Scam Alert: ನೀವು ಟ್ವಿಟರ್‌ನಲ್ಲಿ Paytm ಪದ ಬಳಸಿದ್ರೆ, ಹಣ ಕಳೆದುಕೊಳ್ಳೋದು ಗ್ಯಾರಂಟಿ!

Scam Alert

Scam Alert

ಇನ್ನು ಕೆಲವೊಂದು ಸಂದರ್ಭಗಳಲ್ಲಿ ಈ ಸ್ಕ್ಯಾಮರ್‌ಗಳು ಏನು ಮಾಡುತ್ತಾರೆಂದರೆ ಮರುಪಾವತಿ ಮಾಡುತ್ತೇವೆ ಎಂದು ಹೇಳಿ,  ಪೇಟಿಎಂ ಬಳಕೆದಾರರಿಂದ ಹಣ ದೋಚಲು ಪ್ರಯತ್ನಿಸುತ್ತಾರೆ.

  • Share this:

ಜನಪ್ರಿಯ ಪಾವತಿ ಆ್ಯಪ್‌‌ ಪೇಟಿಎಂ ಟ್ವಿಟರ್ ಗ್ರಾಹಕ ಬೆಂಬಲವು ಇದೀಗ ಭಾರತದಲ್ಲಿನ ಸ್ಕ್ಯಾಮರ್‌ಗಳು ವಶಪಡಿಸಿಕೊಂಡಿರುವಂತೆ ತೋರುತ್ತಿದೆ. ಏಕೆಂದರೆ 'Paytm' (ಪೇಟಿಎಂ) ಪದದೊಂದಿಗೆ ನೀವು ಯಾವುದೇ ವಿಷಯವನ್ನು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಒಡನೆಯೇ ಸ್ವಯಂಚಾಲಿತ ನಕಲಿ ಪ್ರೋಗ್ರಾಮಿಂಗ್ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಪೇಟಿಎಂ ನ ಗ್ರಾಹಕ ಕಾರ್ಯನಿರ್ವಾಹಕರಂತೆ ಸೋಗು ಹಾಕಿಕೊಂಡು ಬಳಕೆದಾರರನ್ನು(Users) ಮೋಸ ಮಾಡಲು ಸಕ್ರಿಯಗೊಳ್ಳುತ್ತದೆ ಎಂಬ ಮಾಹಿತಿ ದೊರೆತಿದೆ. ಇದೇ ಸಂದರ್ಭದಲ್ಲಿ ನಕಲಿ ಪೇಟಿಎಂ ಕಸ್ಟಮರ್ ಕೇರ್  (fake Paytm Customer Care) ಖಾತೆಗಳು ಟ್ವಿಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗಮನಿಸಬಹುದಾಗಿದೆ.


ಹಣ ಲಪಟಾಯಿಸುವ ಹುನ್ನಾರ


ಈ ಎಲ್ಲಾ ನಕಲಿ ಖಾತೆಗಳು ಒಂದೇ ಉದ್ದೇಶವನ್ನು ಹೊಂದಿದ್ದು ಬಳಕೆದಾರರ ಅಥವಾ ಗ್ರಾಹಕರ ವೈಯಕ್ತಿಕ ವಿವರಗಳನ್ನು ಪಡೆದುಕೊಂಡು ಹಣವನ್ನು ಲಪಟಾಯಿಸುವ ಕ್ರಿಯೆಗೆ ಮುಂದಾಗುವುದಾಗಿದೆ ಎಂದು ಊಹಿಸಲಾಗಿದೆ.




ಸಾಮಾನ್ಯವಾಗಿ, ವಿಫಲವಾದ ವಹಿವಾಟುಗಳು ಮತ್ತು ಇತರ UPI ಸಂಬಂಧಿತ ಸಮಸ್ಯೆಗಳ ಕುರಿತು ಸಹಾಯ ಪಡೆಯಲು ಅಧಿಕೃತ Paytm ಬೆಂಬಲವನ್ನು ಸಂಪರ್ಕಿಸಲು ಜನರು ಟ್ವಿಟರ್ ತಾಣಕ್ಕೆ ಭೇಟಿ ನೀಡುತ್ತಾರೆ. ಹೆಚ್ಚಿನ ಪೇಟಿಎಂ ಬಳಕೆದಾರರು ಟ್ವಿಟರ್‌ನಲ್ಲಿ ತಮಗಾದ ತೊಂದರೆಗಳನ್ನು ಸ್ಕ್ರೀನ್‌ಶಾಟ್ ಮೂಲಕ ಹಂಚಿಕೊಳ್ಳುವುದೂ ಇದೆ.


ಹಣ ದೋಚುವ ಸ್ಕ್ಯಾಮರ್‌ಗಳು


ಈ ಸ್ಕ್ರೀನ್‌ಶಾಟ್‌ಗಳು ಕೆಲವೊಮ್ಮೆ ಮೊಬೈಲ್ ಸಂಖ್ಯೆ ಅಥವಾ UPI ಐಡಿಯಂತಹ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತವೆ. ಸ್ಕ್ಯಾಮರ್‌ಗಳು ಅಂತಹ ವೈಯಕ್ತಿಕ ಮಾಹಿತಿಯನ್ನು ತ್ವರಿತವಾಗಿ ಸಂಗ್ರಹಿಸುತ್ತಾರೆ ಮತ್ತು ಅವರು ನೇರವಾಗಿ ಬಳಕೆದಾರರಿಗೆ ಕರೆ ಮಾಡುತ್ತಾರೆ, ಸಹಾಯವನ್ನು ಒದಗಿಸುವಂತೆ ನಟಿಸುತ್ತಾರೆ.


ಇನ್ನು ಕೆಲವೊಂದು ಸಂದರ್ಭಗಳಲ್ಲಿ ಈ ಸ್ಕ್ಯಾಮರ್‌ಗಳು ಏನು ಮಾಡುತ್ತಾರೆಂದರೆ ಮರುಪಾವತಿ ಮಾಡುತ್ತೇವೆ ಎಂದು ಹೇಳಿ,  ಪೇಟಿಎಂ ಬಳಕೆದಾರರಿಂದ ಹಣ ದೋಚಲು ಪ್ರಯತ್ನಿಸುತ್ತಾರೆ.


ಹಣ ಮಾರುಪಾವತಿಸುವ ನಾಟಕವನ್ನಾಡುವ ಸ್ಕ್ಯಾಮರ್‌ಗಳು


ಇವರು ಹಣ ಮರುಪಾವತಿಸುವ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ ಬಳಕೆದಾರರ ಮಾಹಿತಿ ಪಡೆಯಲು ಯುಪಿಐನಲ್ಲಿ ವಿನಂತಿಯ ಹಣದ ವೈಶಿಷ್ಟ್ಯವನ್ನು ಬಳಸುತ್ತಾರೆ. ಕೆಲವೊಮ್ಮೆ, ಈ ಸ್ಕ್ಯಾಮರ್‌ಗಳು ಲಾಗಿನ್ ವಿವರಗಳು, ಬ್ಯಾಂಕಿಂಗ್ ಮಾಹಿತಿ, ಪಾಸ್‌ವರ್ಡ್‌ಗಳು ಮತ್ತು ಯುಪಿಐ ಪಿನ್‌ಗಳನ್ನು ಕದಿಯಲು ಸ್ಕ್ರೀನ್-ಹಂಚಿಕೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಹೇಳಿ ಅವರನ್ನು ಬಲಿಪಶುಗಳನ್ನಾಗಿಸುತ್ತಾರೆ.


ಸಂದರ್ಭದ ಲಾಭ ಪಡೆದುಕೊಳ್ಳುತ್ತಿರುವ ಖದೀಮರು


ಎಲಾನ್ ಮಸ್ಕ್ ಅವರು ಹಳೆಯ ಟ್ವಿಟರ್ ಖಾತೆಗಳಿಂದ ಪರಿಶೀಲಿಸಲಾದ ಬ್ಲೂ ಟಿಕ್‌ಗಳನ್ನು ಬೇರ್ಪಡಿಸಿದ ನಂತರ ಅಧಿಕೃತ ಪೇಟಿಎಂ (Paytm) ಕೇರ್ ಟ್ವಿಟರ್ ಹ್ಯಾಂಡಲ್ ಅನ್ನು ಒಂದೇ ರೀತಿಯ ಹೆಸರುಗಳೊಂದಿಗೆ ನಕಲಿ ಖಾತೆಗಳ ಸ್ಕೋರ್‌ಗಳಿಂದ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಪೇಟಿಎಂ ಕೇರ್ ಟ್ವಿಟರ್ ತಾಣದಲ್ಲಿ ಬ್ಲೂ ಟಿಕ್‌ನೊಂದಿಗೆ ಗೋಚರಿಸುವುದರಿಂದ ಖದೀಮರು ಈ ಗೊಂದಲವನ್ನು ತಮ್ಮ ಆಟಕ್ಕಾಗಿ ಬಳಸಿಕೊಂಡಿದ್ದು ತ್ವರಿತವಾಗಿ ಲಾಭ ಗಳಿಸುವ ಹುನ್ನಾರವನ್ನಿರಿಸಿಕೊಂಡಿದ್ದಾರೆ.


ಇದನ್ನೂ ಓದಿ:Aadhaar Card: ಏನ್​ ಮಾಡ್ತಿರೋ, ಬಿಡ್ತಿರೋ ಮೊದ್ಲು ಆಧಾರ್​ನಲ್ಲಿ ಈ ಕೆಲ್ಸ ಮಾಡ್ಬಿಡಿ; ಇಲ್ಲದಿದ್ರೆ ನಿಮ್ಗೇ ಡೇಂಜರ್​!


ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು


ಟ್ವಿಟರ್ ಬಳಕೆದಾರರು ಪೇಟಿಎಂ ಕುರಿತು ಯಾವುದೇ ದೂರು ಅಥವಾ ಸಂದೇಹಗಳನ್ನು ತಾಣದಲ್ಲಿ ಹಂಚಿಕೊಳ್ಳುವ ಮೊದಲು ಹೆಚ್ಚುವರಿ ಜಾಗರೂಕರಾಗಿರಬೇಕು ಎಂಬುದನ್ನು ಇಲ್ಲಿ ಗಮನಿಸಬೇಕು. ಪೇಟಿಎಂ ಎಂಬ ಪದ ದೊರೆತ ಒಡನೆಯೇ ಇನ್ನಷ್ಟು ಚುರುಕಾಗುವ ಮೋಸಗಾರರು ತಮ್ಮ ಬೇಳೆ ಬೇಯಿಸಿಕೊಳ್ಳಲು ತ್ವರಿತವಾಗಿ ಟ್ವೀಟ್‌ಗಳನ್ನು ಅವಲೋಕಿಸುತ್ತಾರೆ ಹಾಗೂ ಪರಿಶೀಲಿಸುತ್ತಾರೆ.


ಪೇಟಿಎಂ ಬಳಕೆದಾರರು ಸ್ಕ್ರೀನ್‌ಶಾಟ್‌ಗಳಲ್ಲಿ ತಮ್ಮ ಖಾತೆ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಅಂಶಗಳನ್ನು ಹಂಚಿಕೊಳ್ಳುವ ಮೊದಲು ಆದಷ್ಟು ಕೂಲಂಕುಷವಾಗಿ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಪೇಟಿಎಂ ತಿಳಿಸಿದೆ.


ಸುರಕ್ಷಿತ ವಿಧಾನ ಅಳವಡಿಸಿಕೊಳ್ಳುವುದು


ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಿದಂತೆ ಸ್ಕ್ಯಾಮರ್‌ಗಳು ಇದನ್ನು ಬಳಸಿಕೊಂಡು ಹಣ ದೋಚುವ ಕಾಯಕದಲ್ಲಿ ನಿರತರಾಗುತ್ತಾರೆ. ಯಾವುದೇ ಮಾಹಿತಿಗಳನ್ನು ತಾಣದಲ್ಲಿ ಹಂಚಿಕೊಳ್ಳದಿರಿ ಎಂದು ಸಂಸ್ಥೆ ತಿಳಿಸಿದೆ. ಇತ್ತೀಚೆಗೆ ಭಾರತದಾದ್ಯಂತ ಸ್ಕ್ಯಾಮ್ ಕರೆಗಳ ತೀವ್ರ ಹೆಚ್ಚಳವಾಗಿದೆ ಮತ್ತು ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುವುದನ್ನು ತಪ್ಪಿಸುವುದು ಇದರಿಂದ ಸುರಕ್ಷಿತ ಮಾರ್ಗವಾಗಿದೆ.

top videos
    First published: