SEBI Report: NSE ಮಾಜಿ CEO ಚಿತ್ರಾ ರಾಮಕೃಷ್ಣ ನಿರ್ಧಾರಗಳ ಹಿಂದಿತ್ತು ಯೋಗಿ ಪ್ರಭಾವ! ಮುಖವನ್ನೇ ನೋಡದೆ ಮಾಹಿತಿ ವಿನಿಮಯ

ಸುಮಾರು 20 ವರ್ಷಗಳಿಂದ ಚಿತ್ರಾ ರಾಮಕೃಷ್ಣ ಎಂದಿಗೂ ಭೇಟಿಯಾಗದ ಯೋಗಿಯೊಂದಿಗೆ ಇಮೇಲ್ ಮೂಲಕ ಸಂವಹನ ನಡೆಸಿದ್ದರು.

NSE ಮಾಜಿ ಸಿಇಒ ಚಿತ್ರಾ ರಾಮಕೃಷ್ಣ

NSE ಮಾಜಿ ಸಿಇಒ ಚಿತ್ರಾ ರಾಮಕೃಷ್ಣ

  • Share this:
NSEನ ಮಾಜಿ CEO ಹಾಗೂ ಎಂಡಿ ಚಿತ್ರಾ ರಾಮಕೃಷ್ಣ(Chitra Ramkrishna) ಅವರ ನಿರ್ಧಾರಗಳ ಹಿಂದೆ ಹಿಮಾಲಯನ್​ ಯೋಗಿಯ (Himalayan Yogi) ಪ್ರಭಾವವಿರೋದು ಸೆಬಿ ತನಿಖೆಯಿಂದ ಬೆಳಕಿಗೆ ಬಂದಿದೆ.  ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಚಿತ್ರಾ ಅಸಮರ್ಥ ತೀರ್ಮಾನ  ಕೈಗೊಂಡಿರೋದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಶ್ರೀಮತಿ ಚಿತ್ರಾ  ರಾಮಕೃಷ್ಣ ಮೇಲೆ  3 ಕೋಟಿ, ಶ್ರೀ ನರೇನ್ (Nareen) ಮತ್ತು ಶ್ರೀ ಸುಬ್ರಮಣಿಯನ್ (Subramanian) ಮೇಲೆ ತಲಾ ₹ 2 ಕೋಟಿ ಮತ್ತು ಮುಖ್ಯ ನಿಯಂತ್ರಣ ಅಧಿಕಾರಿ ಹಾಗೂ  ಮುಖ್ಯ ಅನುಸರಣೆ ಅಧಿಕಾರಿಯಾಗಿದ್ದ ನರಸಿಂಹನ್‌ಗೆ ₹ 6 ಲಕ್ಷ ದಂಡ ವಿಧಿಸಿ ಸೆಬಿ ಆದೇಶಸಿದೆ. ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರನ್ನಾಗಿ ನೇಮಿಸಿದ ಪ್ರಕರಣದಲ್ಲಿ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೆಬ್ರವರಿ 11 ರಂದು ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಮತ್ತು ಇತರರಿಗೆ ಸೆಬಿ ದಂಡ ವಿಧಿಸಿತು.

ಚಿತ್ರಾ ಮೇಲೆ ಹಿಮಾಲಯ ಯೋಗಿ ಪ್ರಭಾವ

ಚಿತ್ರಾ ರಾಮಕೃಷ್ಣ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದೆ. ಉದ್ಯಮದಲ್ಲಿ ಅಷ್ಟಾಗಿ ತಿಳಿದಿಲ್ಲದ ಆನಂದ್ ಸುಬ್ರಮಣಿಯನ್ ನೇಮಿಸಲು ಹಿಮಾಲಯದಲ್ಲಿ ನೆಲೆಸಿರುವ ಯೋಗಿ ಮಾರ್ಗದರ್ಶನ ಪಡೆದಿದ್ದಾರೆ.  ಸುಬ್ರಮಣಿಯನ್ ಅವರನ್ನು ಏಪ್ರಿಲ್ 2015 ರಿಂದ ಗ್ರೂಪ್​ ಎಕ್ಸಿಕ್ಯೂಟಿವ್​ ಆಫೀಸರ್​ ಮತ್ತು ಎಂಡಿ ಸಲಹೆಗಾರ ಎಂದು  ಚಿತ್ರಾ ರಾಮಕೃಷ್ಣ ಮರು ನೇಮಕಾತಿ ಮಾಡಿಕೊಂಡಿದ್ದಾರೆ.

ಯೋಗಿ ಜೊತೆ ಇಮೇಲ್​ ಸಂವಹನ

ಸುಮಾರು 20 ವರ್ಷಗಳಿಂದ ಚಿತ್ರಾ ರಾಮಕೃಷ್ಣ ಎಂದಿಗೂ ಭೇಟಿಯಾಗದ ಯೋಗಿಯೊಂದಿಗೆ ಇಮೇಲ್ ಮೂಲಕ ಸಂವಹನ ನಡೆಸಿದ್ದರು. ಸುಬ್ರಮಣಿಯನ್​ನನ್ನು ಎನ್‌ಎಸ್‌ಇಯಲ್ಲಿ ಎರಡನೇ ಕಮಾಂಡ್ ಆಗಿ ನೇಮಿಸಲು ಮಾರ್ಗದರ್ಶನ ನೀಡಿದರು ಎಂದು ಸೆಬಿಯ ತನಿಖೆಯು ಬಹಿರಂಗಪಡಿಸಿತು. ಚಿತ್ರಾ ರಾಮಕೃಷ್ಣ ಅಪರಿಚಿತ ಯೋಗಿಯನ್ನು "ಸಿರೋನ್ಮಣಿ" ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: SEBI ಜೊತೆಗೆ ಸೆಟಲ್ಮೆಂಟ್ ಮಾಡಿಕೊಳ್ಳೋಕೆ 1.65 ಕೋಟಿ ರೂ. ನೀಡಿದ Yes Bank, ಇದ್ರಿಂದ ಗ್ರಾಹಕರಿಗೆ ಏನು ಲಾಭ?

NSEನ   5 ವರ್ಷಗಳ  ಹಣಕಾಸು ಡೇಟಾ, ಲಾಭಾಂಶ ಅನುಪಾತ, ವ್ಯವಹಾರ ಯೋಜನೆಗಳು, ಮಂಡಳಿಯ ಸಭೆಯ ಕಾರ್ಯಸೂಚಿಯಂತಹ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡರು ಮತ್ತು ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನಗಳ ಬಗ್ಗೆ ಕೂಡ ಸಹ ಸಲಹೆ ಪಡೆದಿದ್ದಾರೆ ಅಂತ ಸೆಬಿ ತಿಳಿಸಿದೆ. ಇನ್ನು ಈ ಬಗ್ಗೆ ವಿಚಾರಣೆ ವೇಳೆ ಮಾತಾಡಿದ ಚಿತ್ರಾ  ಯೋಗಿ ಆಧ್ಯಾತ್ಮಿಕ ಶಕ್ತಿ ಎಂದಿದ್ದಾರೆ. ಇಮೇಲ್‌ನ ವಿಷಯಗಳನ್ನು ಅವರು ನಿರಾಕರಿಸಿದ್ದಾರೆ.

ಚಿತ್ರಾ ರಾಮಕೃಷ್ಣನ್​ ಹಗರಣ

ಸುಬ್ರಮಣಿಯನ್ ಅವರ ನೇಮಕಾತಿ ಮತ್ತು ಆಲ್ಗೋ ಟ್ರೇಡಿಂಗ್ ಹಗರಣ ಮತ್ತು ಅಧಿಕಾರ ದುರುಪಯೋಗದ  ಸಂಬಂಧ 2016ರಲ್ಲಿ ಚಿತ್ರಾ ರಾಮಕೃಷ್ಣ ಅವರನ್ನು ಎನ್‌ಎಸ್‌ಇಯಿಂದ ಹೊರಹಾಕಲಾಗಿತ್ತು. ರಾಮಕೃಷ್ಣ ಅವರು ನಿರ್ಭಯವಾಗಿ ಹಗರಣ ನಡೆಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೊಡ್ಡ ಸರ್ಕಾರಿ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಒಳಗೊಂಡಿರುವ ಹಿರಿಯ ಆಡಳಿತ ಮಂಡಳಿ ಸದಸ್ಯರು ಯಾರೂ ಆಕೆಯ ನಿರ್ಧಾರಗಳನ್ನು ಎಂದಿಗೂ ವಿರೋಧಿಸಲಿಲ್ಲ.

ಚಿತ್ರಾ ರಾಮಕೃಷ್ಣನ್​ಗೆ ಸೆಬಿ ಶಿಕ್ಷೆ

ಚಿತ್ರಾ ರಾಮಕೃಷ್ಣ ಅವರನ್ನು ಈಗ 3 ವರ್ಷಗಳ ಕಾಲ ಬಂಡವಾಳ ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ. 1.54 ಕೋಟಿ ಹೆಚ್ಚುವರಿ ರಜೆ ಎನ್‌ಕ್ಯಾಶ್‌ಮೆಂಟ್ ಮತ್ತು ₹ 2.83 ಕೋಟಿಗಳ ಮುಂದೂಡಲ್ಪಟ್ಟ ಬೋನಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ SEBI ನಿರ್ದೇಶಿಸಿದೆ.

ಇದನ್ನೂ ಓದಿ: Government Job: ಸೆಬಿಯಲ್ಲಿ 120 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ, ತಿಂಗಳಿಗೆ ₹ 55,000 ಸಂಬಳ

ಶ್ರೀಮತಿ ಚಿತ್ರಾ  ರಾಮಕೃಷ್ಣ ಮೇಲೆ  3 ಕೋಟಿ, ಶ್ರೀ ನರೇನ್ ಮತ್ತು ಶ್ರೀ ಸುಬ್ರಮಣಿಯನ್ ಮೇಲೆ ತಲಾ ₹ 2 ಕೋಟಿ ಮತ್ತು ಮುಖ್ಯ ನಿಯಂತ್ರಣ ಅಧಿಕಾರಿ ಹಾಗೂ  ಮುಖ್ಯ ಅನುಸರಣೆ ಅಧಿಕಾರಿಯಾಗಿದ್ದ ನರಸಿಂಹನ್‌ಗೆ ₹ 6 ಲಕ್ಷ ದಂಡ ವಿಧಿಸಿದೆ. ರಾಮಕೃಷ್ಣ ಅವರನ್ನು ದೆಹಲಿಯ ಪ್ರಬಲ ರಾಜಕಾರಣಿಯೊಬ್ಬರು ಬೆಂಬಲಿಸುವುದರೊಂದಿಗೆ 2013 ರಲ್ಲಿ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಆಗಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
Published by:Pavana HS
First published: