ಎಲ್ಇಡಿ ಲೈಟಿಂಗ್ (LED Light) ಬೆಳಕಿನ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. LED ತಂತ್ರಜ್ಞಾನದ ಶಕ್ತಿಯ ಸಾಮರ್ಥ್ಯ ಹಾಗೂ ಅದು ನೀಡುವ ದೀರ್ಘಾವಧಿ ಬಳಕೆಯು ವಿದ್ಯುತ್ ವೆಚ್ಚವನ್ನು ಉಳಿಸುತ್ತದೆ ಎಂದೇ ತಯಾರಕರು ಗ್ರಾಹಕರಿಗೆ ಚಳ್ಳೆಹಣ್ಣು ತಿನ್ನಿಸುತ್ತಾರೆ. LED ಲೈಟ್ ತಯಾರಕರು ತಮ್ಮ ಉತ್ಪನ್ನವು 30,000 ಗಂಟೆಗಳಿಂದ 50,000 ಗಂಟೆಗಳವರೆಗೆ ಬೆಳಗುತ್ತದೆ ಎಂದು ಭರವಸೆ ನೀಡುತ್ತಾರೆ ಆದರೆ ಅವರು ಭರವಸೆ ನೀಡಿದ್ದರೆ ಬಲ್ಬ್ ಕಾರ್ಯನಿರ್ವಹಿಸುವುದಿಲ್ಲ ಎಂಬುದೇ ಇಲ್ಲಿರುವ ಅಸಲಿ ಸತ್ಯವಾಗಿದೆ.
ಎಲ್‌ಇಡಿ ಬಲ್ಬ್‌ಗಳ ತಯಾರಕರ ಮೋಸ:
ಈ ತಯಾರಕರು ನಮ್ಮ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಅದರಲ್ಲೇ ಲಾಭ ನಡೆಸುವ ಹುನ್ನಾರ ಮಾಡುತ್ತಾರೆ. ಆದರೆ ನಮಗೆ ಇದರ ಅರಿವೇ ಇರುವುದಿಲ್ಲ. ಎಲ್‌ಇಡಿ ಬಲ್ಬ್‌ಗಳು ಒಂದು ವರ್ಷದೊಳಗೆ ಹಾನಿಯಾಗುತ್ತವೆ ಎಂಬ ಅರಿವು ಇದ್ದುಕೊಂಡೇ ಮಾರಾಟಗಾರರು 20% ಹೆಚ್ಚುವರಿ ಎಲ್ಇಡಿ ಲೈಟ್ ಬಲ್ಬ್‌ಗಳನ್ನು ದಾಸ್ತಾನು ಇರಿಸುತ್ತಿದ್ದಾರೆ. ಇನ್ನು ಬಲ್ಬ್ ಹಾಳಾದರೆ ಹೊಸ ಬಲ್ಬ್‌ಗಳನ್ನು ಗ್ರಾಹಕ ಖರೀದಿಸುತ್ತಾರೆ ಎಂಬುದು ಅವರಿಗೆ ತಿಳಿದಿದೆ.
ತಂತ್ರ ರಚಿಸಿದ ಸಂಸ್ಥೆಗಳು:
ಬಲ್ಬ್‌ಗಳ ಜೀವಿತಾವಧಿಯನ್ನು ಮೊಟಕುಗೊಳಿಸುವ ಹುನ್ನಾರ ಹಾಗೂ ಗ್ರಾಹಕರನ್ನು ಮೋಸಗೊಳಿಸುವ ತಂತ್ರ ಇತ್ತೀಚಿನ ವಿದ್ಯಮಾನವಲ್ಲ. ಈ ಹಿಂದೆ ಕೂಡ ಇಂತಹುದೇ ಘಟನೆಗಳು ನಡೆದಿವೆ. ಫೋಬಸ್ ಕಾರ್ಟೆಲ್ ಅನ್ನು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಇಂತಹುದೇ ತಂತ್ರವನ್ನಾಧರಿಸಿ ರಚಿಸಲಾಯಿತು. ಕಾರ್ಟಲ್ ಎಂಬುದು ತಯಾರಕರು ಅಥವಾ ಪೂರೈಕೆದಾರರ ಸಂಘವಾಗಿದೆ. ಕಾರ್ಟಲ್ ಅಳವಡಿಸಿರುವ ನಿಯಮಗಳನ್ನು ಅನುಸರಿಸದ ಪೂರೈಕೆದಾರ ಇಲ್ಲವೇ ತಯಾರಕರನ್ನು ಶಿಕ್ಷಿಸುವ ಹಕ್ಕು ಕಾರ್ಟಲ್‌ಗಿತ್ತು. ಕಾರ್ಟೆಲ್‌ನಲ್ಲಿ ಯುಎಸ್, ಯುರೋಪ್ ಮತ್ತು ಜಪಾನ್‌ನ ಪ್ರಸಿದ್ಧ ತಯಾರಕರನ್ನು ಒಳಗೊಂಡಿತ್ತು ಎಂಬುದು ಇನ್ನೊಂದು ಅಂಶವಾಗಿದೆ.
ಫೋಬಸ್ ಕಾರ್ಟೆಲ್ ಉದ್ದೇಶ:
ಉತ್ಪಾದನೆಯನ್ನು ನಿಯಂತ್ರಿಸುವುದು ಮತ್ತು ಸ್ಪರ್ಧೆಯನ್ನು ಮಿತಿಗೊಳಿಸಲು ಬಲ್ಬ್‌ಗಳು ತಂತ್ರಜ್ಞಾನದ ಪ್ರಗತಿಯೊಂದಿಗೆ, ಬಲ್ಬ್‌ಗಳು ಹಲವಾರು ಸಾವಿರ ಗಂಟೆಗಳ ಕಾಲ ಬಾಳಿಕೆ ಬರುತ್ತವೆ ಎಂದು ಬೆಳಕಿನ ಉದ್ಯಮ ಅರಿತುಕೊಂಡಿತು. ಕಾರ್ಟೆಲ್ ಬಲ್ಬ್‌ಗಳ ಜೀವಿತಾವಧಿಯನ್ನು ಕಡಿಮೆ ಮಾಡಲು ಮತ್ತು ಅವುಗಳನ್ನು 1,000 ಗಂಟೆಗಳವರೆಗೆ ಸೀಮಿತಗೊಳಿಸಲು ಸಂಪನ್ಮೂಲಗಳನ್ನು ಬಳಸಲು ಆರಂಭಿಸಿತು.
ಕಾರ್ಟೆಲ್‌ನಲ್ಲಿರುವ ಸದಸ್ಯರು ಆಡಿಟ್ ವ್ಯವಸ್ಥೆಯನ್ನು ಹುಟ್ಟುಹಾಕಿದರು ಇದರಿಂದ ತಯಾರಕರು 1,000 ಗಂಟೆಗಳ ಬಲ್ಬ್ ಉದ್ದೇಶವನ್ನು ಸೀಮಿತಗೊಳಿಸಿತು. ಬಲ್ಬ್‌ಗಳು ನಿಗದಿತ ಗಂಟೆಗಳಿಗಿಂತ ಹೆಚ್ಚು ಕಾಲ ಇರುವ ತಯಾರಕರ ಮೇಲೆ ಕಠಿಣ ದಂಡವನ್ನು ವಿಧಿಸಲಾಯಿತು. ಖರೀದಿಸಿದ ಬಲ್ಬ್‌ಗಳು ಕೆಲಸ ಮಾಡುವುದು ನಿಲ್ಲಿಸಿದ ನಂತರ ಹೊಸ ಬಲ್ಬ್‌ಗಳನ್ನು ಖರೀದಿಸಲು ಗ್ರಾಹಕರು ಉತ್ಸುಕರಾಗುತ್ತಾರೆ ಎಂಬುದನ್ನು ಎಲ್‌ಇಡಿ ಬಲ್ಬ್ ಮಾರುಕಟ್ಟೆ ಖಚಿತಪಡಿಸಿಕೊಂಡಿತು.
ಲಾಭ ಗಳಿಸಿದ ಎಲ್‌ಇಡಿ ಕಂಪನಿಗಳು:
ಕಾರ್ಟೆಲ್ ವ್ಯವಸ್ಥೆ ಈ ನಿಟ್ಟಿನಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಲಾರಂಭಿಸಿತು. ಕಾರ್ಟೆಲ್ ಅಸ್ತಿತ್ವಕ್ಕೆ ಬಂದ ಒಂದು ದಶಕದೊಳಗೆ, ಬಲ್ಬ್‌ನ ಬಳಕೆಯ ಅವಧಿಯನ್ನು ಸರಾಸರಿ 2,500 ಗಂಟೆಗಳಿಂದ 1,200 ಗಂಟೆಗಳಿಗಿಂತ ಕಡಿಮೆಗೊಳಿಸಲಾಯಿತು. ಮತ್ತು ಕಾರ್ಟೆಲ್ 1940 ರ ವೇಳೆಗೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೂ, ಅದರ ಪ್ರಭಾವವು ಇಂದಿಗೂ ಉಳಿದಿದೆ. ಏಕೆಂದರೆ ಇಂದು ಮಾರುಕಟ್ಟೆಯಿಂದ ಪ್ರಕಾಶಮಾನವಾಗಿರುವ ಬಲ್ಬ್ ಅನ್ನು ನೀವು ಖರೀದಿಸಿದರೆ ಅದರ ಬಳಕೆಯ ಅವಧಿ ಸರಿಸುಮಾರು 1,200 ಗಂಟೆಗಳಿರುತ್ತದೆ ಇದುವೇ ಪ್ರಮಾಣ 1930 ರ ದಶಕದಲ್ಲಿ ಅರ್ಧದಷ್ಟಿತ್ತು.
ಬಲ್ಬ್ ತಯಾರಕರು ಭರವಸೆ ನೀಡಿದಂತೆ ಬಲ್ಬ್ 30,000 ರಿಂದ 50,000 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದರೆ ಅದು ಹಾಗೆಯೇ ಕಾರ್ಯನಿರ್ವಹಿಸಬೇಕು. ಆದರೆ ಬಲ್ಬ್‌ನೊಳಗಿರುವ ಡ್ರೈವರ್‌ಗಳನ್ನು ಕಳಪೆಯಾಗಿ ತಯಾರಿಸಲಾಗುತ್ತದೆ ಇದರಿಂದ ಬಲ್ಬ್ ಕೆಲವೇ ತಿಂಗಳುಗಳಲ್ಲಿ ಹಾಳಾಗುತ್ತದೆ. ಅಸಲಿಗೆ ಬಲ್ಬ್ ಡ್ರೈವರ್ ಹಾಳಾದರೆ ಅದನ್ನು ಮಾತ್ರವೇ ಬದಲಾಯಿಸುವ ವಿಧಾನವನ್ನು ತಯಾರಕರು ನೀಡಬೇಕು ಇಲ್ಲದ್ದಿದ್ದರೆ ಬಲ್ಬ್‌ನಲ್ಲಿರುವ ಡ್ರೈವರ್‌ಗಳನ್ನು ವಿನಿಮಯ ಮಾಡುವ ಸೌಲಭ್ಯವನ್ನು ಒದಗಿಸಬೇಕು. ಆದರೆ ತಯಾರಕರು ಇದ್ಯಾವ ಸೌಲಭ್ಯವನ್ನು ಒದಗಿಸದೆಯೇ ಸಂಪೂರ್ಣ ಬಲ್ಬ್ ಅನ್ನೇ ಗ್ರಾಹಕ ಖರೀದಿಸುವಂತೆ ಮಾಡುತ್ತಾರೆ.
ಎಲ್‌ಇಡಿ ಉದ್ಯಮ ಕ್ಷೇತ್ರವು ಬಲ್ಬ್‌ನ ದೀರ್ಘತೆ ಹಾಗೂ ಜೀವಿತಾವಧಿಯ ಕುರಿತು ಭರವಸೆ ನೀಡಿದರೆ ಆ ಭರವಸೆಯನ್ನು ತಯಾರಕರು ಉಳಿಸಿಕೊಳ್ಳಬೇಕು. ಬಲ್ಬ್‌ನಲ್ಲಿರುವ ಯಾವುದೇ ದೋಷಗಳನ್ನು ತಯಾರಕರು ಪರಿಹರಿಸಬೇಕು. ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡಲು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ