ
ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಆರ್ಥಿಕ ಪದವೀಧರರಾಗಿದ್ದ ನಹತಾಗೆ ಆ ಎರಡು ತಿಂಗಳುಗಳು ಜೀವಮಾನದ ಪಾಠಗಳನ್ನು ಕಲಿಸಿದವು. 'ನೆಟ್ವರ್ಕಿಂಗ್ ನ ನಿಜವಾದ ಶಕ್ತಿ'ಯನ್ನು ಅವರು ಅರ್ಥಮಾಡಿಕೊಂಡಂತೆ, ಅದು ಅವರ ಎರಡನೇ ಸ್ವಭಾವವಾಯಿತು. ಈ ಅನುಭವವು ಅವರಿಗೆ ಯಾವುದೇ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಬದುಕುಳಿಯಬಹುದು ಮತ್ತು ಯುನೈಟೆಡ್ ಸ್ಟೇಟ್ಸ್ ನಲ್ಲಿ ವಲಸಿಗನಾಗಿ ತನ್ನ ಮಾರ್ಗವನ್ನು ಕಂಡು ಹಿಡಿಯಬಹುದು ಎಂಬ ವಿಶ್ವಾಸವನ್ನು ನೀಡಿತು.


ಇದನ್ನೂ ಓದಿ:  Plant Based Meat: ಭಾರತದ ಮೊದಲ ಸಸ್ಯ ಆಧಾರಿತ ಮಾಂಸ ಗುಜರಾತ್‌ನಿಂದ ಅಮೆರಿಕಾಕ್ಕೆ ರಫ್ತು


"ಕೋವಿಡ್ ಮತ್ತು ಟ್ರಂಪ್ ಅವರ ವಲಸೆ ನೀತಿಗಳು ನನಗೆ ಒಬ್ಬ ಪರಿಪೂರ್ಣವಾದ ವ್ಯಕ್ತಿತ್ವವನ್ನು ಪಡೆದುಕೊಳ್ಳಲು ಸಹಾಯ ಮಾಡಿದವು" ಎಂದು ಅವರು ಹೇಳಿದರು. ತನ್ನ ಅನುಭವವನ್ನು ಇಡೀ ಲೋಕದೊಂದಿಗೆ ಹಂಚಿಕೊಳ್ಳುವ ಮೂಲಕ, ನಹತಾ ಅವರು ಜನರಿಗೆ ಒಂದು ಕೆಲಸವನ್ನು ಕೈ ಬಿಡದಂತೆ ಮಾಡಿ, ಯಶಸ್ಸು ಸಿಕ್ಕೆ ಸಿಗುತ್ತದೆ ಎಂದು ಹೇಳಿದರು.

Published by:Ashwini Prabhu
First published: